ಸೌರವ್ಯೂಹದಲ್ಲಿ ಭೂಮಿಗೆ ಕಾದಿದೆ ಆಪತ್ತು..! ವಿಜ್ಞಾನಿಗಳು ಹೇಳೋದೇನು?

ಸೌರಮಂಡದಲ್ಲಿ ಜೀವಿಗಳು ವಾಸವಿರುವ ಏಕೈಕ ಗ್ರಹ ಹಾಗೂ ನೀಲಿ ಗ್ರಹ ಎಂದೇ ಕರೆಯಲ್ಪಡುವ ಭೂಮಿಯು ಹಲವು ಅಚ್ಚರಿಗಳ ತನ್ನಲ್ಲಿ ಇಟ್ಟುಕೊಂಡಿದೆ. ಅದರಲ್ಲೂ ಜೀವಿಗಳ ಹುಟ್ಟು ಹಾಗೂ ಪರಿಸರ ವ್ಯವಸ್ಥೆ ಹೊಂದಿರುವ ಏಕೈಕ ಗ್ರಹ ಇದಾಗಿದೆ. ಹಾಗೆ ಭೂಮಿಯಂತೆ ಮತ್ತೊಂದು ಗ್ರಹಕ್ಕಾಗಿ ಹುಡುಕಾಟ ನಡೆಯುತ್ತಲೇ ಇದ್ದರೂ ಅದು ನೆರವೇರವುದು ಕಷ್ಟದ ಕೆಲಸ ಎನ್ನಬಹುದು.

ಇನ್ನು ಭೂಮಿಯ ಅಂತ್ಯದ ಕುರಿತಾಗಿ ಹಲವು ರೀತಿಯ ಸಿದ್ಧಾಂತಗಳು, ವಾದಗಳು ಇದ್ದೇ ಇದೆ. ಭೂಮಿ ಯಾವ ರೀತಿ ಅಂತ್ಯವಾಗಬಹುದು ಎಂಬುದಕ್ಕೆ ಹಲವು ರೀತಿಯ ವಾದಗಳನ್ನು ಮಂಡಿಲಾಗಿದೆ. ವಿಜ್ಞಾನಿಗಳು ನಿರಂತರವಾಗಿ ಸೌರಮಂಡಲದ ಮೇಲೆ ಕಣ್ಣಿಡುತ್ತಾರೆ. ಅಲ್ಲಿನ ಎಲ್ಲಾ ವಿದ್ಯಮಾನಗಳ ಅಧ್ಯಯನ ನಡೆಸುವ ಮೂಲಕ ಭೂಮಿಯ ಕುರಿತಾಗಿ ಹಲವು ವಿಚಾರಗಳು ಹೊರಬೀಳುತ್ತವೆ.

Scientists Warn That Earth Faces Real Risk Of Being Knocked Out

ಇತ್ತೀಚಿಗೆ ವಿಜ್ಞಾನಿಗಳ ಹೊಸ ಅಧ್ಯಯನವೊಂದರ ಪ್ರಕಾರ ಭೂಮಿ ನಮ್ಮ ಸೌರಮಂಡಲದಿಂದ ಒಂದು ದಿನ ಕಣ್ಮರೆಯಾಗಬಹುದು ಎಂದು ಹೇಳಿದ್ದಾರೆ. ಹೌದು ಭೂಮಿ ಅಸ್ಥಿರತೆಯ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭೂಮಿಯ ಬಳಿ ಹಾದು ಹೋಗುವ ನಕ್ಷತ್ರಗಳು ಭೂಮಿಯ ಅಸ್ಥಿರತೆಗೆ ಕಾರಣವಾಗಲಿದೆಯಂತೆ. ಅದರಲ್ಲೂ ನಕ್ಷತ್ರಗಳು ತಮ್ಮ ಗುರುತ್ವಾಕರ್ಷಣೆಯ ಪ್ರಭಾವದಿಂದಾಗಿ ಭೂಮಿಯು ಸೌರಮಂಡಲದಲ್ಲಿ ಕಳೆದುಹೋಗಬಹುದು, ಇಲ್ಲವೆ ಸೂರ್ಯನಲ್ಲಿ ಮರೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಇಕಾರಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ನಮ್ಮ ಸೌರವ್ಯೂಹದ ಬಳಿ ಹಾದುಹೋಗುವ ನಕ್ಷತ್ರಗಳು ಮುಂದಿನ 5 ಶತಕೋಟಿ ವರ್ಷಗಳಿಗೂ ಮುನ್ನವೇ ಸೂರ್ಯನ ನಾಶ ಅಥವಾ ಅಸ್ಥಿರತೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಸೌರವ್ಯೂಹವು ಶತಕೋಟಿ ವರ್ಷಗಳಲ್ಲಿ ಹೇಗೆ ವಿಕಸನಗೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಅಧ್ಯಯನವು ಸಾವಿರಾರು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಬಳಸಲಾಗಿದೆ.

ವಿಜ್ಞಾನಿಗಳ ಪ್ರಕಾರ, 10,000 ಖಗೋಳ ಘಟಕಗಳ (AU) ಒಳಗೆ (ಸುಮಾರು 1.5 ಟ್ರಿಲಿಯನ್ ಕಿಲೋಮೀಟರ್) ಹಾದುಹೋಗುವ ನಮ್ಮ ಸೂರ್ಯನಂತೆಯೇ ದ್ರವ್ಯರಾಶಿಯನ್ನು ಹೊಂದಿರುವ ನಕ್ಷತ್ರವು ಪ್ಲುಟೊವನ್ನು ಮೀರಿ ದೂರದಲ್ಲಿದ್ದರು, ಪರಿಣಾಮಕಾರಿಯಾಗಲಿದೆ ಎಂದು ಹೇಳಿದ್ದಾರೆ. ಮುಂದಿನ ನಾಲ್ಕು ಶತಕೋಟಿ ವರ್ಷಗಳಲ್ಲಿ ಹಾದುಹೋಗುವ ನಕ್ಷತ್ರಗಳು ಅತ್ಯಂತ ಸಂಭವನೀಯ ಅಸ್ಥಿರತೆಯ ಪ್ರಚೋದಕಗಳಾಗಿವೆ ಎಂದು ಹೇಳಿದ್ದಾರೆ.

ಅಧ್ಯಯನದ ಪ್ರಕಾರ ಹಾದು ಹೋಗುವ ನಕ್ಷತ್ರವು ಬುಧದ ಕಕ್ಷೆಯು ಅಸ್ಥಿರವಾಗುವ ಸಾಧ್ಯತೆಯನ್ನು ಶೇಕಡಾ 50-80 ರಷ್ಟು ಅಪಾಯ ಹೆಚ್ಚಿಸಬಹುದು. ಇದು ಸರಪಳಿ ಕ್ರಿಯೆಗೆ ಕಾರಣವಾಗಬಹುದು, ಅಂದರೆ ಸೌರಮಂಡಲದ ಎಲ್ಲಾ ಗ್ರಹಗಳ ಮೇಲೆಯೂ ಇದು ಸರಣಿ ಅಪಾಯಕ್ಕೆ ಕಾರಣವಾಗಬಹುದು. ಅದರಲ್ಲೂ ಶುಕ್ರ ಅಥವಾ ಮಂಗಳನನ್ನು ಭೂಮಿಯತ್ತ ಸಾಗಲು ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಭೂಮಿಯು ಸೂರ್ಯನೊಳಗೆ ಸುರುಳಿ ಆಕಾರವಾಗಿ ಚಲಿಸಬಹುದು ಅಥವಾ ಗುರುಗ್ರಹದ ಕಡೆಗೆ ಎಸೆಯಲ್ಪಡಬಹುದು, ಅದರ ಗುರುತ್ವಾಕರ್ಷಣೆಯು ಭೂಮಿಯನ್ನು ಸೌರವ್ಯೂಹದಿಂದ ಸಂಪೂರ್ಣವಾಗಿ ಹೊರಹಾಕಬಹುದು. ಇದು ಭೂಮಿಯ ಅಂತ್ಯಕ್ಕೂ ಕಾರಣವಾಗಬಹುದು. ಮಂಗಳವು ಘರ್ಷಣೆ ಅಥವಾ ಹೊರಹಾಕುವಿಕೆಯ ಮೂಲಕ ಕಳೆದುಹೋಗುವ ಸಾಧ್ಯತೆ 0.3 ಪ್ರತಿಶತದಷ್ಟಿದೆ ಮತ್ತು ಮುಂದಿನ ಐದು ಶತಕೋಟಿ ವರ್ಷಗಳಲ್ಲಿ ಭೂಮಿಯು ಇದೇ ರೀತಿಯ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಶೇ.0.2ರಷ್ಟಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಈ ಅಪಾಯ ಬಹಳ ಕಡಿಮೆಯಾಗಿದ್ದರು. ಆದ್ರೆ ನಾವು ಊಹಿಸುವುದಕ್ಕಿಂತಲೂ ಸೌರವ್ಯೂಹದ ಸ್ಥಿರತೆಯು ದುರ್ಬಲವಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸುತ್ತಿದೆ.

ಭೂಮಿಯ ಚಲನೆಯ ಆಧಾರದ ಮೇಲೆಯೂ ಈ ಎಲ್ಲಾ ವಿದ್ಯಮಾನಗಳು ನಿರ್ಧರಿತವಾಗಲಿದೆಯಂತೆ. ಹಾಗೆ ಸೌರಮಂಡಲದಲ್ಲಿ ಮುಂದಿನ 4 ಶತಕೋಟಿ ವರ್ಷಗಳಲ್ಲಿ ಸಂಭವಿಸಬಹುದಾದ ಸಂಭವನೀಯ ಘಟನೆಗಳನ್ನು ಕೂಡ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಆದ್ರೆ ಈ ನಡುವೆ ಭೂಮಿಯ ಸ್ಥಿರತೆಗೆ ಅಪಾಯ ತಂದೊಡ್ಡುವ ಯಾವುದೇ ಸಂಭವನೀಯ ಘಟನೆಗಳು ನಡೆಯುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಿದ್ದಾರೆ.

English summary

Scientists Warn That Earth Faces Real Risk Of Being Knocked Out

Recently, according to a new study by scientists, the Earth may one day disappear from our solar system. Yes, scientists have warned about the instability of the Earth.
Story first published: Tuesday, June 24, 2025, 10:31 [IST]
X
Desktop Bottom Promotion