Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
'ಸೂಸೈಡ್ ಫಾರೆಸ್ಟ್' ಎಂಬ ನಿಗೂಢ ಕಾಡು..! ಇದರ ಬಗ್ಗೆ ಕೇಳಿದ್ದೀರಾ?
ಪ್ರಪಂಚದಲ್ಲಿ ಕೆಲವು ಸ್ಥಳಗಳು ಎಷ್ಟು ನಿಗೂಢತೆಯನ್ನು ತನ್ನಲ್ಲಿಟ್ಟುಕೊಂಡಿವೆ ಅಂದ್ರೆ ಅದನ್ನು ಕೇಳಿದಾಗ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಅಂತಹದ್ದೆ ಸ್ಥಳದ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಈ ಸ್ಥಳದ ಹೆಸರು ಸೂಸೈಡ್ ಫಾರೆಸ್ಟ್.
ಹೌದು ಆ ಸ್ಥಳದೆ ಅಷ್ಟು ವಿಚಿತ್ರ ಎಂದರೆ ಅಲ್ಲಿ ನಡೆಯುವ ಘಟನೆ ಇನ್ನೆಷ್ಟು ನಿಗೂಢ ಎಂದು ಊಹಿಸಿ ನೋಡಿ. ಜಪಾನ್‌ನ ಅಕಿಗಹರಾ ಅರಣ್ಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ಕಾಡು ಆತ್ಮಹತ್ಯೆ ಕೇಸ್‌ಗಳಿಗೆ ಸಿಕ್ಕಾಪಟ್ಟೆ ಫೇಮಸ್, ಈ ಕಾಡಿಗೆ ಪ್ರವೇಶ ನೀಡುವ ಮುನ್ನ ನಿಮ್ಮ ಕಣ್ಣಿಗೆ ಕೆಲವು ಸೂಚನೆಗಳು ಕಾಣುತ್ತವೆ. ಜೊತೆಗೆ ಇದು ಅತ್ಯಂತ ದಟ್ಟವಾದ ಮತ್ತು ಹಸಿರಾದ ಕಾಡಾಗಿದೆ. ವಿಶ್ವದ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗುವ 2ನೇ ಸ್ಥಳ ಇದಾಗಿದೆ.

ಈ ಕಾಡು ಎಲ್ಲಿದೆ?
ಅಕಿಗಹರಾ ಅರಣ್ಯ ಅಥವಾ ಆತ್ಮಹತ್ಯಾ ಅರಣ್ಯವು ಜಪಾನ್‌ನ ಫ್ಯೂಜಿ ಪರ್ವತದ ವಾಯುವ್ಯದಲ್ಲಿದೆ. ಇದು ದೇಶದ ರಾಜಧಾನಿ ಟೋಕಿಯೊದಿಂದ 2 ಗಂಟೆಗಳಿಗಿಂತ ಕಡಿಮೆ ದೂರದಲ್ಲಿದೆ. ಸುಮಾರು 35 ಚದರ ಕಿ.ಮೀ ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ಅಕಿಗಹಾರ ಅರಣ್ಯವು ದಟ್ಟ ಹಸಿರಿನಿಂದ ಸುತ್ತುವರಿದಿದೆ. ಇದೇ ಕಾರಣಕ್ಕೆ ಇದನ್ನು 'ಮರಗಳ ಸಮುದ್ರ' ಎಂದೂ ಕರೆಯುತ್ತಾರೆ.
ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಕಳೆದುಹೋಗುವುದು ಮತ್ತು ಕಾಡಿನ ದಟ್ಟವಾದ ಕಾರಣದಿಂದ ಹೊರಬರಲು ಅಸಾಧ್ಯವಾಗಿದೆ ಸಿಲುಕುವ ಪ್ರಕರಣಗಳು ಸರ್ವೇ ಸಾಮಾನ್ಯ. ಅಂದರೆ ಒಮ್ಮೆ ಈ ಕಾಡನ್ನು ಪ್ರವೇಶಿಸಿದರೆ ಹೊರಗೆ ಬರುವುದು ತುಂಬಾ ಕಷ್ಟ.
ಕಾಡಿನ ಭಯಾನಕ ಸತ್ಯ
ಅಕಿಗಹರಾ ಸುಸೈಡ್ ಪಾಯಿಂಟ್ ಯಾವಾಗ ಬೆಳಕಿಗೆ ಬಂತು ಎಂಬುದಕ್ಕೆ ಹತ್ತಾರು ಕಥೆಗಳಿವೆ. ಈ ಕಾಡನ್ನು ಜಪಾನ್ ಭಾಷೆಯಲ್ಲಿ ಯುರೇಯ ಎಂದು ಕರೆಯಲಾಗಿದೆ. ಅಂದರೆ ಆತ್ಮಗಳ ಕಾಡು ಎಂಬರ್ಥ ನೀಡುತ್ತದೆ. ಈ ಕಾಡಿನಲ್ಲಿ ಪೊಲೀಸರು ನಿತ್ಯ ಶವಗಳಿಗೆ ಹುಡುಕಾಡಬೇಕಾದ ಅನಿವಾರ್ಯತೆ ಇದೆ. ಇನ್ನು 2023ರಲ್ಲಿ ಪೊಲೀಸರು 105 ಶವಗಳನ್ನು ಕಾಡಿನಿಂದ ಹೊರತೆಗೆದಿದ್ದರು.
ಈ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಅಲ್ಲಿರುವ ಕಾಡಿನ ಮರಗಳಲ್ಲಿ ನೆಲೆಸಿವೆ ಎಂದು ಜಪಾನಿಗರು ನಂಬುತ್ತಾರೆ. ಹೀಗಾಗಿಯೇ ಈ ಕಾಡಿನಲ್ಲಿ ನಿಗೂಢ ಘಟನೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಯಾರಾದರು ಈ ಕಾಡಿನಲ್ಲಿ ಹೋಗುವಾಗ ಮರಗಳನ್ನು ಮುಟ್ಟುವುದು, ಅವುಗಳನ್ನು ಕಡಿಯುವುದು ಮಾಡಿದರೆ ಅವು ಸಹ ಸಾಯುತ್ತಾರೆ ಎಂದು ಭಯ ಬೀಳುತ್ತಾರೆ.
ಈ ಪ್ರದೇಶವು ಜ್ವಾಲಾಮುಖಿಯ ಮಣ್ಣಿನಿಂದ ರೂಪುಗೊಂಡ ಕಾಂತೀಯ ಕಬ್ಬಿಣದ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುವುದರಿಂದ. ಈ ಕಾರಣದಿಂದಾಗಿ, ಈ ಕಾಡಿನಲ್ಲಿ ದಿಕ್ಸೂಚಿ, ಕಂಪಾಸ್‌ಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಫೋನ್‌ಗಳಲ್ಲಿ ನೆಟ್‌ವರ್ಕ್ ಇಲ್ಲದಿರುವುದು, ಹೀಗೆ ಹತ್ತಾರು ವಿಚಿತ್ರ ಘಟನೆ ಇಲ್ಲಿ ನಡೆಯುತ್ತದೆ. ಹೀಗಾಗಿ ಈ ಕಾಡನ್ನು ನಿಗೂಢತೆಯ ಕಾಡು ಅಂತಲೂ ಅವರು ಕರೆಯುತ್ತಾರೆ. ಒಂದು ವೇಳೆ ಯಾರಾದರು ಈ ಕಾಡಿನಲ್ಲಿ ಕಳೆದು ಹೋದರೆ ಅವರು ಹೊರಬರುವುದು ಕಷ್ಟವಾಗುತ್ತದೆ.
ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳೋದೇಕೆ
ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ಜನರು ಈ ಕಾಡಿಗೆ ಬಂದು ವಿಷ ಸೇವಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ. ಇದು ವಿಶ್ವದ 2ನೇ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಈ ಕಾಡು ಎಷ್ಟು ದಟ್ಟವಾಗಿದೆ ಅಂದ್ರೆ ಅಲ್ಲಿ ಸಾಯಲು ಬಂದವನ ಹುಡುಕುವುದು ಕಷ್ಟ.
ಜಪಾನ್‌ನಲ್ಲಿ ಅತ್ಯಂತ ದಟ್ಟವದ ಕಾಡು ಎಂದರೆ ಈ ಅಕಿಗಹರಾ ಅರಣ್ಯವಾಗಿದೆ. ಹೀಗಾಗಿ ಜನ ಇದೇ ಕಾಡಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಕಾಡಿನಲ್ಲಿ ಶವ ಹುಡುಕುವುದು ಸಹ ಅತ್ಯಂತ ಕಷ್ಟದ ಕೆಲಸವಾಗಿದೆ. ಹೀಗಾಗಿ ಜನ ಭೂಮಿಯಿಂದ ಮರೆಯಾಗಲು ನಿರ್ಧರಿಸಿದರು ಈ ಕಾಡಿನಲ್ಲಿ ತಮ್ಮ ಶವ ಸಹ ಸಿಗಬಾರದು ಎಂಬ ಕಾರಣಕ್ಕೆ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.



Click it and Unblock the Notifications