11 ಸಾವಿರ ವಜ್ರದಲ್ಲಿ ಅರಳಿದ ರತನ್ ಟಾಟಾ..! ಅಮೂಲ್ಯ ರತ್ನಕ್ಕೆ ಹೀಗೋಂದು ಗೌರವ

ಹೆಸರಾಂತ ಉದ್ಯಮಿ ರತನ್ ಟಾಟಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗ ನಿಧನರಾದರು. ಅವರು ಭಾರತದ ಕೈಗಾರಿಕೋದ್ಯಮಕ್ಕೆ ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದು, ಭಾರತದ ಆಟೋ ಮೊಬೈಲ್ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಕೈಗಾರಿಕೋದ್ಯಮಿಯನ್ನು ಕಳೆದುಕೊಂಡ ದೇಶ ದುಖಃದಲ್ಲಿ ಮುಳುಗಿತ್ತು.

ಈಗ ಅವರಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಬೇಕು ಎಂಬ ಚರ್ಚೆ ಕೇಳಿಬರುತ್ತಿದೆ. ಮರಣೋತ್ತರ ಭಾರತರತ್ನ ಪ್ರಶಸ್ತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಚರ್ಚೆ ನಡೆಯುತ್ತಿದೆ. ಅವರಿಗೆ ಭಾರತ ರತ್ನ ನೀಡುವುದು ಬಹುತೇಕ ಖಚಿತವೇ. ಹಾಗೆ ಅವರು ಹೆಸರು, ಆಸ್ತಿ, ಪ್ರಶಸ್ತಿಗಾಗಿ ಬದುಕಿದ್ದವರಲ್ಲ ಎಂಬುದು ಕೂಡ ತಿಳಿದಿರುವ ವಿಚಾರವೇ.

Surat Jeweller Honours Ratan Tata with 11 000 Diamonds Portrait

ಹಾಗೆ ರತನ್ ಟಾಟಾ ಅವರ ಮರಣದ ನಂತರ ಅವರಿಗೆ ಹಲವರು ಹಲವು ರೀತಿಯಲ್ಲಿ ಗೌರವ ಸೂಚಿಸಿದ್ದಾರೆ. ಹಾಗೆ ಇಲ್ಲೊಬ್ಬ ವಜ್ರದ ವ್ಯಾಪರಿ ಸಂಪೂರ್ಣ ವಜ್ರಗಳಿಂದ ಅವರ ಚಿತ್ರ ರಚಿಸಿ ಗಮನ ಸೆಳೆದಿರುವುದಲ್ಲದೆ, ಕೈಗಾರಿಕೋದ್ಯಮಿಗೆ ಗೌರವ ಸಲ್ಲಿಸಿದ್ದಾರೆ. ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ಬರೋಬ್ಬರಿ 11 ಸಾವಿರ ವಜ್ರಗಳ ಬಳಸಿ ಈ ಚಿತ್ರ ರಚಿಸಿದ್ದು, ಎಲ್ಲರ ಗಮನ ಸೆಳೆದಿದೆ.

ಸೂರತ್‌ನಲ್ಲಿ 11,000 ವಜ್ರಗಳನ್ನು ಹೊಂದಿರುವ ಚಿತ್ರವನ್ನು ಅವರು ಬಿಡಿಸಿದ್ದಾರೆ. ಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಾರತದ ಜಿಡಿಪಿ, ಉದ್ಯೋಗ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಮೂಲ್ಯವಾಗಿದ್ದು, ಅವರೇ ಒಂದು ರತ್ನವಾಗಿದ್ದಾರೆ. ಹೀಗಿರುವಾಗ ಅವರಿಗೆ ವಜ್ರದಿಂದ ಆತ ಗೌರವ ಅರ್ಪಿಸಿದ್ದಾನೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿರುವ ವಿಡಯೋಗೆ ಸಾವಿರಾರು ಮಂದಿ ಕಮೆಂಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಮಂದಿ ರತನ್ ಟಾಟಾ ವಜ್ರದಲ್ಲಿ ಅರಳಿದ ಫೋಟೋ ನೋಡಿ ಭಾವುಕರಾಗಿ ಕಮೆಂಟ್ ಹಾಕಿದ್ದಾರೆ. ರತನ್ ಟಾಟಾ ಕೇವಲ ಒಬ್ಬ ಉದ್ಯಮಿಯಾಗಿರಲಿಲ್ಲ; ಅವರು ಅನೇಕರಿಗೆ ಭರವಸೆಯ ಸಂಕೇತವಾಗಿದ್ದರು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮುಂದಿನ ಪೀಳಿಗೆಗೆ ಅವರ ಕೆಲಸ ಪ್ರೇರಣೆಯಾಗಿರಲಿದೆ. ಸಾವಿರಾರು ವರ್ಷ ಅವರ ಕೆಲಸ ನೆನಪಿನಲ್ಲಿ ಉಳಿಯಲಿದೆ ಎಂದು ಬರೆದಿದ್ದಾರೆ.

ಇಂತಹ ಅಪರೂಪದ ವ್ಯಕ್ತಿತ್ವವನ್ನು ಇದಕ್ಕಿಂತ ಸುಂದರವಾಗಿ ಚಿತ್ರಿಸಲು ಸಾಧ್ಯವಿಲ್ಲ. ಅವರೇ ಒಂದು ಅಮೂಲ್ಯ ರತ್ನ, ಅವರಿಗೆ ವಜ್ರಗಳಿಂದ ಗೌರವ ಅರ್ಪಿಸಿರುವುದು ಸ್ವಾಗತಾರ್ಹ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ರತನ್ ಟಾಟಾ ಅವರಿಂದ 2 ಗಿಫ್ಟ್ ಕೇಳಿದ್ದ ಸುಧಾ ಮೂರ್ತಿ

ಇನ್ಪೋಸಿಸ್‌ನ ಸುಧಾ ಮೂರ್ತಿ ರತನ್ ಟಾಟಾ ಅವರ ಬಳಿ ಎರಡು ಉಡುಗೊರೆ ಕೇಳಿದ್ದರಂತೆ. ಸುಧಾ ಮೂರ್ತಿ ಅವರು ರತನ್ ಟಾಟಾ ಅವರ ತಂದೆ ಜಮ್‌ಶೆಡ್‌ಜಿ ಟಾಟಾ ಮತ್ತು ಜೆಆರ್‌ಡಿ ಟಾಟಾ ಅವರ ಚಿತ್ರಗಳನ್ನು ಉಡುಗೊರೆಯಾಗಿ ನೀಡುವಂತೆ ಕೇಳಿದ್ದರಂತೆ. ಹಾಗೆ ಈ ಎರಡೂ ಫೋಟೋಗಳನ್ನು ರತನ್ ಟಾಟಾ ಸುಧಾ ಮೂರ್ತಿಗೆ ನೀಡಿದ್ದರಂತೆ.

ಸುಧಾ ಮೂರ್ತಿ ಅವರ ಕಚೇರಿಯಲ್ಲಿ ಈಗಲೂ ಈ ಎರಡು ಫೋಟೋಗಳನ್ನು ಇಡಲಾಗಿದೆಯಂತೆ. ನಾನು ಅವರ ಜೀವನದ ಅಮೂಲ್ಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಸುಧಾ ಮೂರ್ತಿ ಸಹ ಹೇಳಿದ್ದಾರೆ.

English summary

Surat Jeweller Honours Ratan Tata with 11,000 Diamonds Portrait

Many people have paid tribute to Ratan Tata in many ways after his death. Like this, a diamond merchant has not only created a picture of him with full diamonds and attracted attention, but also paid tribute to the industrialist.
Story first published: Monday, October 14, 2024, 13:01 [IST]
X
Desktop Bottom Promotion