Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜುಲೈ ಆಗಸ್ಟ್‌ನಲ್ಲಿ ಶನಿ ಮಂಗಳ ಸಂಸಪ್ತಕ ಯೋಗ: ಜ್ಯೋತಿಷ್ಯ ಪ್ರಕಾರ ಪ್ರಕೃತಿ ವಿಕೋಪದ ಸೂಚನೆಯಿದೆ
ಜೂನ್ 30ಕ್ಕೆ ಮಂಗಳ ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಪ್ರವೇಶಿಸಿದೆ. ಆಗಸ್ಟ್ 18ರವರೆಗೆ ಸಿಂಹ ರಾಶಿಯಲ್ಲಿ ಇರಲಿದೆ. ಮಂಗಳಗ್ರಹ ಸಾಮಾನ್ಯವಾಗಿ ಒಂದು ರಾಶಿಗೆ ಪ್ರವೇಶಿಸಿದರೆ 45-50 ದಿನ ಇರಲಿದೆ. ಈ ಸಮಯದಲ್ಲಿ ಕೇಂದ್ರದಲ್ಲಿ ಶನಿ, ರಾಹು-ಕೇತು ಅಥವಾ ಸೂರ್ಯ ಬಂದ್ರೆ ನೈಸರ್ಗಿಕ ಆಪತ್ತು ಉಂಟಾಗುವುದು ಎಂದು ಹೇಳಲಾಗುವುದು.

ಈ ಅವಧಿಯಲ್ಲಿ ಸಿಂಹದಲ್ಲಿ 48 ದಿನಗಳವರೆಗೆ ಇರಲಿದೆ, ಶನಿ ಕುಂಭ ರಾಶಿಯಲ್ಲಿದೆ, ಶನಿಯು ವಕ್ರೀಯ ಚಲನೆಯಲ್ಲಿ ಇದ್ದು ಈ ಅವಧಿಯಲ್ಲಿ ಮಂಗಳ ಸಂಸಪ್ತಕ ಯೋಗ ಉಂಟು ಮಾಡಿದೆ, ಇದರಿಂದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. ಈ ವರ್ಷ ಶ್ರಾವಣ ಮಾಸದಲ್ಲಿ ಈ ಸಂಸಪ್ತಕ ಯೋಗ ಉಂಟಾಗುವುದರಿಂದ ಅತಿವೃಷ್ಠಿ, ಅನಾವೃಷ್ಠಿ, ಭೂಕಂಪನ ಮುಂತಾದ ಪ್ರಕೃತಿ ವಿಕೋಪ ಸಂಭವಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈಗಾಗಲೇ ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ, ಮಳೆಯಿಂದ ಪ್ರವಾಹ ಭೀತಿ ಉಂಟಾಗಿದೆ.
ಯಾವುದೇ ಎರಡು ಗ್ರಹಗಳು ಪರಸ್ಪರ ಏಳನೇ ಸ್ಥಾನದಲ್ಲಿದ್ದರೆ, ಆ ಗ್ರಹಗಳ ನಡುವೆ ಸಂಸಪ್ತಕ ಯೋಗವು ರೂಪುಗೊಳ್ಳುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವಾಗ ಮಂಗಳವು ಸಿಂಹ ರಾಶಿಯಲ್ಲಿ ಸಾಗುತ್ತದೆಯೋ, ಆಗ ಶನಿಯು ಕುಂಭ ರಾಶಿಯಲ್ಲಿರುತ್ತಾನೆ. ಈ ಎರಡೂ ರಾಶಿಗಳು ಪರಸ್ಪರ ಏಳನೇ ಸ್ಥಾನದಲ್ಲಿವೆ. ಇದರಿಂದ ಸಂಸಪ್ತಕ ಯೋಗ ಉಂಟಾಗಿದೆ.
ಸಂಸಪ್ತಕವು ಶುಭ ಯೋಗವಾಗಿದ್ದರೂ, ಶುಭ ಮತ್ತು ಅಶುಭ ಗ್ರಹಗಳ ಸಂಯೋಜನೆಯಿಂದಾಗಿ, ಅದರ ಫಲಿತಾಂಶಗಳು ಸಹ ಬದಲಾಗುತ್ತವೆ. ಇಲ್ಲಿ ಶನಿ ಮತ್ತು ಮಂಗಳ ಎರಡನ್ನೂ ದುಷ್ಟ ಗ್ರಹಗಳೆಂದು ಪರಿಗಣಿಸಲಾಗಿದೆ. ಮಂಗಳವು ಅಗ್ನಿ ಅಂಶದಲ್ಲಿರುವುದರಿಂದ ಹೆಚ್ಚು ಉಗ್ರವಾಗಿರುತ್ತದೆ, ಆದರೆ ಶನಿಯು ಹಿಮ್ಮುಖ ಸ್ಥಿತಿಯಲ್ಲಿಇರುವುದರಿಂದ ಸಂಸಪ್ತಕ ಯೋಗ ಅಶುಭ ಫಲ ಬೀರಲಿದೆ.
ಈ ಯೋಗದಿಂದ ಪ್ರಕೃತಿ ವಿಕೋಪದ ಜತೆಗೆ ಅಗ್ನಿ, ಭೂಕಂಪ, ಅನಿಲ ಅವಘಡ, ವಾಯು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ದೇಶದಲ್ಲಿ ಅತಿವೃಷ್ಟಿಯನ್ನೂ ಕಾಣಬಹುದು. ಮಂಗಳ ಮತ್ತು ಶನಿಯ ಈ ಸಂಸಪ್ತಕ ಯೋಗವು ಮೇಲೆ ಭೂಕುಸಿತ ಮತ್ತು ಭೂಕಂಪಗಳ ಸಾಧ್ಯತೆಗಳನ್ನು ಸಹ ಸೃಷ್ಟಿಸುತ್ತದೆ. ರಾಜಕೀಯ ಅಸ್ಥಿರತೆ ಎಂದರೆ ರಾಜಕೀಯ ವಾತಾವರಣ ಹೆಚ್ಚಾಗಿರುತ್ತದೆ. ಗಡಿಯಲ್ಲಿ ಉದ್ವಿಗ್ನತೆ ವಾತಾವರಣ ಇರಲಿದೆ.
ಚಿನ್ನ-ಬೆಳ್ಳಿಯ ಬೆಲೆ ಹೆಚ್ಚಾಗಲಿದೆ
ಈ ಅವಧಿಯಲ್ಲಿ ಕೆಂಪು ವಸ್ತುಗಳ ಬೆಲೆ ಹೆಚ್ಚಾಗಲಿದೆ, ಚಿನ್ನ-ಬೆಳ್ಳಿಯ ಬೆಲೆ ಹೆಚ್ಚಾಗಲಿದೆ. ರಾಜಕೀಯವಾಗಿ ಹಲವು ಚರ್ಚೆಗಳು ಉಂಟಾಗಲಿದೆ. ಮಹಿಳೆ ಹಾಗೂ ರೈತರ ಪರವಾಗಿ ದೇಶದಲ್ಲಿ ಹೊಸ ಕಾನೂನುಗಳು ಬರಲಿದೆ. ಕೇಂದ್ರದಲ್ಲಿ ತುಂಬಾ ಮಹತ್ವದ ಬದಲಾವಣೆಯಾಗಲಿದೆ. ಕೆಲ ಮಹಿಳಾ ರಾಜಕಾರಣಿಗಳು ತುಂಬಾ ಮಹತ್ವದ ಜವಾಬ್ದಾರಿ ಸಿಗಲಿದೆ.
ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗಲಿದೆ
ದೇಶದಲ್ಲಿ ಇದ್ದಕ್ಕಿದ್ದಂತೆ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಏಕೆಂದರೆ ವೈದಿಕ ಶಾಸ್ತ್ರದ ಪ್ರಕಾರ ಸಿಂಹವು ಹೃದಯಕ್ಕೆ ಸಂಬಂಧಿಸಿದ ರಾಶಿಯಾಗಿದೆ.
ಮಳೆಯಿಂದ ಪ್ರಕೃತಿ ವಿಕೋಪ ಉಂಟಾಗಲಿದೆ
ಮುಂದಿನ 45 ದಿನದವರೆಗೆ ಬಿಹಾರ, ಉತ್ತರ ಪ್ರದೇಶದಲ್ಲಿ ಅತ್ಯಧಿಕ ಮಳೆ ಬೀಳಲಿದೆ, ಕೆಲವು ಕಡೆ ಮಳೆಯ ಅಭಾವ ಕಡಿಮ ಇರಲಿದೆ. ಯುಪಿ, ಬಿಹಾರದಲ್ಲಿ ಪ್ರವಾಹ ಉಂಟಾಗಬಹುದು ಎಂದು ಹೇಳಲಾಗುವುದು, ಕೆಲವು ಕಡೆ ಭೂಕಂಪನ ಉಂಟಾಗಲಿದೆ, ಕೆಲವು ಕಡೆ ಮಳೆ ತುಂಬಾ ಕಡಿಮೆ ಬೀಳಿದೆ, ಹೀಗೆ ಒಂದು ಕಡೆ ಅಧಿಕ ಮಳೆ ಮತ್ತೊಂದು ಕಡೆ ಮಳೆಯ ಪ್ರಮಾಣ ಕಡಿಮೆ ಬೀಳಲಿದೆ.



Click it and Unblock the Notifications
