Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕುರಿ ಮೇಲೆ 'ರಾಮ್' ಎಂದು ಬರೆದು ಮಾರಾಟ..! ಈ ಫೋಟೋ ಹಿಂದಿದೆ ಅಚ್ಚರಿ ಕಥೆ..!
ಇಂದು ವಿಶ್ವದಾದ್ಯಂತ ಬಕ್ರೀದ್ ಆಚರಣೆ ನಡೆಯುತ್ತಿದೆ. ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿ ಮುಸ್ಲಿಂ ಸಮುದಾಯ ಈ ಹಬ್ಬವನ್ನು ಆಚರಿಸುತ್ತದೆ. ಈ ಹಬ್ಬದಲ್ಲಿ ಪ್ರಾಣಿ ಬಲಿ ಹಾಗೂ ದಾನ, ಧರ್ಮ ಮಾಡುವುದು ಅವರ ಆಚರಣೆ, ಸಂಪ್ರದಾಯದಲ್ಲಿ ಒಂದಾಗಿದೆ.
ಆದರೆ ಇಲ್ಲೊಂದು ಕಡೆ ಬಕ್ರೀದ್‌ಗಾಗಿ ಬಲಿ ನೀಡಲು ಕುರಿಯ ಮೈಮೇಲೆ ರಾಮ್ ಎಂದು ಬರೆದಿದ್ದ ಕುರಿಯ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂಬೈನ ಮುಂಸ್ಲಿಂ ವ್ಯಾಪಾರಿಯೊಬ್ಬರು ಕುರಿ ಮೇಲೆ ರಾಮ್ ಎಂದು ಬರೆದು ಬಕ್ರೀದ್ ಸಂದರ್ಭದಲ್ಲಿ ಮಾರಾಟ ಮಾಡಿರುವ ಫೋಟೋ ಇದಾಗಿದೆ. ಈ ಫೋಟೋ ವೈರಲ್ ಆದ ಬಳಿಕ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಹಿಂದೂ ಸಂಘಟನೆಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದವು. ಇನ್ನು ಕೆಲವರು ವ್ಯಾಪಾರಿ ವಿರುದ್ಧ ಸಿಬಿಡಿ ಬೇಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆದರೆ ಈಗ ಆತನ ಬಂಧಿಸಲಾಗಿದೆ. ಆದರೆ ಈ ಫೋಟೋ ಹಿಂದಿರುವ ಒಂದಿಷ್ಟು ನಿಜಾಂಶ ನಾವೀಗ ಪತ್ತೆ ಮಾಡೋಣ.
ರಾಮ್ ಎಂದರೆ ಅಯೋಧ್ಯೆ ರಾಮನ ಹೆಸರಲ್ಲ ಬದಲಿಗೆ ರಾಮ್ ಎಂದರೆ ಕುರಿ ಜಾತಿಗೆ ಸೇರಿದ ಪ್ರಾಣಿಯ ಹೆಸರಾಗಿದೆ. ರಾಮ್ ಗಂಡು ಕುರಿಗಳ ಜಾತಿಯ ಪ್ರಾಣಿ. ಕುರಿಯಂತೆ ಕಂಡು ಬಂದರು ಇದು ಭಿನ್ನ ಪ್ರಾಣಿ. ಗುಂಪಿನಲ್ಲಿ ಬದುಕುವ ಈ ರಾಮ್ ಎಂಬ ಪ್ರಾಣಿಯನ್ನ ಬಕ್ರೀದ್‌ನಲ್ಲಿ ಬಲಿಗಾಗಿ ಬಳಸಲಾಗುತ್ತದೆ.
ಆದರೆ ಈ ಕುರಿತು ಅರ್ಥ ಮಾಡಿಕೊಳ್ಳಬೇಕಾದ್ರೆ ನಾವು ಹಿಂದಿನ ಕಥೆಯನ್ನ ನೋಡಬೇಕಾಗುತ್ತದೆ. ಈ ರಾಮ್ ಎಂಬ ಪ್ರಾಣಿಯನ್ನೇ ಏಕೆ ಬಲಿಗಾಗಿ ಆಯ್ಕೆ ಮಾಡಿಕೊಳ್ಳಲಾಯ್ತು ಎಂಬ ಕುರಿತು ನಾವು ತಿಳಿದುಕೊಳ್ಳಬೇಕು.
ಈದ್ ಅಲ್-ಅಧಾ (ಈದ್ ಉಲ್ ಅಧಾ) ಅಥವಾ "ತ್ಯಾಗದ ಹಬ್ಬ", ಇಸ್ಲಾಂನಲ್ಲಿ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪರ್ಯಾಯವಾಗಿ ಬಕ್ರೀದ್, ಬಕ್ರ ಈದ್ ಅಥವಾ ಬಕ್ರಿ ಈದ್ ಎಂದು ಕರೆಯಲಾಗುತ್ತದೆ, ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ಧು ಅಲ್-ಹಿಜ್ಜಾದ ಹತ್ತನೇ ದಿನದಂದು ಮುಸ್ಲಿಂ ಸಮುದಾಯದ ನಮ್ಮ ಸಹೋದರರು ಮತ್ತು ಸಹೋದರಿಯರು ಈ ದಿನವನ್ನು ಆಚರಿಸುತ್ತಾರೆ.
ಪ್ರವಾದಿ ಇಬ್ರಾಹಿಂ ಅವರು ತನಗೆ ಪ್ರಿಯವಾದ ವಿಷಯವನ್ನು ಕೇಳಿದಾಗ ತನ್ನ ನೆಚ್ಚಿನ ಮಗ ಇಸ್ಮಾಯಿಲ್ ಅನ್ನು ದೇವರಿಗೆ ಬಲಿಕೊಡುವ ದಿನವನ್ನಾಗಿ ಇದು ಆಚರಣೆಗೆ ಬಂದಿದೆ. ದೇವರು ಅಲ್ಲಾಹನ ಮೇಲಿನ ಭಕ್ತಿ ಮತ್ತು ಪ್ರೀತಿಯನ್ನು ಸಾಬೀತುಪಡಿಸಲು ತನಗೆ ಪ್ರಿಯವಾದ ವಸ್ತುವನ್ನು ತ್ಯಾಗ ಮಾಡುವಂತೆ ಕೇಳಿಕೊಂಡನು. ಅವನ ಆಜ್ಞೆಯನ್ನು ತೆಗೆದುಕೊಂಡ ಪ್ರವಾದಿ ಇಬ್ರಾಹಿಂ ತನ್ನ ಮಗನನ್ನು ಅಲ್ಲಾಗೆ ವಿಧೇಯತೆಯ ಕ್ರಿಯೆಯಾಗಿ ಬಲಿಕೊಡಲು ನಿರ್ಧರಿಸಿದನು.
ಸರ್ವಶಕ್ತನಿಗೆ ಅವನ ನಿಷ್ಠೆ ಮತ್ತು ಬದ್ಧತೆಯಿಂದ ಸಂತೋಷಗೊಂಡ ಅಲ್ಲಾ ತನ್ನ ಮಗನನ್ನು ತ್ಯಾಗ ಮಾಡಿ ಬಲಿ ಕೊಡುವಾಗ ಪುತ್ರನ ಜಾಗದಲ್ಲಿ ಕುರಿಯೊಂದು ಪ್ರತ್ಯಕ್ಷವಾಯಿತು. ಇದು ರಾಮ್ ಎಂದು ಕರೆಯಲಾಗುವ ಪ್ರಾಣಿಯಾಗಿತ್ತು. ಬಲಿಕ ಇದೇ ರಾಮ್ ಅನ್ನು ಬಲಿ ಕೊಡಲಾಯಿತು. ಇಲ್ಲಿಂದಲೇ ಬಕ್ರೀದ್ ದಿನದಂದು ಪ್ರಾಣಿ ಬಲಿ ನಡೆದುಕೊಂಡು ಬಂದಿದೆ.
ಆದರೆ ಬರು ಬರುತ್ತಾ ಈ ರಾಮ್ ಪ್ರಾಣಿಯ ದರ ಗಗನಕ್ಕೇರಿತ್ತು. ಇವುಗಳ ಸಂಖ್ಯೆಯೂ ಕಡಿಮೆಯಾಯಿತು, ಬಡ ಮುಸ್ಲಿಮರು ಬಕ್ರೀದ್ ಆಚರಿಸಲಾಗದ ಪರಿಸ್ಥಿತಿಗೆ ತಲುಪಿದರು. ರಾಮ್ ಖರೀದಿಸಲು ಹಲವು ಮುಸ್ಲಿಮರು ಆಸ್ತಿ ಮಾರಬೇಕಾದ ಸ್ಥಿತಿ ಎದುರಾದಾಗ ಅವರು ರಾಮ್ ಬದಲು ಕುರಿ, ಮೇಲೆ, ಒಂಟೆ, ಹಸುಗಳ ಬಲಿಗೆ ಮುಂದಾದರು. ಮುಂದೆ ಇದೇ ರೀತಿ ಕುರಿ ಅಥವಾ ಮೇಕೆ ಬಲಿ ನೀಡುವುದು ನಡೆದುಕೊಂಡು ಬಂದಿದೆ.
ಹೀಗಾಗಿ ನಾವು ಈ ಪ್ರಕರಣದಲ್ಲೂ ಸಹ ಇದೇ ರೀತಿ ಅರ್ಥೈಸ ಬಹುದಾಗಿದೆ. ಸಾಮಾನ್ಯವಾಗಿ ಈಗ ಗಂಡು ಕುರಿ ಅಥವಾ ಟಗರಿಗೆ ರಾಮ್ ಎಂದು ಅವರು ಬರೆದಿರಲೂಬಹುದು. ಅಥವಾ ಈ ಪ್ರಕರಣದಲ್ಲಿ ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ.



Click it and Unblock the Notifications
