Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸೆ. 2ಕ್ಕೆ ಶ್ರಾವಣ ಅಮವಾಸ್ಯೆ,ಸೋಮಾವತಿ ಅಮವಾಸ್ಯೆ: ಕಷ್ಟಗಳಿಂದ ಮುಕ್ತಿಗೆ ಈ ಪರಿಹಾರ ಒಳ್ಳೆಯದು
ಸೆಪ್ಟೆಂಬರ್ 2ಕ್ಕೆ ಶ್ರಾವಣ ಅಮವಾಸ್ಯೆ, ಅಲ್ಲದೆ ಅಮವಾಸ್ಯೆ ಸೋಮವಾರ ಬಂದಿರುವುದರಿಂದ ಸೋಮಾವತಿ ಅಮವಾಸ್ಯೆಯೆಂದು ಆಚರಿಸಲಾಗುವುದು. ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ
ಶ್ರಾವಣ ಅಮವಾಸ್ಯೆಯಂದು ಪಿತೃತರ್ಪಣ ನೀಡಲಾಗುವುದು, ಇನ್ನು ಸೋಮಾವತಿ ಅಮವಾಸ್ಯೆಯಂದು ಕೆಲ ಪ್ರತ್ಯೇಕ ಪರಿಹಾರವನ್ನು ಕೂಡ ಮಾಡುತ್ತಾರೆ. ಈ ಅಮವಾಸ್ಯೆಯ ಮಹತ್ವವೇನು ಎಂದು ನೋಡೋಣ ಬನ್ನಿ:

ಪಿತೃತರ್ಪಣ ನೀಡಲಾಗುವುದು
ಈ ದಿನ ಪಿತೃತರ್ಪಣಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಪಿತೃತರ್ಪಣ ಮಾಡಿದರೆ ಗತಿಸಿದ ಹಿರಿಯರಿಗೆ ಮೋಕ್ಷ ಸಿಗುವುದು. ಮರಣವೊಂದಿದ ಹಿರಿಯರಿಗೆ ಮೋಕ್ಷ ಸಿಗದಿದ್ದರೆ ಮನೆಗೆ ಒಳಿತಾಗುವುದಿಲ್ಲ, ಇದರಿಂದ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಏಳಿಗೆಯಾಗುವುದಿಲ್ಲ, ವೃತ್ತಿ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗುವುದು. ಪಿತೃದೋಷವಿದ್ದರೆ ಸಂತಾನ ಭಾಗ್ಯ ಆಗಲ್ಲ, ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆ ಹೀಗೆ ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಪಿತೃತರ್ಪಣ ನೀಡಿದರೆ ಮರಣವೊಂದಿದ ಅವರಿಗೆ ಮೋಕ್ಷ ಸಿಗುತ್ತೆ, ಇದರಿಂದ ನಮಗೂ ಒಳಿತಾಗುತ್ತದೆ ಎಂದು ನಂಬಲಾಗುವುದು.
ಗತಿಸಿದ ಸಂತೃಪ್ತಿಗೊಳಿಸಲು ಏನು ಮಾಡಬೇಕು?
ಈ ದಿನ ನದಿಯಲ್ಲಿ ಸ್ನಾನ ಮಾಡಿ ಅಥವಾ ಮನೆಯಲ್ಲಿ ಸ್ನಾನದ ಬಕೆಟ್ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಿ ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಉಪವಾಸವಿದ್ದು ವಿವಿಧ ಭೋಜನಗಳನ್ನು ಮಾಡಿ ಆರ್ಘ್ಯ ಅರ್ಪಿಸಲಾಗುವುದು. ಇದರಿಂದ ಅವರು ಸಂತೃಪ್ತಿಯಿಂದ ನಮ್ಮನ್ನು ಹರಿಸುತ್ತಾರೆ ಎಂದು ನಂಬಲಾಗಿದೆ.
ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಪರಿಹಾರ ಮಾತ್ರವಲ್ಲ ಸರ್ಪದೋಷಕ್ಕೂ ಪರಿಹಾರವಿದೆ
ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಮಾತ್ರವಲ್ಲ ಸರ್ಪದೋಷಕ್ಕೂ ಪರಿಹಾರವಿದೆ. ಈ ದಿನ ಶಿವನಿಗೆ ಬಿಲ್ವೆಪತ್ರೆ ಎಲೆಯ ಜೊತೆಗೆ ಬೆಳ್ಳಿಯ ನಾಗರವನ್ನು ಶಿವನಿಗೆ ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಸರ್ಪದೋಷ ನಿವಾರಣೆಯಾಗುವುದು.
ಶಿವನಿಗೆ ಆರಾಧನೆ ಮಾಡುವುದರಿಂದ ಕಷ್ಟಗಳು ದೂರಾಗುವುದು, ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುವುದು
ಶ್ರಾವಣ ಅಮವಾಸ್ಯೆಯಂದು ಶಿವನಿಗೆ ಪೂಜೆ ಸಲ್ಲಿಸುವುದರಿಂದ ಶಿವನ ಕೃಪೆಯಿಂದ ಕಷ್ಟಗಳು ದೂರಾಗುವುದು, ಆರ್ಥಿಕ ಸಮಸ್ಯೆಯಿದ್ದರೆ ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದು. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ಗ್ರಹ ದೋಷ ನಿವಾರಣೆಗೆ ಪರಿಹಾರ
ಗ್ರಹದೋಷವಿದ್ದರೆ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಗ್ರಹದೋಷ ನಿವಾರಣೆಗೆ 11 ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಪೂಜೆ ಸಲ್ಲಿಸಿದರೆ ಪಿತೃದೋಷ ನಿವಾರಣೆಯಾಗುವುದು. ಪೂಜೆಯ ವೇಳೆ ಓಂ ನಮಃ ಶಿವಾಯ ಮಂತ್ರವನ್ನು ನಿರಂತರವಾಗಿ ಪಠಿಸಿ.
ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ
ಈ ದಿನ ದಾನ ಮಾಡಿದರೆ ನಿಮ್ಮ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಅಲ್ಲದೆ ಈ ದಿನ ಅರಳಿ ಮರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಲಾಗುವುದು.



Click it and Unblock the Notifications
