Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವಾಗ ಈ ತಪ್ಪುಗಳು ಆಗದಿರಲಿ!
ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಖುಷಿ ಮನೆ ಮಾಡಿರುತ್ತದೆ. ಈ ತಿಂಗಳನ್ನು ಸಂಪೂರ್ಣವಾಗಿ ಶಿವನಿಗಾಗಿ ಅರ್ಪಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಶಿವನನ್ನು ಕುರಿತು ವಿಶೇಷ ಪೂಜೆ ಹಾಗೂ ಉಪವಾಸವನ್ನು ನೆರವೇರಿಸಲಾಗುತ್ತದೆ. ಈ ತಿಂಗಳು ಬಹಳ ವಿಶೇಷ ಏಕೆಂದರೆ ಈ ಸಂದರ್ಭದಲ್ಲಿ ಶಿವನು ಭೂ ಲೋಕಕ್ಕೆ ಇಳಿದು ಬಂದು ಭಕ್ತರನ್ನು ಪೊರೆಯುತ್ತಾನೆ ಎಂದು ನಂಬಲಾಗಿದೆ.

ಸಾಮಾನ್ಯವಾಗಿ ಈ ಮಾಸದಲ್ಲಿ ಧಾರಾಕಾರ ಮಳೆಯಾಗುತ್ತದೆ. ಹಾಗೂ ಬಿಸಿಲಿನ ತಾಪದಿಂದ ಜನರಿಗೆ ನಿರಾಳವಾಗಲಿದೆ. ಈ ತಿಂಗಳು ಪೂರ್ತಿ ಮಹಾದೇವನ ಪೂಜೆಯಲ್ಲೇ ಭಕ್ತಾದಿಗಳು ಮಗ್ನರಾಗಲಿದ್ದಾರೆ. ಅನೇಕ ಜನರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಶಿವನ ಆರಾಧನೆಯಿಂದ ವ್ಯಕ್ತಿಯ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ.
ಅವನು ಎಲ್ಲಾ ರೀತಿಯಲ್ಲಿ ಸಂತೋಷವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಅದ್ರಲ್ಲೂ ಶ್ರಾವಣ ಸೋಮವಾರದಂದು ಉಪವಾಸ ಮಾಡುವವರು ಈ ವಿಚಾರದ ಬಗ್ಗೆ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ಏನೆಲ್ಲಾ ನಿಯಮ ಪಾಲಿಸಬೇಕು ಅನ್ನೋದನ್ನು ತಿಳಿಯೋಣ.
ಶ್ರಾವಣ ಮಾಸದ ಉಪವಾಸ ಹೇಗಿರಬೇಕು?
* ಪೂರ್ಣ ನಂಬಿಕೆಯೊಂದಿಗೆ ಉಪವಾಸ ಮಾಡಿ. ಮನಸ್ಸಿನಲ್ಲಿ ಯಾವುದೇ ರೀತಿ ಗೊಂದಲ ಇಟ್ಟುಕೊಳ್ಳಬೇಡಿ
* ತೆಗೆದುಕೊಂಡ ಪ್ರತಿಜ್ಞೆಯನ್ನು ಪ್ರಾಮಾಣಿಕತೆಯಿಂದ ಅನುಸರಿಸಿ
* ನೀರನ್ನೂ ಮುಟ್ಟದೇ ಉಪವಾಸ ಮಾಡಬೇಕು ಎನ್ನುವ ನಿಯಮವಿಲ್ಲ
* ಆರೋಗ್ಯಕರವಾಗಿರುವಾಗ ಉಪವಾಸವನ್ನು ಮಾಡಬೇಕು
* ಉಪವಾಸದ ಸಮಯದಲ್ಲಿ ನೀವು ಒಣ ಹಣ್ಣುಗಳು ಮತ್ತು ಹಣ್ಣುಗಳನ್ನು ತಿನ್ನಬೇಕು
* ಉಪವಾಸದ ಸಮಯದಲ್ಲಿ ದೇಹದ ಶಕ್ತಿ ಕಡಿಮೆಯಾಗುತ್ತದೆ
* ಆದ್ದರಿಂದ ಜ್ಯೂಸ್, ಮಜ್ಜಿಗೆ ಮತ್ತು ನೀರನ್ನು ಸೇವಿಸಿ ಮತ್ತು ನಿಮ್ಮನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ
ಶ್ರಾವಣ ಉಪವಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!
* ಉಪವಾಸದ ಸಮಯದಲ್ಲಿ ತಯಾರಿಸಿದ ಆಹಾರದಲ್ಲಿ ಸಾಮಾನ್ಯ ಉಪ್ಪಿನ ಬದಲು ಕಲ್ಲು ಉಪ್ಪನ್ನು ಬಳಸಿ
* ಉಪ್ಪು ಸೇವನೆಯಿಂದ ನೀವು ದುರ್ಬಲರಾಗುವುದಿಲ್ಲ
* ಬ್ರಹ್ಮಚರ್ಯವನ್ನು ಅನುಸರಿಸಿ
* ಸಂತೋಷವಾಗಿರಿ ಮತ್ತು ಶಿವನನ್ನು ಆರಾಧಿಸಿ
ಈ ಆಹಾರಗಳನ್ನು ಸೇವಿಸಬೇಡಿ!
* ಶ್ರಾವಣ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ, ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಉದ್ದಿನಬೇಳೆ ಮತ್ತು ಬದನೆಕಾಯಿಯಂತಹ ಆಹಾರಗಳಿಂದ ದೂರವಿರಿ
* ಶ್ರಾವಣ ಮಾಸದಲ್ಲಿ ಮಾಂಸ, ಮೊಟ್ಟೆ ಮತ್ತು ಮದ್ಯ ಸೇವಿಸಬೇಡಿ
* ಪ್ಯಾಕೆಟ್ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ
* ಈ ತಿಂಗಳಲ್ಲಿ ಮನೆಯಲ್ಲಿ ಕಲಹ ಸೃಷ್ಟಿಸಬೇಡಿ
* ಯಾರನ್ನೂ ಟೀಕಿಸಬೇಡಿ
* ದುಷ್ಟರಿಂದ ದೂರವಿರಿ
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಉಪವಾಸದ ಫಲವನ್ನು ಖಂಡಿತ ಪಡೆಯುತ್ತೀರಿ.



Click it and Unblock the Notifications
