Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಸರ್ವಪಿತೃ ಪಕ್ಷ ಯಾವಾಗ ? ಪಿತೃ ಪಕ್ಷದ 16 ದಿನಗಳಲ್ಲಿ ಇದು ವಿಶೇಷ ದಿನ, ಏಕೆ?
ಇದೀಗ ಪಿತೃಪಕ್ಷ ನಡೆಯುತ್ತಿದೆ, ಪಿತೃಪಕ್ಷದಲ್ಲಿ ಪಿಂಡ ಪ್ರಧಾನ ಮಾಡಲಾಗುವುದು, ಈ ದಿನಗಳಲ್ಲಿ ತರ್ಪಣ ನೀಡುವುದರಿಂದ ಮೋಕ್ಷ ಸಿಗಲಿದೆ ಎಂಬ ನಂಬಿಕೆ. ಅದರಲ್ಲಿಯೂ ಅಮವಾಸ್ಯೆಯ ಪಿತೃಪಕ್ಷ ತುಂಬಾನೇ ಮಹತ್ವದ್ದಾಗಿದೆ, ಇದನ್ನು ಸರ್ವಪಿತೃ ಅಮವಾಸ್ಯೆ ಎಂದು ಕರೆಯಲಾಗುವುದು.
ಸರ್ವಪಿತೃ ಅಮವಾಸ್ಯೆ, ಈ ದಿನ ಮಹತ್ವವೇನು? ಸರ್ವಪಿತೃ ಪಕ್ಷ ಯಾವಾಗ ಶುರುವಾಗಿ ಯಾವಾಗ ಮುಕ್ತಾಯವಾಗುತ್ತದೆ, ಈ ದಿನ ಮಾಡಬೇಕಾದ ಪ್ರಮುಖ ಪರಿಹಾರ ಕ್ರಮವೇನು ಎಂಬುವುದರ ಬಗ್ಗೆ ನೋಡೋಣ:

ಸರ್ವಪಿತೃ ಅಮವಾಸ್ಯೆ
- ಅಮವಾಸ್ಯೆ ತಿಥಿ ಅಕ್ಟೋಬರ್ 1 ಬೆಳಗ್ಗೆ 9:34ಕ್ಕೆ ಶುರುವಾಗಿ ಅಕ್ಟೋಬರ್ 2ರಂದು ಮುಕ್ತಾಯವಾಗಲಿದೆ.
- ಉದಯ ತಿಥಿ ಅಕ್ಟೋಬರ್ 2 ಕ್ಕೆ ಬಂದಿರುವುದರಿಂದ ಸರ್ವ ಪಿತೃ ಅಮವಾಸ್ಯೆಯನ್ನು ಅಕ್ಟೋಬರ್ 2ರಂದು ಮಾಡಲಾಗುವುದು.
- ಸರ್ಪಿತೃ ಪಕ್ಷದಂದು ಕುಟುಪ್ ಮುಹೂರ್ತ ಹಾಗೂ ರೋಹಿಣಿ ಮುಹೂರ್ತವಿದೆ, ಈ ಮುಹೂರ್ತದಲ್ಲಿ ಮಾಡುವುದಿಲ್ಲ. ಕುಟುಪ್ ಮುಹೂರ್ತ ಬೆಳಗ್ಗೆ 11:45ರಿಂದ ಮಧ್ಯಾಹ್ನ 12:24ರವರೆಗೆ ಇರಲಿದೆ. ರೋಹಿಣಿ ಮುಹೂರ್ತ ಮಧ್ಯಾಹ್ನ 12:34ರಿಂದ 1:34ರವರೆಗೆ ಇರುತ್ತದೆ, ಈ ಸಮಯದ ಹೊರತಾಗಿ ಉಳಿದ ಸಮಯದಲ್ಲಿ ತರ್ಪಣ ಅರ್ಪಿಸಬಹುದು.
- ಈ ದಿನ ಮಧ್ಯಾಹ್ನ 1:34ರಿಂದ 03:43ರವೆರೆಗ ತರ್ಪಣ ಸಮಯ ಸೂಕ್ತವಾಗಿದೆ.
ಪಿತೃಪಕ್ಷದ 16 ದಿನಗಳಲ್ಲಿ ಈ ದಿನ ತುಂಬಾನೇ ಮುಖ್ಯ
ಸೆಪ್ಟೆಂಬರ್ 17ಕ್ಕೆ ಪ್ರಾರಂಭವಾದ ಪಿತೃಪಕ್ಷ ಅಕ್ಟೋಬರ್ 2 ಕ್ಕೆ ಮುಕ್ತಾಯವಾಗಲಿದೆ, ಈ ಪಿತೃಪಕ್ಷದ ದಿನಾಂಕಗಳಲ್ಲಿ ಸರ್ವಪಿತೃಪಕ್ಷ ಅತ್ಯಂತ ಪ್ರಮುಖವಾಗಿದೆ. ಈ ದಿನ ತರ್ಪಣ ನೀಡಿದರೆ ನಮಗೆ ಗೊತ್ತಿಲ್ಲದೆ ಪಿತೃದೋಷವಿದ್ದರೆ ಅದರಿಂದಲೂ ಮುಕ್ತರಾಗಬಹುದು, ನಮಗೆ ನಮ್ಮ ಹಿರಿಯರ ಬಗ್ಗೆ ಗೊತ್ತಿರಬಹುದು, ಅದರೆ ಅವರ ಹಿರಿಯರ ಬಗ್ಗೆ ಗೊತ್ತಿರಲ್ಲ, ಅವರಲ್ಲಿ ಯಾರಿಗಾದರು ಮೋಕ್ಷ ಇನ್ನೂ ಸಿಕ್ಕಿಲ್ಲ ಎಂದಾದರೆ ಅದರ ದೋಷವಿರುತ್ತದೆ, ಈ ದಿನ ತರ್ಪಣ ಅರ್ಪಿಸುವುದರಿಂದ ಅವರಿಗೆಲ್ಲಾ ಮೋಕ್ಷ ಸಿಗುವುದು ಅಲ್ಲದೆ ಅವರೆಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲಿರುತ್ತದೆ, ಹಿರಿಯರ ಶಾಪ ಮನೆ ಮೇಲೆ ಇರುವುದಿಲ್ಲ ಎಂಬ ನಂಬಿಕೆ ಹಾಗಾಗಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ.
ಸರ್ವಪಿತೃ ಅಮವಾಸ್ಯೆ ಪಿತೃದೋಷ ಪರಿಹಾರಕ್ಕೆ ಶ್ರೇಷ್ಠ ದಿನವಾಗಿದೆ. ಈ ದಿನ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ:
ಪಂಚಬಲಿ ಕರ್ಮ: ತರ್ಪಣದ ಬಳಿಕ ಕಾಗೆ, ಹಸು, ನಾಯಿ, ಇರುವೆ ಈ ಪ್ರಾಣಿಗಳಿಗೆ ಎಡೆ ಇಟ್ಟ ಆಹಾರ ಇಡಲಾಗುವುದು, ತೀರಿ ಹೋದ ಆತ್ಮಗಳು ಆ ರೂಪದಲ್ಲಿ ಬಂದು ಆಶೀರ್ವದಿಸಿ ಹೋಗುತ್ತಾರೆ ಎಂದು ನಂಬಲಾಗಿದೆ.
ಈ ದಿನ ಬ್ರಾಹ್ಮಣರಿಗೆ ದಾನ ಮಾಡಲಾಗುವುದು
ತರ್ಪಣ ಕಾರ್ಯ ಮಾಡಲು ನೆರವಾದ ಬ್ರಾಹ್ಮಣರಿಗೆ ದಾನವನ್ನು ಮಾಡಲಾಗುವುದು. ತರ್ಪಣವನ್ನು ನದಿ ತೀರದಲ್ಲಿ ಮಾಡುವಾಗ ಬ್ರಾಹ್ಮಣರು ಅದನ್ನು ಶಾಸ್ತ್ರ ಪ್ರಕಾರ ಮಾಡುತ್ತಾರೆ.
ಬಡವರಿಗೆ ವಸ್ತುಗಳನ್ನು ದಾನ ಮಾಡಿ: ಪಿತೃಪಕ್ಷದ ತರ್ಪಣ ಕಾರ್ಯ ಮುಗಿದ ಮೇಲೆ ಆ ಹೆಸರಿನಲ್ಲಿ ಬಡವರಿಗೆ ದಾನವನ್ನು ಮಾಡಲಾಗುವುದು.
ಆಲದ ಮರದ ಕೆಳಗಡೆ ದೀಪ ಹಚ್ಚಿ: ಈ ದಿನ ಆಲದ ಮರದ ದಕ್ಷಿಣ ದಿಕ್ಷಿಗೆ ಸಾಸಿವೆಯೆಣ್ಣೆ ದೀಪವನ್ನು ಹಚ್ಚಿ ತೀರಿ ಹೋದ ಹಿರಿಯರನ್ನು ಮನಸ್ಸಿನಲ್ಲಿಯೇ ಸ್ಮರಿಸಲಾಗುವುದು.



Click it and Unblock the Notifications