Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಡೇ ಸಾತಿಯ ಸಂದರ್ಭದಲ್ಲಿ ಈ ಅನಾಹುತಗಳ ಅರಿವಿರಲಿ !
ಸಾಡೇಸಾತಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಾರಿ ಬಂದೇ ಬರುತ್ತದೆ. ಈ ಸಂದರ್ಭದಲ್ಲಿ ನಾವು ಬೇಡ ಬೇಡ ಅಂದ್ರು ಕಷ್ಟಗಳು ನಮ್ಮ ಬೆನ್ನು ಹತ್ತದೇ ಇರೋದಿಲ್ಲ. ಈ ಸಮಯದಲ್ಲಿ ಜಾಗರೂಕರಾಗಿರೋದು ನಮ್ಮ ಕರ್ತವ್ಯ. ಶನಿಯು ಚಂದ್ರನ ಮೊದಲ ಮನೆಯನ್ನು ಪ್ರವೇಶ ಮಾಡಿದಾಗ ಸಾಡೇಸಾತಿ ಶುರುವಾಗುತ್ತದೆ.
ಸುಮಾರು ಏಳುವರೆ ವರ್ಷಗಳ ಅವಧಿಯವರೆಗೂ ಸಾಡೇಸಾತಿ ಪ್ರಭಾವ ಇರುತ್ತದೆ. ಶನಿಯು ಎರಡುವರೆ ವರ್ಷಗಳ ಕಾಲ ಪ್ರತಿ ರಾಶಿಯ ಮೇಲೆ ಪ್ರಭಾವ ಬೀರುತ್ತಾನೆ. ಹೀಗಾಗಿ ಈ ಸಮಯದಲ್ಲಿ ಎಲ್ಲಾ ರೀತಿಯ ಕಷ್ಟಗಳನ್ನು ಎದುರಿಸೋದಕ್ಕೆ ನಾವು ಸಿದ್ಧವಾರಬೇಕು. ಹಾಗಾದ್ರೆ ಸಾಡೇ ಸಾತಿ ಸಮಯದಲ್ಲಿ ಏನೆಲ್ಲಾ ಕಷ್ಟಗಳು ಎದುರಾಗುವ ಸಾಧ್ಯತೆಗಳಿದೆ ಅನ್ನೋದನ್ನು ತಿಳಿಯೋಣ.

1. ಶ್ರಮಪಟ್ಟು ಕೆಲಸ ಮಾಡಬೇಕು
ಸಾಡೇ ಸಾತಿ ಶುರುವಾಗಿದೆ ಅಂದ್ರೆ ಯಾವುದು ಕೂಡ ನಿಮಗೆ ಸುಲಭವಾಗಿ ಧಕ್ಕೋದಿಲ್ಲ. ಜೀವನ ಆರಾಮಾಗಿ ಸಾಗುತ್ತದೆ ಅನ್ನುವುದನ್ನೇ ಮರೆತು ಬಿಡಿ. ಯಾವುದೇ ಶಾರ್ಟ್‌ಕಟ್ ಇರೋದಿಲ್ಲ, ಎಲ್ಲಿಂದಲೂ ನಿಮಗೆ ಸುಲಭವಾಗಿ ದುಡ್ಡು ಬರೋದಿಲ್ಲ. ಕಷ್ಟ ಪಟ್ಟರೆ ಮಾತ್ರ ನೀವು ಜೀವನ ಸಾಗಿಸೋದಕ್ಕೆ ಸಾಧ್ಯ.
2. ಆರಾಮಾಗಿರಲು ಸಾಧ್ಯವಿಲ್ಲ
ಸಾಡೇ ಸಾತಿ ಶುರುವಾದಾಗ ಉದ್ಯೋಗದಲ್ಲೂ ಅನೇಕ ಸಮಸ್ಯೆಗಳು ನೀವು ಎದುರಿಸಬೇಕಾಗುತ್ತದೆ. ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಬಹುದು. ಅಥವಾ ಕೆಲಸದ ಸ್ಥಳದಲ್ಲಿ ತೊಂದರೆ ಅನುಭವಿಸುವಂತಾಗಬಹುದು. ನೀವು ಹೊಸ ಕೌಶಲ್ಯಗಳನ್ನು ಕಲಿತರ ಮಾತ್ರ ಕೆಲಸದಲ್ಲಿ ಉಳಿಯೋದಕ್ಕೆ ಸಾಧ್ಯ. ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಗಡೆ ಬಂದು ಕೆಲಸ ಮಾಡಿ.
3. ಅಡಚಣೆಗಳನ್ನು ಎದುರಿಸಲು ಸಿದ್ಧರಾಗಿರಿ
ಜೀವನ ನಮಗೆ ನೇರವಾದ ದಾರಿಯನ್ನೇ ನೀಡೋದಿಲ್ಲ. ಹೋಗುವ ದಾರಿಯಲ್ಲಿ ಕಲ್ಲು-ಮುಳ್ಳಿನ ಅಡಚಣೆಗಳು ಇರುತ್ತದೆ. ಅವುಗಳನ್ನು ದಾಟಿ ಹೋಗೋದು ಹೇಗೆ ಎಂಬುವುದು ಗೊತ್ತಿರಬೇಕು. ಯಾವುದೇ ಪ್ರತಿರೋಧಗಳು ಎದುರಾದರೂ ಅದರ ವಿರುದ್ಧ ಹೋರಾಡಿ. ಅರ್ಧಕ್ಕೆ ಬಿಟ್ಟು ಬಿಡಬೇಡಿ. ಶನಿದೇವ ಖಂಡಿತ ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ನೀಡುತ್ತಾನೆ.
4. ಒತ್ತಡ
ಸಾಡೇ ಸಾತಿ ಶುರುವಾದಾಗ ನಿಮ್ಮ ಜೀವನದಲ್ಲಿ ಒತ್ತಡಗಳು ಹೆಚ್ಚಾಗಬಹುದು. ಎಲ್ಲಾ ಒತ್ತಡಗಳು ಒಂದೇ ಸಾರಿಗೆ ಬಂದಪ್ಪಳಿಸಬಹುದು. ಹೀಗಾಗಿ ಅತಿಯಾಗಿ ಯೋಚನೆ ಮಾಡೋದನ್ನು ಬಿಟ್ಟು ಬಿಡಿ. ಬದಲಾಗಿ ನಿಮ್ಮ ಕೆಲಸವನ್ನು ನೀವು ಮಾಡಿ. ಉದಾಸೀನ ಬಿಡಿ, ಸಮಯ ಸಿಕ್ಕಾಗಲೆಲ್ಲಾ ಗಮನ ಕೆಲಸದ ಕಡೆ ಇರಲಿ. ಒತ್ತಡ ತನ್ನಷ್ಟಕ್ಕೆ ಕಡಿಮೆಯಾಗುತ್ತಾ ಸಾಗುತ್ತದೆ.
5. ಆತ್ಮ ಗೌರವ ಕಳೆದುಕೊಳ್ಳುತ್ತೀರಿ
ಸಾಡೇ ಸಾತಿ ಶುರುವಾದ ಸಂದರ್ಭದಲ್ಲಿ ನೀವು ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಯಾರಾದರೂ ನಿಮ್ಮ ಹಿಂದೆ ಪಿತೂರಿ ಮಾಡುತ್ತಾರೆ. ನಿಮಗೆ ಅವಮಾನವಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಹೀಗಾಗಿ ಕೆಲಸ ಮಾಡುವಾಗ ಜಾಗರೂಕತೆಯಿಂದ ಕೆಲಸ ಮಾಡಿ. ನಿಮ್ಮಿಂದ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಿ. ಯಾವುದಕ್ಕೂ ಶತ್ರುಗಳ ಮೇಲೆ ಒಂದು ಕಣ್ಣಿಟ್ಟಿರಿ.
6. ಬದಲಾವಣೆಯನ್ನು ಒಪ್ಪಿಕೊಳ್ಳಿ
ನೀವು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ನಿಮ್ಮ ಜೀವನದಲ್ಲಿ ಆಗುವ ಕೆಲವೊಂದು ಬದಲಾವಣೆಗಳನ್ನು ನೀವು ಒಪ್ಪಿಕೊಳ್ಳಲೇಬೇಕು. ಯಥಾಸ್ಥಿತಿ ಕಾಯ್ದುಕೊಳ್ಳಲು ನೀವು ಎಷ್ಟು ಪ್ರಯತ್ನಿಸುತ್ತೀರೋ ಅದಕ್ಕಿಂತ ಹೆಚ್ಚಾಗಿ ನೀವು ಕೆಳಗಡೆ ಬೀಳುತ್ತೀರಿ. ನೀವು ಕಳೆದುಕೊಂಡಿರೋದರ ಬಗ್ಗೆ ಯೋಚಿಸೋದಕ್ಕೆ ಹೋಗಬೇಡಿ. ಈಗ ಧಕ್ಕಿರೋದ್ರಲ್ಲಿ ಖುಷಿಯಾಗಿರೋದು ಹೇಗೆ ಅನ್ನೋದನ್ನು ಕಂಡುಕೊಳ್ಳಿ.
7. ಅಲ್ಪಾವಧಿಯ ನಷ್ಟಗಳು ಮತ್ತು ದೀರ್ಘಾವಧಿಯ ಲಾಭಗಳು
ಸಾಡೇ ಸಾತಿಯ ಸಮಯದಲ್ಲಿ ನಿಮಗೆ ಸೋಲುಗಳು ಎದುರಾಗಬಹುದು. ಆದರೆ ಸೋಲೇ ಗೆಲವಿನ ಸೋಪಾನ ಅಂತಾರಲ್ಲ, ಹಾಗೇ ನೀವು ಖಂಡಿತ ಗೆದ್ದೇ ಗೆಲ್ಲುತ್ತೀರಿ. ಈಗಾದ ನಷ್ಟದ ಬಗ್ಗೆ ಚಿಂತಿಸುತ್ತಾ ಕೂರಬೇಡಿ. ಇದು ಕ್ಷಣಿಕ ಅಷ್ಟೇ, ಸುಮ್ಮನೆ ಯೋಚಿಸುತ್ತಾ ಕೂರುವ ಮೊದಲು ಮುಂಬರುವ ಯುದ್ಧವನ್ನು ಗೆಲ್ಲೋದು ಹೇಗೆ ಅನ್ನೋದನ್ನು ಚಿಂತಿಸಿ.
8. ದಿನಚರಿ ನಿಮಗೆ ಬೇಜಾರನ್ನಿಸಬಹುದು
ದಿನಾ ಬೆಳಗಾದ್ರೆ ಎದ್ದು ತಯಾರಾಗಿ ಆಫಿಸ್‌ಗೆ ಹೋಗೋದು. ಸಂಜೆ ಅಲ್ಲಿಂದ ವಾಪಾಸ್ಸ್ ಬಂದು ತಿಂದು ಮಲಗೋದು. ಈ ದಿನಚರಿ ನಿಮಗೆ ಖಂಡಿತ ಬೇಜಾರಾಗಿರುತ್ತೆ. ಮಾಡಿದ ಕೆಲಸವನ್ನು ಮಾಡಿ ನಿಮಗೆ ಜೀವನವೇ ಬೇಡ ಅನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ನಿಮ್ಮ ಕಾಡುತ್ತೆ. ಸಾಡೇ ಸಾತಿ ಶುರುವಾದಾಗ ಹೀಗೆಲ್ಲಾ ಆಗೋದು ಸಾಮಾನ್ಯ. ಹಾಗಂತ ನೀವು ಕೆಲಸ ಬಿಡೋದಕ್ಕೆ ಹೋಗಬೇಡಿ. ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಮುಗಿಸಿ.
9. ಶಿಸ್ತು
ಸಾಡೇ ಸಾತಿ ಶುರುವಾದ ಸಂದರ್ಭದಲ್ಲಿ ಶಿಸ್ತಿನಿಂದ ಇರುವುದು ತುಂಬಾನೇ ಮುಖ್ಯವಾಗುತ್ತದೆ. ಶಿಸ್ತಿನಿಂದ ಇರದೇ ಹೋದರೆ ಶನಿಯು ನಿಮಗೆ ಶಿಸ್ತಿನ ಪಾಠ ಕಲಿಸಿಕೊಡುತ್ತಾನೆ. ಸೋಮಾರಿತನ, ಅಜಾಗರೂಕತೆ ಅಥವಾ ಶಾರ್ಟ್‌ಕಟ್‌ಗಳು ನಿಮಗೆ ತೊಂದರೆಯನ್ನು ಉಂಟು ಮಾಡಬಹುದು. ನಿಮ್ಮಲ್ಲಿನ ವೈಫಲ್ಯಗಳನ್ನು ನಿವಾರಿಸಲು ಒಂದೇ ಒಂದು ಮಾರ್ಗವೆಂದರೆ ಅದು ಶಿಸ್ತು.
10. ಜೀವನ ಪಾಠ ಕಲಿಯುತ್ತೀರಿ
ಸಾಡೇ ಸಾತಿ ಶುರುವಾದ ಸಂದರ್ಭದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ನಿಜ. ಆದರೆ ಸಾಡೇ ಸಾತಿ ನಿಮ್ಮ ಜೀವನಕ್ಕೆ ಬೇಕಾಗುವ ಒಳ್ಳೆಯ ಪಾಠಗಳನ್ನೇ ಕಲಿಸಿ ಕೊಡುತ್ತದೆ. ಹೀಗಾಗಿ ನಿಮ್ಮ ತಪ್ಪುಗಳನ್ನು ಗುರುತಿಸಿ ಅದರಿಂದ ಪಾಠ ಕಲಿತರೆ ಉತ್ತಮ. ಶನಿ ದೇವನು ನಿಮ್ಮ ಕರ್ಮದ ಮೇಲೆ ಕಣ್ಣಿಟ್ಟಿರುತ್ತಾನೆ. ಹೀಗಾಗಿ ಒಳ್ಳೆಯ ಕೆಲಸವನ್ನು ಮಾಡಿ ಆಗ ಎಲ್ಲವೂ ಒಳ್ಳೆಯದಾಗುತ್ತದೆ.
ಸಾಡೇ ಸಾತಿ ಶುರುವಾದ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸೋದು ತುಂಬಾನೇ ಒಳ್ಳೆಯದು.



Click it and Unblock the Notifications
