Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗಂಡ-ಮನೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಕ್ರಾಂತಿಕಾರಿ..!! ಈಕೆ ಬಗ್ಗೆ ನೀವೆಲ್ಲೂ ಕೇಳಿರಲ್ಲ.!
ಭಾರತದ ಈಗ 78ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಲಕ್ಷ ಲಕ್ಷ ಮಂದಿ ಹೋರಾಡಿದ್ದಾರೆ. ಲಕ್ಷಕ್ಕೂ ಅಧಿಕ ಮಂದಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳ ನಿರಂತರ ಹೋರಾಟದ ಬಳಿಕ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಆದ್ರೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಎಲ್ಲರ ಹೆಸರು ನೆನಪಿಟ್ಟುಕೊಳ್ಳುವುದು ಕಷ್ಟವೇ. ಅದ್ರಲ್ಲೂ ಎಲೆ ಮರೆಕಾಯಿಯಂತೆ ಹೋರಾಡಿದವರ ಸಂಖ್ಯೆ ಕೋಟಿಗೂ ಮೀರಿದೆ.
ಈ ಸ್ವಾತಂತ್ರ ಎಂಬ ಕಿಚ್ಚು ಹುಟ್ಟಿಕೊಂಡಾಗ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೆ ಬೀದಿಗೆ ಇಳಿದಿದ್ದರು. ಅವರೆಲ್ಲರ ತ್ಯಾಗದ ಪ್ರತೀಕವಾಗಿ ಸಿಕ್ಕಿರುವ ಸ್ವಾತಂತ್ರ್ಯವನ್ನ ನಾವಿಂದು ಅನುಭವಿಸುತ್ತಿದ್ದೇವೆ. ಅದೆಷ್ಟೋ ಸ್ವಾತಂತ್ರ್ಯ ವೀರರ ನಮ್ಮ ನಡುವೆ ಹೋರಾಡಿ ಈ ನೆಲಕ್ಕಾಗಿ ರಕ್ತ ಹರಿಸಿದ್ದಾರೆ.

ಅಂತಹ ನಾಯಕರ ಪಟ್ಟಿಯಲ್ಲಿ ಈ ವೀರ ವನಿತೆ ಗುಲಾಬ್ ಕೌರ್ ಸಹ ನಿಲ್ಲುತ್ತಾರೆ. ನೀವು ಈಕೆಯ ಹೆಸರು ಎಲ್ಲಿಯೂ ಕೇಳಿರಲು ಸಾಧ್ಯವಿಲ್ಲ, ಏಕೆಂದರೆ ಈಕೆಯ ಹೋರಾಟವೆ ತೆರೆಯ ಹಿಂದೆ. ಇಂತಹ ಸಾವಿರಾರು ಮಂದಿ ನಮ್ಮ ನಡುವೆ ಇದ್ದರೂ ಅವರನ್ನು ಗುರುತಿಸುವಲ್ಲಿ ನಾವು ಮರೆತಿದ್ದೇವೆ.
ಅಮೆರಿಕ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಕೌರ್
ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಬಕ್ಷಿವಾಲಾ ಗ್ರಾಮದಲ್ಲಿ ಸುಮಾರು 1890 ರಲ್ಲಿ ಜನಿಸಿದ್ದ ಕೌರ್, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದೇ ರೋಚಕ. ಮದುವೆಯ ಬಳಿಕ ಅವರು ಅಮೆರಿಕದಲ್ಲಿ ನೆಲೆಸಿದ್ದರು. ಆದರೆ ಆರ್ಥಿಕ ಕಾರಣಗಳಿಂದಾಗಿ ಅವರು ಪಂಜಾಬ್‌ಗೆ ಹಿಂದಿರುಗಬೇಕಾದ ಅನಿವಾರ್ಯತೆ ಎದುರಾಗಿತ್ತು.
ಹೀಗೆ ತವರಿಗೆ ವಾಪಸಾಗುವಾಗ ಅವರು ಗದರ್ ಸಂಘಟನೆಯ ಸದಸ್ಯರನ್ನು ಕಂಡರು. ಆಗ ಈ ಸಂಘಟನೆ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಕ್ರಾಂತಿಕಾರಿಗಳನ್ನೇ ತನ್ನಲ್ಲಿಟ್ಟುಕೊಂಡು ಬ್ರಿಟೀಷರ ನಿದ್ರೆಗೆಡಿಸಿದ್ದರು. ಹೀಗಾಗಿ ಕೌರ್ ಈ ಸಂಘಟನೆಯೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಡುವ ನಿರ್ಧಾರ ಮಾಡಿಯೇ ಬಿಟ್ಟರು.
ಆದರೆ ಮನೆಯಲ್ಲಿ ಪತಿ ಇದಕ್ಕೆ ಅನುಮತಿ ನೀಡಲಿಲ್ಲ. ಪತಿ ಪುನಃ ಅಮೆರಿಕ ತೆರಳಲು ಮುಂದಾದರು. ಆದರೆ ಪತಿಯನ್ನು ಬಿಟ್ಟು ಗುಲಾಬ್ ಕೌರ್ ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿದರು. ಇದಕ್ಕಾಗಿ ಮನೆಯನ್ನೇ ತೊರೆದು ಕ್ರಾಂತಿಕಾರಿಗಳ ಗುಂಪು ಸೇರಿದರು. ಸುಮಾರು 50 ಕ್ರಾಂತಿಕಾರಿಗಳ ಗುಂಪು ಅದಾಗಿತ್ತು. ಬಳಿಕ ಕೌರ್ ಕಪುರ್ತಲಾ, ಹೋಶಿಯಾರ್‌ಪುರ್ ಮತ್ತು ಜಲಂಧರ್‌ನಂತಹ ಸ್ಥಳಗಳಲ್ಲಿ ಸಕ್ರಿಯವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆಯಲು ಸಿದ್ಧರಾದರು. ಸ್ವಾತಂತ್ರ್ಯ ಪಡೆಯಬೇಕಾದರೆ ಕೈಯಲ್ಲಿ ಶಸಸ್ತ್ರ ಹಿಡಿಯಬೇಕು ಎಂದು ಜನರನ್ನು ಒಟ್ಟುಗೂಡಿಸಲು ಮುಂದಾದರು.
ರಾಜದ್ರೋಹದಡಿ ಬಂಧಿಸಿದ ಬ್ರಿಟೀಷರು
ಇತ್ತ ತಮ್ಮ ಸಂಘಟನೆ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದಾಗ ಕ್ರಾಂತಿಕಾರಿಗಳಿಗೆ ಮದ್ದುಗುಂಡು, ಶಸ್ತ್ರಾಸ್ತ್ರ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಬ್ರಿಟಿಷರ ವಿರುದ್ಧ ಕರಪತ್ರ ಹಂಚುವುದು ಗದರ್ ಸಂಘಟನೆ ಸೇರಲು ಯುವಕರನ್ನು ಪ್ರೇರೇಪಿಸುವುದು ಸೇರಿ ಬ್ರಟಿಷರನ ತಂತ್ರಗಳನ್ನು ತಿಳಿದು ತಮ್ಮ ಕ್ರಾಂತಿಕಾರಿಗಳಿಗೆ ಹೇಳುವುದು ಆಕೆಯ ಕೆಲಸವಾಗಿತ್ತು.
ಆದರೆ ಬ್ರಿಟಿಷರ ತಂತ್ರಗಳ ಅರಿಯಲು ಮುಂದಾದಾಗ ಆಕೆಯನ್ನು ಬ್ರಿಟಿಷ್ ಅಧಿಕಾರಿಗಳು ಬಂಧಿಸಿದರು. ನಂತರ ಜೈಲಿನಲ್ಲಿಟ್ಟರು. ಆದರೆ ದುರಾದೃಷ್ಟವಶಾತ್ ಆಕೆಯನ್ನ ಬ್ರಟಿಷರು ಬಿಡುಗಡೆ ಮಾಡಲು ಮುಂದಾಗಲಿಲ್ಲ. ಆಕೆ ರಾಜದ್ರೋಹದ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯನ್ನ ಬಂಧಿಸಲಾಗಿತ್ತು. ಆಕೆಯನ್ನು ಲಾಹೋರ್‌ನ ಶಾಹಿ ಕಿಲಾದಲ್ಲಿ ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಲಾಯಿತು, ಅಲ್ಲಿ ಆಕೆಗೆ ಕಠಿಣ ಶಿಕ್ಷೆ, ಚಿತ್ರಹಿಂಸೆ ನೀಡಲಾಗಿತ್ತು. ಆಕೆ ಅಂತಿಮವಾಗಿ 1931 ರಲ್ಲಿ ನಿಧನರಾದರು.
ಇಂತಹ ನೂರಾರು ನಾಯಕಿಯರು ಸ್ವಾತಂತ್ರ್ಯಕ್ಕಾಗಿ ಜೀವನನ್ನೇ ಬಿಟ್ಟಿದ್ದಾರೆ. ಆದರೆ ಕೆಲವೊಂದು ಕಡೆ ನಾವು ಅವರನ್ನ ಕಡೆಗಣಿಸಿದ್ದೇವೆ. ಅವರನ್ನು ನೆನೆದರೆ ಮಾತ್ರ ಈ ಸ್ವಾತಂತ್ರ್ಯ ಹಬ್ಬದ ಆಚರಣೆ ಅರ್ಥಪೂರ್ಣವಾಗುತ್ತದೆ.



Click it and Unblock the Notifications
