Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೀಗೆ ನಡೆದುಕೊಂಡರೆ ದುರ್ಗೆ ನಿಮ್ಮ ಸಕಲ ಕಷ್ಟ ನಿವಾರಿಸುತ್ತಾಳೆ
ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರಯಂಬಕೇ ಗೌರೀ, ನಾರಾಯಣಿ ನಮೋಸ್ತುತೇ||
ದುರ್ಗೆ ಮಾತೆ.... ನಮ್ಮನ್ನು ಕಾಪಾಡು, ಸದಾ ನಿನ್ನ ರಕ್ಷಣೆ ನಮಗಿರಲಿ ಎಂದು ಬೇಡುತ್ತೇವೆ. ದುರ್ಗೆ ದುಷ್ಟರಿಗೆ ತಕ್ಕ ಶಾಸ್ತಿ ಕಲಿಸುತ್ತಾಳೆ, ಶಿಷ್ಟರನ್ನು ಬೆಳೆಸುತ್ತಾರೆ. ಶಿಷ್ಟರನ್ನು ರಕ್ಷಿಸುವ ಶಕ್ತಿ ಸ್ವರೂಪಿಣಿ ದುರ್ಗಾ ದೇವಿ.

ದುರ್ಗೆಯನ್ನು ಯಾರು ಭಕ್ತಿಯಿಂದ ಆರಾಧಿಸುತ್ತಾರೋ ಅವರನ್ನು ಅವಳು ಸದಾ ರಕ್ಷಣೆ ಮಾಡುತ್ತಾಳೆ ಎಂಬುವುದು ಅವಳ ಭಕ್ತರ ಅಚಲ ನಂಬಿಕೆ.
ದುರ್ಗೆಯನ್ನು ಪೂಜೆಯಿಂದ ಮಾತ್ರವಲ್ಲ ನಮ್ಮ ನಡವಳಿಕೆಯಿಂದಲೂ ಒಲಿಸಿಕೊಳ್ಳಬಹುದು. ನಾವು ಯಾವ ರೀತಿ ನಡೆದುಕೊಂಡರೆ ಶ್ರೀ ದುರ್ಗೆಯ ಕೃಪೆಗೆ ಪಾತ್ರರಾಗಬಹುದು ಎಂದು ನೋಡೋಣ ಬನ್ನಿ:
ಮಂಗಳವಾರ, ಶುಕ್ರವಾರ ಸಾತ್ವಿಕ ಆಹಾರ ಸೇವಿಸಿ
ನಮ್ಮ ಮನಸ್ಸು ಹಾಗೂ ದೇಹ ಎರಡನ್ನೂ ಶುದ್ಧವಾಗಿಟ್ಟುಕೊಳ್ಳಬೇಕು. ಆದ್ದರಿಂದ ಈ ದಿನ ಸಾತ್ವಿಕ ಆಹಾರಗಳನ್ನು ಸೇವಿಸಿ. ಸಾತ್ವಿಕ ಆಹಾರ ಎಂದರೆ ಈರುಳ್ಳಿ-ಬೆಳ್ಳುಳ್ಳಿ ಸೇರಿಸಬಾರದು. ಹಾಲು-ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಈ ಎರಡು ದಿನ ಉಪವಾಸವಿದ್ದು ದೇವಿಯನ್ನು ಆರಾಧಿಸಿ.
ಒಳ್ಳೆಯ ಆಲೋಚನೆಗಳಿರಲಿ: ಯಾರಿಗೆ ಕೆಟ್ಟ ಆಲೋಚನೆಗಳಿರುತ್ತದೋ ಅವರಿಂದ ದುರ್ಗೆ ದೂರವಿರುತ್ತಾಳೆ. ಆದ್ದರಿಂದ ಕೆಟ್ಟ ಆಲೋಚನೆಯಲ್ಲಿ ಶಕ್ತಿಯನ್ನು ವ್ಯಯಗೊಳಿಸಬೇಡಿ. ಒಳ್ಳೆಯದನ್ನೇ ಆಲೋಚಿಸಿ, ನಾಲ್ಕು ಜನರಿಗೆ ಒಳ್ಳೆಯದು ಮಾಡಿ.
ಒಳ್ಳೆಯ ಸಂಗ ನಿಮ್ಮದಿರಲಿ
ನಾವು ಯಾರ ಜೊತೆ ಸ್ನೇಹ ಬೆಳೆಸುತ್ತೇವೆ ಎಂಬುವುದು ಕೂಡ ಮುಖ್ಯ. ಕೆಟ್ಟ ಆಲೋಚನೆಗಳಿರುವ ವ್ಯಕ್ತಿ ಜೊತೆ ಸೇರಿದರೆ ಅವರಿಂದ ನಮಗೂ ಕೆಟ್ಟ ಹೆಸರು ಬರುವುದು. ನೀವು ಒಳ್ಳೆಯವರಾಗಿರಿ, ಒಳ್ಳೆಯವರ ಜೊತೆ ಮಾತ್ರ ಸೇರಿ.
ಬೇರೆಯವರನ್ನು ಬೈಯ್ಯುವುದು, ಹೀಯಾಳಿಸುವುದು ಮಾಡಬೇಡಿ
ಬೇರೆಯವರನ್ನು ಬೈಯ್ಯುವುದರಿಂದ, ಹೀಯಾಳಿಸುವುದರಿಂದ ಅದರ ಶಾಪ ನಮಗೇ ತಟ್ಟುತ್ತದೆ, ಆದ್ದರಿಂದ ಯಾರು ದುರ್ಗೆಯನ್ನು ಒಲಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೋ ಅವರ ವರ್ತನೆಯೂ ಹೀಗಿರಬೇಕು.
ಮಾತು ಮೃದುವಾಗಿರಲಿ
ತುಂಬಾ ಜೋರಾಗಿ ಕಿರುಚಾಡುವುದು, ಕಠೋರ ಬದಗಳನ್ನು ಬಳಸುವುದು ಇಂಥವರ ಬಳಿ ಇರಲು ದುರ್ಗೆ ಇಷ್ಟಪಡುವುದಿಲ್ಲ. ಮಾತು ಮೃದುವಾಗಿರಲಿ, ನಡತೆ ಸ್ವಚ್ಛವಾಗಿರಲಿ.
ಕ್ಷಮಿಸುವ ಗುಣವಿರಲಿ, ಫಲಾಪೇಕ್ಷವಿಲ್ಲದೆ ಒಳ್ಳೆಯ ಕಾರ್ಯ ಮಾಡಿ
ಕ್ಷಮಿಸುವ ಗುಣವಿರುವ ವ್ಯಕ್ತಿ ದೇವರ ಸಮಾನ. ಅಲ್ಲದೆ ಯಾರಿಗಾದರೂ ಸಹಾಯ ಮಾಡುವಾಗ ಅವರಿಂದ ಏನೂ ಫಲ ನಿರೀಕ್ಷೆ ಮಾಡದೆ ಸಹಾಯ ಮಾಡಿ. ಹೀಗೆ ಮಾಡುವುದರಿಂದ ಶ್ರೀ ದುರ್ಗೆಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.
ದುರ್ಗೆಗೆ ಸಂಪೂರ್ಣ ಶರಣಾಗಿ
ನನ್ನಲ್ಲಿ ಏನಿದೆ, ಎಲ್ಲವೂ ನಿನ್ನದೆ, ನಿನ್ನ ಅನುಗ್ರಹವೊಂದಿದ್ದರೆ ಸಾಕು ಎಂದು ಶ್ರೀದುರ್ಗೆಗೆ ಸಂಪೂರ್ಣ ಶರಣಾಗಿ. ಹೀಗೆ ಮಾಡುವುದರಿಂದ ದುರ್ಗೆ ಕೃಪೆಯಿಂದಾಗಿ ಬದುಕಿನಲ್ಲಿ ತುಂಬಾ ಒಳಿತಾಗುವುದು.
ಈ ಮಂತ್ರಗಳನ್ನು ಪಠಿಸಿ
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ಈ ಮಂತ್ರ ಪಠಿಸುವುದರಿಂದ ಪೂಜೆಯಲ್ಲಿ ಧ್ಯಾನ ಹೆಚ್ಚುವುದು.
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್‌ಮನ್
ಈ ಮಂತ್ರ ಪಠಿಸುವುದರಿಂದ ದುರ್ಗೆ ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾಳೆ.
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್‌ಮುಕ್ತೊ ಧನ ಧ್ಯಾನ ಸುತನ್‌ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‌ಶಯಃ
ಸರ್ವ ಬಾಧೆ ಅಂದರೆ ಕಾಯಿಲೆಗಳು, ಮಾನಸಿಕ ತೊಂದರೆ ಮತ್ತಿತರ ಸಮಸ್ಯೆಗಳು ದೂರಾಗುವುದು.
ದುರ್ಗಾ ದುಸ್ವಪ್ನ ನಿವಾರಣೆ ಮಂತ್ರ
ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ
ಗೃಹ ಪೀಡಸು ಚೊಗ್ರಾಸು ಮಹಾತ್ಮಯಾನ್ ಶ್ರೀನು ಯಾನ್‌ಮಮ್
ಈ ಮಂತ್ರ ಪಠಿಸುವುದರಿಂದ ಕೆಟ್ಟ ಆಲೋಚನೆ, ಕೆಟ್ಟ ಸ್ವಪ್ನಗಳು ದೂರಾಗುವುದು. ಮನಸ್ಸಿಗೆ ಧೈರ್ಯ ಸಿಗುವುದು.



Click it and Unblock the Notifications

