Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಂಪಿ ಕಲ್ಲಿನ ಸಂಗೀತ ಈಗ ಮೊಬೈಲ್‌ನಲ್ಲೇ ಕೇಳಬಹುದು..! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು!!
ವಿಜಯ ನಗರ ಅರಸರ ರಾಜಧಾನಿಯಾಗಿದ್ದ ಹಂಪಿ ಈಗ ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣದಲ್ಲಿ ಈ ಹಂಪಿ ಕೂಡ ಒಂದಾಗಿದೆ. ನಿತ್ಯ ಸಾವಿರಾರು ಮಂದಿ ಈ ಹಂಪಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಒಂದು ಕಾಲದಲ್ಲಿ ಭವ್ಯವಾದ ಭಾರತೀಯ ಮಹಾನಗರವಾಗಿದ್ದ ಹಂಪಿ ಈಗ ಪ್ರವಾಸಿಗೆ ನೆಚ್ಚಿನ ತಾಣವಾಗಿದೆ.
ವಿಜಯನಗರದ ಶ್ರೀಮಂತ ವಾಸ್ತುಶಿಲ್ಪಕ್ಕೆ ಕನ್ನಡಿ ಹಿಡಿದಂತಿರುವ ಹಂಪಿಯು ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಹಾಗೆ ಹಂಪಿಯ ಕಲ್ಲಿನ ರಥ ಇಂದಿಗೂ ಅಚ್ಚರಿಗಳನ್ನು ತನ್ನಲ್ಲಿಟ್ಟುಕೊಂಡಿದೆ. ಕರಕುಶಲತೆ, ಶಿಲ್ಪಿ ಕಲಾ ಸೌಂದರ್ಯಕ್ಕೆ ಹಂಪಿ ನಗರ ಬಹಳ ಹೆಸರುವಾಸಿಯಾಗಿದೆ. ಕಲ್ಲಿನಲ್ಲಿ ಅರಳಿ ನಿಂತ ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ ಗೋಪುರಗಳು, ವಿಶಾಲ ರಸ್ತೆಗಳು ಮತ್ತು ಪ್ರತಿಮೆಗಳು ಈಗಲೂ ಪ್ರವಾಸಿಗರನ್ನು ಸೆಳೆಯುತ್ತದೆ.

ಹಂಪಿಯ ಕಲ್ಲಿನ ರಥ ಹೇಗೆ ಆಕರ್ಷಣೆಯಾಗಿಯೋ ಅದೇ ರೀತಿ ವಿಜಯ ವಿಠ್ಠಲ ದೇವಾಲಯ ಕೂಡ ಅಷ್ಟೇ ಅಚ್ಚರಿಗೆ ಕಾರಣವಾಗುತ್ತದೆ. ಏಕೆಂದರೆ ಈ ದೇವಾಲಯ ಅಚ್ಚರಿಗಳ ತನ್ನಲ್ಲಿಟ್ಟುಕೊಂಡಿದೆ. ಹೌದು ಈ ದೇವಾಲಯದ ಪ್ರತಿಯೊಂದು ಕಲ್ಲುಗಳು ಕೂಡ ಸಂಗೀತ ಹೊರ ಹಾಕುತ್ತದೆ. ಒಂದೊಂದು ಕಂಬಗಳು ಕೂಡ ಒಂದು ರೀತಿ ನಾದ ಹೊರಹಾಕುತ್ತೆ.
ಸುಮಾರು 56 ಸಂಗೀತ ಕಂಬಗಳಿವೆ ಈ ಕಂಬಗಳ ಬಡಿದಾಗ ನಾದ ಹೊರಹೊಮ್ಮುತ್ತದೆ. ಹೀಗಾಗಿ ಈ ವಿಠ್ಠಲ ದೇವಾಲಯ ಬಹಳ ಅಚ್ಚರಿಗಳ ಕಾರಣಕ್ಕೆ ಹೆಸರಾಗುತ್ತದೆ. ಈ ಕಲ್ಲಿನ ಕಂಬಗಳಿಗೆ ಮತ್ತೊಂದು ಸಣ್ಣ ಕಲ್ಲಿನಿಂದ ಬಡಿದಾಗ ಮಧುರವಾದ ನಾದ ಬರುವುದು ಕೇಳಬಹುದು. ಆದ್ರೆ ಈಗ ನೀವು ಈ ಸಂಗೀತವನ್ನು ನೀವು ಮೊಬೈಲ್‌ನಲ್ಲೇ ಕೇಳಿಸಿಕೊಳ್ಳಬಹುದು.
ಹೌದು ಭಾರತೀಯ ಪುರಾತತ್ವ ಇಲಾಖೆ ಹಂಪಿಯ ವಿಜಯ ವಿಠ್ಠಲ ದೇವಾಲಯದ 10 ಕಂಬಗಳ ಮೇಲೆ ಕ್ಯೂ ಆರ್ ಕೋಡ್ ಅನ್ನು ಪರಿಚಯಿಸಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೀವು 25 ಸೆಕೆಂಡ್‌ಗಳ ಕಾಲ ಸುಮಧುರ ಸಂಗೀತ ಕೇಳಬಹುದು. ಏಕೆಂದರೆ ಈ ಕಲ್ಲಿನಿಂದ ಹೊರಬರುವ ಸಂಗೀತ ಕೇಳಲು ಪ್ರವಾಸಿಗರು ಕಲ್ಲು, ಕಬ್ಬಿಣದ ರಾಡ್‌ಗಳ ಬಳಸಿ ಕಲ್ಲುಗಳಿಗೆ ಬಡಿಯುತ್ತಿದ್ದರು. ಇದರಿಂದ ಕಲ್ಲುಗಳು ಹಾನಿಯಾಗುವ ಸಂಭವವಿತ್ತು, ಹೀಗಾಗಿ ಡಿಜಿಟಲ್ ರೀತಿಯಲ್ಲಿ ಸಂಗೀತ ಕೇಳಿಸಲು ಈ ರೀತಿ ತಂತ್ರಜ್ಞಾನ ಹೊರತರಲಾಗಿದೆ.
ಹಾಗೆ 2008ರಿಂದಲೂ ಈ ಸಂಗೀತ ಮಂಟಪಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈಗ ಮತ್ತೆ ಕ್ಯೂಆರ್ ಕೋಡ್ ಬಳಕೆಯಿಂದಾಗಿ ಪ್ರವಾಸಗರ ಸಂಖ್ಯೆ ಮತ್ತೆ ಹೆಚ್ಚಾಗುವ ನಿರೀಕ್ಷೆ ಇದೆ. ಒಟ್ಟು ಹಂಪಿಯಲ್ಲಿ 56 ಸಂಗೀತ ಕಂಬಗಳಿದ್ದವು 1565ರಲ್ಲಿ ತಾಳಿಕೋಟೆ ಕದನದ ಬಳಿಕ ಬಹುಮನಿ ಸುಲ್ತಾನದ ದಾಳಿಯಲ್ಲಿ ಸುಮಾರು 10 ಸಂಗೀತ ಕಂಬಗಳು ನಾಶವಾದವು.
ಹಾಗೆ ಈ ದೇವಾಲಯದ ಮುಂಭಾಗದಲ್ಲಿ ಇರುವ ದೊಡ್ಡ ಸ್ಥಳ ಅಲ್ಲಿ ಹಿಂದೆ ಚಿನ್ನ ಬಂಗಾರ ಮಾರಾಟ ಮಾಡುತ್ತಿದ್ದರು ಎಂಬುದನ್ನು ಸಾರುತ್ತದೆ. ಇದನ್ನು ಹಂಪಿ ಬಜಾರ್ ಎಂದು ಕೂಡ ಕರೆಯುತ್ತಾರೆ. ವರ್ತಕರು ಚಿನ್ನ- ವಜ್ರಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರಂತೆ ಇಂತಹ ಹಲವು ಇತಿಹಾಸ ಪ್ರಸಿದ್ದ ತಾಣಗಳು ಆ ಹಂಪಿಯಲ್ಲಿವೆ.
ಈ ಲಿಂಕ್ ಮೂಲಕ ನೀವು ಡೆಮೋ ಸಂಗೀತ ಕೇಳಬಹುದು: http://www.asihampicircle.in/saregamapa/



Click it and Unblock the Notifications
