Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ತಂದೆ ದೇಹ 2 ಭಾಗ ಮಾಡುವಂತೆ ಹಠ ಹಿಡಿದ ಪುತ್ರ..! ಪೊಲೀಸರ ಮುಂದೆ ನಡೆಸಿದ್ದೇನು?
ಹಿಂದೂ ಧರ್ಮದಲ್ಲಿ ಎಲ್ಲಾ ಆಚರಣೆಗಳ ಹಿಂದೆ ಒಂದು ನಿಖರ ಕಾರಣಗಳಿವೆ. ಅದರಲ್ಲೂ ಹುಟ್ಟು ಮತ್ತು ಸಾವಿನ ಘಟನೆಗಳಲ್ಲಿ ಹಲವು ರೀತಿಯ ಆಚರಣೆಗಳನ್ನು, ಸಂಪ್ರದಾಯಗಳನ್ನು ನಡೆಸಿಕೊಂಡು ಬರಲಾಗಿದೆ. ಸಾವಿನ ಸಂದರ್ಭದಲ್ಲಿ ಯಾರು ಚಿತೆಗೆ ಬೆಂಕಿ ಇಡಬೇಕು. ಯಾರು ಇಡಬಾರದು? ತಂದೆ ಮರಣ ಹೊಂದಿದಾಗ ಯಾರು ಚಿತೆಗೆ ಬೆಂಕಿ ಇಡಬೇಕು? ಯಾರು ಇಡಬಾರದು ಎಂಬುದಕ್ಕೆ ಸೂಕ್ತ ಉತ್ತರಗಳೂ ಕೂಡ ಇವೆ.
ಆದ್ರೆ ಇಲ್ಲೊಂದು ಪ್ರಕರಣದಲ್ಲಿ ವಿಚಿತ್ರ ಸನ್ನಿವೇಶ ಎದುರಾಗಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಪುತ್ರನೊಬ್ಬ ತನ್ನ ತಂದೆಯ ಮೃತದೇಹ ಎರಡು ಭಾಗವಾಗಿ ಮಾಡಬೇಕು ಎಂದು ಹಠ ಹಿಡಿದು ಕುಳಿತ್ತಿದ್ದ. ಯಾವ ಧರ್ಮದಲ್ಲೂ ಕೂಡ ಈ ರೀತಿ ದೇಹ ತುಂಡರಿಸುವ ಸಂಪ್ರದಾಯವೂ ಇಲ್ಲ, ಇದು ಇದಕ್ಕೆ ಯಾರು ಕೂಡ ಅವಕಾಶವನ್ನೂ ಸಹ ನೀಡೋದಿಲ್ಲ.

ಆದ್ರೆ ಇಲ್ಲೊಬ್ಬ ಪುತ್ರ ತನ್ನ ತಂದೆಯ ದೇಹ ಎರಡು ಭಾಗ ಮಾಡದ ಹೊರತು ಚಿತೆಗೆ ಬೆಂಕಿ ಇಡಲು ಬಿಡುವುದಿಲ್ಲ ಎಂದು ಹಠ ಹಿಡಿದಿದ್ದ. ಹಾಗಾದ್ರೆ ಈ ಘಟನೆ ನಡೆದಿದೆಲ್ಲಿ? ಕೊನೆಗೆ ಏನಾಯಿತು? ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಈ ರೀತಿ ತಂದೆ ದೇಹ ಎರಡು ಭಾಗ ಮಾಡುವಂತೆ ಹೇಳಿದ್ದ ವಿಚಿತ್ರ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಟಿಕಮ್‌ಗಢ ಜಿಲ್ಲೆಯ ಲಿಧೋರಾತಾಲ್ ಗ್ರಾಮದಲ್ಲಿ. ತಂದೆ ದೇಹ ಕತ್ತರಿಸಿ ಎರಡು ಭಾಗ ಮಾಡುವಂತೆ ಹಠ ಹಿಡಿದಿದ್ದ ಮೃತನ ಮೊದಲ ಮಗ, ಅಂದರೆ ಹಿರಿ ಮಗ. ಈ ಕಥೆ ಆರಂಭವಾಗಿದ್ದು 84 ವರ್ಷದ ಧ್ಯಾನಿ ಸಿಂಗ್ ಘೋಷ್ ಎಂಬ ವ್ಯಕ್ತಿ ಮೃತಪಟ್ಟಾಗ.
ಧ್ಯಾನಿ ಸಿಂಗ್‌ಗೆ ಇಬ್ಬರು ಗಂಡು ಮಕ್ಕಳು ಹಿರಿಯವ ಕಿಶನ್ ಹಾಗೂ ಕಿರಿಯ ಪುತ್ರ ದೇಶ್‌ರಾಜ್. ಕಿಶನ್ ಮದ್ಯ ವ್ಯಸನಿಯಾಗಿದ್ದು, ತಂದೆ ಮೃತಪಟ್ಟ ವಿಚಾರ ತಡವಾಗಿ ಆತನಿಗೆ ತಿಳಿದಿದೆ. ಚಿತೆಗೆ ಬೆಂಕಿ ಇಡುವಾಗ ಎಂಟ್ರಿ ಕೊಟ್ಟಿದ್ದ ಕಿಶನ್ ತಂದೆಗೆ ಅಗ್ನಿ ಸ್ಪರ್ಶ ಮಾಡುವುದು ನಾನೇ ಎಂದು ಹಠ ಹಿಡಿದಿದ್ದ. ಆದ್ರೆ ಕಿರಿ ಮಗನ ಪ್ರಕಾರ ತಂದೆಯ ಕೊನೆ ಆಸೆ ನಾನೇ ಅಗ್ನಿ ಸ್ಪರ್ಶ ಮಾಡುವುದಾಗಿದೆ ಎಂದು ಹೇಳಿಕೊಂಡಿದ್ದ.
ಮದ್ಯದ ಅಮಲಿನಲ್ಲಿದ್ದ ಕಿಶನ್ ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅಲ್ಲಿ ಸೇರಿದ್ದ ಜನ ಎಷ್ಟೇ ಕೇಳಿದರು ಆತ ಒಪ್ಪಿಕೊಳ್ಳಲಿಲ್ಲ. ತಂದೆಯ ದೇಗ ಎರಡು ಭಾಗ ಮಾಡಿ ಮೇಲ್ಭಾಗ ನನಗೆ ಕೊಟ್ಟುಬಿಡಿ, ನಾನು ಬೇರೆ ಕಡೆ ಅಗ್ನಿ ಸ್ಪರ್ಶ ಮಾಡುತ್ತೇನೆ ಎಂದು ಹಠ ಮಾಡದ. ಈ ಮಾತುಕತೆ ಗಲಾಟೆಯಾಗಿ ಬದಲಾಗಿತ್ತು. ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು.
ಸ್ಥಳಕ್ಕಾಗಮಿಸಿದ ಪೊಲೀಸರು ಕೂಡ ಹಿರಿಯ ಪುತ್ರ ಕಿಶನ್ ಹಾಗೂ ದೇಶ್‌ರಾಜ್ ಇಬ್ಬರನ್ನು ಸಾಮಾಧಾನ ಮಾಡಿ ರಾಜಿಯಾಗಲು ಹೇಳಿದರು. ಆದ್ರೆ ಇದನ್ನು ಕೇಳಲು ಇಬ್ಬರು ತಯಾರಿರಲಿಲ್ಲ. ಗಂಟೆಗಳ ಕಾಲ ಈ ಮಾತುಕತೆ ಚರ್ಚೆ ಮುಂದುವರೆದಿತ್ತು. ನಂತರ ಮದ್ಯ ಸೇವಿಸಿ ಬಂದಿದ್ದ ಕಿಶನ್ ಅನ್ನು ಸ್ಥಳದಿಂದ ಹೊರಕಳುಹಿಸಿ ದೇಶ್‌ರಾಜ್‌ಗೆ ಅಗ್ನಿಸ್ಪರ್ಶ ಮಾಡಲು ಅವಕಾಶ ಮಾಡಿ ಕೊಡಲಾಗಿತ್ತು. ಈ ವಿಚಿತ್ರ ಘಟನೆ ಕಂಡು ಸ್ಥಳೀಯರು, ಪೊಲೀಸರು ಕೂಡ ಶಾಕ್‌ಗೆ ಒಳಗಾಗಿದ್ದರು.
ಇದು ಸಾಮಾನ್ಯ ಕೌಟುಂಬಿಕ ಕಲಹ ಎನಿಸಿದರು ಇಂತಹ ಹತ್ತು ಹಲವು ಘಟನೆಗಳಿಂದು ನಡೆಯುತ್ತಿದೆ. ಅದರಲ್ಲೂ ಕೌಟುಂಬಿಕ ಕಲಹ ಎಂಬುದು ಈಗ ಎಲ್ಲಾ ಸಂಬಂಧಗಳ ಮೀರಿ ಬೆಳೆದಿದೆ. ಇತ್ತೀಚಿಗೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ, ಹಣ, ಗೌರವಕ್ಕಾಗಿ ಯಾರು ಯಾವ ಕೆಲಸಕ್ಕೆ ಬೇಕಾದರು ಕೈ ಹಾಕಲು ಮುಂದಾಗೋದು ನಾವು ನೋಡಬಹುದು.



Click it and Unblock the Notifications