Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಊಟಕ್ಕೆ ಕುಳಿತಿರುವಾಗ ಅನ್ನಪೂರ್ಣೆಗೆ ಅವಮಾನ ಮಾಡಬಾರದು ಅನ್ನೋದು ಇದೇ ಕಾರಣಕ್ಕೆ !
ನಾವು ಆರೋಗ್ಯವಾಗಿ ಇರಬೇಕೆಂದರೆ ಆಹಾರವನ್ನು ಸೇವಿಸೋದು ತುಂಬಾನೇ ಮುಖ್ಯ. ಇತ್ತೀಚಿಗೆ ಜಂಕ್ ಫುಡ್‌ಗಳನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡುಕೊಳ್ಳುತ್ತಿರೋರು ಒಂದು ಕಡೆಯಾದರೆ. ಮತ್ತೊಂದು ಕಡೆಯಿಂದ ಮನೆಯಲ್ಲಿ ಆಹಾರವನ್ನು ಸೇವಿಸಿದರೂ ಕೂಡ ತರಾತುರಿಯಲ್ಲಿ ತಿಂದು ಹೋಗುವವರು ಇದ್ದಾರೆ. ಇದು ಸರಿಯಾದ ವಿಧಾನ ಅಲ್ಲ.
ನಮ್ಮ ಶಾಸ್ತ್ರ ಹಾಗೂ ಸಂಪ್ರದಾಯದಲ್ಲಿ ಅನ್ನಪೂರ್ಣೆಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ನಾವು ಊಟ ಮಾಡುವ ವಿಧಾನ ಸರಿಯಾಗದೇ ಇದ್ದರೆ ಅದು ಅನ್ನಪೂರ್ಣೆಗೆ ಅವಮಾನಿಸಿದಂತಾಗುತ್ತಂತೆ. ಊಟ ಮಾಡಲು ಕುಳಿತಿರಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಹಾಗಾದ್ರೆ ನಾವು ಊಟ ಮಾಡುವಾಗ ಯಾವ ವಿಧಾನಗಳನ್ನು ಪಾಲಿಸಬೇಕು ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

1. ನೆಲದ ಮೇಲೆ ಕುಳಿತುಕೊಳ್ಳೋದಕ್ಕೆ ಅಭ್ಯಾಸ ಮಾಡಿ
ನಮ್ಮ ಪೂರ್ವಜರು ನೆಲದ ಮೇಲೆ ಕುಳಿತು ಮೂರು ಹೊತ್ತು ತಿನ್ನುತ್ತಿದ್ದರು ಆದರೆ ಈಗಿನವರಿಗೆ ನೆಲದಲ್ಲಿ ಕುಳಿತುಕೊಂಡು ಊಟ ಮಾಡುವಷ್ಟು ತಾಳ್ಮೆಯಂತೂ ಖಂಡಿತ ಇಲ್ಲ. ಆದರೆ ದಿನಕ್ಕೆ ಒಂದು ಬಾರಿಯಾದರೂ ನೆಲದ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ತುಂಬಾನೇ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೆಲದ ಮೇಲೆ ಕಾಲು ಮಡಿಚಿ ಕುಳಿತು ಊಟ ಮಾಡಬೇಕಂತೆ.
ಹೀಗೆ ನೆಲದ ಮೇಲೆ ಕಾಲು ಮಡಚಿ ಕುಳಿತು ಊಟ ಮಾಡೋದ್ರಿಂದ ಹೊಟ್ಟೆಯ ಭಾಗಕ್ಕೆ ನೇರವಾಗಿ ರಕ್ತ ಸಂಚಾರವಾಗುತ್ತಂತೆ. ಅಷ್ಟೇ ಅಲ್ಲ, ಜೀರ್ಣ ಕ್ರಿಯೆಗೂ ಇದು ತುಂಬಾನೇ ಒಳ್ಳೆಯದು. ಇನ್ನೂ ಸಾಧ್ಯವಾದರೆ ಬಾಳೆಯ ಎಲೆಯನ್ನೇ ಊಟಕ್ಕೆ ಬಳಸಿ. ವೈಜ್ಞಾನಿಕವಾಗಿಯೂ ಕೂಡ ಬಾಳೆಯ ಎಲೆಯಲ್ಲಿ ಊಟ ಮಾಡೋದ್ರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತಂತೆ.
2. ಮೌನವಾಗಿ ಊಟ ಮಾಡಿ
ನಿಮ್ಮ ಮನೆಯಲ್ಲಿ ಅಜ್ಜ- ಅಜ್ಜಿ ಇದ್ರೆ ಖಂಡಿತ ನಿಮಗೆ ಗೊತ್ತಿರುತ್ತದೆ. ನಾವು ಊಟ ಮಾಡಬೇಕಾದರೆ ಮಾತನಾಡಿದರೆ ಅಜ್ಜ- ಅಜ್ಜಿ ಬೈಯುತ್ತಿದ್ದರು. ಮಾತನಾಡದೇ ಮೌನವಾಗಿ ತಿಂದು ಎದ್ದೇಳಿ ಎಂದು ಹೇಳುತ್ತಿದ್ದರು. ಇತ್ತೀಚಿಗೆ ಹೆಚ್ಚಿನವರು ಯಾರು ಕೂಡ ಮೌನವಾಗಿ ತಿನ್ನೋದೇ ಇಲ್ಲ. ಯಾರ ಜೊತೆಗಾದರೂ ಮಾತನಾಡುತ್ತಿರುತ್ತಾರೆ. ಇಲ್ಲವಾದರೆ ಟಿವಿ, ಮೊಬೈಲ್, ಟ್ಯಾಪ್‌ಟಾಪ್, ಪುಸ್ತಕ ಯಾವುದಾರೂ ಒಂದು ಹತ್ತಿರ ಇರಲೇಬೇಕು. ಇಲ್ಲದಿದ್ದರೆ ಗಂಟಲಿನಿಂದ ಅನ್ನ ಇಳಿಯೋದೇ ಇಲ್ಲ.
ಆದರೆ ಈ ರೀತಿ ಮಾಡೋದು ತಪ್ಪು. ಒಂದು ಸಾರಿ ಊಟಕ್ಕೆ ಕುಳಿತರೆ ನಾವು ಊಟವನ್ನು ಪೂರ್ತಿಯಾಗಿ ಮುಗಿಸೋವರೆಗೂ ಯಾರೊಂದಿಗೆ ಮಾತನಾಡಬಾರದು. ಅಥವಾ ನಮ್ಮ ಗಮನ ಬೇರೆಡೆಗೆ ಹೋಗಲೇ ಬಾರದು. ನಿಮ್ಮ ಸಂಪೂರ್ಣ ಗಮನ ಊಟದ ಮೇಲಿದ್ದರೆ ನಿಮಗೆ ಹಸಿವಿನ ಮಹತ್ವ ಏನು ಅನ್ನೋದು ಗೊತ್ತಾಗುತ್ತದೆ. ಹಾಗೂ ತಿಂದ ಊಟ ತೃಪ್ತಿ ಅನ್ನಿಸುತ್ತಂತೆ.
3. ನಿಧಾನವಾಗಿ ತಿನ್ನಿ
ನಾವು ಅನೇಕರನ್ನು ಗಮನಿಸಿರುತ್ತೇವೆ ಅವರು ಗಬಗಬನೇ ಊಟವನ್ನು ತಿನ್ನುತ್ತಾರೆ. ಇನ್ನೂ ಹೊರಗಡೆ ಹೋಗೋದಕ್ಕೆ ತಡವಾಗುತ್ತೆ ಅನ್ನೋ ತರಾತುರಿಯಲ್ಲಿ ಒಂದೇ ಸಾರಿಗೆ ಆಹಾರವನ್ನು ಬಾಯಿಯೊಳಗಡೆ ತುರುಕಿಸುವವರು ಇದ್ದಾರೆ. ಇದು ಸರಿಯಾದ ವಿಧಾನವಲ್ಲ. ಈ ರೀತಿ ತಿಂದರೆ ಆಹಾರ ದೇಹದಲ್ಲಿ ಜೀರ್ಣವಾಗೋದಿಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.
ಆಹಾರವನ್ನು ನಿಧಾನವಾಗಿ ಜಗಿದು ತಿನ್ನಬೇಕು. ಜೀರ್ಣ ಕ್ರಿಯೆಯ ಮೊದಲ ಹಂತ ಶುರುವಾಗೋದೇ ನಮ್ಮ ಬಾಯಿಯಿಂದ. ಹೀಗಾಗಿ ಊಟವನ್ನು ಜಗಿದು ತಿಂದರೆ ದೇಹದಲ್ಲಿ ಸರಿಯಾಗಿ ಜೀರ್ಣವಾಗೋದು ಮಾತ್ರವಲ್ಲದೇ, ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಅಂದರೆ ನಿಮ್ಮ ಬಾಯಿಯಲ್ಲಿರುವ ಆಹಾರವನ್ನು ಜಗಿದು ನುಂಗದ ಹೊರತು ಮತ್ತೊಂದು ತುತ್ತಿಗೆ ಕೈ ಹಾಕಲೇಬೇಡಿ.
ನಮ್ಮ ಪುರಾಣ ಹಾಗೂ ಧರ್ಮಗ್ರಂಥಗಳಲ್ಲಿ ಇಂತಹ ಅನೇಕ ವಿಚಾರಗಳು ಉಲ್ಲೇಖವಾಗಿದೆ. ಆದರೆ ನಾವು ಇದ್ಯಾವುದನ್ನು ಕಿವಿಯ ಮೇಲೆ ಹಾಕಿಕೊಳ್ಳೋದೇ ಇಲ್ಲ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಈ ವಿಧಾನಗಳನ್ನು ಪಾಲಿಸೋದು ತುಂಬಾನೇ ಒಳ್ಳೆಯದು.



Click it and Unblock the Notifications

