Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಮೃತಿ ಇರಾನಿ..! ಮಿಸ್ ಇಂಡಿಯಾದಿಂದ ರಾಜಕೀಯ ಜೀವನ!!
ಸ್ಮೃತಿ ಇರಾನಿ ಕೇಂದ್ರ ಸಚಿವೆಯಾಗಿ ಯಶಸ್ವಿ ಆಡಳಿತ ನಡೆಸಿದ ಮಹಿಳಾ ರಾಜಕಾರಣಿ. ಅದ್ರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಜಯ ದಾಖಲಿಸಿದ್ದ ನಾಯಕಿ. ಹೀಗಾಗಿ ಸ್ಮೃತಿ ಇರಾನಿ ಅವರಿಗೆ ಪಕ್ಷದಲ್ಲೂ ಉತ್ತಮ ಹುದ್ದೆಗಳು ಒಲಿದು ಬಂದವು. ಇನ್ನು ಅವರು ರಾಜಕೀಯಕ್ಕೆ ಬರುವ ಮುನ್ನ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಎಂಬುದು ನಿಮಗೆ ಗೊತ್ತಾ?
ಸ್ಮೃತಿ ಇರಾನಿ ವೃತ್ತಿಯಲ್ಲಿ ನಟಿಯಾಗಿ ಮೊದಲು ಪರಿಚಯವಾಗಿದ್ದವರು, ಬಳಿಕ ರಾಜಕೀಯ ನಂಟು ಬೆಳೆಸಿಕೊಂಡು ಚುನಾವಣೆಗೆ ಧುಮುಕಿದ್ದವರು. ಸದ್ಯ ಈಗ ಮತ್ತೆ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಮತ್ತೆ ಈಗ ಧಾರಾವಾಹಿಯಲ್ಲಿ ಮಿಂಚಲು ಮುಂದಾಗಿದ್ದಾರೆ. ಸ್ಮೃತಿ ಇರಾನಿ ಅವರ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ -2 ಧಾರವಾಹಿಯ ತುಳಸಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿನ ತುಳಸಿ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ಮೃತಿ ಇರಾನಿಯ ಹೊಸ ಅವತಾರ ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಕಿರುತೆರೆಯ ಕ್ವೀನ್ ಎಂದೇ ಹೆಸರಾಗಿರುವ ಏಕ್ತಾ ಕಪೂರ್ ಅವರ ಬ್ಯಾನರ್‌ನಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರವಾಹಿಯ ಪ್ರಮುಖ ಪಾತ್ರದಲ್ಲಿ ಸ್ಮೃತಿ ಇರಾನಿ ನಟಿಸಲಿದ್ದಾರೆ.
ಮಿಸ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಸ್ಮೃತಿ ಇರಾನಿ
ಸ್ಮೃತಿ ಇರಾನಿಯನ್ನು ನೀವು ರಾಜಕೀಯದಲ್ಲಿ ಮಾತ್ರ ನೋಡಿರಬಹುದು, ಆದ್ರೆ ಅವರು ಈ ಕ್ಷೇತ್ರಕ್ಕೆ ಆಗಮಿಸುವ ಮೊದಲು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡವರು. ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಆಗಮಿಸಿದ್ದ ಅವರು, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾದ ಅವರು ಫೈನಲ್ ಹಂತ ತಲುಪಿದ್ದರು.
ಈ ಸ್ಪರ್ಧೆಯ ಬಳಿಕ ಅವರು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು, ಹಾಗೆ ಕಿರುತೆರೆಗೂ ಕಾಲಿಟ್ಟರು. ಸ್ಮೃತಿ ಇರಾನಿ ನಟನಾ ಆಡಿಷನ್ ಅನ್ನು ಭೇದಿಸಿ ಏಕ್ತಾ ಕಪೂರ್ ಅವರ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿಯ ಧಾರಾವಾಹಿಯಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಇದೇ ಧಾರಾವಾಹಿ ವರ್ಷಗಳ ಕಾಲ ಮುಂದುವರೆದಿತ್ತು. ಅದರಲ್ಲಿನ ತುಳಸಿ ಪಾತ್ರ ಎಲ್ಲರ ಮನಗೆದ್ದಿತ್ತು. ಸ್ಮೃತಿ ಇರಾನಿಯನ್ನು ಎಲ್ಲರು ತುಳಸಿ ಎಂದೇ ಕರೆಯುವಷ್ಟು ಫೇಮಸ್ ಆಗಿದ್ದರು.
2001 ರಿಂದ 2005 ರವರೆಗೆ ಭಾರತೀಯ ದೂರದರ್ಶನ ಅಕಾಡೆಮಿಯಿಂದ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. 2000 ರ ದಶಕದಲ್ಲಿ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಚಿತ್ರದಲ್ಲಿ ತುಳಸಿ ಪಾತ್ರಕ್ಕಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ನಟನೆಯಲ್ಲಿದ್ದಾಗಲೇ ಚುನಾವಣೆ ಸ್ಪರ್ಧಿಸಿದರು. ಆದ್ರೆ ಚುನಾವಣೆ ಗೆಲ್ಲುವ ವಿಶ್ವಾದ ಇಲ್ಲದೇ ಇದ್ದ ಕಾರಣ ಧಾರಾವಾಹಿಯನ್ನು ಮಾಡುತ್ತಿದ್ದರು, ಆದ್ರೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಧಾರಾವಾಹಿಯಿಂದ ಹೊರ ನಡೆದರು.
ಸದ್ಯ ಈಗ ಮತ್ತೆ ಈ ಧಾರಾವಾಹಿಯ 2ನೇ ಭಾಗ ಆರಂಭವಾಗುತ್ತಿದ್ದು ಮತ್ತೆ ತುಳಸಿ ಪಾತ್ರದಲ್ಲಿ ಸ್ಮೃತಿ ಇರಾನಿ ನಟಿಸುತ್ತಿದ್ದಾರೆ. ಈಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡುತ್ತಿದ್ದು ವೈರಲ್ ಆಗುತ್ತಿದೆ. ಹಾಗೆ ಸ್ಮೃತಿ ಇರಾನಿಯನ್ನು ಈ ರೂಪದಲ್ಲಿ ಕಂಡು ಜನರು ಕೂಡ ಅಚ್ಚರಿಗೊಳಗಾಗಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರು ಜವಳಿ ಸಚಿವೆ, ಮಾಹಿತಿ ಮತ್ತು ಪ್ರಸಾರ ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಹಾಗೆ ಅಲ್ಪಸಂಖ್ಯಾತ ಯವಹಾರಗಳ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.



Click it and Unblock the Notifications
