Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಳೆ ಷಟ್ತಿಲಾ ಏಕಾದಶಿ; ವಿಷ್ಣು ಆಶೀರ್ವಾದ ಪಡೆಯಲು ಏನು ಮಾಡಬೇಕು? ಈ ಕಥೆ ಗೊತ್ತಾ?
ಹಿಂದೂ ಪುರಾಣಗಳ ಪ್ರಕಾರ ಎಲ್ಲಾ ಹಬ್ಬಗಳು ಹಾಗೆ ಏಕಾದಶಿಗಳು ಬಹಳ ಪ್ರಮುಖ ಸ್ಥಾನ ನೀಡಲಾಗುತ್ತದೆ. ಏಕಾದಶಿಗಳ ಆಚರಣೆಯಿಂದ ವ್ಯಕ್ತಿಯೊಬ್ಬರ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳು ಸಂಭವಿಸುತ್ತದೆ. ಅದ್ರಲ್ಲೂ ಹಲವು ಏಕಾದಶಿಗಳಿಂದ ಸಂಪತ್ತು, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. ಹಿಂದೂ ನಂಬಿಕೆಯಲ್ಲಿ ಪ್ರತಿ ತಿಂಗಳು ಸಹ ಹಲವು ರೀತಿ ಏಕಾದಶಿಗಳು ಬರುವುದು ನೋಡಬಹುದು.
ಈಗ ಜನವರಿಯ ಮಕರ ಸಂಕ್ರಮಣದ ಸಮಯದಲ್ಲಿ ಪ್ರಮುಖ ಏಕಾದಶಿಯೊಂದನ್ನು ಆಚರಿಸಲಾಗುತ್ತದೆ. ಷಟ್ತಿಲಾ ಏಕಾದಶಿಯನ್ನು ಆಚರಿಸುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಮಾಘ ಮಾಸದ ಕೃಷ್ಣ ಪಕ್ಷದ ದಿನದಂದು ಬರುವ ಷಟ್ತಿಲಾ ಏಕಾದಶಿಯನ್ನು ಇನ್ನೂ ಹೆಚ್ಚು ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. 2026ರ ಮೊದಲ ಏಕಾದಶಿ ಜನವರಿ 14 ರಂದು ಬರುತ್ತದೆ.

ಮಕರ ಸಂಕ್ರಾಂತಿಯ ದಿನದಂದು ಈ ಏಕಾದಶಿ ಆಚರಿಸಲಾಗುತ್ತಿದೆ. ಇದು ಬಹಳ ವಿಶೇಷ ದಿನವೆಂದು ಕರೆಯಲಾಗಿದೆ. ಈ ದಿನವು ವಿಷ್ಣುವಿಗೆ ಸಮರ್ಪಿಸಲಾಗುತ್ತದೆ. ಇನ್ನೊಂದು ಕಡೆ ಸೂರ್ಯ ದೇವನಿಗೆ ಪ್ರಮುಖ ದಿನವಾಗಿ ವಿಷ್ಣುವಿನ ಪೂಜೆ ಮಾಡುವುದು ಷಟ್ತಿಲಾ ಏಕಾದಶಿಯ ವಿಶೇಷವಾಗಿದೆ. ಈ ದಿನದಂದು ಎಳ್ಳನ್ನು ಬಳಸಿ ಯಾವುದಾದರು ಖಾದ್ಯ ತಯಾರಿಸುತ್ತಾರೆ ಅದನ್ನು ನೈವೇದ್ಯವಾಗಿ ಬಳಸುತ್ತಾರೆ.
ಷಟ್ತಿಲಾ ಏಕಾದಶಿಯ ಸಮಯ ಶುಭ ಗಳಿಗೆ ಯಾವಾಗ?
ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ ಪ್ರಾರಂಭವಾಗುತ್ತದೆ
ಜನವರಿ 13, ಮಧ್ಯಾಹ್ನ 03:17 ಕ್ಕೆ
ಏಕಾದಶಿ ತಿಥಿ ಕೊನೆ: ಜನವರಿ 14, ಸಂಜೆ 05:52 ಕ್ಕೆ
ನೀವು ಷಟ್ತಿಲಾ ಏಕಾದಶಿ ಉಪವಾಸವನ್ನು ಆಚರಿಸುತ್ತಿದ್ದರೆ. ಆ ನಿಯಮಗಳನ್ನು ಸಹ ಪಾಲಿಸಿ. ಹಾಗೆ ಜನವರಿ 15 ಬೆಳಗ್ಗೆ 7:15ರ ನಂತರ ನಿಮ್ಮ ಉಪವಾಸ ಮುರಿಬಹುದು.
ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?
ಯಾರು ಈ ಉಪವಾಸ ಆಚರಿಸುತ್ತಾರೋ ಅವರು ವಿಷ್ಣುವಿನ ಪೂಜೆ ಮಾಡಬೇಕು. ಹಾಗೆ ವಿಷ್ಣುವಿನ ಕಥೆ ಕೇಳಬೇಕು. ಷಟ್ತಿಲಾ ಏಕಾದಶಿಯ ದಿನ ಹಸುವಿನ ಸಗಣಿ, ಹತ್ತಿ, ಎಳ್ಳು ಬೆರೆಸಿ ಹಸುವಿಗೆ ರೊಟ್ಟಿಗಳನ್ನು ಮಾಡಿ ಹವನ ಮಾಡಬೇಕು. ಏಕಾದಶಿಯ ದಿನದಂದು ಸಿಹಿತಿಂಡಿ, ತೆಂಗಿನಕಾಯಿ ಅರ್ಘ್ಯವನ್ನು ಅರ್ಪಿಸಿ ವಿಷ್ಣುವನ್ನು ಸ್ತುತಿಸಿ.
ಷಟ್ತಿಲಾ ಏಕಾದಶಿಯ ಕಥೆ ಏನು?
ಪುರಾಣದ ಪ್ರಕಾರ ಪ್ರಾಚೀನ ಕಾಲದಲ್ಲಿ ಮಹಿಳೆಯೊಬ್ಬಳು ವಿಷ್ಣುವಿನ ಆರಾಧಕಿಯಾಗಿದ್ದಳು. ಆಕೆ ವಿಷ್ಣುವಿನ ಯಾವುದೇ ಪೂಜೆ, ಉಪವಾಸ ತಪ್ಪಿಸುತ್ತಿರಲಿಲ್ಲ. ಉಪವಾಸವನ್ನು ಮಾಡಿದ್ದರಿಂದ ಆಕೆ ಸಂಪತ್ತು, ಆರೋಗ್ಯ, ಸಮೃದ್ಧಿ ಪಡೆದಳು. ಹಾಗೆ ವಿಷ್ಣುವನ್ನು ನಂಬಿದರೆ ಮೋಕ್ಷ ಸಿಗುವುದೆಂದು ಭಾವಿಸಿದ್ದಳು, ಅದನ್ನೆ ಪ್ರಚಾರ ಮಾಡಿದಳು. ಆದ್ರೆ ಆಕೆ ಎಂದಿಗೂ ದಾನ ಧರ್ಮದಲ್ಲಿ ಭಾಗಿಯಾಗಲಿಲ್ಲವಂತೆ. ಆಕೆಯ ಮರಣದ ಬಳಿಕ ವೈಕುಂಠಕ್ಕೆ ತೆರಳಿದಳು. ಆದ್ರೆ ವೈಕುಂಠದಲ್ಲಿ ಆಕೆಗೆ ಅಚ್ಚರಿ ಕಾದಿತ್ತು. ಅಲ್ಲಿ ಆಕೆಗೆ ಕೇವಲ ಖಾಲಿಯಾದ ಗುಡಿಸಲು ಮಾತ್ರ ನೀಡಲಾಗಿತ್ತು.
ವಿಷ್ಣುವಿನ ಪರಮ ಭಕ್ತೆಗೂ ವೈಕುಂಠದಲ್ಲಿ ಖಾಲಿ ಗುರಿಸಲು ಸಿಕ್ಕಿತು. ಇದರಿಂದ ನೊಂದ ಮಹಿಳೆ ವಿಷ್ಣುವಿನ ಬಳಿ ತೆರಳಿ ಕೇಳಿದಳಂತೆ. ಪ್ರತಿ ವಾರ ನಿನಗಾಗಿ ಉಪವಾಸ ಮಾಡಿದ್ದೆ, ಒಂದೂ ದಿನವೂ ಬಿಡದೆ ಪೂಜೆ ಮಾಡಿದ್ದೆ ಆದ್ರೆ ಖಾಲಿ ಗುಡಿಸಲು ಏಕೆ ಎಂಬ ಪ್ರಶ್ನೆ ಇಟ್ಟಳು. ನೀನು ಇಷ್ಟೊಂದು ಪೂಜೆ ಮಾಡಿದರೂ, ನಿನ್ನ ಪೂಜೆಯ ಫಲದಿಂದ ವೈಕುಂಠಕ್ಕೆ ಬಂದರೂ, ನಿನ್ನ ಜೀವನದಲ್ಲಿ ನೀನು ಯಾವತ್ತೂ ಏನನ್ನೂ ದಾನ ಮಾಡಿಲ್ಲ ಆದ್ದರಿಂದ ನಿನಗೆ ಈ ಫಲ ಸಿಕ್ಕಿದೆ ಎಂದು ಹೇಳುತ್ತಾನೆ. ಹಾಗೆ ವಿಷ್ಣು ಭಿಕ್ಷುಕನ ವೇಷ ಧರಿಸಿ ಮಹಿಳೆಯ ಮನೆಗೆ ಬಂದಾಗ ಆಕೆ ಪೂಜೆಯ ನಂತರ ಭಿಕ್ಷೆ ನೀಡುವುದಾಗಿಯೂ ಹಾಗೆ ರಾಗಿ ಮುದ್ದೆಯ ಬದಲಾಗಿ ನೀರು ಕೊಟ್ಟು ಕಳುಹಿಸಿರುವುದನ್ನು ವಿಷ್ಣು ವಿವರಿಸಿದನು.
ವಿಷ್ಣುವಿನ ಈ ಮಾತುಗಳ ಕೇಳಿ ಮಹಿಳೆಗೆ ಪಶ್ಚಾತ್ತಾಪವಾಗುತ್ತದೆ. ಆಕೆ ತಾನು ಮಾಡಿದ ತಪ್ಪಿಗೆ ಪರಿಹಾರವೇನು ಎಂಬುದನ್ನು ಕೇಳಿದಳು. ಆಗ ಶ್ರೀ ಹರಿಯು ದೇವ ಕನ್ಯೆಯರು ನಿನ್ನನ್ನು ಭೇಟಿಯಾಗಲು ಬರುತ್ತಾರೆ, ಅವರನ್ನು ನಿನ್ನಗುಡಿಸಲಿಗೆ ಆಹ್ವಾನಿಸಬೇಕು, ನಂತರ ಅವರು ಷಟ್ತಿಲಾ ಏಕಾದಶಿಯ ಉಪವಾಸದ ಕತೆ ಬಗ್ಗೆ ಹೇಳುವವರೆಗೆ ಗುಡಿಸಲ ಬಾಗಿಲು ತೆರೆಯಬೇಡ ಎಂದನು. ಇದಾದ ಬಳಿಕ ದೇವಕನ್ಯೆಯರು ಹೇಳಿದ ಈ ಕಥೆ ಕೇಳಿದ ಬಳಿಕ ಆಕೆಯ ಪಾಪಗಳು ಪರಿಹಾರವಾದವು ಎಂದು ಹೇಳಲಾಗಿದೆ.



Click it and Unblock the Notifications
