Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಲರಾಮನ ಗರ್ಭಗುಡಿಗೆ ಬೆಳ್ಳಿಯ ಪೊರಕೆ..! ಎಷ್ಟು ತೂಕವಿದೆ ಗೊತ್ತಾ..?
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಂಡು ರಾಮ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ಈ ಬಾಲರಾಮನ ದರ್ಶನಕ್ಕೆ ಭಕ್ತರ ದಂಡು ಹರಿದುಬರುತ್ತಿದೆ. ದಶಕಗಳ ಹೋರಾಟದ ಪ್ರತೀಕವಾಗಿ ಭವ್ಯ ರಾಮ ಮಂದಿರ ತಲೆ ಎತ್ತಿ ನಿಂತಿದೆ.
ಇನ್ನು ಈ ರಾಮ ಮಂದಿರಕ್ಕೆ ಸಾವಿರಾರು ಮಂದಿ ವಿವಿಧ ರೀತಿಯ ಉಡುಗೊರೆಗಳ ನೀಡಿದ್ದಾರೆ. ಅದರಲ್ಲೂ ಹಲವರು ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಬೆಳೆಬಾಳುವ ಉಡುಗೊರೆಗಳ ರಾಮನಿಗಾಗಿ ನೀಡಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಂದು ಉಡುಗೊರೆ ಸೇರ್ಪಡೆಯಾಗಿದೆ.

ಹೌದು ರಾಮ ಲಲ್ಲಾನ ಗರ್ಭಗುಡಿ ಸ್ವಚ್ಛಗೊಳಿಸಲು ರಾಮನ ಭಕ್ತರೊಬ್ಬರು ಬೆಳ್ಳಿಯ ಪೊರಕೆ ನೀಡಿದ್ದಾರೆ. ಅಖಿಲ ಭಾರತೀಯ ಮಾಂಗ್ ಸಮಾಜದಿಂದ ಭಗವಾನ್ ರಾಮನ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ 1.751 ಕೆಜಿ ತೂಕದ ಅನನ್ಯ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದರು. ಅದಕ್ಕಿಂತ ಹೆಚ್ಚಾಗಿ, ಪೊರಕೆಯನ್ನು ಪೂರ್ಣಗೊಳಿಸಲು 11 ದಿನಗಳನ್ನು ತೆಗೆದುಕೊಂಡಿದ್ದು ಮತ್ತು ಅದರ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಸಹ ಕೆತ್ತಲಾಗಿದೆ.
'ಅಖಿಲ ಭಾರತೀಯ ಮಾಂಗ್ ಸಮಾಜ'ದ ಶ್ರೀರಾಮನ ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬೆಳ್ಳಿ ಪೊರಕೆಯನ್ನು ದಾನ ಮಾಡಿರುತ್ತಾರೆ, ಅದನ್ನು ಗರ್ಭ ಗೃಹವನ್ನು ಸ್ವಚ್ಛಗೊಳಿಸಲು ಬಳಸಬೇಕೆಂದು ವಿನಂತಿಸಿದ್ದಾರೆ. ಬೆಳ್ಳಿಯ ಪೊರಕೆ 1.751 ಕೆಜಿ ತೂಗುತ್ತದೆ" ಎಂದು ಟ್ರಸ್ಟ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಜನವರಿ 22 ರಂದು ಜಗತ್ತು ಹಬ್ಬವನ್ನೇ ಆಚರಿಸಿದೆ. ದೀಪಾವಳಿಯಂದು ಲಕ್ಷ್ಮಿ ದೇವಿಯ ರೂಪದಲ್ಲಿ ಪೊರಕೆಯನ್ನು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಅಖಿಲ ಭಾರತೀಯ ಮಾಂಗ್ ಸಮಾಜವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದೆ. ಪೊರಕೆಯನ್ನು ಪೂರ್ಣಗೊಳಿಸಲು 11 ದಿನಗಳನ್ನು ತೆಗೆದುಕೊಂಡಿತು. ಲಕ್ಷ್ಮಿ ದೇವಿಯನ್ನು ಮೇಲೆ ಕೂರಿಸಿ ಮತ್ತು ಅದರ ಮೇಲೆ ಸುಂದರವಾದ ಕೆತ್ತನೆಗಳಿಂದ ಮಾಡಲ್ಪಟ್ಟಿದೆ, ಪೊರಕೆಯು 108 ಬೆಳ್ಳಿಯ ಕಡ್ಡಿಗಳನ್ನು ಹೊಂದಿದೆ. ಇದರ ತೂಕ 1.751 ಕೆಜಿ. ಪೊರಕೆಯನ್ನು ಗರ್ಭ ಗೃಹದಲ್ಲಿ ಇಟ್ಟು ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದೇವೆ ಎಂದು ಅಖಿಲ ಭಾರತೀಯ ಮಾಂಗ್ ಸಮಾಜದ ಸದಸ್ಯ ಮಧುಕರ್ ರಾವ್ ದೇವ್‌ಹರಾ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಮೊದಲು, ಪ್ರಪಂಚದಾದ್ಯಂತದ ಭಕ್ತರು ತಮ್ಮ ಗೌರವದ ಸಂಕೇತವಾಗಿ ದೇವಾಲಯಕ್ಕೆ ಉಡುಗೊರೆಗಳನ್ನು ಕಳುಹಿಸಿದರು. ಇವುಗಳಲ್ಲಿ 108 ಅಡಿ ಉದ್ದದ ಅಗರಬತ್ತಿ, ರಾಮ ಮಂದಿರ ಹೋಲುವ ನೆಕ್ಲೇಸ್, 1,265 ಕೆಜಿ ತೂಕದ ಲಡ್ಡು ಮತ್ತು ಶ್ರೀರಾಮ ದೇವಾಲಯವನ್ನು ಚಿತ್ರಿಸುವ ರೇಷ್ಮೆ ಸೀರೆ ಹೀಗೆ ಹತ್ತಾರು ಉಡುಗೊರೆಗಳು ಬಂದಿವೆ.
ರಾಮ ಮಂದಿರ ವಿನ್ಯಾಸ ಹೋಲುವ ವಜ್ರದ ನೆಕ್ಲೇಸ್
ಗುಜರಾತಿನ ವಜ್ರದ ವ್ಯಾಪಾರಿ ಶ್ರೀರಾಮನಿಗಾಗಿ ಅಯೋಧ್ಯೆ ರಾಮಮಂದಿರ ಹೋಲುವ ಹಾರ ತಯಾರಿಸಿದ್ದರು. ಈ ಹಾರ ನಿರ್ಮಿಸಲು 5000 ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆಯಂತೆ. 2 ಕೆಜಿ ಬೆಳ್ಳಿಯನ್ನು ಬಳಸಲಾಗಿದೆ. ಈ ಹಾರವನ್ನು ಚಿನ್ನ, ಬೆಳ್ಳಿ, ವಜ್ರ ಬಳಸಿ ತಯಾರಿಸಲಾಗಿದೆ.
ಈ 40 ಜನ ಪರಿಣಿತ ಅಕ್ಕ ಸಾಲಿಗರು ಈ ಸರವನ್ನು ಮಾಡಲು 30 ದಿನ ತೆಗೆದುಕೊಂಡಿದ್ದರು. ಇದರ ವಿನ್ಯಾಸ ರಾಮ ಮಂದಿರಂತೆಯೇ ಅದ್ಭುತವಾಗಿದೆ, ಈ ಮೂಲಕ ಸೂರತ್‌ನ ಕರಕುಶಲತೆ ಕೂಡ ಪ್ರದರ್ಶಿಸಲು ಈ ಹಾರವನ್ನು ಕಾಣಿಕೆಯಾಗಿ ನೀಡಲಾಗಿದೆ. ಇದನ್ನು ಕಾಣಿಕೆಯಾಗಿ ನೀಡುತ್ತಿರುವ ವ್ಯಾಪಾರಿ ಕೌಶಿಕ್ ಕಾಕಾಡಿಯಾ ಇದನ್ನು ಯಾವುದೇ ವ್ಯವಹಾರ ಉದ್ದೇಶಕ್ಕೆ ನೀಡುತ್ತಿಲ್ಲ, ಶ್ರೀರಾಮ ಮಂದಿರಕ್ಕೆ ನಮ್ಮಿಂದಾಗುವ ಏನಾದರೂ ನೀಡಬೇಕು ಎಂಬ ಉದ್ದೇಶದಿಂದಷ್ಟೇ ನೀಡಿದ್ದೇವೆ ಎಂದಿದ್ದರು.



Click it and Unblock the Notifications
