Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ ಬಾರಿ 76ನೇ ಗಣರಾಜ್ಯೋತ್ಸನ ಅಥವಾ 77ನೇ ಆಚರಣೆಯೇ.? ಯಾವುದು ಸರಿ..?
ನಾವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದ ಸಂವಿಧಾನ ಅಂಗೀಕಾರಗೊಂಡ ದಿನ ಮತ್ತು ಜನವರಿ 26, 1950 ರಂದು ರಾಷ್ಟ್ರವನ್ನು ಗಣರಾಜ್ಯವಾಗಿ ಒಪ್ಪಿಕೊಂಡ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ರಾಷ್ಟ್ರೀಯ ಹಬ್ಬವಾಗಿ ಈ ದಿನವನ್ನ ಆಚರಿಸುತ್ತೇವೆ. ನವದೆಹಲಿಯಲ್ಲಿ ಶಸಸ್ತ್ರ ಪಡೆಗಳು ಕರ್ತವ್ಯ ಪಥದಲ್ಲಿ ಮಿಲಿಟರಿ ಶಕ್ತಿ ಪ್ರದರ್ಶನ ನಡೆಸುವುದು ಈ ದಿನದ ವಿಶೇಷವಾಗಿದೆ.
ಕರಡು ಸಮಿತಿಯು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೊಸ ಸಂವಿಧಾನವನ್ನು ರಚಿಸಿದರು. ಈ ಭಾರತೀಯ ಸಂವಿಧಾನವು ಅಧಿಕೃತವಾಗಿ ಜನವರಿ 26, 1950 ರಂದು ಜಾರಿಗೆ ಬಂದಿತು ಹೀಗಾಗಿ ಈ ದಿನದಂದು ಗಣರಾಜ್ಯ ದಿನವಾಗಿ ಆಚರಿಸುತ್ತಾ ಬಂದಿರುವುದಾಗಿ ನೀವುತಿಳಿದಿದ್ದೀರಿ. ಹಾಗೆ ಈ ದಿನದಂದು ಶಾಲೆಗಳಲ್ಲಿ, ಸರ್ಕಾರಿ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಕೂಡ ನಾವು ನೋಡಿರುತ್ತೇವೆ.

ಹಾಗೆ ಪ್ರತಿ ವರ್ಷ ಜನವರಿ 26 ಬರುವ ಮುನ್ನ ಒಂದು ದೊಡ್ಡ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ, ಇದು ಎಷ್ಟನೇ ವರ್ಷದ ಗಣರಾಜ್ಯೋತ್ಸವ ಎಂಬುದು ಎಲ್ಲರಿಗೂ ಗೊಂದಲ ಮೂಡಿಸುತ್ತೆ. ಇದು ಪ್ರತಿ ವರ್ಷವೂ ಲೆಕ್ಕ ಮಾಡಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗುತ್ತಲೇ ಇರುತ್ತೆ. ಹಾಗಾದ್ರೆ ಈ ವರ್ಷ ನಾವು ಎಷ್ಟನೆ ವರ್ಷದ ಗಣರಾಜ್ಯೋತ್ಸ ಆಚರಿಸುತ್ತಿದ್ದೇವೆ ಎಂಬುದು ಗೊತ್ತಾ?
ಇದು 76ನೇ ಅಥವಾ 77ನೇ ವರ್ಷದ ಗಣರಾಜ್ಯೋತ್ಸವ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಪ್ರತಿ ವರ್ಷವೂ ಎಲ್ಲಿಗೂ ಗೊಂದಲ ಉಂಟು ಮಾಡುತ್ತೆ. ಆದರೆ ಈ ವರ್ಷ ನಾವು 76ನೇ ಗಣರಾಜ್ಯೋತ್ಸ ಆಚರಿಸುತ್ತಿದ್ದೇವೆ. 2024ರಲ್ಲಿ ನಾವು 75ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿದ್ದೆವು ಅದರಲ್ಲೂ ವಿಶೇಷವಾಗಿ ಆಚರಿಸಲಾಗಿತ್ತು.
ಮೊದಲ ಗಣರಾಜ್ಯೋತ್ಸವವನ್ನು 1951 ಜನವರಿ 26 ರಂದು ಆಚರಿಸಲಾಗಿತ್ತು. ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳನ್ನು ಸೂಚಿಸುತ್ತದೆ. ಹಾಗೆ 2025ರಂದು 76ನೇ ವರ್ಷದ ಗಣರಾಜ್ಯೋತ್ಸವನ್ನ ಆಚರಿಸುತ್ತಿದ್ದೇವೆ. ಗಣರಾಜ್ಯೋತ್ಸವದಿಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಗಣರಾಜ್ಯೋತ್ಸವದ ಮೆರವಣಿಗೆ ನೋಡುಗರು ಹುಬ್ಬೇರುವಂತೆ ಮಾಡಲಿದೆ. ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳು ಭಾಗವಹಿಸುತ್ತವೆ. ಹಾಗೆ ವಿವಿಧ ರಾಜ್ಯದ ಸಾಂಸ್ಕೃತಿಕ ವೈಭವ ಸಾರುವ ಸ್ತಂಬ್ಧ ಚಿತ್ರಗಳು ಮೆರವಣಿಗೆಯ ಸೊಬಗು ಹೆಚ್ಚಾಗಿಸುತ್ತೆ.
ಜನವರಿ 26ರ ಗಣರಾಜ್ಯೋತ್ಸವ ಆಚರಣೆಯ ಹಿಂದಿರುವ ಉದ್ದೇಶವಂತೂ ತಿಳಿದೇ ಇದೆ. ಅಂದು ನಮ್ಮ ದೇಶವನ್ನು ಗಣರಾಜ್ಯ ಎಂದು ಘೋಷಿಸಿ ಸಂವಿಧಾನವನ್ನು ಅಧಿಕೃತವಾಗಿ ಒಪ್ಪಿಕೊಂಡ ದಿನವಾಗಿದೆ. ಆದರೆ ಈ ದಿನದಂದು ನಾವು ಧ್ವಜಾರೋಹಣ ಸಹ ನೆರವೇರಿಸುತ್ತೇವೆ. ಆದರೆ ಧ್ವಜವನ್ನು ಸ್ತಂಭದ ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ಬಳಿಕ ಹಗ್ಗ ಎಳೆಯುವುದರಿಂದ ಧ್ವಜವನ್ನು ಹಾರಿಸಲಾಗುತ್ತದೆ ಇದನ್ನು ಇಂಗ್ಲೀಷ್‌ನಲ್ಲಿ ಫ್ಲಾಗ್ ಅನ್ ಫರ್ಲಿಂಗ್ ಎನ್ನಲಾಗುತ್ತದೆ. ಆದ್ರೆ ಸ್ವಾತಂತ್ರ್ಯೋತ್ಸವದಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿನಿಂದ ಮೇಲಕ್ಕೆ ಎಳೆದು ಹಾರಿಸಲಾಗುತ್ತದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅಥಿತಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೋ ಅವರು ಆಗಮಿಸುತ್ತಿದ್ದಾರೆ.



Click it and Unblock the Notifications











