Latest Updates
-
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ!
ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ, ಅಯೋಧ್ಯೆಗೆ ಹೊರಟ ಭಕ್ತೆ ಶಬ್ನಮ್ ಶೇಖ್..!
ಮನಸ್ಸಿನಿಂದ ದೇವರ ಹುಡುಕುವವನಿಗೆ ಜಾತಿ, ಧರ್ಮ ಅಡ್ಡಿಯಾಗದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ಇತಿಹಾಸಿದಲ್ಲೂ ರುಜುವಾತಾಗಿದೆ. ಈಗ ಮತ್ತೆ ಇಂತಹದ್ದೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಅಯೋಧ್ಯೆಯ ರಾಮಮಂದಿರ ಉದ್ಘಾನೆಯಾಗುತ್ತಿದೆ. ರಾಮನ ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಮೂಹ ತುದಿಗಾಲಲ್ಲಿ ನಿಂತಿದೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಮುಂಬರುವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 22 ರಂದು ದೇವಾಲಯವನ್ನು ಅನಾವರಣಗೊಳಿಸಲಿದ್ದು, ಅದರ ಪವಿತ್ರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿದೆ.

ರಾಮಮಂದಿರ ಟ್ರಸ್ಟ್‌ನಿಂದ ಸಾವಿರಾರು ಗಣ್ಯರಿಗೆ ಆಹ್ವಾನ ಬಂದಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಈ ಉತ್ಸಾಹದ ನಡುವೆ, ಮುಂಬೈನಿಂದ ಬಂದ ಮುಸ್ಲಿಂ ಯುವತಿ ಶಬ್ನಮ್ ಶೇಖ್, ಭಗವಾನ್ ರಾಮನ ದರ್ಶನಕ್ಕಾಗಿ ಹಂಬಲಿಸುತ್ತಾ ಅಯೋಧ್ಯೆಗೆ ಯಾತ್ರೆ ಆರಂಭಿಸಿರುವುದು ಭಾರೀ ಸದ್ದು ಮಾಡ್ತಿದೆ.
ಇದು ಧರ್ಮಗಳ ಆಚೆಗಿನ ಭಕ್ತಿಯ ಸಾರವಾಗಿದೆ. ಆಕೆ ರಾಮನ ಭಕ್ತೆಯಾಗಿದ್ದು, ಬರೋಬ್ಬರಿ 1,425 ಕಿ.ಮೀ ದೂರ ಸಾಗಿ ರಾಮನ ದರ್ಶನ ಪಡೆಯಲು ಮುಂದಾಗಿದ್ದಾಳೆ. ರಾಮನ ಕಟ್ಟಾ ಭಕ್ತೆ ಮತ್ತು ಸ್ವಯಂ ಘೋಷಿತ ಸನಾತನಿ ಶಬ್ನಮ್ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ.
ಶ್ರೀರಾಮನ ಬ್ಯಾನರ್ ಹಿಡಿದು ನೂರು ಕಿಲೋಮೀಟರ್ ದಾಟಿದ್ದಾಳೆ. ದಾರಿಯುದ್ದಕ್ಕೂ ಶ್ರೀರಾಮನ ಭಕ್ತರೊಂದಿಗೆ ಆಕೆ ಮುಖಾಮುಖಿ ಮಾತುಕತೆ ಹಾಗೂ ದಾರಿಯುದ್ಧಕ್ಕೂ ಆಕೆಯ ಜೈಶ್ರೀರಾಮ್ ಘೋಷಣೆಯ ವಿಡಿಯೋಗಳು ಈಗ ವೈರಲ್ ಆಗ್ತಿವೆ. ಈ ಎಲ್ಲಾ ವಿಡಿಯೋಗಳನ್ನು ಹಾಗೂ ಆಕೆ ಭೇಟಿಯಾದ ಭಕ್ತರ ಕುರಿತಾದ ವಿಚಾರಗಳನ್ನು ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆಕೆ ಹಂಚಿಕೊಳ್ಳುತ್ತಾಳೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೇಳಿಬಂದಿದೆ.
"ಜೈ ಶ್ರೀ ರಾಮ್. ಶ್ರೀರಾಮನಿಗೆ ಸಾಕ್ಷಿಯಾಗುವುದು ನನ್ನ ಜೀವನದ ಉದ್ದೇಶವಾಗಿದೆ, ಹಾಗಾಗಿ ಅಯೋಧ್ಯೆಗೆ ನನ್ನ ಪ್ರಯಾಣ" ಎಂದು ಶಬ್ನಮ್ ಶೇಖ್ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಯತ್ನವು ಸ್ನೇಹಿತರು, ಹಿಂದೂಗಳು ಮತ್ತು ಹಿಂದೂ ಸಂಘಟನೆಗಳ ಸದಸ್ಯರಿಂದ ಅಪಾರ ಬೆಂಬಲವನ್ನು ಪಡೆಯುತ್ತಿದೆ.
ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ, ಧಾರ್ಮಿಕ ಸಮಾರಂಭಗಳು ರಾಮ್ ಲಲ್ಲಾ ಪ್ರತಿಷ್ಠಾಪನೆಯ ಜೊತೆಗೆ ರಾಷ್ಟ್ರವ್ಯಾಪಿ 500,000 ದೇವಾಲಯಗಳನ್ನು ಅಲಂಕಾರಗೊಳ್ಳುತ್ತಿವೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ದೃಢೀಕರಿಸಿದಂತೆ ಆರ್‌ಎಸ್‌ಎಸ್ ಅಧಿಕಾರಿಗಳು ಈ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ, ಸನಾತನ ಧರ್ಮದ ಅನುಯಾಯಿಗಳು ವಿಶ್ವದೆಲ್ಲೆಡೆ ಪ್ರತಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳ ನಡೆಸಲಿದ್ದಾರೆ.
ಪ್ರಯಾಣದ ಸವಾಲುಗಳ ನಡುವೆ, ಶಬ್ನಮ್ ಅವರ ಸುರಕ್ಷತೆಯನ್ನು ಖಾತ್ರಿಪಡಿಸುವ ಮತ್ತು ಊಟ ಮತ್ತು ವಸತಿಗಳಂತಹ ವಿಷಯಗಳಲ್ಲಿ ಪೊಲೀಸರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸುವಾಗ, ಆಕೆಯ ಯೋಗಕ್ಷೇಮವನ್ನು ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸುತ್ತಿದ್ದರೂ, ಶಬ್ನಮ್ ತನ್ನ ಆಧ್ಯಾತ್ಮಿಕ ಗುರಿ ತಲುಪಲು ದೃಢನಿಶ್ಚಯ ಮಾಡಿದ್ದಾಳೆ. ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದುಕೊಂಡು ಮುಂದೆ ಸಾಗುತ್ತಿರುವ ಶಬ್ನಮ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾಳೆ. ಆಕೆ ಹೋದಲೆಲ್ಲಾ ಮುಸ್ಲಿಮರು ಸೇರಿದಂತೆ ಜನರು ಅವಳನ್ನು ಉತ್ಸಾಹದಿಂದ 'ಜೈ ಶ್ರೀ ರಾಮ್' ಎಂದು ಸ್ವಾಗತಿಸುತ್ತಾರೆ.
ಅಯೋಧ್ಯೆ ರಾಮ ಮಂದಿರದ ವಿಶೇಷಗಳು
* 10 ಎಕರೆ ಭೂಮಿಯಲ್ಲಿ ಈ ಮಂದಿರ ನಿರ್ಮಿಸಲಾಗಿದೆ, ಉಳಿದ 57 ಎಕರೆಯಲ್ಲಿ ದೇವಾಸ್ಥಾನಕ್ಕೆ ಸಂಬಂಧಿಸಿದ ಕಾಂಪ್ಲೆಕ್ಸ್‌ಗಳಿರಲಿವೆ.
* ಹಿಂದೂಗಳ ನಂಬಿಕೆಯಂತೆ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.
* ಈ ದೇವಾಲಯ ಬಾಳಿಕೆ ಬರಲು ರಾಜಾಸ್ಥಾನದ ಬನ್ಸಿ ಪರ್ವತದಿಂದ ತಂದ ಕಲ್ಲುಗಳನ್ನು ಬಳಸಲಾಗುತ್ತಿದೆ
* ಪ್ರಮುಖ ದೇವಾಲಯದ ಸುತ್ತ 4 ದೇವಾಲಯಗಳಿವೆ
* ಫೌಂಡೇಷನ್‌ಗೆ ಬಳಸಿದ ಇಟ್ಟಿಗೆಯಲ್ಲಿ ಶ್ರೀರಾಮ್ ಎಂದು ಕೆತ್ತಲಾಗಿದೆ
ಎತ್ತರವನ್ನು 141 ಅಡಿಯಿಂದ 161 ಅಡಿ ಎತ್ತರಕ್ಕೆ ಏರಿಸಲಾಗಿದೆ. ಉದ್ದ 270 ಮೀ ಅಗಲ 140 ಮೀಟರ್ ಇದೆ.
* ಈ ದೇವಾಲಯ ನಿರ್ಮಿಸಲು ಭೂಮಿ ಪೂಜೆ ಮಾಡುವಾಗ 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಬಳಸಲಾಗುವುದು.
* ಈ ದೇವಾಲಯ ನಿರ್ಮಿಸುವಾಗ 2000 ಧಾರ್ಮಿಕ ಸ್ಥಳಗಳಿಂದ ಮಣ್ಣು, 100 ಪುಣ್ಯ ನದಿಗಳಿಂದ ನೀರನ್ನು ತಂದು ಬಳಸಲಾಯ್ತು.
* ಈ ದೇವಾಲಯದ 221 ಸ್ತಂಭಗಳಿವೆ. ಪ್ರತಿಯೊಂದು ಕಂಬದಲ್ಲಿ 12 ದೇವ-ದೇವತೆಗಳ ಚಿತ್ರವನ್ನು ಕೆತ್ತಲಾಗಿದೆ.
* ಒಂದೇ ಬಾರಿಗೆ 10,000 ಭಕ್ತಾದಿಗಳು ಒಂದೇ ಬಾರಿಗೆ ದೇವರ ದರ್ಶನ ಪಡೆಯಬಹುದು.
* ಭೂಕಂಪನ ಸಂಭವಿಸಿದರೂ ಈ ದೇವಾಲಯಕ್ಕೆ ಅಷ್ಟು ಬೇಗ ಏನೂ ಆಗುವುದಿಲ್ಲ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8-10 ಇದ್ದರೂ ಈ ದೇವಾಲಯಕ್ಕೆ ಏನೂ ಆಗುವುದಿಲ್ಲ.



Click it and Unblock the Notifications