Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕುಂಭಮೇಳದಲ್ಲಿ ಸಾವಿರ ಕೋಟಿ ಒಡೆಯ..! ಬಾಬಾ ಆಗಿ ಬದಲಾದ ಉದ್ಯಮಿ..!!
ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹಲವಾರು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಈ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ಹಾಗೆ ಉದ್ಯಮಿಗಳು, ವಿದೇಶಿಗರು ಸೇರಿದಂತೆ ಈಗ ಅಂಬಾನಿ ಕುಟುಂಬ ಕೂಡ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಹಾಗೆ ಈ ಕುಂಭ ಮೇಳದಲ್ಲಿ ಐಐಟಿ ಬಾಬಾ, ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲೀನಾ, ಹಾಗೆ ಇಂಜಿನಿಯರ್ ಬಾಬಾ, ವಿದೇಶಿ ಬಾಬಾ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಮತ್ತೊಂದು ಅಚ್ಚರಿಯ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಅದರಲ್ಲೂ ಒಬ್ಬ ವ್ಯಕ್ತಿ ಕೋಟಿ ಕೋಟಿ ಆಸ್ತಿ ತೊರೆದು ಬಾಬಾ ಆಗಿರುವ ಕಥೆ ಇದು.

ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡ ವ್ಯಕ್ತಿಯೊಬ್ಬ ಆತನಿಗೆ 1 ಸಾವಿರ ಕೋಟಿ ವ್ಯವಹಾರ ಹೊಂದಿದ್ದ ಎಂದು ಹೇಳಿಕೊಂಡಿದ್ದಾನೆ. ಆತ ಸಾಮಾನ್ಯ ಬಾಬಾರಂತೆ ಅಲ್ಲಿದ್ದರಿಗೆ ಕಾಣಿಸಿಕೊಂಡಿದ್ದಾನೆ. ಇಷ್ಟು ಕೋಟಿ ಕೋಟಿ ಆಸ್ತಿ ಇದ್ದರೂ ಆತ ವೈರಾಗ್ಯದಿಂದ ಆಧ್ಯಾತ್ಮ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ.
ಕುಂಭಮೇಳದಲ್ಲಿ ಉದ್ಯಮಿ ಬಾಬಾ ಎಂಬ ಬರಹದಡಿಯಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಬಾಬಾನ ಆಸ್ತಿ ವಿಚಾರ ತಿಳಿದು ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಬಡವರಿಗೆ ಹೊದಿಕೆ ನೀಡುವುದು. ಶಾಲ್ ನೀಡುವುದು ನೋಡಬಹುದು, ಎಲ್ಲರಿಗೂ ಈ ಶ್ರೀಮಂತ ಯಾರು ಎಂಬ ಪ್ರಶ್ನೆ ಮೂಡಿದೆ.
ಈ ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದ್ಯಮಿ ಬಾಬಾ ಕುರಿತು ಹುಡುಕಾಟ ಆರಂಭಗೊಂಡಿತ್ತು, ಯಾರು ಈ ಶ್ರೀಮಂತ ಬಾಬಾ ಎಂಬ ಕುತೂಹಲ ಮೂಡಿತ್ತು. ವಿಡಿಯೋದಲ್ಲಿ ಹೇಳಿರುವಂತೆ ಆತ ಸಾವಿರ ಕೋಟಿ ಒಡೆಯನಂತೆ. ಆದ್ರೆ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದು, ಆದ್ರೆ ಆತನ ಕುರಿತು ಯಾವುದೇ ಮಾಹಿತಿ ಆತ ಹಂಚಿಕೊಂಡಿಲ್ಲ. ಎಲ್ಲರಿಗೂ ಆತ ಯಾರು? ಸಾವಿರ ಕೋಟಿ ಒಡೆಯ ಆಗಿದ್ದು ಹೇಗೆ? ಆತ ಯಾವ ಉದ್ಯಮ ಕಟ್ಟಿದ್ದ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಹಾಗೆ ಆತ ತನ್ನ ಆಸ್ತಿಯನ್ನೆಲ್ಲಾ ಬಿಟ್ಟು ಏಕೆ ಬಾಬಾ ಆದ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ.
ಆತ ಯಾರೇ ಆಗಿದ್ದರು ಕುಂಭ ಮೇಳದಲ್ಲಿ ಭಾಗಿಯಾದ ಬಡವರಿಗೆ ಒಂದಿಷ್ಟು ಸಹಾಯ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಹಾಗೆ ಆತನ ಈ ಕಾರ್ಯ ಮೆಚ್ಚಿ ಹಲವರು ಅವರನ್ನು ಅಭಿನಂದಿಸಿದ್ದಾರೆ. ಹಾಗೆ ಅವರಿಗೆ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಕ್ಕಿಂತ ಹೆಚ್ಚಿನ ಪುಣ್ಯ ಲಭಿಸಲಿ ಎಂದು ಹರಸಿದ್ದಾರೆ.
ಫೆಬ್ರವರಿ 12ರ ಮಾಘಿ ಪೂರ್ಣಿಮೆಯ ದಿನದಂದು ಸುಮಾರು 1.6 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ತಾಯಿ ಕೋಕಿಲಾಬೆನ್ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ, ಸೊಸೆಯಂದಿರು ಶ್ಲೋಕ ಮತ್ತು ರಾಧಿಕಾ, ಮೊಮ್ಮಕ್ಕಳು ಪೃಥ್ವಿ ಮತ್ತು ವೇದಾ ಮತ್ತು ಸಹೋದರಿಯರಾದ ದೀಪ್ತಿ ಸಲ್ಗಾಂವ್ಕರ್ ಮತ್ತು ನೀನಾ ಕೊಠಾರಿ ಜೊತೆಗೆ ಆಗಮಿಸಿದ್ದರು.



Click it and Unblock the Notifications
