Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶ್ರಾವಣದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಯಾಕೆ ತಿನ್ನಬಾರದು? ವಿಷಯ ಅದಲ್ಲ, ಮ್ಯಾಟ್ರು ಬೇರೆನೇ ಇದೆ
ಶ್ರಾವಣದಲ್ಲಿ ಬೆಳ್ಳುಳ್ಳಿ ಯಾಕೆ ತಿನ್ನಬಾರದು? ವಿಷಯ ಅದಲ್ಲ, ನೀವು ಅಲ್ಲಿಗೆ ಹೋಗಬೇಡಿ. ಮ್ಯಾಟ್ರು ಬೇರೆನೇ ಇದೆ. ನಮಗೂ ಅಜ್ಜಿ ಇದಿದ್ರೆ, ಇದನ್ನೆಲ್ಲಾ ಹೇಳಿ ಕೊಡ್ತಾ ಇದ್ರು. ಹೌದು, ನಮ್ಮ ಸಂಸ್ಕೃತಿಯಲ್ಲಿ ಹಿರಿಯರ ಮಾತುಗಳು, ವಿಶೇಷವಾಗಿ ಅಜ್ಜಿ ಹೇಳುವ ಮಾತುಗಳು ಯಾವಾಗಲೂ ಆಳವಾದ ಅರ್ಥವನ್ನು ಹೊಂದಿರುತ್ತವೆ. ಅವು ಕೇವಲ ಸಂಪ್ರದಾಯಗಳಲ್ಲ. ಬದಲಿಗೆ ಆರೋಗ್ಯ, ಪರಿಸರ ಮತ್ತು ಆಧ್ಯಾತ್ಮಿಕತೆ ಕಾಪಾಡಿಕೊಳ್ಳಲು ಇರುವ ಜೀವನ ಪಾಠಗಳೇ ಸರಿ. ಶ್ರಾವಣ ಮಾಸದಲ್ಲಿ (Shravana Masa 2025) ಈರುಳ್ಳಿ (onion) ಮತ್ತು ಬೆಳ್ಳುಳ್ಳಿಯನ್ನು (Garlic) ತ್ಯಜಿಸುವ ಸಂಪ್ರದಾಯವೂ ಇದರಲ್ಲಿ ಒಂದು.
ಶ್ರಾವಣದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತ್ಯಜಿಸುವ ಹಿಂದಿನ ಅಸಲಿ ಸತ್ಯ ಇದು. ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಶ್ರಾವಣದಲ್ಲಿ (Sawan 2025) ಆಹಾರದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಈ ಸಮಯದಲ್ಲಿ ಅನೇಕರು ಉಪವಾಸ ಮಾಡ್ತಾರೆ. ಹೀಗಾಗಿ, ಮಾಂಸಾಹಾರದ ಹೊರತಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಿನ್ನುವುದನ್ನು ಬಿಡುತ್ತಾರೆ. ನಮ್ಮ ಪೂರ್ವಜರು ಸಹ ಈ ಆಹಾರವನ್ನು ತಿನ್ನದಂತೆ ಸಲಹೆ ನೀಡಿದ್ದಾರೆ. ಆದರೆ, ಇದಕ್ಕೆ ವೈಜ್ಞಾನಿಕ ಮಹತ್ವವೂ ಇದೆ. ಅದನ್ನು ತಿಳಿಯಲು ಮುಂದೆ ಓದಿ.

ಧಾರ್ಮಿಕ ಕಾರಣ ಏನು?
ಧಾರ್ಮಿಕ ದೃಷ್ಟಿಕೋನದಿಂದ ಹೇಳುವುದಾದರೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು 'ತಾಮಸಿಕ' ಆಹಾರ. ಆಯುರ್ವೇದ ಮತ್ತು ಯೋಗಶಾಸ್ತ್ರದ ಪ್ರಕಾರ, ಆಹಾರವನ್ನು ಮೂರು ಗುಣಗಳಾಗಿ ವಿಂಗಡಿಸಲಾಗಿದೆ. ಇವುಗಳೇ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರ.
ಸಾತ್ವಿಕ ಆಹಾರ ಯಾಕೆ?
ಶ್ರಾವಣ ಮಾಸವು ಅತ್ಯಂತ ಪವಿತ್ರವಾದ ತಿಂಗಳು. ಇದು ಶಿವನ ಆರಾಧನೆಗೆ ಮೀಸಲಾದ ಸಮಯ. ಈ ಮಾಸದಲ್ಲಿ ವ್ರತಗಳನ್ನು ಆಚರಿಸುವುದು, ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗುವುದು ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ವಾಡಿಕೆ. ಸಾತ್ವಿಕ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಹಾಲು, ತುಪ್ಪವು ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುತ್ತವೆ. ಇವು ಶಾಂತಿ ಮತ್ತು ಸ್ಪಷ್ಟತೆಯನ್ನು ನೀಡುತ್ತವೆ. ಹಾಗಾಗಿ, ತಾಮಸಿಕ ಆಹಾರಗಳನ್ನು ತ್ಯಜಿಸಿ, ಸಾತ್ವಿಕ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿ.
ತಾಮಸಿಕ ಆಹಾರ ಬೇಡ
ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಮತ್ತು ಮದ್ಯಪಾನವನ್ನು ತಾಮಸಿಕ ಎಂದು ಪರಿಗಣಿಸಲಾಗಿದೆ. ಇವು ಮನಸ್ಸನ್ನು ಆಲಸ್ಯಗೊಳಿಸುತ್ತವೆ. ಕೋಪ, ಆಕ್ರಮಣಶೀಲತೆ ಮತ್ತು ಅಜ್ಞಾನವನ್ನು ಹೆಚ್ಚಿಸುತ್ತವೆ. ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ತೊಡಗುವವರಿಗೆ ಇಂತಹ ಆಹಾರಗಳು ಅಡ್ಡಿಯಾಗುತ್ತವೆ ಎಂದು ಹೇಳಲಾಗಿದೆ.
ವೈಜ್ಞಾನಿಕ ಕಾರಣ ಏನು?
ಪೂರ್ವಜರ (ಅಜ್ಜಿ) ಮಾತುಗಳು ಕೇವಲ ಧಾರ್ಮಿಕವಲ್ಲ. ಅವುಗಳ ಹಿಂದೆ ಆಳವಾದ ವೈಜ್ಞಾನಿಕ ಕಾರಣಗಳೂ ಇವೆ. ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಕರ ಪ್ರಕಾರ, ಮಳೆಗಾಲದಲ್ಲಿ ದೇಹದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ.
ದುರ್ಬಲ ಜೀರ್ಣಕ್ರಿಯೆ
ಮಳೆಗಾಲ ಪ್ರಾರಂಭವಾದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಜೀರ್ಣಕಾರಿ ಅಗ್ನಿ (ದೇಹದ ಅಗ್ನಿ) ಕಡಿಮೆಯಾಗುತ್ತದೆ. ಇದರಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.
ಈರುಳ್ಳಿ-ಬೆಳ್ಳುಳ್ಳಿಯ ಸ್ವಭಾವ
ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡೂ ಉಷ್ಣ ಗುಣವನ್ನು ಹೊಂದಿವೆ. ಇವುಗಳನ್ನು ಸೇವಿಸಿದಾಗ ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡ ಹೇರಬಹುದು.
ಅನಾರೋಗ್ಯ ಕಟ್ಟಿಟ್ಟ ಬುತ್ತಿ
ಒಂದುವೇಳೆ ದುರ್ಬಲಗೊಂಡ ಜೀರ್ಣಾಂಗ ವ್ಯವಸ್ಥೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಉಷ್ಣ ಮತ್ತು ಜೀರ್ಣಿಸಲು ಕಷ್ಟವಾದ ಆಹಾರಗಳನ್ನು ಸೇವಿಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇದರಿಂದ ಗ್ಯಾಸ್, ಹೊಟ್ಟೆ ಉಬ್ಬರ, ವಾಂತಿ, ಎದೆಯುರಿ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳ ಅಪಾಯವೂ ಹೆಚ್ಚಿರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು, ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹ ಮುಖ್ಯ.
ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ
ಮಳೆಗಾಲದಲ್ಲಿ ರೋಗಾಣುಗಳ ಸಂತಾನೋತ್ಪತ್ತಿ ಸಾಮಾನ್ಯ. ಮಣ್ಣಿನಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ ಹೆಚ್ಚಾಗಿರುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಭೂಮಿಯೊಳಗೆ ಬೆಳೆಯುವ ತರಕಾರಿಗಳು. ಇದರಿಂದ, ಅವುಗಳ ಮೇಲೆ ಈ ರೋಗಾಣುಗಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚು. ಇವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಷ್ಟ. ಇದು ಸೋಂಕುಗಳಿಗೆ ಕಾರಣವಾಗಬಹುದು. ಮಳೆಗಾಲದಲ್ಲಿ ಆಹಾರವು ಬೇಗನೆ ಹಾಳಾಗುವ ಸಾಧ್ಯತೆಯಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿದ ಆಹಾರಗಳು ಇನ್ನಷ್ಟು ಬೇಗ ಹಾಳಾಗುತ್ತವೆ.
ಒಟ್ಟಾರೆಯಾಗಿ, ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತ್ಯಜಿಸುವ ಸಂಪ್ರದಾಯವು ಕೇವಲ ಧಾರ್ಮಿಕ ನಿಯಮವಲ್ಲ. ಮಳೆಗಾಲದ ಸೂಕ್ಷ್ಮ ಸಮಯದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆಧ್ಯಾತ್ಮಿಕವಾಗಿ ಶುದ್ಧವಾಗಿರಲು ಪೂರ್ವಜರ ಜ್ಞಾನದಿಂದ ಬಂದಿರುವ ಒಂದು ವೈಜ್ಞಾನಿಕ ಮತ್ತು ಪ್ರಾಯೋಗಿಕ ಸಲಹೆಯಾಗಿದೆ.



Click it and Unblock the Notifications













