Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಗಸ್ಟ್ 28ಕ್ಕೆ ಸೋಮ ಪ್ರದೋಷ ವ್ರತ: ಸಂಜೆ ಈ ಸಮಯ ಶಿವ ಪೂಜೆಗೆ ತುಂಬಾನೇ ಶ್ರೇಷ್ಠವಾಗಿದೆ
ಆಗಸ್ಟ್ 28ಕ್ಕೆ ಸೋಮ ಪ್ರದೋಷ ವ್ರತ. ಪ್ರದೋಷವ್ರತ ಸೋಮವಾರ ಬಂದರೆ ಇನ್ನೂ ವಿಶೇಷ. ಏಕೆಂದರೆ ಸೋಮವಾರ ಶಿವನಿಗೆ ಪ್ರಿಯವಾದ ದಿನವೆಂದು ಹೇಳಲಾಗುವುದು. ಈ ದಿನ ಶಿವಪೂಜೆಗೆ ತುಂಬಾ ಶ್ರೇಷ್ಠವಾದ ದಿನ ಎಂದು ಹೇಳಲಾಗುವುದು. ಅದರಲ್ಲೂ ಈಗ ಶ್ರಾವಣ ಮಾಸ. ಶ್ರಾವಣ ಮಾಸ ಎಂದರೆ ಶಿವನ ಆರಾಧನೆಗೆ ಮೀಸಲಾದ ತಿಂಗಳು, ಈ ತಿಂಗಳಿನಲ್ಲಿ ಸೋಮ ಪ್ರದೋಷ ವ್ರತ ಬಂದಿದೆ, ಆದ್ದರಿಂದ ಈ ದಿನ ಇನ್ನೂ ವಿಶೇಷವಾಗಿದೆ.
ಸೋಮ ಪ್ರದೋಷ ವ್ರತ 2023
ತ್ರಯೋದಶಿ ತಿಥಿ ಪ್ರಾರಂಭ: ಆಗಸ್ಟ್ 28 ಸಂಜೆ 06:22ಕ್ಕೆ
ತ್ರಯೋದಶಿ ತಿಥಿ ಮುಕ್ತಾಯ: ಆಗಸ್ಟ್ 28 ರಾತ್ರಿ 02:47ರವರೆಗೆ
ಪೂಜಾ ಸಮಯ: ಆಗಸ್ಟ್ 28 ಸಂಜೆ 06:45ರಿಂದ 08:59ರವರೆಗೆ

ಸೋಮ ಪ್ರದೋಷ ವ್ರತದ ಮಹತ್ವ
ಸೋಮ ಪ್ರದೋಷದಂದು ಉಪವಾಸವಿದ್ದು ಪ್ರದೋಷ ವ್ರತವನ್ನು ಆಚರಿಸಲಾಗುವುದು. ಈ ದಿನ ಶಿವ-ಪಾರ್ವತಿಯನ್ನು ಆರಾಧನೆ ಮಾಡುವುದರಿಂದ ತುಂಬಾ ಒಳ್ಳೆಯದು. ಈ ದಿನ ಪ್ರದೋಷ ವ್ರತ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು. ವೈಜ್ಞಾನಿಕವಾಗಿ ಹೇಳುವುದಾದರೂ ಪ್ರದೋಷ ವ್ರತ ಮಾಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ ಕಡಿಮೆಯಾಗುವುದು. ಈ ರೀತಿಯ ವ್ರತ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿ ಬರೀ ದೇವರ ಧ್ಯಾನ ಇರುವುದರಿಂದ ನೆಗೆಟಿವ್ ಚಿಂತನೆ ಇರುವುದಿಲ್ಲ, ಇದರಿಂದ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು, ಖಿನ್ನತೆ ದೂರಾಗುವುದು.
ಧಾರ್ಮಿಕ ನಂಬಿಕೆ ಪ್ರಕಾರ ಸೋಮ ಪ್ರದೋಷ ವ್ರತ ಆಚರಿಸುವುದರಿಂದ ಈ ಪ್ರಮುಖ ಪ್ರಯೋಜನಗಳು ಸಿಗುವುದು:
* ಸೋಮ ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವನ ಸಂಪೂರ್ಣ ಅನುಗ್ರಹವನ್ನು ಪಡೆಯಬಹುದು.
* ಶಿವ-ಪಾರ್ವತಿಯ ಕೃಪೆಗೆ ಪಾತ್ರರಾಗುವುದರಿಂದ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದೆಲ್ಲವೂ ದೂರಾಗುವುದು ಎಂಬ ನಂಬಿಕೆ.
* ಆರ್ಥಿಕ ಸಮಸ್ಯೆ ದೂರಾಗುವುದು
* ಆರೋಗ್ಯ ಸಮಸ್ಯೆಯಿದ್ದರೆ ಪ್ರದೋಷ ವ್ರತ ಮಾಡುವುದರಿಂದ ರೋಗ ಕಡಿಮೆಯಾಗುವುದು.
* ಮನೆಯಲ್ಲಿ ನೆಮ್ಮದಿ, ಖುಷಿ ಹೆಚ್ಚಾಗುವುದು.
* ಅವಿವಾಹಿತ ಹುಡುಗ ಹುಡುಗಿಯರು ಈ ವ್ರತವನ್ನು ಮಾಡುವುದರಿಂದ ಮದುವೆ ಯೋಗ ಕೂಡಿ ಬರುವುದು.
ಪ್ರದೋಷ ವ್ರತದ ಪೂಜಾ ನಿಯಮಗಳೇನು?
ಸೋಮ ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವನ ಸಂಪೂರ್ಣ ಅನುಗ್ರಹವನ್ನು ಪಡೆಯಬಹುದು.ಇದರಿಂದ ಜೀವನದಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ.
* ಈ ದಿನ ಪೂಜೆಯ ಸಮಯದಲ್ಲಿ ಗುಲಾಬಿ ಬಣ್ಣದ ವಸ್ತ್ರ ಧರಿಸಿದರೆ ಒಳ್ಳೆಯದು.
* ಶಿವಲಿಂಗಕ್ಕೆ ಬೆಳ್ಳಿ ಅಥವಾ ತಾಮ್ರದ ಪಾತ್ರೆಯಿಂದ ಶುದ್ಧ ಜೇನುತುಪ್ಪವನ್ನು ಅರ್ಪಿಸಿ
* ನಂತರ ಜಲಾಭಿಷೇಕ ಮಾಡಿ.
ಈ ಮಂತ್ರಗಳನ್ನು ಪಠಿಸಿ:
ಮಹಾಮೃತ್ಯುಂಜಯ
ಮಂತ್ರ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಶಿವ ಧ್ಯಾನ ಮಂತ್ರ
ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್ ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ
ಸೋಮವ್ರತ ಮಾಡುವುದರಿಂದ ಈ ಸಮಸ್ಯೆಗಳು ದೂರಾಗುವುದು
ಏಳನೇ ಮನೆಯಲ್ಲಿ ರಾಹು, ಮಂಗಳ, ಶನಿ ಕೇತುಗಳಂತಹ ದೋಷಪೂರಿತ ಗ್ರಹಗಳಿಂದಾಗಿ ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೆ ಹೋಗಿದ್ದರೆ ಈ ವ್ರತವನ್ನು ಮಾಡುವುದರಿಂದ ವೈವಾಹಿಕ ಜೀವನ ಚೆನ್ನಾಗಿ ನಡೆಯಲಿದೆ.



Click it and Unblock the Notifications
