Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರಹಣ ಸಮಯದಲ್ಲಿ ಏನು ಮಾಡಬಾರದು..? ತಾಯಂದಿರೇಕೆ ಜಾಗೃತೆ ವಹಿಸಬೇಕು? ಸದ್ಗುರು ಮಾತು!
ನಾಳೆ ಖಗ್ರಾಸ ಚಂದ್ರಗ್ರಹಣ ಸಂವಿಸುತ್ತಿದೆ. ದೀರ್ಘಕಾಲದ ಹಾಗೆ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದೆ. ಹೀಗಾಗಿ ಬಹಳ ಕುತೂಹಲಕಾರಿ ಹಾಗೆ ಪ್ರಭಾವಕಾರಿಯಾದ ಗ್ರಹಣ ಎಂದು ಹೇಳಲಾಗಿದೆ. ಇನ್ನು ಗ್ರಹಣ ಸಮಯದಲ್ಲಿ ಗ್ರಹಗತಿಗಳಲ್ಲಾಗುವ ಬದಲಾವಣೆಯು ಎಲ್ಲರ ಮೇಲೂ ಪರಿಣಾಮ ಬೀರುವುದು ನೋಡಬಹುದು.
ಚಂದ್ರಗ್ರಹಣದ ಪರಿಣಾಮವು ನಿಮ್ಮ ಜಾತಕ ದೋಷಕ್ಕೂ ಕಾರಣ ಆಗೋದು ನೋಡಬಹುದು. ಇನ್ನು ಗ್ರಹಣ ಸಮಯದಲ್ಲಿ ಕೆಲವೊಂದು ಕೆಲಸಗಳ ಮಾಡುವುದು ಅಪಾಯಕಾರಿ ಹಾಗೆ ಅದು ನಿಷೇಧ. ಕೆಲವೊಂದು ಕೆಲಸವನ್ನು ಗ್ರಹಣ ಸಮಯದಲ್ಲಿ ಮಾಡುವುದು ಅಪಾಯ ತರಬಹುದು. ಗ್ರಹಣ ಅಂದರೆ ಕೆಲವರು ಭಯ ಬೀಳುತ್ತಾರೆ.

ಗ್ರಹಣ ಸಮಯದಲ್ಲಿ ಕೆಲವೊಂದು ಮೂಢನಂಬಿಕೆಗಳ ಅನುಸರಿಸುತ್ತಾರೆ. ಆದ್ರೆ ನಾವಿಂದು ವೈಜ್ಞಾನಿಕ ರೀತಿಯಾಗಿ ಗ್ರಹಣ ಕುರಿತು ತಿಳಿಯೋಣ. ಅದ್ರಲ್ಲೂ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವನ್ ಅವರು ಹೇಳೋದೇನು ನೋಡೋಣ.
ಚಂದ್ರಗ್ರಹಣದ ಸಮಯದಲ್ಲಿ ಪೂರ್ಣ ಚಂದ್ರ ಚಕ್ರದಲ್ಲಿ 28 ದಿನಗಳಲ್ಲಿ ಏನಾಗುತ್ತದೆ ಎಂಬುದು ಗ್ರಹಣದ ಎರಡರಿಂದ ಮೂರು ಗಂಟೆಗಳ ಅವಧಿಯಲ್ಲಿ ಸೂಕ್ಷ್ಮ ರೀತಿಯಲ್ಲಿ ನಡೆಯುತ್ತಿದೆ. ಶಕ್ತಿಯ ವಿಷಯದಲ್ಲಿ ಭೂಮಿಯ ಶಕ್ತಿಯು ಈ ಗ್ರಹಣವನ್ನು ಚಂದ್ರನ ಪೂರ್ಣ ಚಕ್ರ ಎಂದು ತಪ್ಪಾಗಿ ಭಾವಿಸುತ್ತಿದೆ. ಗ್ರಹದಲ್ಲಿ ಕೆಲವು ವಿಷಯಗಳು ಸಂಭವಿಸುತ್ತವೆ, ಅಲ್ಲಿ ಅದರ ನೈಸರ್ಗಿಕ ಸ್ಥಿತಿಯಿಂದ ದೂರ ಸರಿದ ಯಾವುದೇ ವಸ್ತುವು ಬಹಳ ವೇಗವಾಗಿ ಹಾಳಾಗುತ್ತದೆ. ಅದಕ್ಕಾಗಿಯೇ ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದರೂ, ಬೇಯಿಸಿದ ಆಹಾರವು ಗ್ರಹಣದ ಮೊದಲು ಮತ್ತು ನಂತರ ಹೇಗೆ ಬದಲಾಗುತ್ತದೆ ಎಂಬುದರಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತದೆ. ನಾವು ಸಂರಕ್ಷಿಸಿಡುವ ಆಹಾರವು ವಿಷವಾಗಿ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೇಹದ ಹೊರಗಿನ ಆಹಾರ ಗ್ರಹಣ ಸಮಯದಲ್ಲಿ ಹಾಳಾಗುತ್ತದೆ. ಆದ್ರೆ ನೀವು ಕಚ್ಚಾ ಆಹಾರ ಸೇವಿಸಬಹುದೇ ಎಂದರೆ ಇಲ್ಲ. ಏಕೆಂದರೆ ನೀವು ಯಾವುದೇ ಆಹಾರ ಸೇವಿಸಿದರೂ ಅದು ದೇಹದೊಳಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಇದು ಬೇಯಿಸಿದ ಆಹಾರವಾಗಿ ಬದಲಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಬದಲಾವಣೆ ನೋಡಬಹುದು ಎಂದು ಸದ್ಗುರು ಹೇಳುತ್ತಾರೆ.
ತಾಯಂದಿರ ಮೇಲೆ ಗ್ರಹಣ ತರಲಿದೆ ಎಫಕ್ಟ್
'ಚಂದ್ರನ ಚಕ್ರಗಳು ಮಾನವ ವ್ಯವಸ್ಥೆಯ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಶಕ್ತಿಯ ದೃಷ್ಟಿಯಿಂದ ಪರಿಣಾಮ ಬೀರುತ್ತವೆ. ನಮ್ಮ ತಾಯಂದಿರು ತಮ್ಮ ಚಕ್ರಗಳನ್ನು ಹೇಗೆ ದಾಟಿದರು ಎಂಬುದು ಇದಕ್ಕೆ ಸ್ಪಷ್ಟವಾಗಿದೆ. ನಮ್ಮ ತಾಯಂದಿರ ದೇಹವು ಚಂದ್ರನೊಂದಿಗೆ ಹೊಂದಿಕೆಯಾಗದಿದ್ದರೆ ನಾವು ಇಂದು ಇಲ್ಲಿ ಇರುತ್ತಿರಲಿಲ್ಲ. ಎರಡು ಮೂರು ಗಂಟೆಗಳ ಅವಧಿಯಲ್ಲಿ ಚಂದ್ರನು ಇಡೀ ಚಕ್ರದ ಮೂಲಕ ಹೋಗುತ್ತಿರುವಾಗ, ನಮ್ಮ ಎಲ್ಲಾ ತಾಯಂದಿರ ದೇಹದಲ್ಲಿ ಸ್ವಲ್ಪ ಗೊಂದಲವಿರುತ್ತದೆ. ಇದು ಮನುಷ್ಯನ ದೇಹದಲ್ಲಿಯೂ ಸಂಭವಿಸುತ್ತದೆ, ಏಕೆಂದರೆ ನಿಮ್ಮ ತಾಯಂದಿರು ಒಂದು ನಿರ್ದಿಷ್ಟ ಸಮಯದಲ್ಲಿ ಗೊಂದಲದಲ್ಲಿರುವಂತೆ ಕಾಣಬಹುದು'.
ದೇಹವು ಗೊಂದಲಮಯ ಸ್ಥಿತಿಯಲ್ಲಿದ್ದಾಗ, ದೇಹವನ್ನು ಸಾಧ್ಯವಾದಷ್ಟು ಖಾಲಿಯಾಗಿ ಮತ್ತು ಪ್ರಜ್ಞಾ ಪೂರ್ವಕ ಸ್ಥಿತಿಯಲ್ಲಿ ಇಡುವುದು ಉತ್ತಮ. ಪ್ರಜ್ಞಾಪೂರ್ವಕ ಸ್ಥಿತಿ ಎಂದರೆ ಗ್ರಹಣ ಸಮಯದಲ್ಲಿ ನೀರು ಹೊರತುಪಡಿಸಿ ಉಳಿದಂತೆ ಏನನ್ನೂ ಸೇವಿಸದೆ ಇರುವುದು. ನಿಮ್ಮ ಹೊಟ್ಟೆ ಖಾಲಿಯಾದ ಕ್ಷಣ, ನಿಮ್ಮ ಪ್ರಜ್ಞೆಯ ಸಾಮರ್ಥ್ಯವು ತುಂಬಾ ಉತ್ತಮವಾಗುತ್ತದೆ ಎಂದು ಸದ್ಗುರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಈ ಚಂದ್ರಗ್ರಹಣವು ಭಾರತದಲ್ಲಿ ರಾತ್ರಿ 9 ಗಂಟೆಯ ಬಳಿಕ ಗೋಚರವಾಗಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಸಮಯದೊಳಗೆ ನಿಮ್ಮೆಲ್ಲಾ ಕೆಲಸಗಳ ಮುಗಿಸಿಕೊಳ್ಳುವುದು ಉತ್ತಮ. ಅದ್ರಲ್ಲೂ ಊಟ, ಉಪಹಾರವನ್ನು ಆದಷ್ಟು ಬೇಗ ಮುಗಿಸಿರುವುದು ಉತ್ತಮ.



Click it and Unblock the Notifications