Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಪೂಜಾ ಕೋಣೆಯಲ್ಲಿಡುವ ನೀರಿನಲ್ಲಿ ತುಳಸಿ ಎಲೆಯನ್ನು ಹಾಕೋದ್ಯಾಕೆ?
ನೀರಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಪಂಚ ಭೂತಗಳಲ್ಲಿ ನೀರು ಕೂಡ ಒಂದು. ನೀರನ್ನು ಕೂಡ ಪೂಜೆ ಮಾಡಲಾಗುತ್ತದೆ. ಸಾಮಾನ್ಯವಾಗಿ ದೇವರ ಕೋಣೆಯಲ್ಲಿ ನಾವು ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಇಡುತ್ತೇವೆ. ಪ್ರತಿದಿನ ಪೂಜೆಯ ಸಂದರ್ಭದಲ್ಲಿ ಆ ನೀರನ್ನು ಬದಲಾಯಿಸುತ್ತೇವೆ.
ನೀರನ್ನು ಪವಿತ್ರ ಸ್ಥಾನದಲ್ಲಿಟ್ಟು ಪೂಜಿಸಲಾಗ್ತಿದ್ದು, ಪ್ರತಿಯೊಂದು ಆಚರಣೆಯ ಸಂದರ್ಭದಲ್ಲಿ ನೀರು ಮುಖ್ಯವಾಗಿ ಬೇಕೇ ಬೇಕು. ಹಾಗಾದ್ರೆ ಪೂಜೆಯ ಕೋಣೆಯಲ್ಲಿ ದೇವರಿಗಾಗಿ ನೀರು ಇಡೋದ್ಯಾಕೆ ಅದರ ಮಹತ್ವವೇನು ಅನ್ನೋದನ್ನು ತಿಳಿಯೋಣ.

ನೀರಿನ ಪಾವಿತ್ರತೆ ಬಗ್ಗೆ ತಿಳಿಯೋಣ
ನಮಗೆಲ್ಲಾ ಗೊತ್ತಿರುವ ಹಾಗೆ ಪೂಜೆಗೂ ಮೊದಲು ದೇವರಿಗೆ ಅಭಿಷೇಕ ಮಾಡಲೇಬೇಕು. ಹಾಗೂ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಆ ನೀರನ್ನು ಸ್ಥಳ ಶುದ್ಧೀಕರಣ ಮಾಡೋದಕ್ಕೆ ಸುತ್ತಲೂ ಚಿಮುಕಿಸಲಾಗುತ್ತದೆ. ಪೂಜೆಯ ಕೋಣೆಯಲ್ಲೂ ಕೂಡ ಒಂದು ಪಾತ್ರೆಯಲ್ಲಿ ನೀರಿಡುವ ಪದ್ಧತಿಯನ್ನು ಮೊದಲಿನಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಈ ನೀರನ್ನು ತುಂಬಾನೇ ಪವಿತ್ರ ನೀರು ಅಂತ ಹೇಳಲಾಗುತ್ತದೆ. ಇದಕ್ಕೆ ಅಶುದ್ಧತೆ ಹಾಗೂ ಋಣಾತ್ಮಕತೆಯನ್ನು ತೊಲಗಿಸುವ ಶಕ್ತಿ ಇದೆ ಎಂದು ನಂಬಲಾಗಿದೆ.
ವರುಣ ದೇವರು
ಪುರಾಣಗಳ ಪ್ರಕಾರ ವರುಣ ದೇವನನ್ನು ಸಮುದ್ರದ ದೇವರು ಅಥವಾ ನೀರಿನ ದೇವರು ಎಂದು ಕರೆಯಲಾಗುತ್ತದೆ. ನೀರನ್ನು ವರುಣ ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಇದೇ ಕಾರಣಕ್ಕೆ ಪೂಜಾ ಸ್ಥಳದಲ್ಲಿ ದೇವರ ಮೂರ್ತಿಯ ಜೊತೆಗೆ ನೀರನ್ನು ಇಟ್ಟು ಪೂಜೆ ಮಾಡುವುದು. ವರುಣ ದೇವ ನಮ್ಮನ್ನು ರಕ್ಷಿಸುವುದು ಮಾತ್ರವಲ್ಲದೇ ಮನೆಯ ತುಂಬಾ ಸಮೃದ್ಧಿಯನ್ನು ತರುತ್ತಾನೆ ಎಂಬ ನಂಬಿಕೆಯಿದೆ.
ತುಳಸಿ ನೀರು
ನಾವು ಪೂಜಾ ಕೋಣೆಯಲ್ಲಿ ನೀರಿಡುವಾಗ ಅದರ ಜೊತೆಗೆ ತುಳಸಿ ಎಲೆಯನ್ನು ಕೂಡ ಸೇರಿಸುತ್ತೇವೆ. ಇದು ತುಂಬಾನೇ ಪವಿತ್ರ ಎಂದು ನಂಬಲಾಗಿದೆ. ಇನ್ನೂ ಪೂಜಾ ಸ್ಥಳವನ್ನು ಶುದ್ಧೀಕರಣ ಗೊಳಿಸಬೇಕಾದರೂ ಆ ಸಂದರ್ಭದಲ್ಲಿ ನೀರನ್ನು ತುಳಸಿ ಎಲೆಯ ಮೂಲಕವೇ ಚಿಮುಕಿಸಲಾಗುತ್ತದೆ. ತುಳಸಿಯು ಔಷಧೀಯ ಗುಣಗಳನ್ನು ಹೊಂದಿದ್ದು, ಹೀಗಾಗಿ ತುಳಸಿ ನೀರನ್ನು ಕುಡಿದರೆ ನಮ್ಮ ದೇಹ ಹಾಗೂ ಮನಸ್ಸು ಶುದ್ಧಿಯಾಗುತ್ತೆ ಎಂದು ನಂಬಲಾಗಿದೆ. ಇದೇ ಕಾರಣ ಪೂಜೆ ಶುರು ಮಾಡುವ ಮೊದಲು ತುಳಸಿ ನೀರನ್ನು ತೀರ್ಥ ರೂಪದಲ್ಲಿ ಸೇವಿಸೋದು.
ನೈವೇದ್ಯ
ಪೂಜೆಯ ನಂತರ ದೇವರಿಗೆ ನೈವೇದ್ಯವನ್ನು ಅರ್ಪಿಸಲೇಬೇಕು. ಇದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಇದನ್ನು ನಂತರ ಭಕ್ತಿರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಪೂಜಾ ಕೋಣೆಯಲ್ಲಿ ದೇವರಿಗಾಗಿ ನೈವೇದ್ಯವನ್ನು ಇಡುವುದು ಕಡ್ಡಾಯ. ಇದು ನಮ್ಮ ಬಾಳಿನಲ್ಲಿ ಸಿಹಿಯನ್ನು ತರುತ್ತೆ ಎಂದು ನಂಬಲಾಗಿದೆ. ನೈವೇದ್ಯದಲ್ಲಿ ಹಣ್ಣು, ಸಿಹಿ, ಕಾಳುಗಳು ಹಾಗೂ ಪಂಚಾಮೃತವನ್ನು ಸೇರಿಸಲಾಗುತ್ತದೆ. ಭಕ್ತರಿಗೆ ನೈವೇದ್ಯವನ್ನು ನೀಡಿದ ನಂತರ ಪೂಜಾ ಕೋಣೆಯಲ್ಲಿರುವ ನೀರನ್ನು ತೀರ್ಥದ ರೂಪದಲ್ಲಿ ಭಕ್ತರಿಗೆ ನೀಡಬೇಕು. ಹೀಗೆ ಮಾಡುವುದರಿಂದ ಆ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ ಎಂದು ನಂಬಲಾಗಿದೆ.
ತಾಮ್ರದ ಚೊಂಬಿನಲ್ಲಿ ನೀರಿಡಬೇಕು
ದೇವರ ಕೋಣೆಯಲ್ಲಿ ನೀರಿಡುವಾಗ ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ದೇವರ ಕೋಣೆಯ ಉತ್ತರ ಮತ್ತು ಉತ್ತರಪೂರ್ವ ಭಾಗವನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ದೇವರ ಕೋಣೆಯಲ್ಲಿ ಇದೇ ಜಾಗದಲ್ಲಿ ನೀರಿಡೋದ್ರಿಂದ ಧನಾತ್ಮಕ ಶಕ್ತಿ ಸುತ್ತಲೂ ಹರಡುತ್ತದೆ ಎಂದು ನಂಬಲಾಗಿದೆ. ಅದ್ರಲ್ಲೂ ತಾಮ್ರದ ಬೊಂಬಿನಲ್ಲೇ ನೀರನ್ನು ದೇವರಿಗೆ ಅರ್ಪಿಸಬೇಕು ಎಂಬ ನಂಬಿಕೆಯಿದೆ. ತಾಮ್ರವು ನೀರನ್ನು ಶುದ್ಧೀಕರಣಗೊಳಿಸೋದು ಮಾತ್ರವಲ್ಲದೇ ಇದರಿಂದ ಅನೇಕ ಆರೋಗ್ಯಕರ ಉಪಯೋಗಗಳಿಗೆ ಎಂದು ನಂಬಲಾಗಿದೆ.
ಆರತಿ
ಆರತಿ ನೀಡುವ ಸಂದರ್ಭದಲ್ಲಿ ಆರತಿ ತಟ್ಟೆಯಲ್ಲಿ ಒಂದು ಬದಿಯಲ್ಲಿ ನೀರು ಹಾಕಲಾಗುತ್ತದೆ. ಅಷ್ಟೇ ಅಲ್ಲ ಪೂಜೆಯ ನಂತರ ನಾಲ್ಕು ದಿಕ್ಕುಗಳಿಗೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ. ಆ ವೇಳೆ ಭಕ್ತಾಧಿಗಳ ಮೇಲೂ ನೀರು ಪ್ರೋಕ್ಷಣೆ ಮಾಡುತ್ತಾರೆ. ಇನ್ನೂ ನೀರು ಪವಿತ್ರವಾಗಿದ್ದು, ಇದರಲ್ಲಿ ಅನೇಕ ಆರೋಗ್ಯಕರ ಗುಣಗಳಿದೆ ಎಂದು ನಂಬಲಾಗಿದೆ.
ಒಟ್ಟಿನಲ್ಲಿ ಪುರಾಣಗಳಲ್ಲಿ ಹಾಗೂ ಧರ್ಮಗ್ರಂಥಗಳಲ್ಲಿ ನೀರಿಗೆ ಅದರದ್ದೇ ಆದ ಮಹತ್ವವಿದೆ. ನೀರಿನ ಹೊರತಾಗಿ ಯಾವುದೇ ಪವಿತ್ರ ಕೆಲಸಗಳು ಪೂರ್ತಿಯಾಗೋದಕ್ಕೆ ಸಾಧ್ಯವೇ ಇಲ್ಲ ಎಂದು ನಂಬಲಾಗಿದೆ.



Click it and Unblock the Notifications

