Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಾಮಾಯಣದ ನೈಜ ತಾಣಗಳ ಕಣ್ಮುಂದೆ ಇಟ್ಟ ಲಂಕಾ..! ವಿಡಿಯೋ ನೋಡಿ ಅದ್ಭುತ ಎಂದ ಮಂದಿ.!
ರಾಮಾಯಣದ ಕಥೆಗಳು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿದಂತೆ ಕತೆಯೂ ಭಾರತ ಹಾಗೂ ಈಗಿನ ಶ್ರೀಲಂಕಾದಲ್ಲಿ ಸಂಭವಿಸಿದೆ ಎಂಬುದನ್ನು ನಾವು ಓದಿ ತಿಳಿದಿದ್ದೇವೆ. ಹಾಗೆ ಈ ರಾಮಾಯಣ ಕಾವ್ಯ ಎಲ್ಲರಲ್ಲು ಕುತೂಹಲ, ವಿಸ್ಮಯಕ್ಕೆ ಕಾರಣವಾಗುವಂತಹ ಹಲವು ವಿಚಾರಗಳನ್ನು ತನ್ನಲ್ಲಿಟ್ಟುಕೊಂಡಿದೆ.
ಹಾಗೆ ರಾಮಯಣ ನಿಜವಾಗಿಯೂ ನಡೆದಿದೆ ಎಂಬುದಕ್ಕೆ ಹತ್ತು ಹಲವು ಜೀವಂತ ಸಾಕ್ಷಿಗಳು ಕೂಡ ಇರುವುದು ನಾವು ನೋಡಬಹುದು. ರಾಮ ಸೇತು, ರಾಮ ಹಾಗೂ ಸೀತೆ ತಂಗಿದ್ದ ಸ್ಥಳಗಳು, ಈಗಿನ ಪುರಾಣ ಪ್ರಸಿದ್ಧ ದೇವಾಲಯಗಳು ಹೀಗೆ ಹತ್ತಾರು ಸಾಕ್ಷಿಗಳು ರಾಮಾಯಣವನ್ನು ಜೀವಂತಾಗಿಸಿವೆ. ಭಾರತದಲ್ಲಿ ಮಾತ್ರವಲ್ಲ ಶ್ರೀಲಂಕಾದಲ್ಲೂ ಕೂಡ ರಾಮಾಯಣಕ್ಕೆ ಸಂಬಂಧಿಸಿದ ಹಲವು ಕುರುಹುಗಳಿವೆ.

ಈಗ ಶ್ರೀಲಂಕಾ ಏರ್‌ಲೈನ್ಸ್‌ನ ಒಂದು ಜಾಹಿರಾತು ರಾಮಾಯಣದ ವಿಶೇಷ ಸ್ಥಳಗಳನ್ನು ಮತ್ತೆ ಕಣ್ಣೆದುರು ತೆರೆದಿಟ್ಟಿದೆ. ಶ್ರೀಲಂಕಾದ ಈ ವಿಶೇಷ ಜಾಹಿರಾತು ಈಗ ಭಾರತೀಯರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದ್ದು ಈ ವಿಡಿಯೋ ನೋಡಿದ ಮಂದಿ ಭಾರತೀಯರು ಹಿಂದೆಂದಿಗೂ ಇಂತಹ ರಾಮಾಯಣದ ಕತೆಯನ್ನು ಸುಂದರವಾಗಿ ಕೇಳಿರಲಿಲ್ಲ ಎನ್ನುತ್ತಿದ್ದಾರೆ.
ಶ್ರೀಲಂಕಾದಲ್ಲಿನ ರಾಮಾಯಣದ ಕುರುಹುಗಳನ್ನು ಸುಂದರವಾಗಿ ಒಂದು ವಿಡಿಯೋ ಮೂಲಕ ಚಿತ್ರಿಸಲಾಗಿದೆ. ಇದು ರಾಮಾಯಣ ಮಹಾಕಾವ್ಯವನ್ನು 5 ನಿಮಿಷದಲ್ಲಿ ಕಣ್ಣಿಗೆ ಕಟ್ಟಿದಂತೆ ವಿವರಿಸಲಿದೆ. ಹೀಗಾಗಿ ಭಾರೀ ಮೆಚ್ಚುಗೆಯ ಜೊತೆಗೆ ರಾಮಾಯಣದ ಬಹುಮುಖ್ಯ ಸ್ಥಳಗಳನ್ನು ಈ ವಿಡಿಯೋದಲ್ಲಿ ಸೇರಿಸಿರುವುದು ಪ್ರಶಂಸೆಗೆ ಕಾರಣವಾಗಿದೆ.
ಅಜ್ಜಿಯೊಬ್ಬರು ಮೊಮ್ಮಗನಿಗೆ ರಾಮಾಯಣದ ಕಥೆ ಹೇಳುವ ಮೂಲಕ ಈ ಜಾಹಿರಾತು ಆರಂಭವಾಗುತ್ತದೆ. ಹಾಗೆ ಶ್ರೀಲಂಕಾಕ್ಕೆ ರಾಮ ಹೇಗೆ ತೆರಳಿದ್ದ ಎಂಬುದನ್ನು ಮೊದಲಿಗೆ ಹೇಳಲಾಗಿದೆ. ಆತ ಪುಷ್ಪಕ ವಿಮಾನದ ಮೂಲಕ ಮೊದಲು ಶ್ರೀಲಂಕಾದ ಯಾವ ಸ್ಥಳಕ್ಕೆ ತೆರಳಿದ ಎಂಬುದನ್ನು ಕೂಡ ಹೇಳಲಾಗಿದೆ. ಹಾಗೆ ರಾವಣ ಸೀತೆಯನ್ನು ಮೊದಲು ಯಾವ ಗುಹೆ ಅಲ್ಲಿ ಇಟ್ಟಿದ್ದ ಅನಂತರ ಅಶೋಕವನದಲ್ಲಿ ಇರಿಸಿದ್ದ. ಈಗ ಆ ಸ್ಥಳ ಎಲ್ಲಿದೆ ಎಂಬುದನ್ನು ಕೂಡ ವಿವರಿಸಲಾಗಿದೆ. ರಾವಣ ವಧೆ ಬಳಿಕ ರಾಮನು ಅಯೋಧ್ಯೆಗೆ ಹಿಂದಿರುಗುವ ಮೊದಲು ಲಂಕಾದ ರಾಜನಾಗಿ ವಿಭೀಷಣನ ಕಿರೀಟವನ್ನು ಕೂಡ ವಿವರಿಸಲಾಗಿದೆ.
ಹಾಗೆ ಹನುಮಂತನಿಗೆ ಕಟ್ಟಲಾಗಿರುವ ದೇವಾಲಯ, ಸೀತಾ ದೇವಿ ಮಂದಿರ, ರಾಮನ ದೇವಾಲಯ ಸೇರಿ ಹಲವು ಪುರಾತನ ಸ್ಥಳಗಳನ್ನು ಜಾಹಿರಾತಿನ ಮೂಲಕ ವಿವರಿಸಲಾಗಿದೆ. ಈ ವಿಡಿಯೋ ಎಷ್ಟು ಸುಂದರವಾಗಿ ಮೂಡಿ ಬಂದಿದೆ ಅಂದ್ರೆ ನೋಡುಗರಿಗೆ ಸಂಪೂರ್ಣ ರಾಮಾಯಣದ ದರ್ಶನವಾಗೋದು ಪಕ್ಕ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ಮಂದಿ ಮೆಚ್ಚುಗೆಯ ಜೊತೆಗೆ ಒಂದಿಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂತಹ ಚಿತ್ರಣಗಳು ಭಾರತದಿಂದಲೂ ಸಾಧ್ಯವಾಗಬೇಕಿದೆ. ಶ್ರೀಲಂಕಾದಲ್ಲಿ ರಾಮಾಯಣದ ಕುರುಹುಗಳನ್ನು ಇಷ್ಟೊಂದು ಜೋಪಾನ ಮಾಡಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಲಂಕಾದ ಪ್ರವಾಸೋಧ್ಯಮಕ್ಕೆ ಬೂಸ್ಟ್ ನೀಡಲು ಈ ಜಾಹಿರಾತು ಹೊರತರಲಾಗಿದೆ.
ರಾವಣನ ರಾಜ್ಯವಾಗಿದ್ದ ಶ್ರೀಲಂಕಾದಲ್ಲಿರುವ ಈ ರಾಮಾಯಣ ಪ್ರಸಿದ್ಧ ಸ್ಥಳಗಳ ನೋಡಿ ಭಾರತೀಯರಂತು ಈ ಸ್ಥಳಗಳ ಭೇಟಿಗೆ ಮುಂದಾಗುವುದು ಖಚಿತ ಎನ್ನಲಾಗ್ತಿದೆ. ಏಕೆಂದರೆ ಈ ಸ್ಥಳಗಳು ರಾಮಾಯಣ ನೈಜ ಕುರುಹುಗಳಾಗಿರುವುದು ಎಲ್ಲರು ಒಮ್ಮೆ ನೋಡಲು ಕುತೂಹಲ ಮೂಡಿಸಿದ್ದಾರೆ.



Click it and Unblock the Notifications
