Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಿಥುನ ರಾಶಿಗೆ ಸೂರ್ಯ: ಸೂರ್ಯ ದುರ್ಬಲ ಸ್ಥಾನದಲ್ಲಿರುವ ರಾಶಿಗಳಿವು, ಈ ಪರಿಹಾರ ಪ್ರಯೋಜನಕಾರಿ
ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಿರುತ್ತದೆ, ಈ ಜೂನ್ 15ರಂದು ಸೂರ್ಯ ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಪ್ರವೇಶಿಸಲಿದೆ. ಸೂರ್ಯ ಹೀಗೆ ತನ್ನ ಪಥ ಬದಲಾಯಿಸಿದಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಸಂಚಾರವು ಮೇಷ ರಾಶಿ. ಕರ್ಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಕುಂಭ ರಾಶಿ ಮೇಲೆ ಅನುಕೂಲಕರ ಪ್ರಭಾವ ಬೀರಿದರೆ ಉಳಿದ ರಾಶಿಗಳಲ್ಲಿ ಸೂರ್ಯನ ಸ್ಥಾನ ಅಷ್ಟು ಬಲವಾಗಿಲ್ಲ.
ಸೂರ್ಯ ನಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ ನಮ್ಮ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರರಾಗುವುದು. ಸೂರ್ಯನ ಬಲದ ಕೊರತೆಯಾದಾಗ ಉಂಟಾಗುವ ತೊಂದರೆಗಳು, ಸೂರ್ಯನನ್ನು ನಮ್ಮ ರಾಶಿಯಲ್ಲಿ ಬಲಪಡಿಸಲು ಜ್ಯೋತಿಷ್ಯ ಪರಿಹಾರವೇನು ಎಂದು ನೋಡೋಣ ಬನ್ನಿ:
ಸೂರ್ಯ ನಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದಾಗ
ಸೂರ್ಯ ನಮ್ಮ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿ ಇದ್ದಾಗ ಈ ಲಕ್ಷಣಗಳು ಕಂಡು ಬರುವುದು
* ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇದರಿಂದಾಗ ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳು ಉಂಟಾಗುವುದು.
* ತುಂಬಾನೇ ಕೀಳೆರಿಮೆ ಇರುತ್ತದೆ.
* ಆತ್ಮವಿಶ್ವಾಸದ ಕೊರತೆ, ತನ್ನ ಸಾಮರ್ಥ್ಯದ ಸಂಶಯ, ನನ್ನಿಂದ ಸಾಧ್ಯನಾ? ಎಂಬ ಹಿಂಜರಿಕೆಯಿಂದಲೇ ಪ್ರಗತಿಗೆ ಅಡೆತಡೆ ಉಂಟಾಗುವುದು.
* ಬುಧ ನಿಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ ಇದರಿಂದ ನಿಮ್ಮ ತಂದೆ ಸಾಕಷ್ಟು ತೊಂದರೆ ಅನುಭವಿಸುವಂತಾಗುವುದು.
ಈ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡು ಬರುವುದು
* ಕಣ್ಣಿನ ಸಮಸ್ಯೆ
* ತಲೆನೋವು
* ಮೂಳೆ ದುರ್ಬಲವಾಗುವುದು
* ಅನಿಯಮಿತ ರಕ್ತಸಂಚಾರ
* ಹೃದಯ ಸಂಬಂಧಿ ಸಮಸ್ಯೆ
* ಉರಿಯೂತ

ಸೂರ್ಯ ದುರ್ಬಲ ಸ್ಥಾನದಲ್ಲಿದ್ದಾಗ ಈ ಪರಿಹಾರ ಮಾಡಿ:
* ಬೆಳಗ್ಗೆ ಸೂರ್ಯೋದಯವನ್ನು ವೀಕ್ಷಿಸಿ
* ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಯಾವುದಾದರು ಶುಭ ಕಾರ್ಯಕ್ಕೆ ಅಥವಾ ಏನಾದರೂ ಹೊಸ ಪ್ರಾಜೆಕ್ಟ್ ಮಾಡುವುದಾದರೆ ಒಂದು ಲೋಟ ನೀರಿಗೆ ಸ್ವಲ್ಪ ಬೆಲ್ಲ ಹಾಕಿ ಕುಡಿದ ಬಳಿಕ ಹೋಗಿ
* ಸಾತ್ವಿಕ ಆಹಾರಕ್ರಮ ಪಾಲಿಸಿ
* ಅವಶ್ಯಕತೆ ಇರುವವರಿಗೆ ಔಷಧಿ ದಾನ ಮಾಡಿ
* ಬಡವರಿಗೆ ಕೆಂಪು ಬಣ್ಣದ ವಸ್ತ್ರ ದಾನ ಮಾಡಿ
* ಭಾನುವಾರ ಕೆಂಪು ಹರಳಿನ ಆಭರಣ ಧರಿಸಿ
ಈ ಮಂತ್ರಗಳನ್ನು ಪ್ರತಿದಿನ ಪಠಿಸಿ
ಓಂ ಅಶ್ವ ಧ್ವಜಯಾ ವಿಷ್ಮಾ ಪಾಶಾ ಹಸ್ತಾಯೆ ಧಿಮಾಹಿ ತನ್ನೋಹ್ ಸೂರ್ಯ ಪ್ರಚೋದಯಾತ್
ಓಂ ಭಾಸ್ಕರಾಯೇ ವಿದ್ಮಯೆ ಮಹದಿಯುದಿಕಾರಯ ಧಿಮಾಹಿ ತನ್ನೋ ಆದಿತ್ಯ ಪ್ರಚೋದಯಾತ್
ಓಂ ಆದಿತ್ಯ ವಿದ್ಮಯೆ ಸಹಸ್ರ ಕಿರಣಾಯೆ ಧಿಮಾಹಿ ತನ್ನೋ ಸೂರ್ಯ ಪ್ರಚೋದಯಾತ್
ನಮಃ ಸೂರ್ಯ ಶಾಂತಯ ಸರ್ವ ರೋಗ ನಿವಾರಣೆ ಆಯುರಾರೋಗ್ಯಂ ಐಶ್ವರ್ಯಂ ದೇಹಿ ದೇವಹ ಜಗತ್ಪತೇ
.ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಸಿಧಿ ಸಿದ್ಧ ಕರಾಯ ಮನ ವಂಚಿತ್ ಪುರಾಯ ಕಶ್ಮತಾಮ್ ಚುರಾಯಾಮ್ ಓಂ ಹ್ರೆಮ್ ಸೂರ್ಯ ನಮೋ ನಮಃ
ಬೆಳಗ್ಗೆ ಸೂರ್ಯ ನಮಸ್ಕಾರವನ್ನು ಈ ಮಂತ್ರಗಳನ್ನು ಪಠಿಸುತ್ತಾ ಮಾಡಿ
ಓಂ ಹ್ರಾಂ ಮಿತ್ರಾಯ ನಮಃ
ಓಂ ಹ್ರೀಂ ರವಯೇ ನಮಃ
ಓಂ ಹ್ರೂಂ ಸೂರ್ಯಾಯ ನಮಃ
ಓಂ ಹ್ರೈಂ ಭಾನವೇ ನಮಃ
ಓಂ ಹ್ರೌಂ ಖಗಾಯ ನಮಃ
ಓಂ ಹ್ರಃ ಪೂಷ್ಣೇ ನಮಃ
ಓಂ ಹ್ರಾಂ ಹಿರಣ್ಯಗರ್ಭಾಯ ನಮಃ
ಓಂ ಹ್ರೀಂ ಮರೀಚಯೇ ನಮಃ
ಓಂ ಹ್ರೂಂ ಆದಿತ್ಯಾಯ ನಮಃ
ಓಂ ಹ್ರೈಂ ಸವಿತ್ರೇ ನಮಃ
ಓಂ ಹ್ರೌಂ ಅರ್ಕಾಯ ನಮಃ
ಓಂ ಹ್ರಃ ಭಾಸ್ಕರಾಯ ನಮಃ



Click it and Unblock the Notifications
