Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಶಿಖರ್ ಧವನ್ ಲಡ್ಡು ಮುತ್ತಯ್ಯ ಟ್ರೆಂಡ್, ರಾಜಕಾರಣಿಗೆ 7 ಸೆಕೆಂಡ್‌ನಲ್ಲಿ 5 ಬಾರಿ ನಮಸ್ಕರಿಸಿದ ಐಎಎಸ್ ಆಫೀಸರ್: ವೈರಲ್ ವೀಡಿಯ
ಇಂದಿನ ವೈರಲ್ ವೀಡಿಯೋ ಗಮನಿಸಿದಾಗ ಹತ್ತು ಹಲವು ಇಂಟೆರೆಸ್ಟಿಂಗ್ ಸಂಗತಿಗಳು ಗಮನ ಸೆಳೆದವು. ಲಡ್ಡು ಮುತ್ಯಾ ಟ್ರೆಂಡ್ ಮಾಡಿದ ಶಿಖರ್ ಧವನ್, ರಾಜಕಾರಣಿಗೆ 7 ಸೆಕೆಂಡ್‌ನಲ್ಲಿ 5 ಬಾರಿ ನಮಸ್ಕರಿಸಿದ ಐಎಎಸ್ ಆಫೀಸರ್, ಮನಿಪಾಲ್ ಇನ್ಸಿಟ್ಯೂಟ್‌ನ ಡೈರೆಕ್ಷರ್ ಮಾಡಿದ ಕ್ಯಾಂಪಸ್ ಟೂರ್, ಫುಡ್ ವ್ಲೋಗರ್‌ಗೆ ಆಹಾರ ನಿರಾಕರಿಸಿದ ಹೋಟೆಲ್ ಮಾಲೀಕ ಸಂಗತಿಗಳು ವೀಕ್ಷಕರ ಗಮನ ಸೆಳೆದಿರುವುದರಿಂದ ಟಾಪ್ ಟ್ರೆಂಡ್‌ನಲ್ಲಿದೆ...
ಲಡ್ಡು ಮುತ್ತಯ್ಯ ಟ್ರೆಂಡ್‌ಗೆ ಸೇರಿದ ಶಿಖರ್ ಧವನ್
ತುಂಬಾನೇ ಟ್ರೆಂಡ್‌ನಲ್ಲಿದೆ ಲಡ್ಡು ಮುತ್ತಯ್ಯ, ತಿರುಗುತ್ತಿರುವ ಫ್ಯಾನ್ ಅನ್ನು ಬರಿ ಕೈಯಲ್ಲಿ ನಿಲ್ಲಿಸುವುದೇ ಈ ಲಡ್ಡು ಮುತ್ತಯ್ಯ ಟ್ರೆಂಡ್. ಲಡ್ಡು ಮುತ್ತಯ್ಯನನ್ನು ಕರ್ನಾಟಕದಲ್ಲಿ ದೇವ ಪುರುಷ ಎಂದು ಆರಾಧಿಸಲಾಗುತ್ತಿದೆ, ಅವರು ತಿರುಗುತ್ತಿರುವ ಫ್ಯಾನ್ ಬರಿಗೈಯಲ್ಲಿ ಮುಟ್ಟಿ ನಿಲ್ಲಿಸುವ ಮೂಲಕ ಪವಾಡ ಎಂಬಂತೆ ತೋರಿಸಿದರು, ಅದಾಗಿದ್ದೇ ತುಂಬಾ ಜನರು ಅದನ್ನು ಅನುಸರಿಸಲು ಆರಂಭಿಸಿದರು. ಕೆಲವರು ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಿ ಇದು ಏನೂ ಪವಾಡವಲ್ಲ ಎಂಬುವುದನ್ನು ಹೇಳಿದರು.

ಇದೀಗ ಕ್ರಿಕಟಿಗ ಶಿಖರ್ ಧವನ್ ಕೂಡ ಲಡ್ಡು ಮುತ್ತಯ್ಯ ಟ್ರೆಂಡ್ ಮಾಡಿದ್ದು ಆ ವೀಡಿಯೋಗೆ 60 ಮಿಲಿಯನ್‌ಗೆ ವ್ಯೂವ್ಸ್ ಬಂದಿದೆ. ಮೂರು ಜನ ಶಿಖರ್ ಧವನ್‌ನ ಎತ್ತಿಕೊಂಡಿದ್ದಾರೆ, ಧವನ್ ಕೈಯ್ಯಲ್ಲಿಯೇ ಫ್ಯಾನ್ ನಿಲ್ಲಿಸಿ ನಂತರ ಅವರಿಗೆ ಆಶೀರ್ವಾದ ಮಾಡುವಂತೆ ನಟಿಸಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗಿದೆ.
ಕ್ಯಾಂಪಸ್ ಟೂರ್ ಮಾಡಿದ ಡೈರೆಕ್ಟರ್: ಬೆಸ್ಟ್ ಕ್ಯಾಂಪಸ್ ಟೂರ್ ಅಂತಿದ್ದಾರೆ ನೆಟ್ಟಿಗರು
ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯೂನಿಕೇಷನ್ ಡೈರೆಕ್ಟರ್ ಕ್ಯಾಂಪಸ್ ಬಗ್ಗೆ ಹೇಳಬೇಕಾಗಿರುವ ವಿಷಯವನ್ನು ಎಷ್ಟೊಂದು ಚೊಕ್ಕವಾಗಿ ಹಾಗೂ ಕ್ರಿಯೇಟಿವ್ ಆಗಿ ಹೇಳಿದ್ದಾರೆ ನೋಡಿ. ಎಲ್ಲಾ ಕ್ಯಾಂಪಸ್ ಟೂರ್ ಈ ರೀತಿ ಇರಬೇಕು ಅಂತಿದ್ದಾರೆ ನೆಟ್ಟಿಗರು.
ರಾಜಕಾರಣಿಗೆ 7 ಸೆಕೆಂಡ್‌ನಲ್ಲಿ 5 ಬಾರಿ ನಮಸ್ಕರಿಸಿದ ಐಎಎಸ್ ಆಫೀಸರ್
ಐಎಎಸ್ ಆಫೀಸರ್ ಎಂದರೆ ಅದಕ್ಕೆ ಗತ್ತು, ಪವರ್ ಎಲ್ಲಾ ಇರುತ್ತದೆ. ರಾಜಕಾರಣಿಗಳಿಗೆ ಗೌರವಿಸಬೇಕು, ಆದರೆ ಈ ಪಾಟಿ ನಮಸ್ಕರಿಸಬೇಕಾ ಎಂದು ನೆಟ್ಟಿಗರು ಕೇಳ್ತಾ ಇದ್ದಾರ. ಬಿಜೆಪಿ ನಾಯಕ ಸತೀಶ್ ಪೂನಿಯಾ ಬಂದಾಗ ಐಎಎಸ್ ಆಫೀಸರ್ ಟೀನಾ ದಾಬಿ ಒಂದು ಬಾರಿ ನಮಸ್ಕರಿಸುತ್ತಾರೆ, ಮತ್ತೆ ನಮಸ್ಕರಿಸುತ್ತಾರೆ, ಮತ್ತೆ ನಮಸ್ಕಾರ ಮಾಡುತ್ತಾರೆ , ಬರಿ 7 ಸೆಕೆಂಡ್‌ನಲ್ಲಿ 5 ಬಾರಿ ನಮಸ್ಕಾರ ಮಾಡಿದ ವೀಡಿಯೋ ಇದೀಗ ತುಂಬಾನೇ ವೈರಲ್ ಆಗುತ್ತಿದೆ.
ಫುಡ್ ವ್ಲೋಗ್ ನಿರಾಕರಿಸಿದ ಹೋಟೆಲ್ ಮಾಲೀಕ
ಒಬ್ಬ ವ್ಯಕ್ತಿ ಬಂದು ದುಡ್ಡು ಕೊಟ್ಟು ರೋಲ್ ಆರ್ಡರ್ ಮಾಡ್ತಾರೆ, ಈತನೂ ದುಡ್ಡ ಪಡೆದು ಕೊಡ್ತೀನಿ ಅಂತಾನೆ, ನಂತರ ಆತನಿಗೆ ಆತನ ದುಡ್ಡು ವಾಪಾಸ್ ಕೊಟ್ಟು ನಿಮಗೆ ಆಹಾರ ನೀಡಲ್ಲ ಅಂತಾನೆ. ಏಕೆ ಎಂದು ಕೇಳಿದರೆ ನೀವು ಕ್ಯಾಮರಾ ತಗೊಂಡು ಫುಡ್ ಫ್ಲೋಗ್ ಮಾಡಲು ಬಂದರೆ ಒಪ್ಪಲ್ಲ ಬೇರೆ ಕಡೆ ಹೋಗಿ ಅಂತಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವರು ಫುಡ್ ವ್ಲೋಗ್ ಹೆಸರಿನಲ್ಲಿ ಏನೋ ಬರೆದು ಹಾಕುವುದು ಇದರಿಂದ ಅವರ ಬ್ಯುಸ್‌ನೆಸ್ ಬಂದ್ ಮಾಡಬೇಕಾಗಿ ಬರಬಹುದು ಅಥವಾ ಬ್ಯುಸ್‌ನೆಸ್ ಕ್ಲಿಕ್ ಆಗಬಹುದು. ಈಗ ಹೇಗೋ ನಡೆದು ಹೋಗುತ್ತಿದೆ ಸುಮ್ಮನೆ ರಿಸ್ಕ್ ಏಕೆ ಎಂದು ಭಾವಿಸಿರಬಹುದು ಹಾಗಾಗಿ ಹಾಗೆ ಹೇಳಿರಬಹುದು.
Kalesh b/w A Food Vlogger and a Shopkeeper (Context in the Clip) pic.twitter.com/7B7MSJXQs0
— Ghar Ke Kalesh (@gharkekalesh) October 23, 2024
ತುಂಬಾ ಫುಡ್ ಬ್ಲಾಗ್ ಮಾಡುವವರು ಎಷ್ಟೋ ಚಿಕ್ಕ ವ್ಯಾಪಾರಿಗಳ ಹೊಟ್ಟೆಗೆ ಹೊಡೆದಿದ್ದಾರೆ
ಹೌದು ನಾವು ಫುಡ್ ಬ್ಲಾಗ್ ಮಾಡ್ತೀವಿ ಎಂದು ಕೆಲವರು ಬಂದು ಚಿಕ್ಕ ವ್ಯಾಪಾರಿಗಳ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಕೂಡ ನೀಡಿದ್ದಾರೆ, ಈ ಕಾರಣಕ್ಕಾಗಿ ಅಂಗಡಿಯವ ನಿರಾಕರಿಸಿದ್ದಾನೆ, ಆತ ಮಾಡಿದ್ದು ಸರಿ ಅಂತಿದ್ದಾರೆ ನೆಟ್ಟಿಗರು, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications











