Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶತ್ರುಹಂತ ಯೋಗ 2023 : ಈ 3 ರಾಶಿಯವರಿಗೆ ಸಾಕಷ್ಟು ಧನಲಾಭವಾಗಲಿದೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹ ಸ್ಥಾನ ಬದಲಾವಣೆಯಿಂದ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಈ ಬಾರಿ ಗ್ರಹಂಚ ಸೇನಾಪತಿ ಮತ್ತು ಭೂಮಿಚ ಪುತ್ರ ಕನ್ಯಾ ರಾಶಿಯಲ್ಲಿದ್ದಾನೆ. ಇದೇ ವೇಳೆ ಮಂಗಳ ಗ್ರಹದಿಂದಾಗಿ ಕನ್ಯಾ ರಾಶಿಯಲ್ಲಿ ಶತ್ರುಹಂತ ಯೋಗ ಸೃಷ್ಟಿಯಾಗಿದೆ. ಈ ಯೋಗವು ಸೆಪ್ಟೆಂಬರ್ 18 ರವರೆಗೆ ಇರುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಶತ್ರುಹಂತ ಯೋಗಗಳ ಅರ್ಥ ಶತ್ರುಗಳ ನಾಶಕ. ಈ ಯೋಗವನ್ನು ಮಂಗಳಕರ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವಾಗಿ ಮೂರು ರಾಶಿಗಳು ಅದೃಷ್ಟಕರ ಫಲಿತಾಂಶವನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಶುಭಕರ ಫಲಿತಾಂಶವನ್ನು ಪಡೆಯುವ ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮಂಗಳನು ಈ ರಾಶಿಯ ಎಂಟನೇ ಮನೆಯ ಅಧಿಪತಿ. ಈ ಬಾರಿ ಮೇಷ ರಾಶಿಯವರು ಶತ್ರುಹಂತ ಯೋಗದ ಫಲಿತಾಂಶವನ್ನು ಪಡೆಯಲಿದ್ದಾರೆ. ಕಾನೂನು ವಿಷಯಗಳಲ್ಲಿ ನಿಮಗಿದ್ದ ಅಡೆ-ತಡೆಗಳೆಲ್ಲಾ ನಿವಾರಣೆಯಾಗುತ್ತದೆ. ನೀವು ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ನೀವು ಪಟ್ಟ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ವ್ಯಾಪಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಅನುಭವಿ ವ್ಯಕ್ತಿಗಳ ಸಲಹೆಯಿಂದ ಪ್ರಯೋಜನವನ್ನು ಪಡೆಯುತ್ತೀರಿ.
ಕರ್ಕಾಟಕ ರಾಶಿ
ಶತ್ರುಹಂತ ಯೋಗದ ಪರಿಣಾಮವಾಗಿ ಕರ್ಕಾಟಕ ರಾಶಿಯವರು ಸಾಕಷ್ಟು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ಯೋಗದ ಪರಿಣಾಮದಿಂದಾಗಿ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಖ್ಯಾತಿಯನ್ನು ಪಡೆಯಲಿದ್ದಾರೆ. ನಿಮ್ಮ ಆತ್ಮವಿಶ್ವಾಸದ ಬಲದಿಂದ ನೀವು ಎಲ್ಲಾ ಕಷ್ಟಗಳಿಂದ ಮುಕ್ತರಾಗುತ್ತೀರಿ. ವ್ಯಾಪಾರ ಮಾಡುತ್ತಿರುವವರು ಆರ್ಥಿಕ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ಸಾಮಾನ್ಯವಾಗಿ ನೀವು ಅಂದುಕೊಂಡ ಎಲ್ಲಾ ಕೆಲಸಗಳನ್ನು ಪೂರೈಸಲು ಸಾಧ್ಯವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಶತ್ರುಹಂತ ಯೋಗದ ಪ್ರಯೋಜನ ಪಡೆಯಲಿದ್ದಾರೆ. ಹೀಗಾಗಿ ಪ್ರತಿ ಸವಾಲನ್ನು ಎದುರಿಸಲು ದೈರ್ಯವನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ನೀವು ಪ್ರಶಂಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಉದ್ಯೋಗಸ್ಥರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ರಾಜಕಾರಣಿಗಳು ತಮ್ಮ ಪ್ರಭಾವವನ್ನು ಹೆಚ್ಚಿಸುತ್ತಾರೆ. ಮತ್ತು ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳು ನೀವು ಪಡೆಯುವ ಸಾಧ್ಯತೆಗಳಿದೆ. ನಿರುದ್ಯೋಗಿಗಳು ಹೊಸ ಉದ್ಯೋಗ ಪಡೆಯುವ ಸಾಧ್ಯತೆಗಳಿದೆ.



Click it and Unblock the Notifications