Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅ. 2 ಅಮವಾಸ್ಯೆಯಂದೇ ಸೂರ್ಯ ಗ್ರಹಣ, ಸರ್ವ ಪಿತೃಪಕ್ಷ: ಏನು ಮಾಡಲೇಬಾರದು?
ಅಕ್ಟೋಬರ್ 2ಕ್ಕೆ ಅಮವಾಸ್ಯೆ, ಸರ್ವಪಿತೃ ಪಕ್ಷ ಹಾಗೂ ವರ್ಷದ ಎರಡನೇ ಸೂರ್ಯಗ್ರಹಣ ಹೀಗೆ ಈ ದಿನ ಜ್ಯೋತಿಷ್ಯದ ಕಾರಣದಿಂದ ಅತ್ಯಂತ ಮಹತ್ವದ ದಿನವಾಗಿದೆ. ಹಾಗಾಗಿ ಈ ಮಹತ್ವದ ದಿನ ಕೆಲ ಕಾರ್ಯಗಳನ್ನು ಮಾಡಲೇಬಾರದು, ಇನ್ನು ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಸೂರ್ಯಗ್ರಹಣದಂದೇ ಸರ್ವಪಿತೃ ಪಕ್ಷ
ಸರ್ವಪಿತೃ ಪಕ್ಷ ಎಂಬುವುದು ಶ್ರಾದ್ಧ ಕಾರ್ಯ ಮಾಡಲು ಬಹಳ ಮುಖ್ಯವಾದ ದಿನ, ಈ ದಿನ ಶಾಸ್ತ್ರ ಪ್ರಕಾರ ತರ್ಪಣ ನೀಡಿದರೆ ಪಿತೃದೋಷದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು. ಅದರೆ ಇದೇ ದಿನ ಸೂರ್ಯಗ್ರಹಣವಿದೆ, ಹಾಗಾಗಿ ಪಿತೃತರ್ಪಣ ಕಾರ್ಯಕ್ಕಾಗಿ ಏನಾದರು ಅಡಚಣೆ ಇದೆಯೇ ಎಂದು ನೋಡುವುದಾದರೆ ಏನೂ ಇಲ್ಲ, ಏಕೆಂದರೆ ಸೂರ್ಯಗ್ರಹಣದ ಸೂತಕ ಭಾರತದ ಮೇಲಿಲ್ಲ, ಹೀಗಾಗಿ ಪಿತೃ ತರ್ಪಣ ಕಾರ್ಯಕ್ಕೆ ಯಾವುದೆ ಅಡಚಣೆ ಇರಲ್ಲ.
ಇನ್ನು ಸರ್ವಪಿತೃ ಪಕ್ಷದಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:
ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕಬೇಡಿ: ಪಿತೃಪಕ್ಷದಲ್ಲಿ ಏನಾದರು ಹೊಸ ಕಾರ್ಯಕ್ಕೆ ಕೈ ಹಾಕಿದರೆ ಶುಭ ಉಂಟಾಗವುದಿಲ್ಲ, ಅನೇಕ ಸವಾಲುಗಳನ್ನು ಎದುರಿಸುತ್ತಾರೆ, ಹಾಗಾಗಿ ಈ ದಿನದಂದು ಯಾವುದೇ ಹೊಸ ಕಾರ್ಯ ಮಾಡಬೇಡಿ.
ಬಟ್ಟೆ, ಆಸ್ತಿ, ವಾಹನ ಅಂತ ಖರೀದಿಸಬಾರದು
ಪಿತೃಪಕ್ಷದಲ್ಲಿ ಬಟ್ಟೆಯಾಗಲಿ, ಅಸ್ತಿ, ವಾಹನ ಖರೀದಿ ಮಾಡಬಾರದು. ಈ ಅವಧಿಯಲ್ಲಿ ಯಾವುದೇ ಅಮೂಲ್ಯವಾದ ವಸ್ತು ಖರೀದಿಸುವುದು ಮಾಡಬೇಡಿ.
ರಾತ್ರಿ ಪ್ರಯಾಣ ತಪ್ಪಿಸಿ
ಅಮವಾಸ್ಯೆಯಂದು ರಾತ್ರಿ ಪ್ರಯಾಣ ಮಾಡಬೇಡಿ, ಅಷ್ಟು ಅನಿವಾರ್ಯವಾದರೆ ಮಾತ್ರ ಪ್ರಯಾಣ ಮಾಡಿ, ನಿಧಾನಕ್ಕೆ ಗಾಡಿ ಚಲಾಯಿಸಿ.
ಶ್ರಾದ್ಧಕ್ಕೆ ಮಾಡಿದ ಆಹಾರ ಬಡಿಸುವ ಮುನ್ನ ಸೇವಿಸಬಾರದು
ಶ್ರಾದ್ಧಕ್ಕೆ ಆಹಾರ ತಯಾರಿಸುವಾಗ ಉಪ್ಪು-ಉಳಿ ಅಂತ ಎಂಜಲು ಮಾಡಲೇಬಾರದು, ತೀರಿ ಹೋದವರಿಗೆ ತರ್ಪಣ ನೀಡಿ, ಅವರಿಗೆ ಮಾಡಿದ ಆಹಾರ ಬಡಿಸಿದ ಬಳಿಕವಷ್ಟೇ ಆಹಾರದ ರುಚಿ ನೋಡಬಹುದು.
ಈ ದಿನ ಉಗುರು ಕತ್ತರಿಸಬಾರದು
ಪಿತೃಪಕ್ಷದಲ್ಲಿ ಉಗುರು ಕತ್ತರಿಸಬಾರದು ಎಂದು ಹೇಳಲಾಗುವುದು.ಉಗುರು ಕತ್ತರಿಸಿದರೆ ಅದರಿಂದ ಅಶುಭ ಉಂಟಾಗುವುದು.
ಮನೆಯಲ್ಲಿ ಜಗಳವಾಡಬೇಡಿ
ಈ ದಿನ ಯಾರ ಜೊತೆಯೂ ಜಗಳವಾಡಬೇಡಿ, ಅದರಲ್ಲಿಯೂ ಮನೆಯಲ್ಲಿ ಹಿರಿಯರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ.
ಪಿತೃ ಪಕ್ಷಕ್ಕೆ ನೀವು ದೇವರ ಮನೆಯಲ್ಲಿ ಹಚ್ಚುವ ದೀಪವನ್ನು ಬಳಸಬಾರದು
ಪಿತೃಪಕ್ಷಕ್ಕೆ ದೀಪವನ್ನು ಬೇರೆ ದೀಪದಲ್ಲಿ ಅಥವಾ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು, ದೇವರ ದೀಪ ಹಚ್ಚಲು ಬಳಸುವ ದೀಪ ಬಳಸಬಾರದು.
ಘಂಟೆ ಭಾರಿಸಬಾರದು
ಸರ್ವಪಿತೃ ಪಕ್ಷದಂದು ಪೂಜೆ ಮಾಡುವಾಗ ದೇವರಿಗೆ ಬಾರಿಸುವ ಘಂಟೆ ಭಾರಿಸಬಾರದು.
ಶ್ರಾದ್ಧ ನಡೆಯುವಾಗ ಅಡಚಣೆ ಮಾಡಬಾರದು
ಶ್ರಾದ್ಧ ಮಾಡುವಾಗ ಗೇಲಿ ಮಾಡುವುದು, ಅಡಚಣೆ ಮಾಡುವುದು ಮಾಡಬಾರದು. ಶ್ರದ್ಧೆಯಿಂದ ಮಾಡಬೇಕು.
ಬಾಗಿಲಿಗೆ ತೋರಣ ಕಟ್ಟಬೇಡಿ
ಶ್ರಾದ್ಧ ಮಶಾಡುವಾಗ ಬಾಗಿಲಿಗೆ ತೋರಣ ಕಟ್ಟ ಬಾರದು, ಶುಭ ದಿನಗಳಲ್ಲಿ ಮಾತ್ರ ತೋರಣ ಕಟ್ಟುವುದು, ಶ್ರಾದ್ಧ ಮಾಡುವುದು ಶುಭವಲ್ಲ.
ಮನೆ ಮುಂದೆ ರಂಗೋಲಿ ಹಾಕಬೇಡಿ
ಈ ದಿನ ಮನೆ ಮುಂದೆ ರಂಗೋಲಿ ಹಾಕಬಾರದು, ಹಾಗೆ ಹಾಕಿದರೆ ಹಿರಿಯರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.
ಈ ದಿನ ದೇವರಿಗೆ ದೀಪ ಹಚ್ಚಬೇಡಿ
ಶ್ರಾದ್ಧ ಕಾರ್ಯ ಮಾಡುವಾಗ ದೇವರಿಗೆ ದೀಪ ಹಚ್ಚಬೇಡಿ.
ಮಿಲನಕ್ರಿಯೆ ನಡೆಸಬಾರದು: ಶ್ರಾದ್ದದ ದಿನ ಪತಿಪತ್ನಿ ಮಿಲನಕ್ರಿಯೆ ನಡೆಸಬಾರದು. ಎಲ್ಲರೂ ಒಳ್ಳೆಯ ಸಂತಾನ ಬಯಸುತ್ತಾರೆ, ಹಾಗಾಗಿ ಈ ದಿನ ಪತಿ-ಪತ್ನಿ ದೈಹಿಕ ಸಂಪರ್ಕ ಬೆಳೆಸಬಾರದು.
ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡಬೇಕು, ಆವಾಗ ಮಾತ್ರ ಅದರ ಫಲ ಸಿಗುವುದು. ಪಿತೃದೋಷ ದೂರಾಗಿ ಕುಟುಂಬ ಚೆನ್ನಾಗಿರುತ್ತದೆ.



Click it and Unblock the Notifications
