Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯುಗಾದಿಯ ಮಹತ್ವ, ಹಬ್ಬದ ಶುಭಗಳಿಗೆ, ರಾಹುಕಾಲದ ಮಾಹಿತಿ ಇಲ್ಲಿದೆ..!
ಭಾರತೀಯರಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುವುದು ಎನ್ನುವ ನಂಬಿಕೆಯಿದೆ. ಯುಗಾದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿಂದ ಆಚರಿಸುವರು. ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೂರ್ಯಮಾನ ಯುಗಾದಿ ಎನ್ನುವುದು.
ಈ ವರ್ಷ ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಮೊದಲ ದಿನ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 9ಕ್ಕೆ ಬಂದಿದೆ. ಹಿಂದೂಗಳ ಪಾಲಿನ ಪ್ರಮುಖ ಹಬ್ಬ ಇದಾಗಿದ್ದು, ಪ್ರತಿಯೊಂದು ಕಡೆಗಳಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಯುಗಾದಿ ಅಥವಾ ಉಗಾದಿಯು ಹಿಂದೂ ಪಂಚಾಂಗದ ಹೊಸ ವರ್ಷ ಎಂದು ಆಚರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ರಾಜ್ಯಗಳಾಗಿರುವಂತಹ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತುಂಬಾ ಜನಪ್ರಿಯ ಹಬ್ಬ. ಮಹಾರಾಷ್ಟ್ರದಲ್ಲಿ ಇದು ಗುಡಿ ಪಡ್ವ ಎಂದು ಮತ್ತು ಪಶ್ಚಿಮ ಬಂಗಾಳದಲ್ಲಿ ನೊಬೊ ಬೊರ್ಸೊ ಎಂದು ಕರೆಯುವರು. ಆದರೆ ಎಲ್ಲಾ ಕಡೆಗಳಲ್ಲೂ ಬಹುಪಾಲು ಒಂದೇ ರೀತಿ ಆಚರಣೆ ರೂಢಿಯಲ್ಲಿದೆ.

ಯುಗಾದಿಯು ಹೆಚ್ಚಾಗಿ ಚೈತ್ರಾ ಶುಕ್ಲ ಪ್ರತಿಪಾದದಲ್ಲಿ ಆಚರಿಸಲಾಗುತ್ತದೆ. ಯುಗಾದಿಯ ಬಗ್ಗೆ ಒಂದು ಆದ್ಯಾತ್ಮಿಕವಾದ ಕಥೆಯು ಇದೆ. ಬ್ರಹ್ಮ ದೇವರು ಈ ದಿನವೇ ಭೂಮಿ ಮೇಲೆ ಜೀವಿಗಳನ್ನು ಸೃಷ್ಟಿಸಲು ಆರಂಭಿಸಿದರು. ಈ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಬ್ರಹ್ಮ ದೇವರಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಬ್ರಹ್ಮ ಪೂಜೆ ಕೂಡ ಮಾಡಲಾಗುತ್ತದೆ.
ಯುಗಾದಿ ಆಚರಣೆಯ ವಿಧಾನವೇನು?
ಈ ದಿನದಂದು ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡಿದ ಬಳಿಕ ದೇವರ ಸ್ತೋತ್ರ ಜಪಿಸಲಾಗುತ್ತದೆ. ಈ ವೇಳೆಯಲ್ಲಿ ಕೆಲವು ಕಡೆ ಎಣ್ಣೆ ಸ್ನಾನ ಮಾಡಲಾಗುತ್ತದೆ, ತೈಲಅಭ್ಯಂಗನ ಸ್ನಾನಂ'' ಎಂದು ಹೇಳಲಾಗುತ್ತದೆ. ಎಣ್ಣೆ ಹಚ್ಚಿಕೊಂಡು ಈ ದಿನ ಸ್ನಾನ ಮಾಡಿದರೆ, ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ದಿನ ದೇವರ ಮೂರ್ತಿಗಳಿಗೂ ನೀರಿನಿಂದ ಅಭಿಷೇಕ ಮಾಡಿ ಶುದ್ಧೀಕರಿಸಬೇಕು. ಮೂರ್ತಿಗಳನ್ನು ತೊಳೆದು, ದೇವರ ಕೋಣೆ ಸ್ವಚ್ಛ ಮಾಡಿದ ಬಳಿಕ ಹೊಸ ಬಟ್ಟೆಗಳನ್ನು ಧರಿಸಿ, ಪ್ರಸಾದವನ್ನು ಇಟ್ಟು ಪೂಜೆ ಮಾಡಬೇಕು. ಪೂಜೆಗಾಗಿ ವಿಶೇಷವಾಗಿ ಬೇವು ಬೆಲ್ಲ ಅಥವಾ ಯುಗಾದಿ ಪಚಡಿಯನ್ನು ಇಡಬೇಕು. ಬಳಿಕ ಊಟದ ಜೊತೆ ಇದನ್ನು ಪ್ರಸಾದದಂತೆ ಸೇವಿಸಬಹುದು.
ಬೇವು ಬೆಲ್ಲ ಅಥವಾ ಯುಗಾದಿ ಪಚಡಿ
ಈ ವಿಶೇಷ ಪ್ರಸಾದವನ್ನು ಯುಗಾದಿ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಇದು ಸಿಹಿಯಾಗಿ ಇರುವುದಿಲ್ಲ. ಬದಲಿಗೆ ಇದು ಸಿಹಿ ಮತ್ತು ಸ್ವಲ್ಪ ಕಹಿಯಾಗಿ ಇರುವುದು. ಯಾಕೆಂದರೆ ಇದನ್ನು ಆರು ವಿಭಿನ್ನ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಬೇವಿನ ಎಲೆಗಳು, ಬೆಲ್ಲ, ಮೆಣಸು, ಬಲಿಯದ ಮಾವಿನ ಹಣ್ಣು, ಉಪ್ಪು ಮತ್ತು ಹುಳಿ ಹಾಕಿಕೊಂಡು ತಯಾರಿಸಲಾಗುತ್ತದೆ. ಯುಗಾದಿ ಪ್ರಸಾದವು ಒಬ್ಬರ ಜೀವನದಲ್ಲಿ ತುಂಬಾ ಮಹತ್ವ ಪಡೆದುಕೊಂಡಿರುವುದು. ಇದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಏಳು ಬೀಳುಗಳನ್ನು ಬಿಂಬಿಸುವುದು. ಯಾಕೆಂದರೆ ಈ ಪ್ರಸಾದದಲ್ಲಿ ಕಹಿ ಹಾಗೂ ಸಿಹಿ ಎರಡೂ ಇದೆ. ಇದರಿಂದ ಜೀವನದಲ್ಲಿ ಕೂಡ ಸಿಹಿ ಹಾಗೂ ಕಹಿ ಎರಡು ನಮಗೆ ಸಿಗುವುದು ಎಂದು ಹೇಳಲಾಗುತ್ತದೆ.
ಯುಗಾದಿ ಹಬ್ಬದ ಘಳಿಗೆ ಯಾವುದು?
ಪ್ರತಿಪದಾ ಆರಂಭ: ಎಪ್ರಿಲ್ 8, ರಾತ್ರಿ 11:52ಕ್ಕೆ
ಪ್ರತಿಪದಾ ಅಂತ್ಯ: ಎಪ್ರಿಲ್ 9, ರಾತ್ರಿ 08:33ಕ್ಕೆ
ಯುಗಾದಿಯಂದು ರಾಹುಕಾಲ, ಶುಭ ಕಾಲ ಯಾವಾಗ?
ರಾಹುಕಾಲ- 3 ಗಂಟೆಯಿಂದ 4:30
ಗುಳಿಕ ಕಾಲ- ಬೆಳಗ್ಗೆ 10:30 ರಿಂದ 12 ಗಂಟೆ



Click it and Unblock the Notifications
