Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಶಿವರಾತ್ರಿ 2023 : ಶುಭ ಮುಹೂರ್ತ, ಆಚರಣಾ ವಿಧಿ ಹೇಗಿರಬೇಕು?
ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶ್ರಾವಣ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ, ಮಹಾದೇವನು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ.
ಈ ವರ್ಷದ ಶ್ರಾವಣ ಶಿವರಾತ್ರಿ ಉಪವಾಸವನ್ನು ಜುಲೈ 15, ಶನಿವಾರ ದಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಈ ವಿಶೇಷ ದಿನದಂದು ಮೂರು ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳಲಿದೆ. ಹೀಗಾಗಿ ಶ್ರಾವಣ ಶಿವರಾತ್ರಿಯಂದು ಶಿವನ ಪೂಜೆ ಮಾಡೋದ್ರಿಂದ ಶಿವನ ಆರಾಧಕರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಅಷ್ಟಕ್ಕು ಶ್ರಾವಣ ಶಿವರಾತ್ರಿ ಯಾವಾಗ? ಶುಭ ಮುಹೂರ್ತ ಹಾಗೂ ಪೂಜಾ ವಿಧಿ- ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

ಶ್ರಾವಣ ಶಿವರಾತ್ರಿ 2023 ರ ಶುಭ ಮುಹೂರ್ತ :
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಜುಲೈ 15 ರಂದು ರಾತ್ರಿ 08:32 ಕ್ಕೆ ಪ್ರಾರಂಭವಾಗಿ ಜುಲೈ 16 ರಂದು ರಾತ್ರಿ 10:08 ಕ್ಕೆ ಕೊನೆಗೊಳ್ಳುತ್ತದೆ. ಶ್ರಾವಣ ಶಿವರಾತ್ರಿಯ ದಿನ ರಾತ್ರಿಯಲ್ಲಿ ಪೂಜೆ ಮಾಡುವ ವಿಧಿ-ವಿಧಾನಗಳು ಇರೋದ್ರಿಂದ ಉಪವಾಸವನ್ನು ಜುಲೈ 15, 2023 ರಂದು ಶನಿವಾರ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ನಾಲ್ಕು ಪ್ರಹಾರಗಳಲ್ಲಿ ಪೂಜಿಸಲಾಗುತ್ತದೆ.
ಮೊದಲ ಪೂಜೆ - ಸಂಜೆ 07:21 ರಿಂದ ರಾತ್ರಿ 09:54 ರವರೆಗೆ
ಎರಡನೇ ಪ್ರಹಾರ ಪೂಜೆ - ಮಧ್ಯರಾತ್ರಿ 09:54 ರಿಂದ ಮಧ್ಯರಾತ್ರಿ 12:37 ರವರೆಗೆ
ಮೂರನೇ ಪ್ರಹಾರ ಪೂಜೆ - ರಾತ್ರಿ 12:37 ರಿಂದ ಬೆಳಗಿನ ಜಾವ 03:00 ರವರೆಗೆ
ನಾಲ್ಕನೇ ಮತ್ತು ಕೊನೆಯ ಪ್ರಹಾರ ಪೂಜೆ - ಬೆಳಿಗ್ಗೆ 03:00 ರಿಂದ 05:33 ರವರೆಗೆ
ಶ್ರಾವಣ ಶಿವರಾತ್ರಿ 2023 ರ ಶುಭ ಯೋಗ :
ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಮೂರು ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ವಿಶೇಷ ದಿನದಂದು ವೃದ್ಧಿ ಯೋಗ, ಧ್ರುವ ಯೋಗ ಮತ್ತು ಮೃಗಶಿರ ನಕ್ಷತ್ರ ರಚನೆಯಾಗುತ್ತಿದೆ. ವೃದ್ಧಿ ಯೋಗವು ಬೆಳಿಗ್ಗೆ 08:22 ರವರೆಗೆ ಇರುತ್ತದೆ. ಮತ್ತು ನಂತರ ಧ್ರುವ ಯೋಗವು ಪ್ರಾರಂಭವಾಗಲಿದೆ. ಇನ್ನೂ ಮೃಗಶಿರಾ ನಕ್ಷತ್ರವು ಜುಲೈ 16 ರಂದು 12:23 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಶಿವನನ್ನು ಕುರಿತು ಪ್ರಾರ್ಥನೆಗಳನ್ನು ಪಠಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಶ್ರಾವಣ ಶಿವರಾತ್ರಿಯ ಪ್ರಾಮುಖ್ಯತೆಯೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವನ ಶಿವರಾತ್ರಿಯ ದಿನದಂದು ಮಹಾದೇವನಿಗೆ ಜಲಾಭಿಷೇಕವನ್ನು ಮಾಡುವುದರಿಂದ ಹಾಗೂ ಆತನನ್ನು ಭಕ್ತಿಯಿಂದ ಪೂಜಿಸುವುದರಿಂದ ಸಾಧಕನು ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಶ್ರಾವಣ ಶಿವರಾತ್ರಿ ಈ ವಿಶೇಷ ದಿನದಂದು ಎಲ್ಲಾ ನಾಲ್ಕು ಗಂಟೆಗಳಲ್ಲಿಯೂ ಶಿವನನ್ನು ಪೂಜಿಸುವುದರಿಂದ ಸಾಧಕನು ಧರ್ಮ, ಅರ್ಥ, ಕಾಮ, ಮೋಕ್ಷದ ಅನುಗ್ರಹವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಶ್ರಾವಣ ಶಿವರಾತ್ರಿಯ ದಿನ ನಿಮ್ಮೆಲ್ಲಾ ಕಷ್ಟಗಳು ಬಗೆಹರಿದು ಇಷ್ಟಾರ್ಥ ಸಿದ್ಧಿಯಾಗಬೇಕೆಂದರೆ ಶಿವನನ್ನು ಈ ರೀತಿ ಪೂಜಿಸೋದು ತುಂಬಾನೇ ಒಳ್ಳೆಯದು.



Click it and Unblock the Notifications