Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 16 ಸೀತಾ ನವಮಿ: ಈ ದಿನ ಮುತ್ತೈದೆಯರು ಮಾಡುವ ಪೂಜೆಯ ವಿಶೇಷತೆಯೇನು? ಸೀತಾ ಮಾತೆಯ ಅಗ್ನಿ ಪರೀಕ್ಷೆಯ ಹಿಂದಿನ ಉದ್ದೇಶವೇನು?
ಮೇ 16, ಸೀತಾ ನವಮಿ. ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿಯಂದು ಸೀತಾ ನವಮಿಯನ್ನು ಆಚರಿಸಲಾಗುವುದು. ರಾಮ ನವಮಿ ಆಚರಿಸಿದ ಒಂದು ತಿಂಗಳ ಬಳಿಕ ಸೀತಾ ನವಮಿಯನ್ನು ಆಚರಿಸಲಾಗುವುದು.
ಈ ಸೀತಾ ನವಮಿಯ ಮಹತ್ವವೇನು? ಸ್ತ್ರೀಗಳಿಗೆ ಏಕೆ ಈ ದಿನ ತುಂಬಾ ವಿಶೇಷವಾಗಿದೆ ಎಂದು ನೋಡೋಣ ಬನ್ನಿ:

ಸೀತಾ ನವಮಿಯ ತುಂಬಾ ವಿಶೇಷವಾಗಿದೆ, ಏಕಂದರೆ ಈ ದಿನ ಮಹಿಳೆಯರು ಉಪವಾಸವಿದ್ದು ಪೂಜೆಯ್ನು ಮಾಡುತ್ತಾರೆ. ಪತಿಗೆ ದೀರ್ಘಾಯುಷ್ಯಕ್ಕಾಗಿ ಹಾಗೂ ಪತಿಗೆ ಸಂಪತ್ತು ಸೌಭಾಗ್ಯ ದೊರೆಯಲಿ ಎಂದು ಸೀತಾ ನವಮಿಯನ್ನು ಆಚರಿಸಲಾಗುವುದು.
ಸೀತೆ ಮಾತೆ ಏಕೆ ಆದರ್ಶ ನಮಗೆ?
ಪತಿಧರ್ಮ ಪಾಲನೆ ಮೂಲಕ ಸೀತೆ ಮಾತೆ ಪತ್ನಿಯಾದವಳು ಗಂಡನ ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ಜೊತೆಯಾಗಿರಬೇಕು ಎಂಬ ಪಾಠವನ್ನು ಸೀತೆಮಾತೆ ತಿಳಿಸುತ್ತದೆ. ರಾಜಕುಮಾರಿಯಾಗಿ ಬೆಳೆದವಳು, ರಾಜನ ಕೈ ಹಿಡಿದು ಬಂದವಳು, ಆದರೆ ಶ್ರೀರಾಮ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೊರಟಾಗ ತಾನೂ ತನ್ನ ಪತಿ ಜೊತೆಗೆ ಕಾಡಿಗೆ ಹೋಗುತ್ತಾಳೆ. ಸೀತೆಯನ್ನು ರಾವಣ ಅಪಹರಿಸಿದಾಗ ಸೀತೆ ತನ್ನ ಪತಿಗಾಗಿ ಕಾಯುತ್ತಾಳೆ, ಶ್ರೀರಾಮ ಕೂಡ ರಾವಣನನ್ನು ಕೊಂದು ಸೀತೆಯನ್ನು ಮರಳಿ ತರುತ್ತಾನೆ. ಸೀತೆಗೆ ನಡೆದ ಅಗ್ನಿ ಪರೀಕ್ಷೆ ಸೀತೆ ಮಾತೆಯ ಮೇಲೆ ಸಂಶಯಪಟ್ಟು ರಾಮ ಮಾಡಿದ್ದು ಅಲ್ಲ, ರಾಜ್ಯದ ಜನರು ಸೀತಾಮಾತೆ ಒಂದು ಕೆಟ್ಟ ಮಾತೂ ಹೇಳಬಾರದು ಎಂಬ ಉದ್ದೇಶದಿಂದ ಮಾಡಿದ ಪರೀಕ್ಷೆಯಾಗಿತ್ತು. ಸೀತೆಗೆ ಏನೂ ಆಗಲ್ಲ, ಆಕೆ ಪವಿತ್ರಳು ಎಂಬುವುದು ಶ್ರೀರಾಮನಿಗೆ ಗೊತ್ತಿತ್ತು.
ಸೀತೆಯ ಜನನ ಕತೆ
ಪೌರಾಣಿಕ ಕತೆ ಪ್ರಕಾರ ಮಿಥಿಲಾದ ರಾಜನಾದ ಜನಕನಿಗೆ ಮಕ್ಕಳಿರಲಿಲ್ಲ. ಮಿಥಿಲಾ ದಂಪತಿ ತಮಗೆ ಸಂತಾನ ಭಾಗ್ಯ ಕರುಣಿಸಲು ದೇವರಲ್ಲಿ ಪ್ರಾರ್ಥಿಸುತ್ತಿದ್ದರು, ಒಂದು ದಿನ ಭೂಮಿಯನ್ನು ಉಳುಮೆ ಮಾಡುವಾಗ ಒಮದು ಹೆಣ್ಣು ಮಗು ಸಿಗುತ್ತದೆ, ಆ ಮಗುವೇ ಸೀತೆ. ಜನಕ ಮಗಳಾಗಿ ಬೆಳೆಯುತ್ತಾಳೆ, ನಂತರ ಶ್ರೀರಾಮನ ಮಡದಿಯಾಗುತ್ತಾಳೆ.
ಸೀತಾ ನವಮಿಯ ಪೂಜಾ ಸಮಯ
ಸೀತಾ ನವಮಿಯಂದು ಬೆಳಗ್ಗೆಯಿಂದ ಆ ಇಡೀ ದಿನ ಪೂಜೆಗೆ ಶುಭವಾಗಿದೆ. ಈ ದಿನದಂದು ಕೆಲವರು ನೀರು ಕೂಡ ಸೇವಿಸದೆ ಪೂಜೆಯನ್ನು ಮಾಡುತ್ತಾರೆ. ಈ ದಿನ ರಾಮಾಯಣ ಪಠಣೆ ಮಾಡಬೇಕು.
ಸೀತಾ ಮಾತೆಯ ಬದುಕು
ಭೂಮಿ ಪುತ್ರಿ: ಸೀತೆ ಭೂಮಿಯಿಂದ ಸಿಕ್ಕಿದವಳು, ಆದ್ದರಿಂದ ಸೀತೆಯನ್ನು ಭೂಮಿ ಪುತ್ರಿ ಎಂದು ಹೇಳಲಾಗುವುದು.
ಸೀತಾ ಅಪಹರಣ: ಇಡೀ ರಾಮಾಯಣ ನಿಂತಿರುವುದೇ ಸೀತಾ ಅಪಹರಣದ ಮೇಲೆ. ಪತಿಧರ್ಮ ಪಾಲಿಸಬೇಕೆಂದು ಶ್ರೀರಾಮನ ಜೊತೆಯೇ ಕಾಡಿಗೆ ಹೋಗುತ್ತಾಳೆ. ಕಾಡಿನಲ್ಲಿ ಸೀತೆಯನ್ನು ರಾವಣ ಅಪಹರಿಸುತ್ತಾನೆ. ನಂತರ ಶ್ರೀರಾಮ ರಾವಣನ ಜೊತೆ ಹೋರಾಡಿ ರಾವಣನನ್ನು ಕೊಂದು ಸೀತೆಯನನ್ನು ಮರಳಿ ತರುತ್ತಾನೆ.
ಅಗ್ನಿ ಪರೀಕ್ಷೆ: ನಂತರ ಸೀತೆ ಅಗ್ನಿ ಪರೀಕ್ಷೆಯನ್ಉ ಎದುರಿಸುತ್ತಾಳೆ.
ಸೀತೆಯ ಕೊನೆಯ ಸಮಯ: ಸೀತೆ ಅಯೋಧ್ಯೆಗೆ ಬಂದ ಮೇಲೆ ಕಾಡಿನಲ್ಲಿ ಇರಲು ಬಯಸುತ್ತಾಳೆ, ಕಾಡಿನಲ್ಲಿಯೇ ಲವ-ಕುಶರಿಗೆ ಜನ್ಮ ನೀಡುತ್ತಾಳೆ. ನಂತರ ಭೂಮಿಯಿಂದ ಬಂದವಳು ಭೂಮಿಗೇ ಮರಳುತ್ತಾಳೆ.
ಈಗೀನ ಕಾಲಕ್ಕೆ ಸೀತಾ ನವಮಿಯ ವಿಶೇಷ
ಧಾರ್ಮಿಕ ಮಹತ್ವ: ಸೀತಾ ನವಮಿ ಧಾರ್ಮಿಕ ಆಚರಣೆಯಾಗಿದ್ದು ಇದರಿಂದ ಭಕ್ತಿ ಹೆಚ್ಚುವುದು, ಆತ್ಮವಿಶ್ವಾಸ ಹೆಚ್ಚಾಗುವುದು.
ನೆರೆಯೊರೆಯವರ ಜೊತೆ ಬಾಂಧವ್ಯ ಗಟ್ಟಿಯಾಗುವುದು: ಸೀತಾ ನವಮಿಯನ್ನು ಜೊತೆಯಾಗಿ ಆರಿಸುತ್ತಾರೆ, ಇದರಿಂದ ನೆರೆಹೊರೆಯವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ
ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ: ನಾವು ಮಾಡುವ ಪ್ರತಿಯೊಂದು ಆಚರಣೆಯೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ.



Click it and Unblock the Notifications