Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಶ್ರಾವಣ ಸೋಮವಾರ ಜಲಾಭಿಷೇಕ ಮಹತ್ವ: ಜಲಾಭಿಷೇಕದ ಬಳಿಕ ಈ ನಿಯಮ ಮರೆಯದಿರಿ
ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಲಾಗುವುದು. ಅದರಲ್ಲೂ ಶ್ರಾವಣ ಸೋಮವಾರ ಶಿವ ಪೂಜೆಗೆ ವಿಶೇಷವಾದ ದಿನವಾಗಿದೆ. ಅದರಲ್ಲೂಈ ದಿನ ಜಲಾಭಿಷೇಕ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಜಲಾಭಿಷೇಕ ಮಾಡಿಸಿದರೆ ಶಿವಕೃಪೆಗೆ ಬೇಗನೆ ಪಾತ್ರರಾಗುತ್ತೇವೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಜಲಾಭಿಷೇಕದ ಮಹತ್ವವೇನು ಎಂದು ತಿಳಿಯೋಣ ಬನ್ನಿ:
ಜಲಾಭಿಷೇಕದಿಂದ ನಮಗಷ್ಟೇ ಅಲ್ಲ ನಮ್ಮ ಕುಟುಂಬಕ್ಕೂ ಪುಣ್ಯ ಫಲ ಸಿಗಲಿದೆ
ಶಿವನಿಗೆ ಜಲಾಭಿಷೇಕ ಮಾಡಿದರೆ ತುಂಬಾನೇ ಪುಣ್ಯ ಫಲ ಸಿಗಲಿದೆ, ಅದರಲ್ಲೂ ಶ್ರಾವಣ ಸೋಮವಾರ ಮಾಡಿದರೆ ಇನ್ನೂ ಒಳ್ಳೆಯದು. ಜಲಾಭಿಷೇಕ ಮಾಡುವುದರಿಂದ
ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುವುದು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.

ಶಿವನಿಗೆ ಜಲಾಭಿಷೇಕ ಮಹತ್ವದ ಪೌರಾಣಿಕ ಹಿನ್ನೆಲೆ
ಅಮೃತಕ್ಕಾಗಿ ದೇವತೆಗಳು ಹಾಗೂ ದಾನವರು ಸಾಗರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆವಾಗ ಅಂಥ ಪರಿಸ್ಥಿತಿಯಲ್ಲಿ ಜಗತ್ತಿನ ರಕ್ಷಣೆಗಾಗಿ ಶಿವ ಆ ವಿಷವನ್ನು ಕುಡಿದು ವಿಷಕಂಠನಾಗುತ್ತಾನೆ. ಆದರೆ ವಿಷ ಕುಡಿದ ಕಾರಣ ಶಿವನಿಗೆ ಉರಿ ತಾಳಲಾಗುವುದಿಲ್ಲ, ಆವಾಗ ಶಿವನ ತಲೆಯ ಮೇಲೆ ಗಂಗೆ ಧುಮ್ಮುಕ್ಕಿ ಶಿವನ ಉರಿ ಶಮನ ಮಾಡಿದಳು. ಹೀಗಾಗಿ ಶಿವಪೂಜೆಯಲ್ಲಿ ಜಲಾಭಿಷೇಕಕ್ಕೆ ತುಂಬಾನೇ ಮಹತ್ವವಿದೆ.
ಶಿವನಿಗೆ ಜಲಾಭಿಷೇಕ ಮಾಡುವಾಗ ಈ ನಿಯಮ ಮರೆಯದಿರಿ
- ನೀವು ಶಿವಲಿಂಗಕ್ಕೆ ಶುದ್ಧವಾದ ನೀರನ್ನು ಬಳಸಿ ಜಲಾಭಿಷೇಕಕ್ಕೆ ಬಳಸಬೇಕು, ಅಲ್ಲಿರುವ ಇತರ ದೇವತೆಗಳಿಗೆ ಜಲಾಭಿಷೇಕ ಮಾಡಬಾರದು. ನೀರು ಶಿವಲಿಂಗಕ್ಕೆ ಹನಿ-ಹನಿಯಾಗಿ ಬೀಳುವಂತೆ ಮೇಲಿನಿಂದ ಸುರಿಯಬೇಕು.
- ಜಲಾಭಿಷೇಕದ ಸಮಯದಲ್ಲಿ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಬೇಡಿ, ಏಕೆಂದರೆ ಶಾಸ್ತ್ರಗಳ ಪ್ರಕಾರ ಶಿವನಿಗೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. * ಜಲಾಭಿಷೇಕ ಮಾಡಿದ ನಂತರ ಶಿವಲಿಂಗವನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಬಾರದು. ಏಕೆಂದರೆ ಶಿವಲಿಂಗದ ಮೇಲೆ ಅರ್ಪಿಸಿದ ನೀರನ್ನು ಗಂಗೆ ಎಂದು ಪರಿಗಣಿಸಲಾಗುತ್ತದೆ, ನಂಬಿಕೆಯ ಪ್ರಕಾರ, ತಾಯಿ ಗಂಗಾ ದಾಟಲು ಸಾಧ್ಯವಿಲ್ಲ. ಆದ್ದರಿಂದ ಪ್ರದಕ್ಷಣೆ ಹಾಕಬಾರದು.
ಶಿವನ ಈ ಮಂತ್ರಗಳನ್ನು ಪಠಿಸುತ್ತಾ ಜಲಾಭಿಷೇಕ ಮಾಡಿ
ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್



Click it and Unblock the Notifications
