Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಸ್ ಎಂ ಕೃಷ್ಣ ಅವರ ಕುಟುಂಬ, ರಾಜಕೀಯ ಜೀವನ ಹೇಗಿತ್ತು? ಅವರ ಹೆಜ್ಜೆಗುರುತುಗಳಿವು..!
ಕರ್ನಾಟಕದ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. 92 ವರ್ಷದ ಅವರು ಬಹಳ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು, ಇಂದು ರಾತ್ರಿ 3 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಂಡ್ಯದಿಂದ ಮುಖ್ಯಮಂತ್ರಿಯಾಗಿದ್ದ ಮೊದಲ ವ್ಯಕ್ತಿ ಕೃಷ್ಣ ಆಗಿದ್ದರು. ಹಾಗೆ ಹಲವು ಮೊದಲುಗಳಿಗೆ ಅವರು ಸಾಕ್ಷಿಯಾಗಿದ್ದು.
ಆಧುನಿಕ ಬೆಂಗಳೂರಿನ ಕನಸು ಕಂಡಿದ್ದ ಅವರು ಅದಕ್ಕಾಗಿ ಶ್ರಮಿಸಿದ್ದರು, ಬ್ರಾಂಡ್ ಬೆಂಗಳೂರು ಎಂಬ ಕನಸು ಕಂಡಿದ್ದೇ ಎಸ್. ಎಮ್ ಕೃಷ್ಣ ಅವರು. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್.ಎಂ.ಕೃಷ್ಣ ಅವರು ಕರ್ನಾಟಕದ 16ನೇ ಮುಖ್ಯಮಂತ್ರಿ ಆಗಿದ್ದರು. 4 ವರ್ಷ 230 ದಿನಗಳ ಕಾಲ ಅವರು ಸಿಎಂ ಆಗಿ ಅಧಿಕಾರ ನಡೆಸಿದ್ದರು.

ಎಸ್ ಎಂ ಕೃಷ್ಣ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932 ಮೇ 1 ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರಕ್ಕೆ ವಿದೇಶದಲ್ಲಿ ಅಧ್ಯಯನ ನಡೆಸುವ ಅವಕಾಶ ಸಿಕ್ಕಿತ್ತು. ವಿದೇಶದಲ್ಲಿ ವ್ಯಾಸಂಗ ನಡೆಸಿ ವಾಪಾಸಾದ ಅವರು ರಾಜಕೀಯದತ್ತ ಒಲವು ಹೊಂದಿದ್ದರು. ಅಮೆರಿಕದ ರಾಜಕೀಯವನ್ನು ಬಹಖ ಹತ್ತಿರದಿಂದ ನೋಡಿದವರಾಗಿದ್ದರು.
1966 ಏಪ್ರಿಲ್ 29 ರಂದು ಎಸ್.ಕೃಷ್ಣ ಅವರು ಪ್ರೇಮ ಅವರನ್ನು ವಿವಾಹವಾದರು. ಆ ಕಾಲದಲ್ಲಿಯೇ ಅದ್ದೂರಿತಕ್ಕೆ ಸಾಕ್ಷಿಯಾಗಿದ್ದ ವಿವಾಹ ಅದಾಗಿತ್ತು. ಬಳಿಕ ಮಾಳವಿಕ ಹಾಗೂ ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿಗೆ ಅವರು ತಂದೆಯಾದರು. ಮಾಳವಿಕ ಅವರು ಕಾಫಿ ಡೇ ಸಂಸ್ಥಾಪಕರಾಗಿದ್ದ ದಿ. ಸಿದ್ಧಾರ್ಥ್ ಅವರೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಶಾಂಭವಿ ಅವರನ್ನು ಉಮೇಶ್ ಎಂಬುವರ ಜೊತೆಗೆ ವಿವಾಹ ಮಾಡಿ ಕೊಡಲಾಗಿತ್ತು. ಉಮೇಶ್ ವಿದೇಶದಲ್ಲಿ ತಮ್ಮ ಉದ್ಯಮ ಹೊಂದಿರುವವರಾಗಿದ್ದಾರೆ.
1958 ರಂದು ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳಿದ್ದರು. ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ಬಳಿಕ ವಾಷಿಂಗ್‌ಟನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಮಾಡಲು ಮುಂದಾದರು ಆದ್ರೆ ಅದನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದೇ ಅಮೆರಿಕ ಭೇಟಿಯಲ್ಲಿ ಅವರು ರಾಜಕೀಯ ಪ್ರಭಾವಿತರಾದರು. ಜಾನ್.ಎಫ್.ಕೆನಡಿ ಅವರ ಪ್ರಭಾವಕ್ಕೆ ಒಳಗಾಗಿದ್ದ ಅವರು ವಿದ್ಯಾರ್ಥಿ ಜೀವನದಲ್ಲಿ ಪ್ರಚಾರಕ್ಕೆ ಧುಮುಕಿದ್ದರು.
ಹಾಗೆ ಭಾರತಕ್ಕೆ ಬಂದ ಅವರು ಮೊದಲು ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಹಲವು ಹುದ್ದೆ ಅಲಂಕರಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸುಮಾರು 10 ಚುನಾವಣೆ ಎದುರಿಸಿದರು. 6 ವಿಧಾನಸಭೆ ಚುನಾವಣೆಯಲ್ಲಿ ಅವರು 4 ರಲ್ಲಿ ಗೆಲುವು ಸಾಧಿಸಿದ್ದರು. ಲೋಕಸಭೆ ಚುನಾವಣೆಗೂ ಧುಮುಕಿದ್ದ ಅವರು 4 ರಲ್ಲಿ 3 ಚುನಾವಣೆ ಗೆದ್ದು ಬೀಗಿದ್ದರು. ಇದರಿಂದ ಕೇಂದ್ರ ಸಚಿವ ಸ್ಥಾನವೂ ಒಲಿದುಬಂದಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ವ್ಯವಹಾರಗಳ ಸಚಿವರಾಗಿಯೂ, 2004 ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಎಸ್.ಎಂ.ಕೃಷ್ಣ ನೇಮಕವಾಗಿದ್ದರು.
ಎಸ್ ಎಂ ಕೃಷ್ಣ ಅವರು ಸಿಎಂ ಆಗಿದ್ದ ವೇಳೆಯಲ್ಲಯೇ ನಟ ಡಾ.ರಾಜ್‌ಕುಮಾರ್ ಅವರ ಅಪಹರಣವಾಗಿತ್ತು. ಅವರನ್ನು ವೀರಪ್ಪನ್ ಅವರ ಹಿಡಿತದಿಂದ ಬಿಡಿಸುವಲ್ಲಿಯೂ ಇವರ ಕಾರ್ಯ ಮೆಚ್ಚುವಂತದ್ದು.



Click it and Unblock the Notifications