Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಗಣರಾಜ್ಯೋತ್ಸವ 2026: ಎಲ್ಲರನ್ನು ಸೆಳೆಯುವ ಸರಳ, ಆಕರ್ಷಕ ರೀತಿಯ ಭಾಷಣ ಇಲ್ಲಿದೆ,
ಪ್ರತಿ ವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಈ ದಿನ ಇಡೀ ದೇಶದಲ್ಲಿ ದೇಶಭಕ್ತಿಯ ಸಂಭ್ರಮಾಚರಣೆ ಮಾಡಬಹುದು. ಸಂವಿಧಾನ ಅಂಗೀಕಾರಗೊಂಡ ಈ ದಿನದಲ್ಲಿ ನಾವು ಈ ಕೆಲಸಕ್ಕಾಗಿ ಶ್ರಮಿಸಿದ ಹಲವು ಮಹಾನಿಯರನ್ನು ನೆನೆಯುತ್ತೇವೆ. ಅದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ. ಹಾಗೆ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಕುರಿತಾದ ಜಾಗೃತಿ ನೋಡಬಹುದು.
ಹಾಗೆ ಈ ದಿನ ಮಕ್ಕಳು ದೇಶಭಕ್ತಿ ಕುರಿತಾದ ಕಾರ್ಯಕ್ರಮಗಳ ವೀಕ್ಷಿಸುವುದು, ಭಾಗಿಯಾಗುವುದು ಸಹ ಸಾಮಾನ್ಯ. ಇನ್ನು ಪ್ರತಿ ಶಾಲೆಯಲ್ಲಿಯೂ ಗಣರಾಜ್ಯೋತ್ಸವ ಆಚರಣೆ ಕಡ್ಡಾಯವಾಗಿರಲಿದೆ. ಹೀಗಾಗಿ ಮಕ್ಕಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅವರಲ್ಲಿ ದೇಶ ಹಾಗೂ ಸಂವಿಧಾನ ಕುರಿತಾದ ಬಹಳಷ್ಟು ವಿಚಾರಗಳು ತಿಳಿಯಲು ಸಹಕಾರಿಯಾಗಲಿದೆ.

1950, ಜನವರಿ 26 ರಂದು ಭಾರತೀಯ ಸಂವಿಧಾನವು ಜಾರಿಗೆ ಬಂದಾಗ ಭಾರತವು ಗಣರಾಜ್ಯವಾಯಿತು. ಈ ದಿನವನ್ನು ನೆನಪಿಸುವ ಸಲುವಾಗಿ, ಈ ದಿನದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸುವ ಉದ್ದೇಶದಿಂದ ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಇನ್ನು ಶಾಲೆಯಲ್ಲಿ ಮಕ್ಕಳು ಗಣರಾಜ್ಯೋತ್ಸವ ಕುರಿತಾಗಿ ಭಾಷಣ ಮಾಡುವುದು ಅಥವಾ ಊರಿನಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೀವು ಸಹ ಭಾಷಣ ಮಾಡುವ ಅವಕಾಶ ಪಡೆದಿರಬಹುದು.
ಹಾಗಾದ್ರೆ ಈ ದಿನ ಮಾಡುವ ಭಾಷಣ ತಯಾರಿ ಹೇಗಿರಬೇಕು? ಯಾವ ಭಾಷಣ ಸೂಕ್ತ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಇಲ್ಲಿದೆ ಸುಲಭದ ಭಾಷಣ
ಇಲ್ಲಿ ನೆರೆದಿರುವ ಎಲ್ಲರಿಗೂ ಶುಭೋದಯ. ಇಂದು ನಾವು ಇಲ್ಲಿ ಸೇರಿರುವ ಪ್ರಮುಖ ಕಾರಣವೆಂದರೆ 77ನೇ ಗಣರಾಜ್ಯೋತ್ಸವ ಆಚರಣೆ. ಇಂದು ನಾವು ಸಂವಿಧಾನ ರಚನೆಯಲ್ಲಿ ಇಡೀ ಜೀವನ ತ್ಯಾಗ ಹೋರಾಟವನ್ನ ನೆನಪುಮಾಡಿಕೊಳ್ಳಬೇಕಾಗುತ್ತದೆ. ಇಂದು ಭಾರತ ಒಂದು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪ್ರಪಂಚದ ಎದುರು ನಿಂತ ದಿನ.
1950 ರಿಂದ ನಮ್ಮ ಪ್ರಯಾಣ ಗಮನಾರ್ಹವಾಗಿದೆ. ಹಲವಾರು ಸವಾಲುಗಳನ್ನು ಜಯಿಸುವುದರಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ನಂಬಲಾಗದ ಸಾಧನೆಗಳನ್ನು ಸಾಧಿಸುವವರೆಗೆ, ನಮ್ಮ ದೇಶವು ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ತೋರಿಸಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ನಾಯಕರು ಮತ್ತು ನಮ್ಮ ಸಂವಿಧಾನದ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ಮರಿಸಲು ಈ ಅವಕಾಶವನ್ನು ಬಳಸಿಕೊಳ್ಳೋಣ.
1950ರ ಜನವರಿ 26 ರಂದು ಈ ಸಂವಿಧಾನವು ಅ ಜಾರಿಗೆ ಬಂದಿದ್ದರಿಂದ, ಭಾರತವು ಒಂದು ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಯಿತು. ಅಂದಿನಿಂದ ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ. ಸಂವಿಧಾನ ಕೇವಲ ಒಂದು ಪುಸ್ತಕವಲ್ಲ, ಅದು ಇಡೀ ನಮ್ಮ ಪ್ರಜಾಪ್ರಭುತ್ವದ ಆತ್ಮ. ಇಡೀ ನಮ್ಮ ದೇಶದ ಕೇಂದ್ರಬಿಂದು ಎನ್ನಬಹುದು. ಹೀಗಾಗಿ ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದರೊಂದಿಗೆ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಭವಿಷ್ಯ.
ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು 2 ವರ್ಷ 11 ತಿಂಗಳು, 18 ದಿನ ಬೇಕಾಯಿತು. ಇದು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ.
ಈ ಸಂವಿಧಾನ ರಚನೆಯ ಹಿಂದೆ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್, ಡಾ. ಸಚ್ಚಿದಾನಂದ ಸಿನ್ಹಾ, ಬಿ.ಎನ್ ರಾವ್ ಸೇರಿ ನೂರಾರು ಮಂದಿ ಇದ್ದರು. ಇವರುಗಳೆಲ್ಲಾ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವ ಕನಸು ಸಹ ಹೊಂದಿದ್ದರು. ಅವರೆಲ್ಲರ ಕೊಡುಗೆಯಿಂದಾಗಿ ನಾವಿಂದು ಹಲವು ಹಕ್ಕುಗಳನ್ನು, ಉತ್ತಮ ಜೀವನವನ್ನು ಅನುಭವಿಸುವಂತಾಗಿದೆ. ಹೀಗಾಗಿ ನಾವೆಲ್ಲಾ ಇವರನ್ನು ನೆನೆಯುವುದು ಉತ್ತಮ. ಅಲ್ಲದೆ ಮಹಾನ್ ವ್ಯಕ್ತಿಗಳು ತಂದು ಕೊಟ್ಟ ಈ ಸ್ವಾತಂತ್ರ್ಯವನ್ನು ನಾವು ಸಹ ಮುಂದಿನ ಪೀಳಿಗೆಗೆ ಅದನ್ನು ಉಳಿಸುವ, ಕಾಪಾಡುವ ಪ್ರತಿಜ್ಞೆ ಮಾಡೋಣ.
ಜೈ ಹಿಂದ್!



Click it and Unblock the Notifications