Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳ-ಶನಿ ಸಂಯೋಗದಿಂದ ಷಡಾಷ್ಟಕ ಯೋಗ: ಈ 3 ರಾಶಿಯವರು ಜಾಗ್ರತೆ
ಷಡಾಷ್ಟಕ ಯೋಗವನ್ನು ಅಶುಭ ಯೋಗ ಅಂತಲೂ ಕರೆಯಲಾಗುತ್ತದೆ. ಮಂಗಳ ಹಾಗೂ ಶನಿಯ ಸಂಯೋಗದಿಂದ ಷಡಾಷ್ಟಕ ಯೋಗ ಉಂಟಾಗುತ್ತದೆ. ಶನಿ ಮತ್ತು ಮಂಗಳ ಶತ್ರು ಗ್ರಹಗಳಾಗಿದೆ. ಶನಿಯು ಬಡತನದ ಕಾರಕನಾಗಿದ್ದು, ಹಿಂಸೆ ಮತ್ತು ಸಂಘರ್ಷಗಳಿಗೆ ಮಂಗಳನು ಕಾರಣವಾಗುತ್ತಾನೆ.
ಇವೆರಡರ ಸಂಯೋಗದಿಂದ ದ್ವಾದಶ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದ್ರಲ್ಲೂ ಮುಖ್ಯವಾಗಿ ಈ ಮೂರು ರಾಶಿಗಳು ಷಡಾಷ್ಟಕ ಯೋದಿಂದಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಅಷ್ಟಕ್ಕು ಆ 3 ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಷಡಷ್ಟಕ ಯೋಗದ ಸಂಯೋಜನೆಯು ಹಾನಿಕಾರಕವೆಂದು ಪರಿಗಣಿಸಲಾಗಿದೆ. ಮಂಗಳನ ಉಪಸ್ಥಿತಿಯು ಕರ್ಕಾಟಕ ರಾಶಿಯವರ ಜೀವನದಲ್ಲಿ ತೊಂದರೆ ಮತ್ತು ಅಸ್ಥಿರತೆಯನ್ನು ಸೃಷ್ಟಿಸುತ್ತದೆ. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯಿದ್ದು ಮುನ್ನೆಚ್ಚರಿಕೆ ವಹಿಸಬೇಕು. ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಹೋಗಬೇಡಿ. ಇನ್ನೂ ಯಾರೊಂದಿಗೂ ವಾದ ಅಥವಾ ಜಗಳದಲ್ಲಿ ತೊಡಗಬೇಡಿ.
ಆದಷ್ಟು ವಿನಮ್ರರಾಗಿ ಉಳಿಯಲು ಸಲಹೆ ನೀಡಲಾಗುತ್ತದೆ. ನೀವು ಆಡುವ ಒಂದೊಂದು ಮಾತುಗಳು ನಿಮಗೆ ಮುಳುವಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಸಮಯದಲ್ಲಿ ತಾಳ್ಮೆ ಮತ್ತು ಪರಿಶ್ರಮದಿಂದ ಸರಿಯಾದ ಮಾರ್ಗವನ್ನು ಅನುಸರಿಸುವುದು ಉತ್ತಮ. ಹಣದ ಬಗ್ಗೆ ಜಾಗೃತೆ ವಹಿಸಿದರೆ ನಿಮಗೆ ಒಳ್ಳೆಯದು. ಅತಿಯಾದ ಖರ್ಚು ಮಾಡೋದನ್ನು ತಪ್ಪಿಸಿ. ಬಜೆಟ್ ಪ್ಲಾನ್ ಮಾಡಿಕೊಳ್ಳಿ. ಈ ಸಮಯದಲ್ಲಿ ಶಿವನನ್ನು ಪೂಜಿಸಲು ಸಲಹೆ ನೀಡಲಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಷಡಷ್ಟಕ ಯೋಗದ ರಚನೆಯು ಅಶುಭ ಫಲವನ್ನು ನೀಡಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಮತ್ತು ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ಇನ್ನೂ ನೀವು ಅನಗತ್ಯ ಪ್ರಯಾಣಗಳಿಗೆ ಹೋಗಬೇಕಾಗಬಹುದು. ಇದರಿಂದ ನಿಮಗೆ ಯಾವುದೇ ರೀತಿ ಪ್ರಯೋಜನ ಆಗೋದಿಲ್ಲ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಯಾವುದು ಕೂಡ ನೀವಂದುಕೊಂಡ ಹಾಗೆ ಆಗೋದಿಲ್ಲ. ಪರಿಸ್ಥಿತಿ ನಿಮ್ಮ ಕೈ ಮೀರಿ ಹೋಗುತ್ತದೆ.
ಈ ಯೋಗದ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಅಡೆತಡೆಗಳನ್ನು ಮತ್ತು ಒತ್ತಡವನ್ನು ಎದುರಿಸುತ್ತೀರಿ. ಇನ್ನೂ ನಿಮ್ಮ ಪೋಷಕರ ಆರೋಗ್ಯವೂ ಹದಗೆಡುವ ಸಾಧ್ಯತೆಯಿದೆ. ನೀವು ಅದರಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕೂಡ ಸಾಧ್ಯವಾಗೋದಿಲ್ಲ. ಅಪಘಾತ ಸಂಭವಿಸುವ ಸಾಧ್ಯತೆಯಿದ್ದು, ವಾಹನ ಚಲಾವಣೆ ಮಾಡುವಾಗ ಜಾಗರೂಕರಾಗಿರಿ. ಅತ್ಯಂತ ಸುರಕ್ಷತೆ ಹಾಗೂ ಎಚ್ಚರಿಕೆಯಿಂದಿರಿ.
ಧನು ರಾಶಿ
ಧನು ರಾಶಿಯವರಿಗೆ ಷಡಷ್ಟಕ ಯೋಗದ ಸಂಯೋಜನೆಯು ದುರದೃಷ್ಟಕರವಾಗಿರಲಿದೆ. ನಿಮ್ಮ ಬಾಳಿನಲ್ಲಿ ನೀವು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಹಣವನ್ನು ಯಾರಿಗೂ ಸಾಲವಾಗಿ ನೀಡಬಾರದು. ಮತ್ತು ಯಾವುದೇ ಹೊಸ ಹೂಡಿಕೆಗಳನ್ನು ಮಾಡಬಾರದು. ಏಕೆಂದರೆ ಇದರಿಂದ ನೀವು ಆರ್ಥಿಕ ನಷ್ಟದಿಂದ ಬಳಲಬೇಕಾಗುತ್ತದೆ. ಈ ಸಮಯವು ನಿಮಗೆ ಅನುಕೂಲಕರವಾಗಿಲ್ಲದ ಕಾರಣ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸದಿದ್ದರೆ ಒಳ್ಳೆಯದು.
ಯಾವುದೇ ಕಾರಣಕ್ಕೂ ನಿಮ್ಮ ಅತ್ತೆಯೊಂದಿಗೆ ಹಣಕಾಸಿನ ವಹಿವಾಟುಗಳನ್ನು ಮಾಡದಿದ್ದರೆ ಒಳ್ಳೆಯದು. ಇನ್ನೂ ನಿಮ್ಮ ಸಂಗಾತಿಯೊಂದಿಗೆ ಯಾವುದೇ ರೀತಿ ವಿವಾದವನ್ನು ಮಾಡಿಕೊಳ್ಳಬೇಡಿ. ನೀವು ಆರೋಗ್ಯದ ಕಾಯಿಲೆಗಳಿಂದ ಬಳಲುವ ಸಾಧ್ಯತೆಯಿದೆ. ನಿಮಗೆ ಬಾಯಿ ಮತ್ತು ಗಂಟಲಿನ ರೋಗ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಜಾಗರೂಕರಾಗಿರಿ ಮತ್ತು ಕಾಯಿಲೆ ಬಿದ್ದಾಗ ವಿಳಂಬ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಗ್ರಹಗಳು ಬದಲಾದಾಗ ಅದರ ಪರಿಣಾಮವಾಗಿ ಮಾನವರ ಜೀವನದಲ್ಲಿ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ. ಹೀಗಾಗಿ ನೀವು ಕೆಟ್ಟ ಸಮಯದ ಬಗ್ಗೆ ಅರಿತುಕೊಂಡು ಅದಕ್ಕೆ ಅನುಗುಣವಾಗಿ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಈ ರೀತಿ ಮಾಡಿದರೆ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.



Click it and Unblock the Notifications

