Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಂಕ್ರಾಂತಿ 2026: ಈ ವರ್ಷ ಸಂಕ್ರಾಂತಿ 14ರಂದು ಅಥವಾ 15? ಹಬ್ಬದ ಹಿನ್ನೆಲೆ, ಮಹತ್ವ ಇಲ್ಲಿದೆ!
ಮಕರ ಸಂಕ್ರಾಂತಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಮಕರ ಸಂಕ್ರಾಂತಿಯನ್ನು ಭಾರತದ ಬಹುತೇಕ ಎಲ್ಲಾ ಭಾಗದಲ್ಲೂ ಆಚರಿಸುತ್ತಾರೆ. ಆದ್ರೆ ಒಂದೊಂದು ಕಡೆ ಒಂದೊಂದು ರೀತಿಯ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ದಿನ ಸೂರ್ಯನು ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಚಲಿಸುತ್ತಾನೆ ಎಂದು ನಂಬಲಾಗಿದೆ. ಉತ್ತರಾಯಣಕ್ಕೆ ಎಂದರೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುವ ಪವಿತ್ರ ಕಾಲ ಎಂದು ಕೂಡ ಕರೆಯಲಾಗುತ್ತದೆ.
ಉತ್ತರಾಯಣದ ಆರಂಭವನ್ನು ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ.ಮಕರ ಸಂಕ್ರಾಂತಿಯನ್ನು ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಆಚರಣೆ ಮಾಡಲಾಗುವುದು. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ, ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್, ಹರಿಯಾಣದಲ್ಲಿ ಲೋಹರಿ, ಅಸ್ಸಾಂನಲ್ಲಿ ಮಘಾ ಬಿಹು ಬಿಹಾರದಲ್ಲಿ ಕಿಚಡಿ ಎಂದು ಆಚರಿಸಲಾಗುವುದು.

ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಸಮಯದಲ್ಲಿ ಹಲವು ರೀತಿಯ ಶುಭಗಳನ್ನು ನೋಡಬಹುದು. ಮಕರ ಸಂಕ್ರಾಂತಿಯು ರೈತರ ಪಾಲಿಗೆ ಬಹಳ ಪ್ರಮುಖ ಹಬ್ಬ ಎಂದು ಪರಿಗಣಿಸಲಾಗಿದೆ. ಹಾಗೆ ಈ ಹಬ್ಬದಲ್ಲಿ ಎಲ್ಲಾ ವಿಶೇಷ ಕಾರ್ಯಗಳನ್ನ ಮಾಡಲು ತಯಾರಿ ನಡೆಸಲಾಗುತ್ತದೆ.
ಹಿಂದೂ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನದಂದು ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಮುಂತಾದ ಆಚರಣೆಗಳನ್ನು ಮಾಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ. ಈ ಸಂದರ್ಭದಲ್ಲಿ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ದೀರ್ಘಾಯುಷ್ಯ ಸಿಗುತ್ತದೆ. ಹಾಗೆ ಇದು ಸಂಪತ್ತು, ಸಮೃದ್ಧಿ ತರುವ ಹಬ್ಬ ಎಂದು ಪರಿಗಣಿಸಲಾಗುತ್ತದೆ.
ಈ ವರ್ಷ ಸಂಕ್ರಾಂತಿ ಯಾವಾಗ?
ಪ್ರತಿ ವರ್ಷ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ. ಈ ವರ್ಷ ಜನವರಿ 14ರಂದು ಈ ಹಬ್ಬ ಆಚರಿಸಲಾಗುತ್ತದೆ. ಹಾಗೆ ಕೆಲವು ಕಡೆ ಜನವರಿ 15ರಂದು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ಪುಣ್ಯ ಕಾಲ
ಜನವರಿ 14- ಬುಧವಾರ- ಮಧ್ಯಾಹ್ನ 03:13 ರಿಂದ ಸಂಜೆ 06:15 (03 ಗಂಟೆ 02 ನಿಮಿಷಗಳು)
ಮಕರ ಸಂಕ್ರಾಂತಿ ಪೂಜಾ ವಿಧಿವಿಧಾನ
ಈ ದಿನ ಗಂಗಾ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ. ಗಂಗಾ ನದಿಯಲ್ಲಿ ಸ್ನಾನ ಸಾಧ್ಯವಿಲ್ಲವಾಗಿರುವುದರಿಂದ ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡಲಾಗುವುದು. ಒಂದು ಪಾತ್ರೆಯಲ್ಲಿ ಅಕ್ಕಿ, ಕೆಂಪು ಹೂವು, ಹಣ್ಣು ಇಟ್ಟು ಬಳಿಕ ಕಳಷದಲ್ಲಿ ನೀರು ಇಟ್ಟುಕೊಂಡು ಸೂರ್ಯನಿಗೆ ಜಲಾರ್ಪಣೆ ಮಾಡಬೇಕು. ಈ ಸಮಯದಲ್ಲಿ ಓಂ ಸೂರ್ಯಾಯ ನಮಃ ಅಥವಾ ಓಂ ಘೃಣಿ ಸೂರ್ಯಾಯ ನಮಃ ಎಂಬ ಮಂತ್ರ ಜಪಿಸಬೇಕು.
ಹಾಗೆ ಈ ದಿನವು ಬಡವರಿಗೆ ಈ ವಸ್ತುಗಳನ್ನು ದಾನ ನೀಡಬೇಕಂತೆ. ಅದ್ರಲ್ಲೂ ಆಹಾರ ಪದಾರ್ಥಗಳು, ಕಪ್ಪು ಎಳ್ಳು, ಬೆಲ್ಲ, ಅಕ್ಕಿ, ಬಟ್ಟೆ, ಹಣ, ಎಣ್ಣೆ ದಾನವಾಗಿ ನೀಡುವುದು ನಿಮ್ಮಲ್ಲಿ ಸಮೃದ್ಧಿ ಹೆಚ್ಚಿಸಲು ಕಾರಣವಾಗಲಿದೆ. ಈ ವಸ್ತುಗಳನ್ನು ದಾನ ಮಾಡುವುದರಿಂದ ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ, ಅಗತ್ಯ ವಸ್ತುಗಳಾದ ಬಟ್ಟೆ, ಹೊದಿಕೆ, ಚಪ್ಪಲಿ ದಾನವಾಗಿ ನೀಡಬೇಕು ಎಂದು ಹೇಳಲಾಗಿದೆ. ಹಾಗೆ ಎಳ್ಳು ಬೆಲ್ಲ ಸವಿಯುವುದು, ಸಂಕ್ರಾಂತಿ ಕಾಳು ಸವಿಯಲು ನೀಡುವುದು ಇ ಹಬ್ಬದ ಮತ್ತೊಂದು ಸಂಪ್ರದಾಯವಾಗಿದೆ.



Click it and Unblock the Notifications
