Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಶ್ರಾವಣ ಪುತ್ರದಾ ಏಕಾದಶಿ 2023: ಈ ದಿನ ಏನು ಮಾಡಿದರೆ ತುಂಬಾ ಒಳ್ಳೆಯದು?
ಶ್ರಾವಣ ಮಾಸದ ಏಕಾದಶಿಯನ್ನು ಪುತ್ರದಾ ಏಕಾದಶಿಯಂದು ಆಚರಿಸಲಾಗುವುದು, ಇದು ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಾಗಿದೆ. ಈ ಏಕಾದಶಿಯಂದು ಶ್ರೀ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುವುದು. ವಿವಾಹಿತ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಈ ಏಕಾದಶಿಯನ್ನು ಆಚರಿಸಿದರೆ ಒಳ್ಳೆಯದು. ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಶ್ರಾವಣ ಪುತ್ರದಾ ಏಕಾದಶಿ ದಿನಾಂಕ ಮತ್ತು ಪೂಜಾ ಮುಹೂರ್ತ
ದಿನಾಂಕ : ಆಗಸ್ಟ್ 27
ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 26 ಮಧ್ಯರಾತ್ರಿ 12:08ಕ್ಕೆ
ಏಕಾದಶಿ ತಿಥಿ ಮುಕ್ತಾಯ: ರಾತ್ರಿ 09:23ರವರೆಗೆ
ಪಾರಣ ಸಮಯ: ಆಗಸ್ಟ್ 28 ಬೆಳಗ್ಗೆ 06:06ರಿಂದ 08:37ರವರೆಗೆ
ಪುತ್ರದಾ ಏಕಾದಶಿ ಏನು ಮಾಡಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ನಂತರ ಉಪವಾಸ ವ್ರತ ಕೈಗೊಳ್ಳಬೇಕು.
* ಈ ದಿನ ವಿಷ್ಣುವಿಗೆ ನೈವೇದ್ಯ, ಹೂಗಳನ್ನು ಅರ್ಪಿಸಿ. ದೇವರಿಗೆ ತುಪ್ಪದ ದೀಪ ಹಚ್ಚಿ.
* ಶ್ರೀ ವಿಷ್ಣು ಅಥವಾ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಬನ್ನಿ.
* ಈ ದಿನ ಪುತ್ರದಾ ಏಕಾದಶಿ ವ್ರತ ಕತೆ ಓದಿ.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
* ರಾತ್ರಿ ಪೂರ್ತಿ ಎಚ್ಚರವಿದ್ದು ಶ್ರೀವಿಷ್ಣುವಿನ ಜಪ ಮಾಡಿದರೆ ಇನ್ನೂ ಒಳ್ಳೆಯದು. ಜಾಗರಣೆ ಇದ್ದು ಬೆಳಗ್ಗೆ ಪಾರಣೆ ಸಮಯದಲ್ಲಿ ಉಪವಾಸ ಮುರಿಯಿರಿ.
* ಏಕಾದಶಿಯ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈ ದಿನ ಸಾಧ್ಯವಾದರೆ ನೀರು ಕೂಡ ಕುಡಿಯದೆ ಉಪವಾಸ ಮಾಡಿದರೆ ಒಳ್ಳೆಯದು.
ಏಕಾದಶಿಯ ದಿನ ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಕೋಪಗೊಳ್ಳುವುದು, ಇತರರನ್ನು ಬೈಯ್ಯುವುದು ಮಾಡಬಾರದು.
* ಏಕಾದಶಿಯ ದಿನದಂದು ಪತಿ-ಪತ್ನಿ ಸಂಯಮದಿಂದ ಬ್ರಹ್ಮಚರ್ಯವನ್ನು ಅನುಸರಿಸಬೇಕು, ಆದ್ದರಿಂದ ಈ ದಿನ ದೈಹಿಕ ಸಂಬಂಧವನ್ನು ಮಾಡಬಾರದು.
* ಮನೆಯ ವಾತಾವರಣ ಖುಷಿಯಿಂದ ಕೂಡಿರಬೇಕು.
* ಈ ದಿನ ದೇವರ ಪೂಜೆಗೆ ಮೀಸಲಾಗಿರುವುದರಿಂದ ಸಂಜೆ ಹೊತ್ತಿನಲ್ಲಿ ಮಲಗಬಾರದು.
* ಈ ದಿನ ಯಾರಿಗೂ ಅವಮಾನ ಮಾಡಬೇಡಿ.
ಈ ಕೆಲಸವನ್ನು ಏಕಾದಶಿಯಂದು ಮಾಡಬೇಕು?
* ಈ ದಿನ ಸಾಧ್ಯವಾದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ.
* ಮದುವೆಗಾಗಿ ಏಕಾದಶಿಯ ದಿನದಂದು ಕುಂಕುಮ, ಬಾಳೆಹಣ್ಣು ಅಥವಾ ಅರಿಶಿನವನ್ನು ದಾನ ಮಾಡಿ.
* ಏಕಾದಶಿಯಂದು ಉಪವಾಸ ಮಾಡುವುದರಿಂದ, ಇಷ್ಟಾರ್ಥಗಳು ನೆರವೇರುತ್ತವೆ , ಈ ದಿನ ಲಕ್ಷ್ಮಿ, ವಿಷ್ಣುವನ್ನು ಆರಾಧಿಸಿ
ಪ್ರತಿ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಸಂಪತ್ತು, ಗೌರವ, ಉತ್ತಮ ಆರೋಗ್ಯ, ಜ್ಞಾನ, ಮಕ್ಕಳ ಸಂತೋಷ, ಕುಟುಂಬ ಸಂತೋಷ ಮತ್ತು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾನೆ.
* ಈ ದಿನ ಅನ್ನದಾನ ಮಾಡಿದರೆ ಒಳ್ಳೆಯದು
* ಈ ದಿನ ಸಂಜೆ ದೀಪಗಳನ್ನು ದಾನ ಮಾಡಿದರೆ ಒಳ್ಳೆಯದು



Click it and Unblock the Notifications
