Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವೀಲ್ ಚೇರ್‌ನಲ್ಲಿ ಬಂದ ಅಭಿಮಾನಿ ಭೇಟಿಯಾದ ರೋಹಿತ್- ಸೂರ್ಯಕುಮಾರ್..!
ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ, ಕ್ರೀಡಾಪಟುಗಳು ದೇವರ ಸಮಾನರು. ಅದಕ್ಕೆ ಸಚಿನ್ ತೆಂಡುಲ್ಕರ್ ಅವರನ್ನ ಕ್ರಿಕೆಟ್ ದೇವರು ಎನ್ನಲಾಗುತ್ತದೆ. ಕ್ರಿಕೆಟ್ ಆಟಗಾರರಿಗೆ ಇರುವಷ್ಟು ಅಭಿಮಾನಿಗಳು ಮತ್ತಾರಿಗೂ ಇಲ್ಲ. ಭಾರತದಲ್ಲಿ ನಿಸಿಮಾ ಬಿಟ್ಟರೆ ಕ್ರಿಕೆಟ್‌ಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ.
ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವಾಗಿಬಿಟ್ಟಿದೆ. ಚಿಕ್ಕಮಕ್ಕಳಿಂದ ಹಿಡಿದು ಇಳಿ ಯವಸ್ಸಿನವರಿಗೂ ಕ್ರಿಕೆಟ್ ಅಂದರೆ ಪಂಚಪ್ರಾಣ. ಇನ್ನು ಅದರಲ್ಲೂ ಐಪಿಎಲ್ ಬಂತೆಂದರೆ ಮಹಾಯುದ್ಧವೇ ಆರಂಭಗೊಂಡಂತೆ ಒಂದೇ ಮನೆಯಲ್ಲಿ ಬೇರೆ ಬೇರೆ ಟೀಂ ಬೆಂಬಲಿಸುವ ಅಭಿಮಾನಿಗಳು ಕಾಣಸಿಗುತ್ತಾರೆ. ಅವರೆಲ್ಲ ಒಬ್ಬೊಬ್ಬರ ಅಭಿಮಾನಿಗಳು.

ಹಾಗೆ ಇಲ್ಲೊಬ್ಬ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಯಾಗಿದ್ದು, ಆತನನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಭೇಟಿಯಾಗಿದ್ದಾರೆ. ವಿಶೇಷ ಚೇತನ ಅಭಿಮಾನಿಯಾಗಿರುವ ಆತ ಮುಂಬೈ ಆಟಗಾರರ ಬೇಟಿಯಾಗುವ ಮಹಾದಾಸೆಯೊಂದಿಗೆ ಸ್ಟೇಡಿಯಂ ಬಳಿ ಬಂದಿದ್ದ.
ಈ ವೇಳೆ ಆತನನ್ನು ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಭೇಟಿಯಾಗಿದ್ದಾರೆ. ಸೂರ್ಯ ಕುಮಾರ್ ಯಾದವ್ ಆತನ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು, ಇತ್ತ ರೋಹಿತ್ ಶರ್ಮಾ ಆತನ ಬಳಿ ತೆರಳಿ ಟೀ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿದ್ದರಲ್ಲದೆ ಆತನ ಜೊತೆ ಫೋಟೋ ತೆಗೆಸಿಕೊಂಡರು.
ಆತ ಐಪಿಎಲ್ ಆರಂಭವಾದಾಗಿನಿಂದಲೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಂತೆ. ಆದರೆ ಹುಟ್ಟಿನಿಂದ ಆತ ವಿಶೇಷಚೇತನನಾಗಿದ್ದಾನೆ. ಹೀಗಿರುವಾಗಲು ವೀಲ್‌ಚೇರ್ ಮೇಲೆ ಕುಳಿತು ಆತ ಮುಂಬೈ ತಂಡದ ಪಂದ್ಯಗಳ ವೀಕ್ಷಿಸುತ್ತಾನೆ.
ಅಭಿಮಾನಿಯನ್ನು ಕಂಡ ರೋಹಿತ್ ಶರ್ಮಾ ಆತನ ಬಳಿ ಬಂದು ಮಾತನಾಡಿಸಿದ್ದಾರೆ. ಜೊತೆಗೆ ಟೀ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿ ಆತನ ಹೆಸರು ಮತ್ತಿತ್ತರ ಕುರಿತು ವಿಚಾರಿಸಿದ್ದಾರೆ. ಇದಕ್ಕೂ ಮೊದಲು ಸೂರ್ಯ ಕುಮಾರ್ ಯಾವದ್ ಅವರನ್ನು ಆತ ಬೇಟಿಯಾಗಿದ್ದ, ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದ ಆತನಿಗೆ ಸೂರ್ಯ ಕುಮಾರ್ ಯಾದವ್ ಸೆಲ್ಫಿ ತೆಗೆದುಕೊಟ್ಟಿದ್ದರು.
ನೆಟ್ಟಿಗರ ಮನ ಗೆದ್ದ ಮುಂಬೈ ಪಡೆ
ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಕಾರ್ಯ ಮೆಚ್ಚಿದ ಜನತೆ ಇಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಒಬ್ಬ ವ್ಯಕ್ತಿ ಎಷ್ಟು ರೆಕಾರ್ಡ್ ಮಾಡಿದ್ದರು, ವಿಶ್ವದಲ್ಲೇ ಅಭಿಮಾನಿಗಳ ಸಂಪಾದಿಸಿದ್ದರೂ ಇಂತಹ ಅಭಿಮಾನಿಗಳ ಮುಂದೆ ಅವರೆಲ್ಲ ಏನು ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ.
ರೋಹಿತ್ ಶರ್ಮಾ ಆತನ ಮೇಲೆ ತೋರಿಸಿದ ವಿಶೇಷ ಕಾಳಜಿಗೆ ನೆಟ್ಟಗರು ಸಹ ಸಂತಸ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ಇಂತಹ ಕಾರ್ಯಗಳೇ ಅವರ ಯಶಸ್ಸಿನ ಗುಟ್ಟಾಗಿದೆ, ಅವರನ್ನು ಹುಡುಕಿಕೊಂಡು ಬರುವ ಅಭಿಮಾನಿಗಳಿಗೆ ಅವರು ಎಂದಿಗೂ ನಿರಾಸೆ ಮಾಡುವುದಿಲ್ಲ ಇದು ಅವರ ನಿಜವಾದ ವ್ಯಕ್ತಿತ್ವ ಎಂದು ಗುಣಗಾನ ಮಾಡಿದ್ದಾರೆ.
ಇದರ ಜೊತೆ ನಿನ್ನೆ ರೋಹಿತ್ ಶರ್ಮಾ ಹುಟ್ಟುಹಬ್ಬವಾಗಿದೆ. ಹೀಗಾಹಿ ಈ ಹುಟ್ಟು ಹಬ್ಬವನ್ನು ಅವರು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಈ ಕುರಿತಂತೆ ಮುಂಬೈ ಇಂಡಿಯನ್ಸ್ ತನ್ನ ಸಾಮಾಜಿಕ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.
ಮನೆ ಗೆದ್ದಿದ್ದ ಧೋನಿ
ಈ ಜೊದಲು ಮಹೇಂದ್ರ ಸಿಂಗ್ ಧೋನಿ ಸಹ ವಿಶೇಷ ಚೇತನ ಅಭಿಮಾನಿಯ ಭೇಟಿಯಾಗಿ ಮನಗೆದ್ದಿದ್ದರು. ಧೋನಿ ಈಗ ಕಿವಿ ಕೇಳದ, ಮಾತು ಬಾರದ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದರು. ಆತ ಚೆನ್ನೈನಲ್ಲಿ ನಡೆಯುತ್ತಿದ್ದ ಪಂದ್ಯ ವೀಕ್ಷಿಸಲು ಬಂದ್ದಿದ್ದ. ಪಂದ್ಯಾಟ ಮುಗಿದ ಬಳಿಕ ಧೋನಿ ಆತನ ಭೇಟಿಯಾಗಿ ಫೋಟೋಗೆ ಫೋಸ್ ನೀಡಿದ್ದರು. ಧೋನಿ ಸಹ ಅತ್ಯಧಿಕ ಅಭಿಮಾನಿಗಳ ಹೊಂದಿರುವ ಕ್ರೀಡಾಪಟು ಆಗಿದ್ದಾರೆ.



Click it and Unblock the Notifications
