Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿದ್ದವರಿಗೆ ಘನತೆಯಿಂದ ಸಾಯುವ ಹಕ್ಕು..! ರಾಜ್ಯದಲ್ಲಿ ಆದೇಶ!
ನೀವು ಜೈಲಿನಲ್ಲಿರುವ ಮಂದಿ ಅಥವಾ ಭೀಕರ ಕಾಯಿಲೆಯಿಂದ ಬಳಲುತ್ತಿರುವವರು, ಬ್ರೈನ್ ಡೆಡ್ ಆಗಿರುವ ರೋಗಿಗಳ ದಯಾ ಮರಣ ಕುರಿತು ಕೇಳಿರುತ್ತೀರಿ. ದಯಾ ಮರಣ ಎಂದರೆ ನಿಮ್ಮ ಇಚ್ಛೆಯಂತೆ ನಿಮಗೆ ಮರಣ ನೀಡುವುದು. ಈಗ ಕರ್ನಾಟಕ ಸರ್ಕಾರವು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಾಯುವ ಹಕ್ಕನ್ನು ನೀಡುವ ಆದೇಶ ಹೊರಡಿಸಿದೆ.
ಅವರ ಕಾಯಿಲೆಯಿಂದ ಚೇತರಿಕೆ ಕಾಣದೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಜೀವನಪರ್ಯಂತ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ಇದಾಗಿರಲಿದೆ. ದಯಾಮರಣಕ್ಕೆ ಅನುಮತಿ ನೀಡುವ ಕುರಿತು ನಿರ್ಧರಿಸಲು ಇಬ್ಬರು ವೈದ್ಯರ ಒಳಗೊಂಡೆರಡು ಸಮಿತಿಯನ್ನು ರಚಿಸುವುದಾಗಿಯೂ ತಿಳಿಸಲಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾತನಾಡಿ, ತಮ್ಮ ಇಲಾಖೆಯು ಘನತೆಯಿಂದ ರೋಗಿಯ ಸಾಯುವ ಹಕ್ಕು ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಜಾರಿ ಮಾಡಲು ಮುಂದಾಗಿದೆ. ಇದೊಂದು ಐತಿಹಾಸಿಕ ಆದೇಶವಾಗಿರಲಿದೆ. ಇದು ಚೇತರಿಕೆಯ ಭರವಸೆಯಿಲ್ಲದೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಹಾಗೂ ಆಸ್ಪತ್ರೆ ಅಥವಾ ಮನೆಯಲ್ಲಿ ಹಾಸಿಗೆ ಮೇಲಿಂದ ಏಳಲು ಆಗದೇ ಇರುವ ಸ್ಥಿತಿಗೆ ತಲುಪಿ ಮುಂದೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬ ವಿವರಣೆಯ ಬಳಿಕ ಅವರಿಗೆ ಈ ಘನತೆಯಿಂದ ಸಾಯುವ ಹಕ್ಕು ನೀಡಲಾಗಿದೆ.
ಜನವರಿ 24, 2023 ರಂದು ಸುಪ್ರೀಂ ಕೋರ್ಟ್‌ನ 2005 ರ ರಿಟ್ ಅರ್ಜಿಯಲ್ಲಿನ ವಿವಿಧ ಆದೇಶಕ್ಕೆ ಅನುಗುಣವಾಗಿ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ರೋಗಿಯು ಚೇತರಿಕೆಯ ಭರವಸೆಯಿಲ್ಲದೆ ಮಾರಕವಾಗಿ ಕಾಯಿಲೆಗೆ ತುತ್ತಾಗಿದ್ದು, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಇನ್ನು ಚಿಕಿತ್ಸೆ ನೀಡುವ ಹೊರತಾಗಿಯೂ ಆತನಿಗೆ ಪ್ರಯೋಜನವಾಗದಿದ್ದರೆ ಚಿಕಿತ್ಸೆಯನ್ನು ತಡೆಹಿಡಿಯುವುದು ಅಥವಾ ನಿಲ್ಲಿಸುವುದನ್ನು ಪ್ರಮಾಣಿಕರಿಸಲು ದ್ವಿತೀಯ ವೈದ್ಯಕೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಬಹುದಾದ ನೋಂದಾಯಿತ ವೈದ್ಯರನ್ನು ನಾಮನಿರ್ದೇಶನ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಲ್ಲಿ ಪ್ರಾಥಮಿಕ ಬೋರ್ಡ್ ಆ ರೋಗಿಯ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಿದ ಬಳಿಕ ದ್ವಿತಿಯ ಬೋರ್ಡ್ ಅದನ್ನು ಪರಿಶೀಲನೆ ಮಾಡಲಿದೆ. ಒಂದು ವೇಳೆ ಈ ಸಮಯದಲ್ಲೇ ಆ ರೋಗಿಗೆ ಚಿಕಿತ್ಸೆ ಮುಂದುವರೆಸಬಹುದು ಅಥವಾ ಮತ್ತೊಮ್ಮೆ ಪರಿಶೀಲನೆ ಅಗತ್ಯವಿದ್ದರೆ ಪ್ರಾಥಮಿಕ ಬೋರ್ಡ್‌ಗೆ ತಿಳಿಸಲಾಗುತ್ತದೆ. ಇಲ್ಲದ ವೇಳೆ ಈ ವರದಿಯೂ ಕೋರ್ಟ್ ಸಲ್ಲಿಸಲಾಗುತ್ತದೆ.
ಕೋರ್ಟ್ ಈ ವರದಿ ಪರಿಶೀಲಿಸಿದ ಬಳಿಕ ರೋಗಿಯ ದಯಾಮರಣ ಕುರಿತು ನಿರ್ಧಾರ ಪ್ರಕಟಿಸಿಲಿದೆ. ಇದಾದ ಬಳಿಕವೇ ವೈದ್ಯರು ರೊಗಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡಲು ಲೈಫ್ ಸಪೋರ್ಟ್ ರದ್ದು ಮಾಡುವುದು ಅಥವಾ ಚಿಕಿತ್ಸೆ ನಿಲ್ಲಿಸುವ ನಿರ್ಧಾರ ಮಾಡಲಿದ್ದಾರೆ.
ಪ್ರಮುಖವಾಗಿ ಈ ದಯಾ ಮರಣಕ್ಕೆ ರೋಗಿಯ ಕುಟುಂಬಸ್ಥರಿಂದ ಯಾವುದೇ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಕೆಯಾದರೆ ಈ ಪ್ರಕ್ರಿಯೆ ಅಲ್ಲಿಗೆ ನಿಲ್ಲಿಸಲಾಗುತ್ತದೆ.
ಅರುಣಾ ಶಾನ್‌ಬಾಗ್ ಪ್ರಕರಣದಿಂದ ತಿರುವು
1973ರಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನ್‌ಬಾಗ್ ಮೇಲೆ ವ್ಯಕ್ತಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ್ದ. ಆಕೆ ತನ್ನ ಕರ್ತವ್ಯ ಮುಗಿಸಿ ಬರುವಾಗ ಆತ ಈ ಕೃತ್ಯ ಎಸಗಿದ್ದ. ನಾಯಿ ಸರಪಳಿಯನ್ನು ಕುತ್ತಿಗೆಗೆ ಬಿಗಿದು ಸಾಯಿಸಲು ಯತ್ನಿಸಿದ್ದ ಆದರೆ ಈ ವೇಳೆ ಪ್ರಜ್ಞಾಹೀನ ಸ್ಥಿತಿಗೆ ಆಕೆ ತಲುಪಿದಾಗ ಸತ್ತಿರಬಹುದು ಎಂದು ಆತ ಅಲ್ಲಿಂದ ಪರಾರಿಯಾಗಿದ್ದ.
ಆದ್ರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೆದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಕಾರಣ ಜೀವವಿದ್ದರು ಮೃತಪಟ್ಟಂತೆ ಆಕೆ ಆಸ್ಪತ್ರೆ ಹಾಸಿಗೆ ಮೇಲೆ ನರಳಬೇಕಾಗಿತ್ತು. ಕೊನೆಗೆ ಆಕೆ 42 ವರ್ಷಗಳ ಕಾಲ ಆಸ್ಪತ್ರೆ ಹಾಸಿಗೆ ಮೇಲೆ ಕಳೆದು ನ್ಯುಮೋನಿಯಾದಿಂದ ಮೃತಪಟ್ಟರು. ಅಪರಾಧಿ ಸೋಹನ್ ಲಾಲ್ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ. ಆದ್ರೆ ಆಕೆ ನರಳಾಡಿ ಪ್ರಾಣಬಿಟ್ಟಿದ್ದಳು. ಈ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ದಯಾ ಮರಣದ ಚರ್ಚೆಗೂ ಇದು ಕಾರಣವಾಗಿತ್ತು.
2009ರಲ್ಲಿ ಆಕೆಗೆ ದಯಾಮರಣ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿಯೇ ದಯಾಮರಣ ಅರ್ಜಿ ನಿರಾಕರಿಸಿ ಆಕೆಯನ್ನು ನೋಡಿಕೊಳ್ಳುವ ಹೊಣೆ ನಮ್ಮದು ಎಂದಿತ್ತು. ಹಾಗೆ ಸುಪ್ರೀಂಕೋರ್ಟ್ ಈ ಅರ್ಜಿ ನಿರಾಕರಿಸಿತ್ತು. ಆದರೆ ಮೇ 18, 2015 ರಂದು, ಅರುಣಾ ಶಾನ್‌ಬಾಗ್ ಆಸ್ಪತ್ರೆಯಲ್ಲಿ ನಿಧನರಾದರು.
2018 ಮಾರ್ಚ್ 9 ರಂದು ಸುಪ್ರೀಂಕೋರ್ಟ್ ಬೇರೊಂದು ತೀರ್ಪಿನಲ್ಲಿ ನಿಷ್ಕ್ರಿಯ ದಯಾ ಮರಣಕ್ಕೆ ಅವಕಾಶ ನೀಡಿತ್ತು. ಹಾಗೆ ದಯಾಮರಣದ ಮಾರ್ಗಸೂಚಿ ಕೂಡ ಹೊರಬಂದಿತ್ತು.



Click it and Unblock the Notifications
