Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಆ ದೇವಾಲಯದಲ್ಲಿ 45 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿದ್ದ ಮೂರೂ ದೀಪಗಳು ನಂದಿವೆ: ನಿಗೂಢವಾಗಿಯೇ ಉಳಿದ ರಹಸ್ಯಗಳು
ಉತ್ತರ ಕನ್ನಡ ಜಿಲ್ಲೆಯ ಚಿಗಳ್ಳಿ ಗ್ರಾಮದಲ್ಲಿರುವ ದೀಪನಾಥೇಶ್ವರ ದೇವಾಲಯದಲ್ಲಿರುವ 3 ದೀಪಗಳು ಆರಿ ಹೋಗಿವೆ, ಇದರಲ್ಲೇನು ವಿಶೇಷ ಎಂದು ಕೇಳುವುದಾದರೆ ಈ ದೀಪಗಳು ಕಳೆದ 45 ವರ್ಷದಿಂದ ನಿರಂತರವಾಗಿ ಉರಿಯುತ್ತಿರುವ ದೀಪಗಳಾಗಿವೆ, 45 ವರ್ಷದ ಹಿಂದೆ ಬೆಳಗಿದ ದೀಪಗಳು ಈಗಲೂ ಉರಿಯುತ್ತಲೇ ಇತ್ತು,ಅಂಥ ಪವಾಡ ಮೂರೂ ದೀಪಗಳು ನಂದಿ ಹೋಗಿವೆ!

ನಂದಾ ದೀಪಗಳು ನಂದಿ ಹೋಗಿರುವುದರಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ
ಈ ಮೂರು ದೀಪಾಗಳನ್ನು ಪವಾಡ ದೀಪಾವೆಂದು ಕರೆಯಲಾಗಿತ್ತು. ಈ ದೀಪಗಳಿಗೆ ಸೀಮೆಯೆಣ್ಣೆ ಹಾಕಿ ಉರಿಸಲಾಗಿತ್ತು, ಆದೀಪಗಳು ನಿರಂತರವಾಗಿ ಉರಿಯುತ್ತಲೇ ಇತ್ತು, ಎಣ್ಣೆ, ಬತ್ತಿ ಮುಗಿದ ಮೇಲೆ ದೀಪ ಆರಲೇಬೇಕಲ್ಲ, ಆದರೆ ಈ ದೀಪಗಳು ನಿರಂತರವಾಗಿ ಉರಿಯುತ್ತಲೇ ಇತ್ತು. ಈ ದೀಪಗಳ ಪವಾಡ ನೋಡಲೆಂದೇ ದೂರದ ಊರುಗಳಿಗೆ, ಬೇರೆ ರಾಜ್ಯಗಳಿಂದ ಜನರು ಬರುತ್ತಿದ್ದರು, ಈ ಪವಾಡ ಕೇಳಿ ವಿದೇಶಿಗರು ಕೂಡ ಭೇಟಿ ನೀಡುತ್ತಿದ್ದರು. ಏಕೆ ಈ ದೀಪಗಳು ಕೆಡುತ್ತಿಲ್ಲ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ತರ್ಕಗಳು ಇರಲಿಲ್ಲ, ಇವೆಲ್ಲಾ ದೈವ ಪವಾಡವೆಂದು ಆಸ್ತಿಕರು ಬಲವಾಗಿ ನಂಬಿದರೆ ನಾಸ್ತಿಕರಿಗೆ ಕೊಡುವುದಕ್ಕೆ ಯಾವುದೇ ಕಾರಣ ಕೂಡ ಸಿಕ್ಕಿರಲಿಲ್ಲ, ಅಂಥ ಪವಾಡ ದೀಪಗಳು ಫೆಬ್ರವರಿ 5ಕ್ಕೆ ನಂದಿವೆ, ಇದು ಮುಂಬರುವ ಯಾವ ಅಪಾಯ ಸೂಚನೆಯಾಗಿರಬಹುದು? ಎಂದು ಆ ಗ್ರಾಮದ ಜನರಲ್ಲಿ ಆತಂಕ ಉಂಟು ಮಾಡಿದೆ.
ಈ ದೀಪದ ಇತಿಹಾಸವೇನು?
ಈ ದೀಪವನ್ನು 1979ರಲ್ಲಿ ಚಿಗಳ್ಳಿ ಗ್ರಾಮದವರಾದ ಶಾರದಮ್ಮ ದೈವಜ್ಞ ಎಂಬುವರು ಹಚ್ಚಿದರು. ಅವರು ಲಾಟೀನ್ ದೀಪಕ್ಕೆ ಸೀಮೆಯೆಣ್ಣೆ ಹಾಕಿ ಹಚ್ಚಿಟ್ಟರು, ಮಾರನೇಯ ದಿನ ನೋಡಿದರೆ ಆ ದೀಪ ಉರಿಯುತ್ತಲೇ ಇತ್ತು, ಅದು ಒಂದು ರೀತಿಯ ಅಚ್ಚರಿಗೆ ಕಾರಣವಾಯ್ತು, ನೋಡಿದರೆ ಆ ದೀಪ ಕೆಡಲೇ ಇಲ್ಲ, ಆವಾಗ ಆ ಗ್ರಾಮಸ್ಥರು ಇದು ದೈವ ಪವಾಡವಲ್ಲದೆ ಮತ್ತೇನೂ ಅಲ್ಲ ಎಂದು ಬಲವಾಗಿ ನಂಬಿದರು, ಹದಿನೈದು ದಿನವಾದರೂ ಈ ದೀಪ ಕೆಡದಿದ್ದಾಗ ಮತ್ತೊಂದು ದೀಪ ಹಚ್ಚಿದರು, ಅದು ಕೂಡ ಕೆಡಲಿಲ್ಲ, ಮತ್ತೊಂದು ಲಾಟೀನ್ ದೀಪ ಹಚ್ಚಿಟ್ಟರು, ಒಟ್ಟು ಮೂರು ದೀಪಗಳು ಆ ಕಾಲದಿಂದಲೂ ಉರಿಯುತ್ತಲೇ ಬಂದಿತ್ತು.
ಈ ದೀಪಗಳನ್ನು ಪೂಜಿಸಲಾಗುತ್ತಿತ್ತು, ಕೆಲವು ವರ್ಷಗಳಾದ ಮೇಲೆ ಶಾರದಮ್ಮ ತೀರಿ ಹೋದರು, ನಂತರ ಶಾರದಮ್ಮನವರ ಸಂಬಂಧಿಕರು ಇದನ್ನು ನೋಡಿ ನಡೆಸಿಕೊಂಡು ಬರುತ್ತಿದ್ದರು. ಇತ್ತೀಗಷ್ಟೇ ಹೊಸ ದೇವಾಲಯ ಕೂಡ ನಿರ್ಮಾಣವಾಗಿತ್ತು.
ಮೂರೂ ದೀಪಗಳು ನಂದಿವೆ
ಈಗ ಅಚ್ಚರಿ, ಆತಂಕೆಂಬಂತೆ ಮೂರಕ್ಕೆ ಮೂರೂ ದೀಪಗಳು ನಂದಿವೆ. ಒಂದು ದೀಪವಾದರೆ ಇನ್ನು ಯಾವುದೋ ಕಾರಣ ನೀಡಬಹುದಿತ್ತು, ಆದರೆ ಮೂರು ದೀಪಗಳು ಈ ರೀತಿ ನಂದಿ ಹೋಗಲು ಕಾರಣವೇನು? ಎಮತ ಗಾಳಿ ಬರಲಿ, ಮಳೆ ಬರಲಿ ಈ ದೀಪಗಳು ನಂದಿರಲಿಲ್ಲ, ಆದರೆ ಈಗ ನಂದಿ ಹೋಗಿವೆ.
ದೀಪನಾಥೇಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ವೆಂಕಟೇಶ ರಾಯ್ರ ಎಂಬವರು ಜನವರು 23ಕ್ಕೆಮರಣವನ್ನಪ್ಪಿದ್ದರು. ಸೂತಕ ಕಾರಣ ಗರ್ಭಗುಡಿ ಬಾಗಿಲು ಮುಚ್ಚಲಾಗಿತ್ತು, ತೆರೆದು ನೋಡಿದಾಗ ಮೂರೂ ದೀಪಗಳು ಆರಿ ಹೋಗುವೆ.
ಹೋಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ
ದೀಪಗಳು ಆರಿ ಹೋಗಿರುವುದರಿಂ ಸಹಜವಾಗಿಯೇ ಭಕ್ತರಲ್ಲಿ ಆತಂಕ ಉಂಟು ಮಾಡಿದರೆ, ಆದರೆ ಯಾರೂ ಆತಂಕ ಪಡಬೇಡಿ, ಪರಿಹಾರ ಕ್ರಮ, ಹೋಮಗಳನ್ನು ಮಾಡಿ ಯಾವುದೇ ದೋಷ ಬರದಂತೆ ತಡೆಯುವ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ನಿಗೂಢ ರಹಸ್ಯ ನಿಗೂಢವಾಗಿಯೇ ಉಳಿಯಿತು
ಏಕೆ ಆ ಸೀಮೆಯೆಣ್ಣೆಯ ಲಾಟೀನ್ ದೀಪಗಳು ಇಷ್ಟು ವರ್ಷ ಉರಿಯಿತು ಎಂಬ ಕಾರಣ ನಿಗೂಢ ಅದರಂತೆ ಏಕೆ ಆರಿ ಹೋಯ್ತು ಎಂಬ ಕಾರಣವೂ ನಿಗೂಢ, ಇಲ್ಲಿಯ ಪವಾಡ ಮಾತ್ರ ಸತ್ಯ.



Click it and Unblock the Notifications