Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಚಿತ್ರದುರ್ಗದ ಕುಟುಂಬದ ಸಾವು ಬುರಾರಿ ಕುಟುಂಬದ 11 ಜನರ ಆತ್ಮಹತ್ಯೆಯನ್ನು ನೆನಪಿಸುತ್ತಿದೆ...
ಚಿತ್ರದುರ್ಗದ ಪಾಳುಬಿದ್ದ ಮನೆಯೊಂದರಲ್ಲಿ ಸಿಕ್ಕ 5 ಜನರ ಅಸ್ಥಿಪಂಜರ ರಾಜ್ಯ-ದೇಶದ ಗಮನ ಸೆಳೆದಿದೆ, ಒಂದೇ ಮನೆಯ 5 ಜನರು ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದು ಏಕೆ ಎಂಬ ಬಗ್ಗೆ ಅನೇಕ ಸಂಶಯಗಳು ಮೂಡುತ್ತಿವೆ, ಏನಾದರೂ ಮೂಢನಂಬಿಕೆಗೆ ಬಲಿಯಾದರೆ ಅಥವಾ ಹಣ, ಮತ್ತಿತರ ಕಾರಣಕ್ಕೆ ಬಲಿಯಾದರೆ ಹೀಗೆ ಅನೇಕ ರೀತಿಯಲ್ಲಿ ತನಿಖೆಯಾಗುತ್ತಿದೆ, ಈ ಸಾವು 2018ರಲ್ಲಿ ಬುರಾರಿ ಕುಟುಂದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ, ಬುರಾರಿ ಕುಟುಂಬದ ಒಂದೇ ಮನೆಯ 11 ಜನ ಮೂಢನಂಬಿಕೆಗೆ ಬಲಿಯಾಗಿದ್ದರು.

ಚಿತ್ರದುರ್ಗದ ಸಾವಿಗೂ, ಬೊರಾಲಿಯ 11 ಜನರ ಆತ್ಮಹತ್ಯೆಗೂ ಕೆಲವೊಂದು ಹೋಲಿಕೆಗಳಿಗೆ, ಚಿತ್ರದುರ್ಗದ ಸರ್ಕಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ನಾಥ್ ರೆಡ್ಡಿ, ಅವರ ಪತ್ನಿ ಪ್ರೇಮ, ಮಗಳು ತ್ರಿವೇಣಿ, ಗಂಡು ಮಕ್ಕಳಾದ ಕೃಷ್ಣ, ನರೇಂದ್ರ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಜಗನ್ನಾಥ್ ರೆಡ್ಡಿ ದಂಪತಿಯ ಮಕ್ಕಳಿಗೆ ಮದುವೆಯಾಗಿರಲಿಲ್ಲ, ಈ ಕುರಿತು ಅವರಿಗೆ ತುಂಬಾನೇ ಬೇಸರವಿತ್ತು, ಅಲ್ಲದೆ ಯಾರ ಜೊತೆಯೂ ಸಂಪರ್ಕದಲ್ಲಿ ಇರಲಿಲ್ಲ, ಕುಟುಂಬದವರ ಜೊತೆಯೂ ಸಂಪರ್ಕ ಕಡಿದುಕೊಂಡು 9 ವರ್ಷಗಳೇ ಕಳೆದಿತ್ತು, ಈ ಕುಟುಂಬ 2019ರಿಂದ ಯಾರ ಕಣ್ಣಿಗೂ ಬಿದ್ದಿಲ್ಲ, ಹಾಗಾಗಿ ಇವರು ಸಾವನ್ನಪ್ಪಿ 5 ವರ್ಷಗಳೇ ಕಳೆದಿದೆ ಎಂದು ಅಂದಾಜಿಸಲಾಗಿದೆ.
ಬೊರಾರಿ ಕುಟುಂಬದಲ್ಲಿನ 11 ಜನ ಕೂಡ ಮೂಢನಂಬಿಕೆಗೆ ಬಲಿಯಾದರು ಎಂದು ಹೇಳಲಾಗುತ್ತಿದೆ, ಮೋಕ್ಷ ಸಿಗುವುದು, ಜಗತ್ತು ಅಂತ್ಯವಾಗುತ್ತಿದೆ, ಸ್ವರ್ಗದ ಬಾಗಿಲು ನಮಗಾಗಿ ತೆರೆದಿದೆ, ತಂದೆಯ ಮಾತುಗಳು ನನಗೆ ಕೇಳಿಸುತ್ತಿದೆ, ಅವರು ನನ್ನ ಜೊತೆ ಮಾತನಾಡುತ್ತಾರೆ, ಅವರು ಆಲದ ಮರದಂತೆ, ನಾವೆಲ್ಲಾ ಅದರ ಕೊಂಬೆಗಳು ಎಂದು ಬರೆದಿತ್ತು, ಆ ವ್ಯಕ್ತಿಗೆ ಒಂದು ಅಪಘಾತವಾಗಿ ಮಾತಿನ ಶಕ್ತಿ ಕಳೆದುಕೊಂಡಿದ್ದರು, ಅವರು ಬರವಣಿಗೆ ಮೂಲಕ ಬೇರೆಯವರ ಜೊತೆಗೆ ತಮ್ಮ ಮಾತುಗಳನ್ನು ಹೇಳುತ್ತಿದ್ದರು, ಹಾಗಾಗಿ ಅವರ ಬರಹದಿಂದಾಗಿ ಈ ವಿಷಯಗಳು ತಿಳಿದುಬಂದಿದೆ. ಆಶ್ಚರ್ಯ ಎಂದರೆ ಎಲ್ಲರಿಗೂ ಒಳ್ಳೆಯ ವಿದ್ಯಾಭ್ಯಾಸ ಇತ್ತು, ಅವರಲ್ಲಿ ಒಬ್ಬ ಮಹಿಳೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅವರ ಮದುವೆ ಕೂಡ ನಿಶ್ಚಯವಾಗಿತ್ತು, ಅವರೆಲ್ಲಾ ಸಾಯುವ ಒಂದು ದಿನ ಮುಂಚೆ ಕಸಿನ್‌ಗೆ ಫೋನ್ ಮಾಡಿ ತನ್ನ ಮದುವೆ ಬಗ್ಗೆ ಹೇಳಿಕೊಂಡಿದ್ದಳು.
ಭೂಮಿ ಅಂತ್ಯವಾಗಲಿದೆ, ನಾವೆಲ್ಲಾ ಪಾರಾಗಲಿದ್ದೇವೆ ಎಂದು ನಂಬಿಸಿದ್ದ
ಆ ಕುಟುಂಬ ಮೂಢ ನಂಬಿಕೆಯನ್ನು ತುಂನಬಾನೇ ನಂಬುತ್ತಿತ್ತು, ಆ ಮನೆಯ 45 ವರ್ಷದ ನಾರಾಯಣ್ ಈ ಜಗತ್ತು ಅಂತ್ಯವಾಗುತ್ತಿದೆ ಎಂದು ತಂದೆ ನನಗೆ ಹೇಳಿದ್ದಾರೆ, ನಾವೆಲ್ಲಾ ಮೋಕ್ಷ ಪಡೆಯಲಿದ್ದೇವೆ ಎಂದು ನಂಬಿಸಿದ್ದ. ಸಾಯುವ ಮೊದಲು ಎಲ್ಲರೂ ತಾಯಿ ಕೈಯಿಂದ ರೋಟಿ ಸೇವಿಸಿದ್ದರು, ಆ ರೋಟಿಗಳನ್ನು ಸಮೀಪದ ಹೋಟೆಲ್‌ನಿಂದ ತರಲಾಗಿತ್ತು.
ಮನೆಯವರು ಎಲ್ಲರೂ ಆತ್ಮಹತ್ಯೆ ಮಾಡುವುದರ ಬಗ್ಗೆ ಮಾನಸಿಕ ತಜ್ಞರ ಅಭಿಪ್ರಾಯವೇನು?
ಆ ಕುಟುಂಬ ನಮ್ಮ ಬದುಕು ಮುಗಿಯಿತು, ನಮ್ಮಿಂದ ಇನ್ಮುಂದೆ ಇಂಥ ಪರಿಸ್ಥಿತಿ ಎದುರಿಸಲು ಸಾಧ್ಯವಿಲ್ಲ ಎಂದಾದಾಗ ಎಲ್ಲರೂ ಜೊತೆಯಾಗಿ ಸಾಯುವುದರ ಬಗ್ಗೆ ಯೋಚಿಸುತ್ತದೆ. ಸಾವು ಒಂದೇ ದಾರಿ ಎಂದು ಭಾವಿಸಿ ಜೊತೆಯಾಗಿ ಸಾಯಲು ತೀರ್ಮಾನಿಸುತ್ತಾರೆ.
ಚಿತ್ರದುರ್ಗದಲ್ಲಿ ನಡೆದಿರುವ ಘಟನೆಯಲ್ಲಿ ಮಕ್ಕಳಿಗೆ ಮದುವೆಯಾಗದೇ ಇರುವ ಕೊರಗು ಆ ಕುಟುಂಬದಲ್ಲಿತ್ತು ಇತ್ತು ಎಂಬುವುದು ಅವರ ಕುಟುಂಬಸ್ಥರು ಹೇಳುತ್ತಿರುವ ಮಾತುಗಳಿಂದ ತಿಳಿದು ಬರುತ್ತಿದೆ, ಒಂದು ಇಡೀ ಕುಟುಂಬ ಸಾವನ್ನಪ್ಪಿದರೂ ಹೊರಜಗತ್ತಿಗೂ ತಿಳಿಯಲು ಇಷ್ಟು ಸಮಯ ಬೇಕಾಯಿತು, ಅವರು ಸಾಯುವ ಮೊದಲೇ ಇಡೀ ಕುಟುಂಬಸ್ಥರು, ನೆರೆಹೊರೆಯವರಿಂದ ಸಂಪರ್ಕ ಕಡಿದುಕೊಂಡಿರುವುದರಿಂದ ಯಾರೂ ಇವರ ಬಗ್ಗೆ ವಿಚಾರಿಸುವವರೂ ಇರಲಿಲ್ಲ, ಎಷ್ಟೊಂದು ವಿಚಿತ್ರವಲ್ಲ...



Click it and Unblock the Notifications