Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಹನುಮಂತ ಮುಗ್ಧನಂತೆ ನಟಿಸುತ್ತಿದ್ದಾರಾ? ಏಕೆ ಈ ಸಂಶಯ ಗೊತ್ತಾ?
5-6 ವರ್ಷಗಳ ಹಿಂದಿನ ಮಾತು ಲುಂಗಿ-ಶರ್ಟ್ ಧರಿಸಿ ಒಬ್ಬ ಯುವಕ ಸರಿಗಮಪ ಸ್ಟೇಜ್‌ಗೆ ಬರ್ತಾನೆ,ಅವನ ಹಾಡು ಎಷ್ಟು ಮಂತ್ರ ಮುಗ್ಧಗೊಳಿಸುತ್ತೋ ಆತನ ಮುಗ್ಧತೆ ವೀಕ್ಷಕರನ್ನು ಸೂಜಿ ಗಲ್ಲಿನಂತೆ ಸೆಳೆಯಿತು.
ಹಳ್ಳಿಯ ಮುಗ್ಧತೆ, ಕುರಿಗಳನ್ನು ಬೇಯಿಸುತ್ತಿದ್ದ ಹುಡುಗನಿಗೆ ಈ ನಗರ, ಅಲ್ಲಿಯ ಭಾಷೆ, ಅಲ್ಲಿಯ ವೇಷ ಭೂಷಣ ಎಲ್ಲವೂ ಹೊಸತು... ಆತನ ಕಣ್ಣುಗಳಲ್ಲಿ ಆ ಅಚ್ಚರಿಯ ಬೆರಗು ಸ್ಪಷ್ಟವಾಗಿ ಕಾಣುತ್ತಿತ್ತು... ಒಂದೇ ದಿನದಲ್ಲಿ ಹನುಮಂತ ಎಂಬ ಅಪ್ಪಟ ಹಳ್ಳಿ ಪ್ರತಿಭೆ ಕನ್ನಡಿಗರ ಮನಸ್ಸಿನೊಳಗೆ ಭದ್ರ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದ... ಅದೇ ಹುಡುಗ ಬಿಗ್‌ಬಾಸ್ ಎಂಬ ದೊಡ್ಡ ವೇದಿಕೆಗೆ ಸ್ಪರ್ಧಿಯಾಗಿ ಬಂದಿದ್ದಾರೆ, ಇಲ್ಲಿಯೂ ನಾನು ಮುಗ್ಧ ಎಂಬಂತೆ ಕಾಣಿಸಲು ಪ್ರಯತ್ನಿಸಿರುವುದು ಮಾತ್ರ ಸ್ಪಷ್ಟವಾಗಿ ಕಾಣುತ್ತಿದೆ.


ಆಗ ಬಂದಾಗ ಇದ್ದ ಮುಗ್ಧತೆ ಈಗ ಇದೆ ಎಂದು ಬಿಂಬಿಸಲು ಹೊರಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ
ಹನುಮಂತ ಬಿಗ್‌ಬಾಸ್‌ಗೆ ಬರುವಾಗ ಈ ವೇದಿಕೆ ಬಗ್ಗೆ ಏನೂ ಗೊತ್ತೇ ಇಲ್ಲದೆ ಬಂದವರು ಅಂತೂ ಖಂಡಿತ ಅಲ್ಲ, ಬಿಗ್‌ಬಾಸ್ ಅಂದರೆ ಏನು? ಇಲ್ಲಿ ಸ್ಪರ್ಧೆ ಎಷ್ಟು ಕಠಿಣವಾಗಿರುತ್ತದೆ ಎಂಬುವುದು ಗೊತ್ತಿರುತ್ತದೆ, ವೇದಿಕೆಗೆ ಬಂದ ಮೊದಲ ದಿನವೇ ತಾನು ಅತಿ ಮುಗ್ಧ ಎಂದು ಬಿಂಬಿಸಲು ಪ್ರಯತ್ನ ಹಾಕಿದ್ದಾರೆ, ಅದು ಬೇಡವಿತ್ತೇನೋ... ಇದರಲ್ಲಿಯೇ ಸ್ವಲ್ಪ ಫೇಕ್ ಆಗಿ ಕಾಣಲಾರಂಭಿಸಿದ್ದಾರೆ.
ಅಂದು ಕಂಡ ಹನುಮಂತ ಅಂತು ಅಲ್ವೇ ಅಲ್ಲ ಈಗೀನ ಹನುಮಂತ
ಮಕ್ಕಳು ಕೂಡ ವರ್ಷಗಳು ಕಳೆಯುತ್ತಿದ್ದಂತೆ ಅವರ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ, ನಾವು-ನೀವೆಲ್ಲಾ ಅಷ್ಟೇ ಪ್ರತಿಯೊಂದು ಜಾಗಕ್ಕೆ ಹೋದಾಗ, ಹೊಸದೊಂದು ಕೆಲಸ ಮಾಡಿದಾಗ ಹೊಸ ಅನುಭವಗಳನ್ನು ಕಲಿಯುತ್ತೇವೆ, ಅವೆಲ್ಲಾ ನಮ್ಮ ಮೇಲೆ ಪ್ರಭಾವ ಬೀರುವುದು. ಹನುಮಂತ ಕಿರುತೆರೆ ಲೋಕಕ್ಕೆ ಬಂದು 5 ವರ್ಷಗಳು ಕಳೆದಿದೆ, ಹಾಡಿನ ಸ್ಪರ್ಧೆ ಬಳಿಕ ಡ್ಯಾನ್ಸ್, ಇನ್ನಿತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನಗೆ ಗೊತ್ತಿರದ ಪ್ರಪಂಚ ನೋಡಿದ್ದಾರೆ, ಹೊಸ ವಿಷಯಗಳನ್ನು ಅರಿತುಕೊಂಡಿದ್ದಾರೆ ಹಾಗಾಗಿ ಹನುಮಂತ ಒಳ್ಳೆಯವರಿರಬಹುದು ಆದರೆ ಅತಿ ಮುಗ್ಧ ಅಂತು ಅಲ್ವೇ ಅಲ್ಲ....
ಮುಗ್ಧತೆ ಪಟ್ ಅಂತ ಗುರುತಿಸಬಹುದು, ಲಾಯರ್ ಜಗದೀಶ್‌ರಲ್ಲಿ ಮುಗ್ಧತೆ ಇರ್ಲಲ್ವಾ?
ಲಾಯರ್ ಜಗದೀಶ್ ಅಂತ ವ್ಯಕ್ತಿಯಲ್ಲಿ ಒಂದು ಮುಗ್ಧತೆಯೂ ಇದೆ ಎಂದು ತೋರಿಸಿಕೊಟ್ಟಿದ್ದು ಬಿಗ್‌ಬಾಸ್ ವೇದಿಕೆ. ಅವರ ಕಿರುಚಾಟ, ಅರಚಾಟ, ವಾದ ಇವುಗಳ ಆಚೆಗೆ ಒಂದು ಮುಗ್ಧತೆ ಇತ್ತು, ಆ ಮುಗ್ಧತೆ ಹಲವಾರು ಬಾರಿ ಕಂಡು ಬಂದಿತ್ತು, ಹಾಗಾಗಿ ಜನ ಆ ಮುಗ್ಧತೆಯನ್ನು ತುಂಬಾ ಇಷ್ಟಪಟ್ಟಿದ್ದರು.
ಏನೂ ಗೊತ್ತಿಲ್ಲದವನಂತೆ ಮಾತನಾಡಿದರೆ ಒಪ್ಪಿಕೊಳ್ಳಲು ವೀಕ್ಷಕರೇನು ದಡ್ಡರೇ?
ವೀಕ್ಷಕರು ತಮ್ಮ ಸಮಯವನ್ನು ಬಿಗ್‌ಬಾಸ್ ನೋಡಲು ಕೊಡುತ್ತಿದ್ದಾರೆ ಎಂದ ಮೇಲೆ ಅವರಿಗೆ ಅದರೊಳಗಿನ ವ್ಯಕ್ತಿಗಳು ಕೂಡ ಯಾರು ಹೇಗೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗಿರುತ್ತದೆ. ಹನುಮಂತ ಅವರು ಬಿಗ್‌ಬಾಸ್ ಮನೆಗೆ ಬಂದ ತಕ್ಷಣ ಬಿಗ್‌ಬಾಸ್ ಜೊತೆ ಮುಗ್ಧನಂತೆ ಮಾತನಾಡಿದ್ದು, ನನ್ನ ಬಗ್ಗೆ ನೀಡಿ ಇಂಡ್ರೋಡಕ್ಷನ್ ಯಾವುದರಲ್ಲಿಯೂ ಮುಗ್ಧತೆ ಇರಲಿಲ್ಲ, ನಾನು ಮುಗ್ಧ ಎಂಬಂತೆ ಬಿಂಬಿಸಲು ಪ್ರಯತ್ನ ಹಾಕಿರುವುದು ಕಾಣುತ್ತೆ. ಬದುಕು ಜೀವನದ ಪಾಠ ಕಲಿಸುತ್ತೆ ಅಂತಾರೆ... 5 ವರ್ಷಗಳಿಂದ ಈ ರಿಯಾಲಿಟಿ ಶೋಗಳಲ್ಲಿ ತುಂಬಾ ಸಮಯ ಕಳೆದಿರುವ ಹನುಮಂತನಿಗೆ ಈಗ ಹೊರ ಪ್ರಪಂಚದ ಜ್ಞಾನ ತುಂಬಾನೇ ಚೆನ್ನಾಗಿದೆ. ಹಾಗಾಗಿ ಕುರಿ ಕಾಯುವ ಮುಗ್ಧನಲ್ಲ, ಬಿಗ್‌ಬಾಸ್‌ನಲ್ಲಿ ಬದುಕುವ ಗಟ್ಟಿತನ ಈಗ ಅವರಲ್ಲಿ ಖಂಡಿತ ಇದೆ.
ಬಿಗ್‌ಬಾಸ್‌ನಲ್ಲಿ ತಂತ್ರಗಾರಿಕೆ ಬಳಸಿ ಮಾಡು ಟಾಸ್ಕ್‌ಗಳು ಕಷ್ಟವಾಗಬಹುದೇನೋ,ಆದರೆ ಬಿಗ್‌ಬಾಸ್ ಕಷ್ಟವಾಗಲ್ಲ ಜಗಳ, ಕಿರುಚಾಟ ಇವುಗಳಿಗೆ ಹೆದರುವ ವ್ಯಕ್ತಿಯಲ್ಲ ಹೇಮಂತ, ಆದರೆ ಕೆಲವೊಂದು ನಿರ್ಧಾರಗಳನ್ನು ಮಾಡುವಾಗ ಏಕೆ ಹೀಗೆ ಮಾಡಿದೆ? ಎಲ್ಲರು ಮುಗಿಬಿದ್ದರೆ ಕಷ್ಟವಾಗಬಹುದು, ಅದುಬಿಟ್ಟು ದೈಹಿಕ ಟಾಸ್ಕ್ ಮಾಡುವ ಸಾಮರ್ಥ್ಯ ಹನುಮಂತನಲ್ಲಿದೆ, ಬುದ್ಧಿವಂತಿಕೆಯೂ ಇದೆ. ಯಾರು ಹೇಗೆ ಎಂದು ಅರಿತುಕೊಳ್ಳುವ ಸಾಮರ್ಥ್ಯವಿದೆ.
ಈಗ ಬಿಗ್‌ಬಾಸ್ ನೀಡುತ್ತಿರುವ ಟಾಸ್ಕ್‌ಗಳಿಂದಾಗಿ ಹನುಮಂತನಿಗೆ ತುಂಬಾ ಸಮಯ ನಾಟಕವಾಡಲು ಸಾಧ್ಯವಾಗಲ್ಲ ಎಂಬುವುದು ದಿಟ, ಹನುಮಂತನ ನಿಜವಾದ ಆಟ ಬೇಗ ಶುರುವಾಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ...



Click it and Unblock the Notifications