Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಶ್ರಾವಣ ಅಮಾವಾಸ್ಯೆ 2023 : ಶಿವಲಿಂಗಕ್ಕೆ ಈ ವಸ್ತುಗಳನ್ನು ಅರ್ಪಿಸಿದ್ರೆ ಪಿತೃ ದೋಷದಿಂದ ಮುಕ್ತಿ!
ಆಗಸ್ಟ್ 16 ರ ಬುಧವಾರದಂದು ಶ್ರಾವಣ ಮಾಸದ ಅಮಾವಾಸ್ಯೆಯ ತಿಥಿಯನ್ನು ಆಚರಣೆ ಮಾಡಲಾಗುತ್ತದೆ. ಅಮಾವಾಸ್ಯೆ ತಿಥಿಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಏಕೆಂದರೆ ಈ ದಿನಾಂಕವನ್ನು ಪೂರ್ವಜರಿಗೆ ಸಮರ್ಪಿಸಲಾಗಿದೆ. ಈ ದಿನ ಪೂರ್ವಜರಿಗೆ ತರ್ಪಣ ಮತ್ತು ದಾನ ಕಾರ್ಯಗಳನ್ನು ಮಾಡುವುದರಿಂದ ವಿಶೇಷ ಫಲಗಳು ಸಿಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಪೂರ್ವಜರಿಗೆ ಸದ್ಗತಿಯನ್ನು ನೀಡೋದಕ್ಕೆ ಸಾಧ್ಯವಾಗುತ್ತೆ ಎಂದು ಹೇಳಲಾಗುತ್ತದೆ.

ಈ ದಿನದಂದು ಭಗವಾನ್ ಶಿವನನ್ನು ಭಕ್ತಿಯಿಂದ ಪೂಜಿಸಿದ್ರೆ ಗ್ರಹಗಳ ಮತ್ತು ನಕ್ಷತ್ರಪುಂಜಗಳ ಅಶುಭ ಪರಿಣಾಮಗಳು ಮತ್ತು ಪಿತೃದೋಷವು ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ವಿಶೇಷ ದಿನದಂದು ಶಿವಲಿಂಗಕ್ಕೆ ಈ ವಸ್ತುಗಳನ್ನು ಅರ್ಪಿಸಿದರೆ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಪೂರ್ವಜರ ಆಶೀರ್ವಾದವೂ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಷ್ಟಕ್ಕೂ ಶ್ರಾವಣ ಅಮಾವಾಸ್ಯೆಯ ದಿನದಂದು ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬೇಕು ಅನ್ನೋದನ್ನು ತಿಳಿಯೋಣ.
ಪಿತೃ ದೋಷ ಪರಿಹಾರಕ್ಕೆ ಏನು ಮಾಡಬೇಕು?
ಶ್ರಾವಣ ಅಮಾವಾಸ್ಯೆಯ ದಿನದಂದು ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಜೇನುತುಪ್ಪ ಮತ್ತು ಬಿಳಿ ಎಳ್ಳನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಜೊತೆಗೆ ನಿಮಗಿರೋ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ ಎಂದು ನಂಬಲಾಗಿದೆ.
ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯೂ ದೂರವಾಗುತ್ತದೆ. ಅಷ್ಟೇ ಅಲ್ಲದೇ ಸೌಂದರ್ಯವು ಸಹ ಪ್ರಾಪ್ತಿಯಾಗುತ್ತದೆ. ಮತ್ತು ಸಮಾಜದಲ್ಲಿ ನಿಮ್ಮ ಖ್ಯಾತಿ ಮತ್ತು ಗೌರವವು ಹೆಚ್ಚಾಗುತ್ತದೆ. ಜೊತೆಗೆ ನಿಮ್ಮ ಪೂರ್ವ ಜನ್ಮದ ಪಾಪಗಳು ನಾಶವಾಗುತ್ತವೆ. ಮತ್ತು ಆರೋಗ್ಯವೂ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಸರ್ಪ ದೋಷಕ್ಕೂ ಪರಿಹಾರ ಸಿಗಲಿದೆ!
ಶ್ರಾವಣ ಅಮಾವಾಸ್ಯೆಯ ದಿನದಂದು ಶಿವಲಿಂಗದ ಮೇಲೆ ನೀರು ಮತ್ತು ಬಿಲ್ವ ಪತ್ರೆಯೊಂದಿಗೆ ಬೆಳ್ಳಿಯ ಹಾವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಸರ್ಪ ದೋಷದ ಜೊತೆಗೆ ಪಿತ್ರಾ ದೋಷವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಮತ್ತು ಪೂರ್ವಜರ ಆಶೀರ್ವಾದವೂ ಸಿಗುತ್ತಂತೆ. ಇನ್ನೂ ಶಿವಲಿಂಗಕ್ಕೆ ಬೆಳ್ಯಳಿ ಹಾವುಗಳನ್ನು ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ವೃದ್ಧಿಯಾಗುತ್ತಂತೆ.
ನೋವು, ಸಂಕಟಗಳು ದೂರ!
ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಹೀಗಾಗಿ ಪುರುಷೋತ್ತಮ ಅಮಾವಾಸ್ಯೆಯ ದಿನ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಣೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ದೂರವಾಗುತ್ತವೆ. ಮತ್ತು ಗ್ರಹಗಳ ಶುಭ ಪರಿಣಾಮಗಳು ನಿಮ್ಮ ಮೇಲೆ ಬೀರುತ್ತಂತೆ. ಜೊತೆಗೆ ಶಿವನ ಕೃಪೆಯಿಂದ ಜೀವನದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಅಂತ ಹೇಳಲಾಗುತ್ತದೆ.
ಆರ್ಥಿಕ ಬಿಕ್ಕಟ್ಟು ದೂರ!
ಶ್ರಾವಣ ಅಮಾವಾಸ್ಯೆಯ ದಿನದಂದು ಶಿವಲಿಂಗಕ್ಕೆ ಕಬ್ಬಿನ ರಸವನ್ನು ಅರ್ಪಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗಿ ಐಹಿಕ ಸುಖ ಪ್ರಾಪ್ತಿಯಾಗುತ್ತದೆ. ಶಿವಲಿಂಗದ ಮೇಲೆ ಕಬ್ಬಿನ ರಸವನ್ನು ಅರ್ಪಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಿ. ಕಬ್ಬಿನ ರಸವನ್ನು ನೈವೇದ್ಯ ಮಾಡುವುದರಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆ. ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಗ್ರಹ ದೋಷ ನಿವಾರಣೆಯಾಗುತ್ತವೆ!
ಶ್ರಾವಣ ಅಮಾವಾಸ್ಯೆಯ ದಿನದಂದು 108 ಬಿಲ್ವಪತ್ರೆದಲ್ಲಿ ಶ್ವೇತ ಚಂದನದಿಂದ ರಾಮನ ಹೆಸರನ್ನು ಬರೆದು ನಂತರ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಾ ಶಿವಲಿಂಗದ ಮೇಲೆ ಅರ್ಪಿಸಿ. 108 ಬಿಲ್ವಪತ್ರೆಯನ್ನು ಸಾಧ್ಯವಾಗದಿದ್ದರೆ 11 ಬಿಲ್ವಪತ್ರೆಯನ್ನು ಅರ್ಪಣೆ ಮಾಡಬಹುದು. ಹೀಗೆ ಮಾಡುವುದರಿಂದ ಗ್ರಹದೋಷಗಳು ನಿವಾರಣೆಯಾಗುವುದಲ್ಲದೆ ಪಿತೃದೋಷಗಳೂ ದೂರವಾಗುತ್ತವೆ. ಈ ಪರಿಹಾರವನ್ನು ಪಂಚಮಿ ತಿಥಿ, ತ್ರಯೋದಶಿ ತಿಥಿ ಮತ್ತು ಚತುರ್ದಶಿ ತಿಥಿಯಲ್ಲೂ ಮಾಡಬಹುದು.
ಸೂಚನೆ : ಈ ಮಾಹಿತಿ ಇಂಟರ್ನೆಟ್ ಆಧಾರವಾಗಿದ್ದು, ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಜವಾಬ್ದಾರರಾಗಿ ಇರೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರ ಸಂಪರ್ಕ ಪಡೆದು ವಿಧಿ-ವಿಧಾನಗಳನ್ನು ಪಾಲಿಸಿದ್ರೆ ಉತ್ತಮ.



Click it and Unblock the Notifications
