Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ..! ಅವರ ಬಗ್ಗೆ ನಿಮಗೆಷ್ಟು ಗೊತ್ತು..?
ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ದಾರಿ ಬೆಳಕಾಗಿದ್ದ, ಶ್ರೀ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಅವರ ಜನ್ಮ ದಿನವಿಂದು. ಯಾವ ವ್ಯಕ್ತಿ ಇತರರ ಸಂತೋಷ ಮತ್ತು ದುಃಖಗಳಿಗೆ ಪ್ರತಿಕ್ರಿಯಿಸುತ್ತಾನೆ ಅಂತಹವನು ಉನ್ನತ ಮಟ್ಟದ ಆಧ್ಯಾತ್ಮಿಕ ಒಟ್ಟೂಟವನ್ನು ಪಡೆದುಕೊಂಡಿರುತ್ತಾನೆ ಎಂದು ಭಗವದ್ ಗೀತೆಯಲ್ಲಿ ಹೇಳಲಾಗುವುದು. ಅಂತಹ ಒಂದು ಉತ್ತಮ ಉದಾರಣೆಗೆ ಸಾಕ್ಷಿಯಾಗಿ ನಿಲ್ಲುವ ಗುರುಗಳು ಅಥವಾ ಸ್ವಾಮೀಜಿ ಎಂದರೆ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರು.
ಇವರು ತುಂಬು ಕುಟುಂಬದಲ್ಲಿ ಜನಿಸಿ, ಅಪ್ಪ -ಅಮ್ಮನ ಮುದ್ದಿನ ಕಂದನಾಗಿದ್ದರು. ತನ್ನ ಒಡ ಹುಟ್ಟಿದ ಸಹೋದರ ಮತ್ತು ಸಹೋದರಿಯರ ಪ್ರೀತಿಯ ತಮ್ಮನಾಗಿದ್ದರು. ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವರಾಗಿದ್ದವರು ಇವರು. ಆದರೆ ಸಮಾಜದಲ್ಲಿ ಎಲ್ಲರಿಗೂ ಸನ್ನಡತೆಯ ದಾರಿಯನ್ನು ತೋರಿಸಿಕೊಟ್ಟ ಮಹಾನ್ ಯೋಗಿಯಾಗಿದ್ದರು.

ಹುಟ್ಟಿದ್ದು ಒಂದು ಕುಗ್ರಾಮದಲ್ಲಿಯಾದರೂ ಜೀವನದಲ್ಲಿ ಸಾಕಷ್ಟು ಸದ್ವಿಚಾರದೊಂದಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಜೀವನದ ಪ್ರಿತಿಯೊಂದು ಕ್ಷಣ ಹಾಗೂ ಕೆಲಸ ಕಾರ್ಯಗಳೆಲ್ಲವನ್ನೂ ಜನತೆಗಾಗಿ ಮೀಸಲಾಗಿಟ್ಟ ಯೋಗಿವರ್ಯರು. ಸಹಾನುಭೂತಿಯೇ ಎಲ್ಲಾ ಧರ್ಮದ ನಂಬಿಕೆಗೆ ಮೂಲವಯ್ಯ ಎನ್ನುವ ಬಸವಣ್ಣನವರ ಚಿಂತನೆಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಬಂದವರು. ಬಡವರಿಗೆ ಹಾಗೂ ಸಹಾಯ ಹಸ್ತ ಚಾಚಿದವರಿಗೆ ಎಂದಿಗೂ ಇಲ್ಲ ಎನ್ನು ಶಬ್ದವನ್ನು ಹೇಳಿರಲಿಲ್ಲ. ಅವರ ಚಿಂತನೆಗಳನ್ನು ವಿಚಾರಿಸಿ, ಸೂಕ್ತ ಮಾರ್ಗ ಹಾಗೂ ಸಹಾಯವನ್ನು ಮಾಡುತ್ತಿದ್ದ ದೇವರಾಗಿದ್ದರು. ಹಾಗಾಗಿಯೇ ಅವರನ್ನು ಅಂದಿನಿಂದ ಇಂದಿನ ವರೆಗೂ ಹಾಗೂ ಮುಂದೆಯೂ ನಡೆದಾಡುವ ದೇವರು ಎಂದು ಕರೆಯಲಾಗುವುದು.
ಮನುಕುಲದ ಅಭಿವೃದ್ಧಿ ಹಾಗೂ ಸಹಾಯಕ್ಕಾಗಿ ದೇವರು ವಿವಿಧ ರೂಪದಲ್ಲಿ ಭೂಲೋಕಕ್ಕೆ ಬರುತ್ತಾನೆ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ. ಅಂತಹ ಮಾತಿಗೆ ಒಂದು ಜೀವಂತ ಸಾಕ್ಷಿಯಾಗಿ ನಿಂತಿದ್ದವರು ಎಂದರೆ ಸಿದ್ಧಗಂಗಾ ಸ್ವಾಮೀಜಿಯವರಾಗಿದ್ದರು. ನಿತ್ಯವೂ ಸಾವಿರಾರು ಭಕ್ತರ ನೋವನ್ನು ಆಲಿಸಿ, ಅವರಿಗೊಂದಿಷ್ಟು ಸಾಂತ್ವನವನ್ನು ನೀಡಿ ಜೀವನದಲ್ಲಿ ಭರವಸೆ ಹಾಗೂ ಸಮಾಧಾನವನ್ನು ನೀಡುತ್ತಿದ್ದವರಾಗಿದ್ದರು. ಸದಾ ಇತರರಿಗಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟ ಸ್ವಾಮೀಜಿಯವರು ಇಂದು ಶಿವಸಾಯುಜ್ಯವನ್ನು ಹೊಂದಿದ್ದಾರೆ. ಮಹಾನ್ ಯೋಗಿಗಳಾದ ಇವರ ಬಗ್ಗೆ ನಾವು ಎಂದಿಗೂ ಮನದಲ್ಲಿಟ್ಟುಕೊಳ್ಳಬೇಕಾದ ಹತ್ತು ವಿಷಯಗಳನ್ನು ಈ ಸಂದರ್ಭದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ...
ಸಿದ್ಧಗಂಗಾ ಸ್ವಾಮೀಜಿಯವರ ಬಗ್ಗೆ
ಏಪ್ರಿಲ್ 1, 1907 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಒಂದು ಸರಳ ರೈತ ಕುಟುಂಬದಲ್ಲಿ ಜನಿಸಿದ್ದರು. 1941ರಲ್ಲಿ ಸಿದ್ಧಗಂಗಾ ಮಠದ ಮುಖ್ಯಸ್ಥರಾಗಿ ನೇಮಕಗೊಂಡರು.
120ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ಸ್ಥಾಪಿನೆ
ಇವರು 120ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಸಂಸ್ಕೃತ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತು ಸಾಂಪ್ರದಾಯಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿಯೇ ಇಂದು ಎಲ್ಲಾ ಸಮುದಾಯದ ಜನರು ಇವರನ್ನು ಗೌರವಿಸುತ್ತಾರೆ.
ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದರು
ಅನ್ನದಾನಮ್ ಎನ್ನುವ ಹೆಸರಿನಲ್ಲಿ ಆಹಾರ ದಾಸೋಹನ, ವಿದ್ಯಾ ದಾನಮ್ ಹೆಸರಿನಲ್ಲಿ ಶಿಕ್ಷಣ ಅಥವಾ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದರು. ಇದು ಅವರ ಪ್ರತಿಜ್ಞಾ ಕೆಲಸದಂತೆ ನಡೆಯುತ್ತಿತ್ತು.
ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು
ಸಿದ್ಧಗಂಗಾ ಸ್ವಾಮೀಜಿಯವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು.
ಡಾಕ್ಟರ್ ಆಫ್ ಲಿಟರೇಚರ್ ಗೌರವ
ರಾಜಕೀಯದಿಂದ ದೂರವೇ ಉಳಿದಿದ್ದರು
ಯಾವುದೇ ಚುನಾವಣೆಗೆ ಮುಂಚೆ ಕರ್ನಾಟಕದ ಪ್ರತಿಯೊಂದು ರಾಜಕೀಯ ಪಕ್ಷದವರು ಸಿದ್ಧಗಂಗಾ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಹೊಂದಿದೆ. ಜ್ಯಾತ್ಯಾತೀತತೆಯ ಬೆಂಬಲಿಗರಾದ ಇವರು ರಾಜಕೀಯದಿಂದ ದೂರವೇ ಉಳಿದಿದ್ದರು.



Click it and Unblock the Notifications
