Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶನಿಸಾಡೇಸಾತಿ 3 ಹಂತಗಳೇನು, ಇದರ ಪ್ರಭಾವ ಹೇಗಿರಲಿದೆ?
ಶನಿ ಸಾಡೇಸಾತಿ ಎಂದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ, ಕಾರಣ ಅದರ ಪ್ರಭಾವ ಅಷ್ಟೊಂದು ತೀಕ್ಷ್ಣವಾಗಿರುತ್ತದೆ. ಯಾರಿಗೇ ಆಗಲಿ ಶನಿ ಸಾಡೇಸಾತಿ ಶುರುವಾಯಿತು ಅಂದರೆ ಕಷ್ಟಗಳು ಶುರುವಾಯಿತು ಎಂದರ್ಥ. ಏಳೂವರೆ ವರ್ಷ ಶನಿಸಾಡೇಸಾತಿಯ ಪ್ರಭಾವ ಇರುತ್ತದೆ. ಆದರೆ ಏಳೂವರೆ ವರ್ಷ ಅದರ ಪ್ರಭಾವ ಒಂದೇ ರೀತಿ ಇರುವುದಿಲ್ಲ. ಶನಿ ಸಾಡೇಸಾತಿ ಮೂರು ಹಂತದಲ್ಲಿರುತ್ತದೆ ಅವುಗಳ ಬಗ್ಗೆ ವಿವರವಾಗಿ ನೋಡುವುದಾದರೆ...
ಮೊದಲ ಹಂತ
ಶನಿ ಸಾಡೇಸಾತಿಯ ಮೊದಲನೇ ಹಂತದಲ್ಲಿ ಮಾನಸಿಕ ಒತ್ತಡ, ದುಗುಡ ಅಧಿಕವಿರುತ್ತದೆ. ಈ ಸಮಯದಲ್ಲಿ ದುಃಖ, ಖಿನ್ನತೆ, ಮಾನಸಿಕ ಒತ್ತಡ ಎಲ್ಲಾ ಅಧಿಕವಿರಲಿದೆ. ಅಲ್ಲದೆ ಈ ಹಂತದಲ್ಲಿ ಜೀವನದಲ್ಲಿ ಅನೇಕ ಸಮಸ್ಯೆಗಳು ಒಟ್ಟೊಟ್ಟಿಗೆ ಬರುವುದು. ಗಾಯದ ಮೇಲೆ ಉಪ್ಪು ಸೇರಿದಂತೆ ಅಂತ ಹೇಳ್ತಾರಲ್ಲ, ಅದೇ ರೀತಿ ಈ ಹಂತದಲ್ಲಿ ಸವಾಲುಗಳು ಒಂದರ ಮೇಲೆ ಒಂದಂತೆ ಬರುತ್ತಲೇ ಇರುತ್ತದೆ.

ಎರಡನೇ ಹಂತ
ಈ ಹಂತದಲ್ಲಿ ವೃತ್ತಿ ಜೀವನ, ಆರ್ಥಿಕತೆ ಅಥವಾ ಸಂಬಂಧ ಇವುಗಳ ಮೇಲೆ ಪ್ರಭಾವ ಬೀರುವುದು, ಈ ಸಮಯದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲಾಗುವುದು. ಆದರೆ ಈ ಹಂತದಲ್ಲಿ ನೀವು ನಿಮ್ಮ ಗುರಿ ಹಾಗೂ ಕೆಲಸ ಹಾಕಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ಈ ಅವಧಿಯಲ್ಲಿ ಹೊಸ ಅವಕಾಶಗಳೂ ದೊರೆಯಲಿದೆ, ಹೊಸತನ ಶುರುವಾಗುವುದು. ಮೂರನೇ ಹಂತದಲ್ಲಿ ಸವಾಲುಗಳು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ. ಈ ಹಂತದ ಕೊನೆ-ಕೊನೆಗೆ ನಿಮ್ಮ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುವುದು.
ಶನಿ ಸಾಡೇಸಾತಿ ಸಮಯದಲ್ಲಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು:
* ಶನಿ ಪೂಜೆ ಮಾಡಿಸಿ: ಈ ಅವಧಿಯಲ್ಲಿ ಶನಿ ಪೂಜೆ ಮಾಡಿಸುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು, ಇದರಿಂದ ಶನಿದೋಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು. ಪ್ರತಿ ಶನಿವಾರ ಶನಿದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅರ್ಪಿಸಿ.
* ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ರುದ್ರಾಕ್ಷಿ ಧರಿಸುವುದು ಕೂಡ ಒಳ್ಳೆಯದು, ಇದರಿಂದ ಶನಿಯ ಕೆಟ್ಟ ಪರಿಣಾಮ ಸ್ವಲ್ಪ ಕಡಿಮೆಯಾಗುವುದು.
* ನಿರ್ಗತಿಕರಿಗೆ ದಾನ ಮಾಡಿ: ಶನಿವಾರ ನೀವು ಬಡವರಿಗೆ ದಾನ ಮಾಡಿ, ದಾನ ಕಾರ್ಯದಿಂದ ನಿಮ್ಮ ಪುಣ್ಯಫಲ ಹೆಚ್ಚುವುದು, ಇದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು.
* ಧ್ಯಾನ-ಯೋಗ ಮಾಡಿ
ಈ ಅವಧಿಯಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದರಿಂದ ಧ್ಯಾನ, ಯೋಗ ಮಾಡುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಲು ಸಹಕಾರಿಯಾಗಲಿದೆ.
* ಹನುಮಂತನನ್ನು ಪೂಜಿಸಿ: ಮಂಗಳವಾರ ಹಾಗೂ ಶನಿವಾರ ಹನುಮಂತನನ್ನು ಪೂಜಿಸಿ.
* ಹನುಮಾನ್ ಚಾಲೀಸ ಪಠಿಸಿ.
ಶನಿಮಂತ್ರ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications
