Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ದೆಹಲಿಯಲ್ಲಿ ಟೈಪ್ 2 ಮಧುಮೇಹದ ಅಪಾಯ ತುಂಬಾನೇ ಅಧಿಕ, ಏಕೆ?
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣ ಆರೋಗ್ಯಕರವಲ್ಲದ ಜೀವನಶೈಲಿ. ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು, ಅತ್ಯಧಿಕ ಮಾನಸಿಕ ಒತ್ತಡ, ಆರೋಗ್ಯಕರವಲ್ಲದ ಆಹಾರಶೈಲಿ ಈ ಎಲ್ಲಾ ಕಾರಣಗಳಿಂದ ಮಧುಮೇಹದ ಸಮಸ್ಯೆ ಉಂಟಾಗುವುದು. ಇದೀಗ ವಾಯು ಮಾಲಿನ್ಯ ಕೂಡ ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣ ಎಂದು ಅಧ್ಯಯನ ವರದಿ ಹೇಳಿದೆ.

ದೆಹಲಿಯಲ್ಲಿ ಯಾವ ರೀತಿಯಲ್ಲಿ ವಾಯು ಮಾಲಿನ್ಯವಿದೆ ಎಂಬುವುದರ ಬಗ್ಗೆ ವಾರ್ತೆಗಳಲ್ಲಿ ನೋಡುತ್ತಿರುತ್ತೇವೆ. ಅಲ್ಲಿ ವಾಯು ಮಾಲಿನ್ಯದಿಂದಾಗಿ ಇಡೀ ವಾತಾವರಣ ಮಂಜು ಮಂಜಾಗುವುದು, ಆ ಸಂದರ್ಭದಲ್ಲಿ ಓಡಾಡುವುದೇ ಕಷ್ಟವಾಗುವುದು, ಅಸ್ತಮಾ, ಶ್ವಾಸಕೋಶದ ಸಮಸ್ಯೆ ಇರುವವರಿಗೆ ಈ ಅವಧಿ ತುಂಬಾನೇ ದುಸ್ಥರವಾಗಿರುತ್ತದೆ. ಇತ್ತೀಚಿನ ಹೊಸ ಅಧ್ಯಯನ ವರದಿಯು ವಾಯು ಮಾಲಿನ್ಯ ಮಧುಮೇಹಿಗಳಿಗೂ ಹೆಚ್ಚು ಅಪಾಯಕಾರಿ ಎಂದು ಹೇಳಿದೆ.
2010ರಿಂದ 2017ರವರೆಗೆ ಈ ಅಧ್ಯಯನ ನಡೆಸಲಾಯಿತು, ಈ ಅಧ್ಯಯನದಲ್ಲಿ ದೆಹಲಿ ಹಾಗೂ ಚೆನ್ನೈ ಜನರನ್ನು ಒಳಪಡಿಸಲಾಯಿತು. ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ 82-100μg/m3 ಹಾಗೂ ಚೆನ್ನೈನಲ್ಲಿ ವಾಯು ಮಾಲಿನ್ಯ ಪ್ರಮಾಣ 30-40μg/m3 ಇದ್ದು ವಾಯು ಮಾಲಿನ್ಯ ಅಧಿಕವಿರುವ ಕಡೆ ಮಧುಮೇಹಿಗಳ ಸಂಖ್ಯೆ ಅಧಿಕವಿದೆ ಎಂದು ಈ ವರದಿ ಹೇಳಿದೆ.
ದೇಶದಲ್ಲಿಯೇ ಅತ್ಯಧಿಕ ವಾಯು ಮಾಲಿನ್ಯ ಇರುವ ಪ್ರದೇಶ ದೆಹಲಿ
ದೆಹಲಿಯಲ್ಲಿ ವಾಯು ಮಾಲಿನ್ಯ ತುಂಬಾನೇ ಅಧಿಕವಿದೆ. ಹಾಗಾಗಿ ದೆಹಲಿಯಲ್ಲಿ ಪಟಾಕಿ ಸಿಡಿಸಲು ಅನುಮತಿ ನೀಡುವುದಿಲ್ಲ.
ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ವಾಯು ಮಾಲಿನ್ಯ
ವಾಯು ಮಾಲಿನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ದೆಹಲಿ ಹೀಗೆ ಮುಂದುವರೆದರೆ ಇನ್ನು ಕೆಲವು ವರ್ಷಗಳಲ್ಲಿ ಮನುಷ್ಯರು ವಾಸ ಮಾಡುವುದೇ ಕಷ್ಟವಾಗಬಹುದು, ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಮಧುಮೇಹಗಳು ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ
ಮಧುಮೇಹಿಗಳು ವಾಯು ಮಾಲಿನ್ಯ ಇರುವ ಕಡೆ ಓಡಾಡುವಾಗ ಮಾಸ್ಕ್ ಧರಿಸಿ, ಇದರಿಂದ ವಾಯು ಮಾಲಿನ್ಯದ ಅಪಾಯವನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
ಮಧುಮೇಹದಿಂದಾಗಿ ಯಾವೆಲ್ಲಾ ಗಂಭೀರ ಸಮಸ್ಯೆ ಉಂಟಾಗುವುದು
ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುವುದು
ಮಧುಮೇಹಿಗಳಲ್ಲಿ ರಕ್ತದೊತ್ತಡ ಅಧಿಕವಾಗಿ ಹೃದಯಾಗಾತ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ರಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು.
ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ
ದೇಹದ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾದರೆ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಇದೆ. ಮಧುಮೇಹಿಗಳಲ್ಲಿ ಕಣ್ಣು ಮಂಜಾಗುವ ಸಮಸ್ಯೆ ಕಂಡು ಬರುವುದು. ಆದ್ದರಿಂದ ಮಧುಮೇಹಿಗಳು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಬೇಕು.
ಕಿಡ್ನಿಗೆ ಹಾನಿಯಾಗುವುದು
ಮಧುಮೇಹ ನಿಯಂತ್ರಣದಲ್ಲಿ ಇರದಿದ್ದರೆ ಕಿಡ್ನಿಗೆ ಹಾನಿಯುಂಟಾಗುವುದು. ಆದ್ದರಿಂದ ಕಿಡ್ನಿಯ ಆರೋಗ್ಯದ ಬಗ್ಗೆ ತಿಳಿಯಲು ನಿಯಮಿತವಾಗಿ ಮಾಡಿಸುತ್ತಾ ಇರಬೇಕು.
ನರಗಳಿಗೆ ಸಂಬಂಧಿಸಿದ ಸಮಸ್ಯೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ನರಗಳಿಗೆ ಸಮಸ್ಯೆ ಉಂಟಾಗುವುದು. ಮಧುಮೇಹಿಗಳು ಮದ್ಯಪಾನ ಮಾಡಿದರೆ ನರಗಳಿಗೆ ಅಧಿಕ ಹಾನಿಯಾಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications