Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸ 2023 : ಈ ನಾಲ್ಕು ರಾಶಿಯವರಿಗೆ 2 ತಿಂಗಳು ಆಪತ್ತು ತಪ್ಪಿದ್ದಲ್ಲ!
ಶ್ರಾವಣ ಮಾಸವನ್ನು ಹಿಂದೂಗಳ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶಿವಲಿಂಗಕ್ಕೆ ಪವಿತ್ರ ನೀರಿನ ಅಭಿಷೇಕವನ್ನು ಮಾಡೋದ್ರ ಮೂಲಕ ಶಿವನು ಸಂತುಷ್ಟಗೊಳ್ಳುತ್ತಾನಂತೆ. ಅಷ್ಟೇ ಅಲ್ಲದೇ, ನಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.
ಬರೋಬ್ಬರಿ 19 ವರ್ಷಗಳ ನಂತರ ಎರಡು ತಿಂಗಳುಗಳ ಕಾಲ ಶ್ರಾವಣ ಮಾಸ ಬರುತ್ತಿದ್ದು, ಇದನ್ನು ತುಂಬಾನೇ ವಿಶೇಷ ಅಂತಾನೂ ಪರಿಗಣಿಸಲಾಗುತ್ತದೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶ್ರಾವಣ ಮಾಸ ಕೆಲವು ರಾಶಿಯವರಿಗೆ ತುಂಬಾನೇ ಒಳ್ಳೆಯದಾಗಲಿದೆ. ಆದರೆ ಇನ್ನೂ ಕೆಲವು ರಾಶಿಯವರಿಗೆ ಈ ಶ್ರಾವಣ ಮಾಸದಲ್ಲಿ ಸಂಕಷ್ಟಗಳನ್ನು ಎದುರಿಸಲಿದ್ದಾರೆ. ಅಷ್ಟಕ್ಕು ಯಾವೆಲ್ಲಾ ರಾಶಿಯವರಿಗೆ ಈ ಶ್ರಾವಣ ಮಾಸದಲ್ಲಿ ಸಮಸ್ಯೆಗಳು ಎದುರಾಗುತ್ತೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಈ ತಿಂಗಳು ಸಾಕಷ್ಟು ಸವಾಲುಗಳನ್ನು ಅನುಭವಿಸಬೇಕಾಗುತ್ತದೆ. ಈ ಶ್ರಾವಣವು ಕರ್ಕಾಟಕ ರಾಶಿವರಿಗೆ ಅಷ್ಟೇನು ಚೆನ್ನಾಗಿ ಇರೋದಿಲ್ಲ. ನೀವು ಅಂದುಕೊಂಡ ಕೆಲವುಗಳು ಈ ಸಮಯದಲ್ಲಿ ನೆರವೇರೋದಿಲ್ಲ. ಶುಭ ಕೆಲಸಕ್ಕೆ ಅಡ್ಡಿ-ಆತಂಕಗಳು ಎದುರಾಗುತ್ತದೆ. ಹೀಗಾಗಿ ಯಾವುದೇ ಕೆಲಸವನ್ನು ಮಾಡಬೇಕಾದರೆ ಈ ತಿಂಗಳು ತುಂಬಾನೇ ಜಾಗರೂಕತೆ ವಹಿಸಿದ್ರೆ ಉತ್ತಮ.
ತುಲಾ ರಾಶಿ
ತುಲಾ ರಾಶಿಯವರು ಈ ಶ್ರಾವಣ ತಿಂಗಳಿನಲ್ಲಿ ಆದಷ್ಟು ಜಾಗರೂಕರಾಗಿ ಇರಬೇಕು. ಪ್ರತಿಯೊಂದು ಹೆಜ್ಜೆ-ಹೆಜ್ಜೆಗೂ ನಿಮಗೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇರುತ್ತದೆ. ನಿಮ್ಮ ವೃತ್ತಿ ಜೀವನ, ಕೌಟುಂಬಿಕ, ಆರ್ಥಿಕ ಹಾಗೂ ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ಬಿಟ್ಟರೆ ನಿಮ್ಮ ಜೀವನ ಸ್ಥಿರವಾಗಿ ಸಾಗುತ್ತದೆ. ಆದರೆ ಕೆಲವೊಂದು ವಿಚಾರಗಳಲ್ಲಿ ಜಾಗರೂಕತೆ ವಹಿಸಿದರೆ ಒಳ್ಳೆಯದು. ಇನ್ನೂ ನಿಮ್ಮ ಕೌಟುಂಬಿಕ ಸಮಸ್ಯೆಗಳಿಂದಾಗಿ ನೀವು ಈ ತಿಂಗಳಿನಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರು ಈ ಶ್ರಾವಣ ತಿಂಗಳಿನಲ್ಲಿ ಕೆಲವೊಂದು ಅಡೆ-ತಡೆಗಳನ್ನು ಎದುರಿಸಲಿದ್ದಾರೆ. ಕೈಗೆತ್ತಿಕೊಂಡ ಯಾವುದೇ ಕೆಲಸಗಳು ಪೂರ್ಣಗೊಳ್ಳೋದಿಲ್ಲ. ನೀವು ಎಷ್ಟೇ ಶ್ರಮ ಪಟ್ಟರೂ ಕೂಡ ನೀವು ಮಾಡಿದ ಯಾವುದೇ ಕೆಲಸಗಳಿಗೂ ಫಲ ಸಿಗೋದಿಲ್ಲ. ಇದರಿಂದಾಗಿ ನಿಮ್ಮಲ್ಲಿ ಒತ್ತಡ ಹೆಚ್ಚಾಗುವುದು ಮಾತ್ರವಲ್ಲದೇ, ಇದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಶ್ರಾವಣ ಕಳೆದ ನಂತರ ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಅಲ್ಲಿಯವರೆಗೂ ಸಮಾಧಾನದಿಂದರಬೇಕು.
ಕುಂಭ ರಾಶಿ
ಕುಂಭ ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಈ ತಿಂಗಳಿನಲ್ಲಿ ಎದುರಿಸಲಿದ್ದೀರಿ. ಇನ್ನೂ ಈ ಶ್ರಾವಣ ತಿಂಗಳಿನಲ್ಲಿ ನಿಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಅನೇಕ ಸಮಸ್ಯೆಗಳು ಎದುರಾಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿ ಕಿರಿ, ನೀವೇನಾದರೂ ಹೊಸ ಕೆಲಸಕ್ಕೆ ಸೇರ್ಪಡೆಗೊಳ್ಳೋದಕ್ಕೆ ಆಲೋಚಿಸಿದ್ದರೆ ಅದು ಸಾಧ್ಯವಾಗೋದಿಲ್ಲ. ಉತ್ತಮ ಉದ್ಯೊಗ ಅವಕಾಶ ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆಗಳಿದೆ. ನಿಮ್ಮ ಗ್ರಹ ಗತಿಗಳು ಚೆನ್ನಾಗಿ ಇಲ್ಲದ ಕಾರಣ ಈ ಎಲ್ಲಾ ಸಮಸ್ಯೆ ಎದುರಾಗುತ್ತದೆ.
ಯಾವೆಲ್ಲಾ ರಾಶಿಯವರಿಗೆ ಶುಭ?
ಈ ಶ್ರಾವಣ ಮಾಸದಲ್ಲಿ ಈ ಮೇಲಿನ ನಾಲ್ಕು ರಾಶಿಯವರಿಗೆ ಅಶುಭವಾದರೆ ಸಿಂಹ, ಕರ್ಕಾಟಕ, ಧನುರಾಶಿಯವರಿಗೆ ಈ ತಿಂಗಳು ತುಂಬಾನೇ ಒಳ್ಳೆಯದಾಗಲಿದೆ. ಸ್ವಯಂ ಅನ್ವೇಷಣೆ, ಆಧ್ಯಾತ್ಮಿಕ ಬೆಳವಣಿಗೆ, ಭಾವನಾತ್ಮಕವಾಗಿ ನಿಮ್ಮ ಮನಸ್ಸು ಖುಷಿಯಾಗಿರುತ್ತದೆ ಹಾಗೂ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಶ್ರಾವಣ ತಿಂಗಳು ಈ ನಾಲ್ಕು ರಾಶಿಯವರಿಗೆ ಅಷ್ಟೇನು ಶುಭ ಫಲಿತಾಂಶಗಳನ್ನು ಕೊಡೋದಿಲ್ಲ. ಹೀಗಾಗಿ ಜಾಗರೂಕರಾಗಿದ್ದರೆ ತುಂಬಾನೇ ಒಳ್ಳೆಯದು.



Click it and Unblock the Notifications

