Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಕ್ಷಾ ಬಂಧನದ ಇತಿಹಾಸ ಹೇಳಿ ಟೀಕೆಗೆ ಒಳಗಾದ ಸುಧಾ ಮೂರ್ತಿ..! ವಿಡಿಯೋದಲ್ಲಿ ಏನಿದೆ?
ಇಂದು ದೇಶದಾದ್ಯಂತ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಾಡಿನ ಖ್ಯಾತನಾಮರು, ನಟ-ನಟಿಯರು, ಉದ್ಯಮಿಗಳು, ರಜಕಾರಣಿಗಳು ಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಹಬ್ಬಕ್ಕೆ ಇತಿಹಾಸ, ಅದರ ಉದ್ದೇಶಗಳ ತಿಳಿ ಹೇಳಿದ್ದಾರೆ. ಹಾಗೆ ಈ ಹಬ್ಬ ಏಕೆ ಆಚರಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ.
ಆದ್ರೆ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿಯಾಗಿರುವ ಸುಧಾ ಮೂರ್ತಿ ರಕ್ಷಾ ಬಂಧನ ಸಂಬಂಧ ಹಂಚಿಕೊಂಡಿರುವ ವಿಡಿಯೋ ಈಗ ಹೊಸ ಚರ್ಚೆ ಹುಟ್ಟುಹಾಕಿದೆ. ಜೊತೆಗೆ ಒಂದಿಷ್ಟು ಪರ ವಿರೋಧ ಚರ್ಚೆಗೂ ಕಾರಣವಾಗಿದೆ. ರಕ್ಷಾ ಬಂಧನದ ದಿನದಂದು ಎಲ್ಲರು ಮಾಡುವಂತೆಯೇ ಅವರು ಸಹ ಶುಭ ಕೋರಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಸುಧಾ ಮೂರ್ತಿ ರಕ್ಷಾ ಬಂಧನದ ಹಿಂದಿನ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಹಬ್ಬ ಹೇಗೆ ಆರಂಭಗೊಂಡಿತು ನಾವು ಏಕೆ ಆಚರಿಸುತ್ತಿದ್ದೇವೆ. ಇದನ್ನು ಆರಂಭಿಸಿದ್ದು ಯಾರು? ಎಂಬ ಕುರಿತಾದ ಮಾಹಿತಿಯನ್ನ ಅವರು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಪರ ವಿರೋಧದ ಪ್ರಶ್ನೆ ಎದುರಾಗಿದೆ.
ಅವರು ಎಕ್ಸ್ ಖಾತೆಯಲ್ಲಿ ಇತಿಹಾದ ಒಂದು ಪ್ರಸಂಗವನ್ನು ಹಂಚಿಕೊಂಡಿದ್ದಾರೆ. 16 ನೇ ಶತಮಾನದಲ್ಲಿ, ರಾಣಿ ಕರ್ಣಾವತಿ ಅಪಾಯದಲ್ಲಿದ್ದಾಗ, ಮೊಘಲ್ ದೊರೆ ಹುಮಾಯೂನ್‌ಗೆ ಸಹಾಯ ಕೋರಿದ್ದಳು, ಇದಕ್ಕಾಗಿ ಕಣಿಕಟ್ಟಿಗೆ ಕಟ್ಟುವ ಒಂದು ದಾರವನ್ನು ಕಳುಹಿಸಿದಳು ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ರಾಣಿ ಕರ್ಣಾವತಿ ರಾಜ್ಯ ತುಂಬಾನೆ ಚಿಕ್ಕದಾಗಿತ್ತು. ಈ ವೇಳೆ ರಾಜನೊಬ್ಬ ದಂಡೆತ್ತಿ ಬಂದಿದ್ದ. ಈ ವೇಳೆ ಮೊಘಲ್ ಚಕ್ರವರ್ತಿ ರಾಜ ಹುಮಾಯೂನ್ ಸಹಾಯ ಪಡೆಯಲು ಮುಂದಾದಳು. ಹೀಗಾಗಿ ರಾಜನಿಗೆ ಒಂದು ದಾರ ಕಳುಹಿಸಿ ನನ್ನನ್ನು ಸಹೋದರಿ ಎಂದು ಭಾವಿಸಿ ಸಹಾಯ ಮಾಡುವಂತೆ ಬೇಡಿಕೊಂಡಳು.
ಆದರೆ ಈ ದಾರ ನೋಡಿದ ಹುಮಾಯೂನ್ ಇದರ ಸಂಪ್ರದಾಯದ ಬಗ್ಗೆ ತಿಳಿದಿರಲಿಲ್ಲ. ಬಳಿಕ ರಾಜನ ಆಸ್ಥಾನದಲ್ಲಿದ್ದವರು ಇದು ಸಹೋದರ ಸಹೋದರಿಯರ ನಡುವಿನ ಪವಿತ್ರ ಬಂಧನ ರಕ್ಷಾ ಬಂಧನವೆಂದು ತಿಳಿಸಿದ್ದರಂತೆ. ಬಳಿಕ ಆತ ಕರ್ಣಾವತಿಗೆ ಸಹಾಯ ಮಾಡಲು ನಿರ್ಧರಿಸಿ ಆಕೆಯ ಪರವಾಗಿ ಯುದ್ಧ ಮಾಡಿದನು. ಇಲ್ಲಿಂದ ಈ ರಕ್ಷಾ ಬಂಧನ ಎಂಬ ಹಬ್ಬ ನಡೆದುಕೊಂಡು ಬಂದಿದೆ ಎಂದು ಸುಧಾ ಮೂರ್ತಿ ವಿಡಿಯೋದಲ್ಲಿ ಹೇಳಿದ್ದಾರೆ.
ಆದ್ರೆ ಈ ವಿಚಾರವೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಈ ವಿಡಿಯೋಗೆ ಹಲವು ರೀತಿಯ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದೆ. ಈ ಸಂಪ್ರದಾಯ ಬೆಳೆದು ಬಂದ ಹಾದಿ ಕುರಿತಂತೆ ಹೊಸ ಚರ್ಚೆಗೆ ಕಾರಣವಾಗಿದೆ. ಹಲವರು ಸುಧಾ ಮೂರ್ತಿ ಅವರ ಈ ಅಭಿಪ್ರಾಯವನ್ನು ತಿರಸ್ಕರಿಸಿದ್ದಾರೆ. ರಕ್ಷಾ ಬಂಧನಕ್ಕೂ ನೀವು ಹೇಳಿರುವ ಈ ಕಥೆಗೂ ಸಂಬಂಧವಿಲ್ಲ. ರಕ್ಷಾ ಬಂಧನ ಆರಂಭಗೊಂಡಿದ್ದು, ಶ್ರೀ ಕೃಷ್ಣ ಹಾಗೂ ದ್ರೌಪದಿಯ ಪ್ರಸಂಗದಿಂದ ಎಂದು ವಿವರಿಸಿದ್ದಾರೆ.
ಈ ಸಮಯದಲ್ಲಿ ನನಗೆ ತಿಳಿದಿದೆ, ನೀವು ಈ ಅಸಂಬದ್ಧ ಕಥೆಯನ್ನು ನಂಬಿದರೆ ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ಪುಸ್ತಕಗಳನ್ನು ಮಕ್ಕಳಿಗಾಗಿ ಶಿಫಾರಸು ಮಾಡಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ಶ್ರೀಕೃಷ್ಣನಿಗಾಗಿ ದ್ರೌಪದಿಯ ರಕ್ಷಾ ಸೂತ್ರ ಮತ್ತು ಶ್ರಾವಣ ಪೂರ್ಣಿಮೆಯ ಮಹತ್ವದ ಬಗ್ಗೆ ದಯವಿಟ್ಟು ಈ ಕಥೆಯನ್ನು ಕಲಿಯಬೇಕಾಗಿಲ್ಲ ಎಂದು ಕ್ಯಾಂಡಿಡ್ ಶ್ವೇತಾ ಎಂಬ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
'ನೀವು ಬರಹಗಾರರಾಗಿ ಈ ತಪ್ಪು ತಪ್ಪಾಗಿ ಹೇಳುತ್ತಿರುವುದು ನನಗೆ ನಿಜವಾದ ಆಶ್ಚರ್ಯವಾಗಿದೆ. ರಕ್ಷಾ ಬಂಧನವು ಕೃಷ್ಣ ಮತ್ತು ದ್ರೌಪತಿಗೆ ಸಂಬಂಧಿಸಿದೆ. ದಯವಿಟ್ಟು ನೀವೇ ಅರಿತುಕೊಳ್ಳಿ ಎಂದು ಸತೀಶ್ ಎಂಬ ಬಳಕೆದಾರರೊಬ್ಬರು ಹೇಳಿದ್ದಾರೆ.



Click it and Unblock the Notifications
