Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಶ್ರಾವಣ ಮಾಸ: ಶಿವನಿಗೆ ಯಾವ ವಸ್ತುಗಳಿಂದ ಅಭಿಷೇಕ ಮಾಡಿದರೆ ಏನು ಫಲ ಸಿಗುವುದು?
ಶ್ರಾವಣ ಮಾಸವೆಂದರೆ ಶಿವನ ಪೂಜೆಗೆ ಮೀಸಲಾದ ಮಾಸ. ಈ ಮಾಸದಲ್ಲಿ ಮಾಡುವ ಶಿವ ಪೂಜೆಯಿಂದ ಹೆಚ್ಚಿನ ಫಲ ಸಿಗುವುದು ಎಂಬ ಧಾರ್ಮಿಕ ನಂಬಿಕೆ ಇದೆ. ಅದರಲ್ಲೂ ಶ್ರಾವಣ ಸೋಮವಾರಂತೂ ಶಿವ ಪೂಜೆಗೆ ಶ್ರೇಷ್ಠವಾದ ದಿನವಾಗಿದೆ.
ಶಿವ ಪೂಜೆ ಮಾಡುವಾಗ ಶಿವನಿಗೆ ಅಭಿಷೇಕ ಮಾಡಲಾಗುವುದು. ಶಿವನಿಗೆ ಅಭಿಷೇಕ ಮಾಡಲು ನೀರು, ಹಾಲು, ತುಪ್ಪ ಸೇರಿದಂತೆ ಹಲವು ವಸ್ತುಗಳನ್ನು ಬಳಸಲಾಗುವುದು. ನಾವು ನಮ್ಮ ಇಷ್ಟಾರ್ಥ ನೆರವೇರಲು ಅದಕ್ಕೆ ತಕ್ಕ ವಸ್ತುವಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ನಮ್ಮ ಆಸೆ ಬೇಗನೆ ನೆರವೇರುವುದು. ಯಾವ ವಸ್ತುವಿನಿಂದ ಅಭಿಷೇಕ ಮಾಡಿದರೆ ಏನು ಪ್ರಯೋಜನ ಎಂದು ನೋಡೋಣ ಬನ್ನಿ:

ಜಲಾಭಿಷೇಕ
ನಮ್ಮ ಇಷ್ಟಾರ್ಥ ನೆರವೇರಲು ಜಲಾಭಿಷೇಕ ಮಾಡಿದರೆ ಒಳ್ಳೆಯದು.
ಪಂಚಗವ್ಯಂ: ಹಾಲು, ಮೊಸರು, ತುಪ್ಪ, ಗೋಮೂತ್ರ, ಸೆಗಣಿಯಿಂದ ಮಾಡುವ ಅಭಿಷೇಕ.
ಈ ಅಭಿಷೇಕ ಮಾಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತರಾಗಬಹುದು.
ಪಂಚಾಮೃತ ಅಭಿಷೇಕ ( ಬಾಳೆಹಣ್ಣು, ಬೆಲ್ಲ, ಸಕ್ಕರೆ, ಬೀಜವಿಲ್ಲದ ಖರ್ಜೂರ, ಜೇನು, ಡ್ರೈ ಫ್ರೂಟ್ಸ್) ಇವುಗಳಿಂದ ಅಭಿಷೇಕ ಮಾಡಲಾಗುವುದು. ಇದರಿಂದ ಆರೋಗ್ಯ ವೃದ್ಧಿಸುವುದು.
ತುಪ್ಪದ ಅಭಿಷೇಕ: ಶಿವಲಿಂಗಕ್ಕೆ ತುಪ್ಪದ ಅಭಿಷೇಕ ಮಾಡುವುದರಿಂದ ಮೋಕ್ಷ ಸಿಗಲಿದೆ.
ಹಾಲಿನ ಅಭಿಷೇಕ: ಶಿವ ಲಿಂಗಕ್ಕೆ ಅಭಿಷೇಕ ಮಾಡುವುದರಿಂದ ದೀರ್ಘಾಯುಷ್ಯ ದೊರೆಯಲಿದೆ.
ಮೊಸರಿನ ಅಭಿಷೇಕ: ಸಂತಾನ ಭಾಗ್ಯ, ಮಕ್ಕಳ ಆರೋಗ್ಯಕ್ಕಾಗಿ ಮೊಸರಿನ ಅಭಿಷೇಕ ಮಾಡಲಾಗುವುದು.
ಜೇನಿನಿಂದ ಅಭಿಷೇಕ: ಸಂಗೀತ ಜ್ಞಾನ, ಜ್ಞಾನ ವೃದ್ಧಿಗಾಗಿ ಈ ಅಭಿಷೇಕ ಮಾಡಲಾಗುವುದು.
ಅಕ್ಕಿ ಹಿಟ್ಟಿನಿಂದ ಅಭಿಷೇಕ: ಅಕ್ಕಿ ಹಿಟ್ಟಿನಿಂದ ಅಭಿಷೇಕ ಮಾಡುವುದರಿಂದ ಸಾಲದಿಂದ ಮುಕ್ತರಾಗಬಹುದು.
ಕಬ್ಬಿನರಸದ ಹಾಲು: ಶತ್ರುನಾಶಕ್ಕೆ, ಉತ್ತಮ ಆರೋಗ್ಯಕ್ಕಾಗಿ ಅಭಿಷೇಕ ಮಾಡಲಾಗುವುದು.
ನಿಂಬೆರಸ: ಸಾವಿನ ಭಯ ಹೋಗಲಾಡಿಸಲು, ಕಾಯಿಲೆಯಿಂದ ಗುಣಮುಖರಾಗಲು ನಿಂಬೆರಸದಿಂದ ಅಭಿಷೇಕ ಮಾಡಲಾಗುವುದು.
ಎಳನೀರಿನ ಅಭಿಷೇಕ: ಜೀವನದಲ್ಲಿ ಸುಖ, ನೆಮ್ಮದಿಗಾಗಿ ಈ ಅಭಿಷೇಕ ಮಾಡಲಾಗುವುದು.
ಅನ್ನಾಭಿಷೇಕ: ಸಂಪತ್ತು ವೃದ್ಧಿಗಾಗಿ ಈ ಅಭಿಷೇಕ ಮಾಡಲಾಗುವುದು.
ಲಕ್ಷ್ಮಿ ಕೃಪೆಗಾಗಿ: ಶ್ರೀ ಚಂದನದ ಪೇಸ್ಟ್ ಹಚ್ಚಿ ಅಭಿಷೇಕ ಮಾಡುವುದರಿಂದ ಲಕ್ಷ್ಮಿ ಕೃಪೆ ದೊರೆಯಲಿದೆ.
ಲಿಂಗಕ್ಕೆ ಸಕ್ಕರೆ ಅಭಿಷೇಕ: ಶತ್ರುನಾಶಕ್ಕೆ ಸಕ್ಕರೆಯಿಂದ ಅಭಿಷೇಕ ಮಾಡಿದರೆ ಒಳ್ಳೆಯದು.
ಗಂಗಾಜಲದ ಅಭಿಷೇಕ: ಜಲಾಭಿಷೇ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.
ಶಿವ ಮಂತ್ರಗಳು
ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು.
ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ಈ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದು ಗೊತ್ತಿರಬೇಕು, ಸ್ಪಷ್ಠವಾಗಿ ಪಠಿಸಬೇಕು. ಈ ಮಂತ್ರವನ್ನು ಹೇಳುವುದರಿಂದಾಗಿ ಸಾವನ್ನು ಗೆಲ್ಲುವ ಶಕ್ತಿ ದೊರೆಯುತ್ತದೆ. ಸಾವಿನ ಭಯ ದೂರಾಗುವುದು.
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಗಾಯತ್ರೀ ಮಂತ್ರ ತುಂಬಾನೇ ಶಕ್ತಿಶಾಲಿಯಾಗಿರುವ ಮಂತ್ರ . ಅದರಲ್ಲಿ ಇದು ಶಿವ ಗಾಯತ್ರೀ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.



Click it and Unblock the Notifications
